ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಔಷಧಿ ವನಸ್ಪತಿಗಳು ಬಹಳಷ್ಟಿವೆ, ಆದುದರಿಂದ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಪ್ರಸ್ತುತ ಲೇಖನದಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳೆಸಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ. ವಾಚಕರು ಈ ಲೇಖನದಲ್ಲಿ ನೀಡಿದ ವನಸ್ಪತಿಗಳ ವ್ಯತಿರಿಕ್ತ ಇತರ ವನಸ್ಪತಿಗಳನ್ನೂ ಬೆಳೆಸಬಹುದು. ಇಲ್ಲಿಯ ವರೆಗೆ ಈ ಲೇಖನದಲ್ಲಿ ನಾವು ತುಳಸಿ, ಆಡುಸೋಗೆ, ಅಮೃತಬಳ್ಳಿ, ಲೋಳೆಸರ, ನೆಲಬೇವು ಮತ್ತು ಜಾಜಿ ಮಲ್ಲಿಗೆ ಇವುಗಳ ಮಾಹಿತಿಯನ್ನು ತಿಳಿದುಕೊಂಡೆವು. ಈ ವಾರ ಆ ಲೇಖನದ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:  https://sanatanprabhat.org/kannada/45623.html

ಮಾರ್ಗದರ್ಶಕರು : ಡಾ. ದಿಗಂಬರ ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ವಿದ್ಯಾಪೀಠ ಪುಣೆ, ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ  ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

ಸಂಕಲನಕಾರರು : ಶ್ರೀ. ಮಾಧವ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

೭. ನೆಕ್ಕಿಗಿಡ

ನೆಕ್ಕಿಗಿಡದ ಎಲೆಗಳು

೭ ಅ. ಮಹತ್ವ : ಇದು ವಾತದ ರೋಗಗಳಿಗೆ ರಾಮಬಾಣ ಔಷಧಿಯಾಗಿದೆ. ನೆಕ್ಕಿಗಿಡದ ಎಲೆಗಳನ್ನು ಶಾಖ ಕೊಡಲು ಉಪಯೋಗಿಸುತ್ತಾರೆ. ೪ ಜನರ ಕುಟುಂಬಕ್ಕಾಗಿ ೧ – ೨ ಗಿಡಗಳಿರಬೇಕು.

೭ ಆ. ಪರಿಚಯ : ಇದರ ಎಲೆಗಳು ಬಿಲ್ವಪತ್ರೆಯ ಎಲೆಗಳಂತೆ ಮೂರು ದಳದ್ದಾಗಿರುತ್ತವೆ, ಆದರೆ ಸ್ವಲ್ಪ ಉದ್ದವಾಗಿರುತ್ತವೆ. ಎಲೆಗಳಿಗೆ ವಿಶಿಷ್ಟ ಗಂಧವಿರುತ್ತದೆ. ಇದರ ಎಲೆಗಳನ್ನು ದನಕರುಗಳು ತಿನ್ನುವುದಿಲ್ಲ. ಆದುದರಿಂದ ಹಳ್ಳಿಗಳಲ್ಲಿ ಬಹುತೇಕ ಹೊಲಗಳ ಬೇಲಿಗಳಿಗೆ ಇವುಗಳನ್ನು ನೆಡಲಾಗುತ್ತದೆ. ಅಪರೂಪಕ್ಕೆ ರಸ್ತೆಯ ಬದಿಗೆ ಈ ಗಿಡಗಳು ಕಾಣಿಸುತ್ತವೆ. ಇವುಗಳಿಗೆ ತಿಳಿನೀಲಿ ಬಣ್ಣದ ತುರಾಯಿಗಳು ಬರುತ್ತವೆ.

