ಅಸಂಖ್ಯಾತ ಔಷಧೀಯ ವನಸ್ಪತಿಗಳಿವೆ. ಇಂತಹ ಸಮಯದಲ್ಲಿ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎನ್ನುವ ಪ್ರಶ್ನೆ ಮೂಡಬಹುದು. ಪ್ರಸ್ತುತ ಲೇಖನ ಮಾಲೆಯಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಗಳಲ್ಲಿ ಹೇಗೆ ಬೆಳೆಸಬೇಕು ? ಎನ್ನುವ ಮಾಹಿತಿಯನ್ನು ನೀಡಲಾಗಿದೆ.
೨೨/೪೩ ನೇ ಸಂಚಿಕೆಯಲ್ಲಿ ನಾವು ಅಮೃತಬಳ್ಳಿಯ ಕುರಿತು ಮಾಹಿತಿಯನ್ನು ನೋಡಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/45623.html |
ಸಂಕಲನಕಾರರು : ಶ್ರೀ ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಮಾರ್ಗದರ್ಶಕರು : ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.
೪. ಲೋಳೆಸರ
೪ ಅ ಮಹತ್ವ : ಇದು ನಿಯಮಿತವಾಗಿ ಬೇಕಾಗುವ ಔಷಧಿಯಲ್ಲ. ಸುಟ್ಟ ಗಾಯಗಳು, ಮಾಸಿಕ ಸರದಿಯ ತೊಂದರೆಗಳು, ಕೆಮ್ಮು, ಕಫ ಇವುಗಳಲ್ಲಿ ಲೋಳೆಸರವು ಉಪಯೋಗವಾಗುತ್ತದೆ. ೪ ಜನರಿರುವ ಕುಟುಂಬಕ್ಕೆ ೨ ರಿಂದ ೪ ಸಸಿಗಳು ಸಾಕಾಗುತ್ತವೆ; ಮನೆಯ ಸುತ್ತಲೂ ಜಾಗವಿದ್ದರೆ ೧೦-೧೨ ಸಸಿಗಳನ್ನು ನೆಡಬಹುದು.
೪ ಆ. ಲೋಳೆಸರಗಳನ್ನು ಬೆಳೆಸುವುದು : ಬಹಳಷ್ಟು ಜನರ ಮನೆಗಳಲ್ಲಿ ಲೋಳೆಸರವನ್ನು ನೆಟ್ಟಿರುತ್ತಾರೆ. ಲೋಳೆಸರಕ್ಕೆ ಬೇರುಗಳ ಬದಿಯಿಂದ ಹೊಸ ಮರಿಗಳು ಬರುತ್ತವೆ. ಈ ಹೊಸ ಸಸಿಗಳನ್ನು ತೆಗೆದು ಬೇರೆಕಡೆಗೆ ನೆಟ್ಟರೆ ಅವುಗಳಿಂದ ಹೊಸ ಗಿಡಗಳು ತಯಾರಾಗುತ್ತವೆ. ಅಕ್ಕಪಕ್ಕದವರಿಂದ ೧ – ೨ ಸಸಿಗಳನ್ನು ಕೇಳಿ ತಂದು ನೆಟ್ಟರೆ ಒಂದು ವರ್ಷದಲ್ಲಿ ೪ ಜನರಿಗಾಗುವಷ್ಟು ಲೋಳೆಸರ ತಯಾರಾಗುತ್ತದೆ. ಇದರ ಸಸಿಗಳು ಸಸ್ಯಶಾಲೆ (ನರ್ಸರಿ)ಗಳಲ್ಲಿಯೂ ಮಾರಾಟಕ್ಕೆ ಸಿಗುತ್ತವೆ.
