ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !

೨೭ ಎಪ್ರಿಲ್ ೨೦೨೧, ಚೈತ್ರ ಹುಣ್ಣಿಮೆಯ ದಿನ ಇರುವ ಹನುಮಂತ ಜಯಂತಿಯ ನಿಮಿತ್ತ….

೧. ಶ್ರೀ ಹನುಮಂತನು ಮಾಡಿದ ಸಾಧನೆ

‘ಹನುಮಂತನು ಸ್ವತಃ ೧೧ ನೇ ರುದ್ರನಾಗಿದ್ದು ಅವನು ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡಿದ್ದಾನೆ. ಹನುಮಂತನು ಬಹುಗುಣಿಯಾಗಿರುವುದರೊಂದಿಗೆ ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತನಾಗಿದ್ದಾನೆ. ಆದುದರಿಂದ ಅವನಿಗೆ ವಿವಿಧ ಯೋಗ ಮಾರ್ಗಗಳಿಗನುಸಾರ ಸಾಧನೆಯನ್ನು ಮಾಡುವುದು ಸುಲಭವಾಯಿತು. ಹನುಮಂತನ ಚರಿತ್ರೆಯನ್ನು ಅಧ್ಯಯನ ಮಾಡಿದರೆ, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆಯನ್ನು ಮಾಡುವ ಸಾಧಕರಿಗೆ ಹನುಮಂತನಿಂದ ಸಾಧನೆಯನ್ನು ಮಾಡುವ ಪ್ರೇರಣೆ ಸಿಗುತ್ತದೆ ಮತ್ತು ಅವನಿಂದ ಅನೇಕ ಹೊಸ ಅಂಶಗಳು ಕಲಿಯಲು ಸಿಗುತ್ತವೆ.

೧ ಅ. ಭಕ್ತಿಯೋಗ : ಹನುಮಂತನು ದಾಸ್ಯಭಕ್ತಿಯ ಪರಮೋಚ್ಚ ಉದಾಹರಣೆಯಾಗಿದ್ದಾನೆ. ಹನುಮಂತನಿಂದ ಭಕ್ತಿಯನ್ನು ಹೇಗೆ ಮಾಡಬೇಕು, ಎಂಬುದು ಕಲಿಯಲು ಸಿಗುತ್ತದೆ.

೧ ಆ. ನಾಮಸಂಕೀರ್ತನಯೋಗ : ಹನುಮಂತನು ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’, ಈ ನಾಮಜಪವನ್ನು ಅಖಂಡವಾಗಿ ಜಪಿಸುತ್ತಾನೆ. ಅವನು ಶ್ರೀರಾಮನ ನಾಮಜಪವನ್ನು ಮಾಡಿ ಶ್ರೀರಾಮನ ಅನುಸಂಧಾನದಲ್ಲಿರುತ್ತಾನೆ.

೧ ಇ. ಕರ್ಮಯೋಗ : ಹನುಮಂತನು ಪ್ರಭು ಶ್ರೀರಾಮನ ಪರಿಪೂರ್ಣ ಸೇವೆಯನ್ನು ಮಾಡಿ ಸೇವಕನ ಧರ್ಮಕ್ಕನುಸಾರ ಆಚರಣೆಯನ್ನು ಮಾಡಿದನು. ಹನುಮಂತನ ಪ್ರತಿಯೊಂದು ಕೃತಿ ಮತ್ತು ವಿಚಾರಗಳು ಶ್ರೀರಾಮನಿಗೆ ಅಪೇಕ್ಷಿತವಿದ್ದಂತೆಯೇ ಆಗುತ್ತಿದ್ದವು. ಹನುಮಂತನಲ್ಲಿದ್ದ ಭಕ್ತಿಯಿಂದ ಅವನ ಮನಸ್ಸಿನ ಪ್ರತಿಯೊಂದು ವಿಚಾರ ಮತ್ತು ಪ್ರತಿಯೊಂದು ಕೃತಿ ಪ್ರಭು ಶ್ರೀರಾಮನ ಚರಣಗಳಲ್ಲಿ ಅರ್ಪಣೆಯಾಗುತ್ತಿತ್ತು.