೭ ಇ. ಕೃಷಿ : ರೆಂಬೆಗಳನ್ನು ನೆಟ್ಟು ಬೆಳೆಸಬಹುದು. ಈ ಗಿಡಗಳನ್ನು ಬೇಲಿಯಲ್ಲಿ ನೆಡಬೇಕು

೮. ನುಗ್ಗೇಕಾಯಿ

ನುಗ್ಗೇಕಾಯಿ ಗಿಡಕ್ಕೆ ಬೆಳೆದ ನುಗ್ಗೇಕಾಯಿಗಳು

೮ ಅ. ಮಹತ್ವ : ನುಗ್ಗೇಕಾಯಿ ಗಿಡವು ಎಲ್ಲರ ಪರಿಚಯದ ಗಿಡವಾಗಿದೆ. ನುಗ್ಗೇಕಾಯಿ ಗಿಡದ ಎಲೆ, ಹೂವು ಮತ್ತು ಕಾಯಿಗಳನ್ನು ಬಳಸಿ ಸಾರು ಮತ್ತು ಪಲ್ಯವನ್ನು ಮಾಡುತ್ತಾರೆ. ಆರೋಗ್ಯಕ್ಕಾಗಿ ನುಗ್ಗೇಕಾಯಿ ತುಂಬಾ ಉಪಯೋಗವಾಗಿದೆ. ಆಪತ್ಕಾಲದಲ್ಲಿ ಆಹಾರಕ್ಕೆ ಪರ್ಯಾಯವೆಂದು ಹೆಚ್ಚೆಚ್ಚು ನುಗ್ಗೇಕಾಯಿಯ ಗಿಡಗಳು ನಮ್ಮ ಸುತ್ತಮುತ್ತಲೂ ಇದ್ದರೆ ಒಳ್ಳೆಯದು. ನುಗ್ಗೇಕಾಯಿಯ ಸಿಪ್ಪೆಗಳನ್ನೂ ಔಷಧಿಗಳಿಗಾಗಿ ಉಪಯೋಗಿಸುತ್ತಾರೆ. ನುಗ್ಗೇಕಾಯಿಯಲ್ಲಿ ಕ್ಯಾಲ್ಶಿಯಮ್ ಇತ್ಯಾದಿ ಖನಿಜಗಳು ಬಹಳಷ್ಟು ಪ್ರಮಾಣದಲ್ಲಿರುತ್ತವೆ.

೮ ಆ. ಕೃಷಿ : ಇವುಗಳನ್ನು ಬೀಜಗಳಿಂದ ಸಸಿಗಳನ್ನು ತಯಾರಿಸಿ ಬೆಳೆಸುತ್ತಾರೆ. ನುಗ್ಗೇಕಾಯಿಯ ಬೀಜಗಳನ್ನು ಮೊಳಕೆ ಒಡೆಸುವ ಮೊದಲು ನೀರನ್ನು ಬೆಚ್ಚಗೆ ಮಾಡಿ ಅದರಲ್ಲಿ ರಾತ್ರಿಯಿಡಿ ನೆನೆಯಿಸಿಡಬೇಕು ಮತ್ತು ಬೆಳಗ್ಗೆ ಮೊಳಕೆ ಒಡೆಯಲು ಹಾಕಬೇಕು. ಹೀಗೆ ಮಾಡಿದರೆ ಚೆನ್ನಾಗಿ ಮೊಳಕೆ ಒಡೆಯುತ್ತವೆ. ಮಳೆಗಾಲದ ಆರಂಭದಲ್ಲಿ ಇದರ ಕೊಂಬೆಗಳನ್ನು (ದಪ್ಪನೆಯ ಗಿಡದ ಟೊಂಗೆಗಳನ್ನು) ನೆಟ್ಟರೂ ಅವುಗಳಿಗೆ ಬೇರುಗಳು ಒಡೆದು ಗಿಡ ತಯಾರಾಗುತ್ತದೆ. ಬಹಳಷ್ಟು ಮಳೆ ಬೀಳುವಾಗ ರೆಂಬೆಗಳನ್ನು ನೆಟ್ಟರೆ ರೆಂಬೆಗಳು ಕೊಳೆಯುತ್ತವೆ. ಆದುದರಿಂದ ರೆಂಬೆಗಳನ್ನು ನೆಡುವುದಿದ್ದರೆ ಅವುಗಳನ್ನು ಮಳೆಗಾಲದ ಆರಂಭದಲ್ಲಿ ಅಥವಾ ಮಳೆಗಾಲವು ಮುಗಿದ ನಂತರ ನೆಡಬೇಕು. ನೆಟ್ಟ ರೆಂಬೆಗಳಿಗೆ ೧೫ ದಿನಗಳಲ್ಲಿ ಬೇರುಗಳು ಒಡೆಯುತ್ತವೆ.