೫. ನೆಲಬೇವು (ಕಾಲಮೇಘ)
೫ ಅ. ಮಹತ್ವ : ಈ ವನಸ್ಪತಿಯು ಸಾಂಕ್ರಾಮಿಕ ರೋಗಗಳಲ್ಲಿ ಬಹಳ ಉಪಯುಕ್ತವಾಗಿದೆ. ಇದು ಬಹಳ ಕಹಿಯಾಗಿರುತ್ತದೆ. ಇದನ್ನು ಜ್ವರ ಮತ್ತು ಹೊಟ್ಟೆಯಲ್ಲಿನ ಜಂತುಗಳನ್ನು ಕಡಿಮೆ ಮಾಡಲು ಉಪಯೋಗಿಸುತ್ತಾರೆ. ಇದು ಭೇದಿಯ ಮೂಲಕ ಹೊಟ್ಟೆಯನ್ನು ಸ್ವಚ್ಚಗೊಳಿಸುವುದರಿಂದ ಕೆಲವು ಕಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ತದನಂತರ ಬರುವ ಶರತ್ ಋತುವಿನಲ್ಲಿ ವಾರಕ್ಕೊಮ್ಮೆ ಇದರ ಕಷಾಯವನ್ನು ಸೇವಿಸುವ ಪದ್ಧತಿಯಿದೆ. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಈ ವನಸ್ಪತಿಯು ವಾತವನ್ನು ಹೆಚ್ಚಿಸುವುದರಿಂದ ಜ್ವರ ಇಲ್ಲದಿರುವಾಗ ಮತ್ತು ವೈದ್ಯರ ಸಲಹೆ ಇಲ್ಲದೇ ಈ ಕಷಾಯವನ್ನು ಪ್ರತಿದಿನ ತೆಗೆದುಕೊಳ್ಳಬಾರದು.
೫ ಆ. ಗುರುತು : ಈ ವನಸ್ಪತಿಗೆ ಕೊಂಕಣಿ ಯಲ್ಲಿ ‘ಕಿರಾಯತೆ ಎನ್ನುತ್ತಾರೆ. ಮಳೆಗಾಲದ ಪ್ರಾರಂಭದಲ್ಲಿ ಇದರ ಎಲೆಗಳು ಸ್ವಲ್ಪ ಅಗಲವಾಗಿರುತ್ತವೆ. (ಛಾಯಾಚಿತ್ರ ೧) ಮಳೆಗಾಲ ಮುಗಿದ ನಂತರ ಎಲೆಗಳು ಕೋನಾಕೃತಿಯಲ್ಲಿ ಪರಿವರ್ತನೆಗೊಳ್ಳುತ್ತವೆ. ಮಳೆಗಾಲದ ಬಳಿಕ ನೀರುಣಿಸಿದರೆ, ಮಾತ್ರ ಈ ವನಸ್ಪತಿ ಉಳಿಯುತ್ತದೆ, ಇಲ್ಲವಾದರೆ ಅದು ಒಣಗುತ್ತದೆ. ಬಹಳಷ್ಟು ಸಲ ಮಳೆಗಾಲದ ನಂತರ ಕೊಂಕಣ ಭಾಗದಲ್ಲಿ ಅನೇಕ ಸ್ಥಳಗಳಲ್ಲಿ ಈ ವನಸ್ಪತಿ ಒಣಗಿದ ಸ್ಥಿತಿಯಲ್ಲಿ ಕಂಡು ಬರುತ್ತದೆ. ಇದಕ್ಕೆ ಮಳೆಗಾಲ ಮುಗಿಯುವಾಗ ಸಪೂರ ತುರಾಯಿಗಳು ಬರುತ್ತವೆ. (ಛಾಯಾಚಿತ್ರ ೨) ಅದರಲ್ಲಿ ಬೀಜಗಳಿರುತ್ತವೆ.
