ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
ಸಮೀಕ್ಷೆಯಲ್ಲಿ ಹಿಂದೂಗಳಿಗೆ ವಿವಿಧ ದೇವತೆಗಳ ಚಿತ್ರಗಳನ್ನು ತೋರಿಸಿ ಪ್ರಶ್ನಿಸಲಾಯಿತು. ಅದರಲ್ಲಿ ಶೇ. ೪೪ ರಷ್ಟು ಹಿಂದೂಗಳು ಭಗವಾನ್ ಶಿವ, ಶೇ. ೩೫ ರಷ್ಟು ಹಿಂದೂಗಳು ಶ್ರೀ ಹನುಮಂತ ಹಾಗೂ ಶೇ. ೨೨ ರಷ್ಟು ಹಿಂದೂಗಳು ಶ್ರೀ ಗಣೇಶ ದೇವರು ಶ್ರದ್ಧಾಸ್ಥಾನವಾಗಿದೆ ಎಂದು ಹೇಳಿದ್ದಾರೆ.
ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !
‘ಹನುಮಂತನು ಸ್ವತಃ ೧೧ ನೇ ರುದ್ರನಾಗಿದ್ದು ಅವನು ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಿದ್ದಾನೆ. ಹನುಮಂತನು ಬಹುಗುಣಿಯಾಗಿರುವುದರೊಂದಿಗೆ ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತನಾಗಿದ್ದಾನೆ.
ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು !
ರಾವಣನಿಗೆ ಎಚ್ಚರಿಕೆ ನೀಡಲು ಲಂಕೆಗೆ ಬಂದಿರುವ ನವಗ್ರಹಗಳನ್ನು ರಾವಣನು ತನ್ನ ಮಾಯಾವಿ ಸಿದ್ಧಿಯ ಸಹಾಯದಿಂದ ಬಂಧಿಸಿದನು. ನವಗ್ರಹಗಳ ಮುಕ್ತಿಗಾಗಿ ಬ್ರಹ್ಮದೇವರಲ್ಲಿ ಪ್ರಾರ್ಥನೆ ಮಾಡಿದಾಗ ಬ್ರಹ್ಮದೇವರ ಆಜ್ಞೆಗನುಸಾರ ಹನುಮಂತನು ನವಗ್ರಹಗಳನ್ನು ರಾವಣನ ಸೆರೆಮನೆಯಿಂದ ಮುಕ್ತಗೊಳಿಸಿದನು.