೯. ಮಜ್ಜಿಗೆ ಹುಲ್ಲು

ಮಜ್ಜಿಗೆ ಹುಲ್ಲು ಮತ್ತು ಅದರಿಂದ ತಯಾರಾದ ದಟ್ಟ ಪೊದೆ

೯ ಅ ಮಹತ್ವ : ಮಳೆಗಾಲದಲ್ಲಿ, ಹಾಗೆಯೇ ಚಳಿಗಾಲದ ದಿನಗಳಲ್ಲಿ ನಿತ್ಯದ ಚಹಾದ ಬದಲು (ಹಾಲು ಹಾಕದೇ) ಮಜ್ಜಿಗೆ ಹುಲ್ಲಿನ ಚಹಾ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಇದರಿಂದ ಮೂತ್ರವಿಸರ್ಜನೆಯು ಸರಳವಾಗುತ್ತದೆ. ಜ್ವರ ಬಂದಿದ್ದರೆ ಅದು ಕಡಿಮೆಯಾಗುತ್ತದೆ. ೪ ಜನರ ಕುಟುಂಬಕ್ಕಾಗಿ ೨ ರಿಂದ ೪ ಮಜ್ಜಿಗೆ ಹುಲ್ಲಿನ ಸಸಿಗಳನ್ನು ನೆಡಬೇಕು.

೯ ಆ. ಕೃಷಿ : ಮಜ್ಜಿಗೆ ಹುಲ್ಲಿನ ಪೊದೆ ದಟ್ಟವಾಗಿ ಬೆಳೆಯುತ್ತದೆ. ಮಜ್ಜಿಗೆ ಹುಲ್ಲನ್ನು ಅನೇಕ ಜನರು ಬೆಳೆಸುತ್ತಾರೆ. ಅವರಿಂದ ಅದನ್ನು ಕೇಳಿ ತಂದು ನೆಡಬಹುದು. ಮಳೆಗಾಲದ ಆರಂಭದಲ್ಲಿ ಮಜ್ಜಿಗೆ ಹುಲ್ಲಿನ ಪೊದೆಯಯನ್ನು ಅಗೆದು ತೆಗೆಯಬೇಕು ಮತ್ತು ಅದರ ಬೇರುಗಳ ಕಡೆಯಿಂದ ಬರುವ ಹೊಸ ಸಸಿಗಳನ್ನು ಬೇರೆ ಮಾಡಿ ನೆಡಬೇಕು. ಸಸಿಗಳನ್ನು ನೆಡುವಾಗ ಬೇರುಗಳಿಂದ ಗೇಣುದ್ದ ಮೇಲಿನ ಎಲೆಗಳನ್ನು ಕತ್ತರಿಸಬೇಕು. ಮಜ್ಜಿಗೆ ಹುಲ್ಲಿನ ಪೊದೆಯನ್ನು ಮಳೆಗಾಲದ ಮೊದಲು ಅಗೆದು ಬೇರೆ ಬೇರೆ ಮಾಡಿ ನೆಡದಿದ್ದರೆ, ಅದು ಕೊಳೆಯುವ ಸಾಧ್ಯತೆ ಇರುತ್ತದೆ.

೧೦. ಗರಿಕೆ

ಗರಿಕೆ

೧೦ ಅ. ಮಹತ್ವ : ಈ ವನಸ್ಪತಿಯು ಅತ್ಯಂತ ತಂಪಾಗಿದ್ದು ಉಷ್ಣತೆಯ ರೋಗಗಳಲ್ಲಿನ ಬಹಳ ದೊಡ್ಡ ಔಷಧಿಯಾಗಿದೆ. ಗರಿಕೆಯು ಗರ್ಭಪಾತವನ್ನು ತಡೆಗಟ್ಟುತ್ತದೆ. ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಗರಿಕೆ ಉಪಯೋಗವಾಗುತ್ತದೆ. ಮನೆಯಸುತ್ತಲೂ ಹೆಚ್ಚೆಚ್ಚು ಗರಿಕೆ ಗಳಿರಬೇಕು.

೧೦ ಆ.  ಕೃಷಿ  : ಮಳೆಗಾಲದಲ್ಲಿ ಗರಿಕೆ ನೈಸರ್ಗಿಕವಾಗಿ ಹುಟ್ಟುತ್ತದೆ. ಈ ಗರಿಕೆಗಳನ್ನು ತೆಗೆದು ನಮ್ಮ ಜಾಗದಲ್ಲಿ ನೀರು ಬೀಳುವ ಸ್ಥಳದಲ್ಲಿ ನೆಡಬೇಕು. ಗರಿಕೆಗಳ ೩-೪ ಸಸಿಗಳನ್ನು ತಂದು ನೆಟ್ಟರೂ, ಅವು ಬಹಳಷ್ಟು ಪ್ರಮಾಣದಲ್ಲಿ ಹಬ್ಬುತ್ತವೆ. ಮಳೆಗಾಲದ ನಂತರ ಗರಿಕೆಗಳಿಗೆ ನೀರು ಸಿಗದಿದ್ದರೆ ಅವು ಒಣಗುತ್ತವೆ.