೫ ಇ. ನೆಲಬೇವನ್ನು ಬೆಳೆಸುವುದು : ಈ ವನಸ್ಪತಿಯು ಕರಾವಳಿಯಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುತ್ತದೆ. ಮೊದಲ ಮಳೆಯಾದ ಕೂಡಲೇ ಈ ಹಿಂದೆ ಬಿದ್ದಿರುವ ಬೀಜಗಳಿಂದ ದೊಡ್ಡ ಸಂಖ್ಯೆಯಲ್ಲಿ ಈ ವನಸ್ಪತಿಯ ಸಸಿಗಳು ಹುಟ್ಟುತ್ತವೆ. ಈ ಸಸಿಗಳನ್ನು ತಂದು ನಮ್ಮ ಮನೆಯ ಪರಿಸರದಲ್ಲಿ ನೆಟ್ಟು ಅವುಗಳನ್ನು ಬೆಳೆಸಬಹುದು. ಮಳೆಗಾಲ ಮುಗಿಯುವ ಸಮಯದಲ್ಲಿ ತುರಾಯಿಗಳಲ್ಲಿನ ಬೀಜಗಳನ್ನು ಸಂಗ್ರಹಿಸಿಟ್ಟರೆ ಮುಂದಿನ ಮಳೆಗಾಲದ ಪ್ರಾರಂಭದಲ್ಲಿ ಬಿತ್ತಿ ಅವುಗಳಿಂದ ಸಸಿಗಳನ್ನು ತಯಾರಿಸಬಹುದು.
೬. ಜಾಜಿ
೬ ಅ. ಮಹತ್ವ : ರಕ್ತಸ್ರಾವವನ್ನು ತಡೆಯಲು ಜಾಜಿಯ ಎಲೆಗಳು ಉಪಯುಕ್ತವಾಗಿವೆ. ಬಾಯಿಯಲ್ಲಿ ಹುಣ್ಣುಗಳು ಆದಾಗ ಜಾಜಿಯ ಎಲೆಗಳನ್ನು ಅಗಿದು ಉಗುಳಿದರೆ ತಕ್ಷಣವೇ ಆರಾಮ ವೆನಿಸುತ್ತದೆ. ೪ ಜನರ ಕುಟುಂಬಕ್ಕೆ ಒಂದು ಗಿಡ ಸಾಕಾಗುತ್ತದೆ.
೬ ಆ. ದೊರಕುವ ಸ್ಥಳ
ಕೆಲವು ದೇವಸ್ಥಾನಗಳಲ್ಲಿ ಜಾಜಿಯ ಹೂಗಳ ಉತ್ಸವವಿರುತ್ತದೆ. ಉದಾ. ಗೋವಾದಲ್ಲಿನ ಶಿರೋಡಾದಲ್ಲಿನ ಕಾಮಾಕ್ಷಿ ಮಂದಿರ, ಮ್ಹಾರ್ದೋಳದ ಮಹಾಳಸಾ ಮಂದಿರ, ಆದುದರಿಂದ ಇಂತಹ ಗ್ರಾಮಗಳಲ್ಲಿ ಜಾಜಿಯ ಕೃಷಿಯನ್ನು ಮಾಡಲಾಗುತ್ತದೆ. ಬಹಳಷ್ಟು ಜನರ ಮನೆಯಲ್ಲಿ ಜಾಜಿ ಇರುತ್ತದೆ.
೬ ಇ. ಬೆಳೆಸುವುದು : ಜಾಜಿಯ ಟೊಂಗೆಗಳನ್ನು ತಂದು ನೆಟ್ಟರೆ ಅವುಗಳಿಗೆ ಬೇರೊಡೆದು ಗಿಡಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಜಾಜಿಯ ಟೊಂಗೆಗಳನ್ನು ನೆಡಬೇಕಾಗಿದ್ದರೆ ಬೇರುಗಳಿಗೆ ಉಷ್ಣತೆ ಸಿಗಲು, ಟೊಂಗೆಗಳ ಬೇರಿನ ಕಡೆಯ ಭಾಗದ ಸುತ್ತಲೂ ಒಣಗಿದ ಹುಲ್ಲಿನ ೧-೨ ಕಡ್ಡಿಗಳನ್ನು ಸುತ್ತಬೇಕು. ಇದರಿಂದ ಆವಶ್ಯಕತೆಯಿರುವಷ್ಟು ಉಷ್ಣತೆ ದೊರೆತು, ಟೊಂಗೆಗಳಿಗೆ ಬೇರುಗಳು ಒಡೆಯುತ್ತವೆ. ಹುಲ್ಲು ಸುತ್ತದೇ ಇದ್ದರೆ ತಂಪಿ ನಿಂದ ಟೊಂಗೆಗಳು ಕೊಳೆಯಬಹುದು.