೧೧. ಉತ್ರಾಣಿ

ಉತ್ರಾಣಿ

೧೧ ಅ. ಮಹತ್ವ : ಉತ್ರಾಣಿಯು ಇಲಿ, ಚೇಳು, ನಾಯಿ ಇವುಗಳ ಕಡಿತದಿಂದಾದ ವಿಷಬಾಧೆಯ ನಿವಾರಣೆಗೆ ಹಾಗೆಯೇ ಹಲ್ಲುನೋವಿಗೆ ಹೆಸರುವಾಸಿ ಔಷಧಿಯಾಗಿದೆ. ಬೀಜಗಳನ್ನು ಹಾಲಿನಲ್ಲಿ ಕುದಿಸಿ ಅದರ ಪಾಯಸವನ್ನು ತಯಾರಿಸಿ ಸೇವಿಸಿದರೆ ಹಸಿವಾಗುವುದಿಲ್ಲ, ಎಂದು ಹೇಳುತ್ತಾರೆ. ತೂಕ ಕಡಿಮೆ ಮಾಡುವುದು ಅಥವಾ ಆಹಾರವಿಲ್ಲದೇ ಇರಲು ಸಾಧ್ಯವಾಗಬೇಕೆಂದು ಇದರ ಬಳಕೆಯನ್ನು ಮಾಡಬಹುದು. ಉತ್ರಾಣಿಯ ಬೇರುಗಳನ್ನು ಹೆರಿಗೆಯಾಗುತ್ತಿರುವ ಸ್ತ್ರೀಯ ಸೊಂಟಕ್ಕೆ ಮತ್ತು ಕೂದಲುಗಳಿಗೆ ಕಟ್ಟಿದರೆ ಸುಖರೂಪವಾಗಿ ಹೆರಿಗೆಯಾಗುತ್ತದೆ. ಹೆರಿಗೆಯ ನಂತರ ಕಟ್ಟಿದ ಬೇರುಗಳನ್ನು ತಕ್ಷಣ ಬಿಡಿಸಿ ಅರಿಶಿಣ-ಕುಂಕುಮವನ್ನು ಹಾಕಿ ವಿಸರ್ಜಿಸಬೇಕು. ಇಲ್ಲದಿದ್ದರೆ ಅಪಾಯವೂ ಆಗಬಹುದು. ಗರ್ಭದಲ್ಲಿ ಮೃತ ಹೊಂದಿದ ಮಗುವೂ ಈ ಉಪಾಯದಿಂದ ಹೆರಿಗೆ ಆಗುತ್ತದೆ’, ಎಂದು ಮುಂಚಿನ ಜನರು ಹೇಳುತ್ತಾರೆ.

೧೧ ಆ. ಪರಿಚಯ : ಮೊದಲ ಮಳೆಯಾದ ನಂತರ ಇದರ ಸಸಿಗಳು ನೈಸರ್ಗಿಕವಾಗಿ ತಾವಾಗಿಯೇ  ಹುಟ್ಟುತ್ತವೆ. ಮಳೆಗಾಲವು ಮುಗಿಯುತ್ತಾ ಬಂದಂತೆ ಉತ್ರಾಣಿಗೆ ತುರಾಯಿಗಳು ಬರುತ್ತವೆ. ಈ ತುರಾಯಿಗಳು ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಅವುಗಳಲ್ಲಿ ಅಕ್ಕಿಯಂತಹ ಬೀಜಗಳಿರುತ್ತವೆ.

೧೧ ಇ. ಕೃಷಿ : ವಾಸ್ತವದಲ್ಲಿ ಇದು ಹುಲ್ಲಾಗಿದೆ. ಇದರ ತೋಟಗಾರಿಕೆಯನ್ನು ಮಾಡುವ ಆವಶ್ಯಕತೆ ಇರುವುದಿಲ್ಲ; ಆದರೆ ಬೇಕಾದಾಗ ಹುಡುಕಲು ಕಠಿಣವಾಗುತ್ತದೆ ಎಂದು, ಇದರ ಸಾಧಾರಣ ೩-೪  ಸಸಿಗಳು ನಮ್ಮ ಮನೆಯ ಸುತ್ತಲೂ ಇರಬೇಕು.

(ಮುಂದುವರಿಯುವುದು)

ಆಪತ್ಕಾಲದ ದೃಷ್ಟಿಯಿಂದ ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳಸಬೇಕು ? ಎಂದು ಹೇಳುವ ಈ ಲೇಖನ ಮಾಲೆಯನ್ನು ಸಾಧಕರು ಮತ್ತು ವಾಚಕರು ಸಂಗ್ರಹಿಸಿಡಬೇಕು.