೧ ಈ. ಧ್ಯಾನಯೋಗ : ರಾಮಕಾರ್ಯ ಇಲ್ಲದಿರುವಾಗ, ಹನುಮಂತನು ಅಖಂಡ ಧ್ಯಾನದಲ್ಲಿದ್ದು ಬ್ರಹ್ಮಸಮಾಧಿಯಲ್ಲಿ ತಲ್ಲೀನನಾಗುತ್ತಿದ್ದನು. ಹನುಮಂತನು ಧ್ಯಾನದಲ್ಲಿ ಪ್ರಭು ಶ್ರೀರಾಮನ ನಿರ್ಗುಣ ರೂಪದ ಆಲಂಬನೆಯನ್ನು ಮಾಡುತ್ತಿದ್ದನು.

೧ ಉ. ಜ್ಞಾನಯೋಗ : ಹನುಮಂತನು ೧೧ ನೇ ರುದ್ರನಾಗಿದ್ದರಿಂದ ಶಿವನಂತೆ ಜ್ಞಾನಸ್ವರೂಪನಾಗಿದ್ದಾನೆ. ಹನುಮಂತನ ಉಪಾಸನೆಯನ್ನು ಮಾಡುವವನಿಗೆ ಅವನು ಆತ್ಮಜ್ಞಾನ ಮತ್ತು ಅಧ್ಯಾತ್ಮದ ವಿವಿಧ ಅಂಗಗಳ ಜ್ಞಾನವನ್ನು ನೀಡುತ್ತಾನೆ.

೧ ಊ. ಗುರುಕೃಪಾಯೋಗ : ಹನುಮಂತನು ಬಾಲ್ಯಾವಸ್ಥೆಯಲ್ಲಿ ಸೂರ್ಯಲೋಕಕ್ಕೆ ಹೋದನು ಮತ್ತು ಅವನು ಸೂರ್ಯದೇವರನ್ನು ತನ್ನ ಗುರುವೆಂದು ಸ್ವೀಕರಿಸಿದನು. ಹನುಮಂತನಿಗೆ ಸೂರ್ಯದೇವರಿಂದ ಆತ್ಮಜ್ಞಾನ ಮತ್ತು ನಾರದರಿಂದ ಸಂಗೀತ ಕಲೆ ಮತ್ತು ವ್ಯಾಕರಣದ ಜ್ಞಾನವು ಪ್ರಾಪ್ತವಾಗಿತ್ತು. ಹನುಮಂತನು ಸೂರ್ಯ ದೇವರು ಮತ್ತು ನಾರದಮುನಿಗಳ ಶಿಷ್ಯತ್ವವನ್ನು ಸ್ವೀಕರಿಸಿದ್ದನು.

೨. ಹನುಮಂತನ ಉಪಾಸನೆಯಿಂದ ಉಪಾಸಕನಿಗಾಗುವ ಆಧ್ಯಾತ್ಮಿಕ ಲಾಭಗಳು

೨ ಅ. ಉಪಾಸಕನ ಸೂಕ್ಷ್ಮ ಅಹಂ ಕಡಿಮೆಯಾಗುವುದು : ಹನುಮಂತನಲ್ಲಿ ಸ್ವಲ್ಪವೂ ಅಹಂಕಾರವಿಲ್ಲ. ಆದುದರಿಂದ ಅವನು ದೇವನಾಗಿದ್ದರೂ ತನ್ನನ್ನು ಪ್ರಭು ಶ್ರೀರಾಮನ ದಾಸನೆಂದು ತಿಳಿದುಕೊಳ್ಳುತ್ತಾನೆ. ಆದುದರಿಂದ ಅವನ ಉಪಾಸನೆಯಿಂದ ಉಪಾಸಕನ ಸೂಕ್ಷ್ಮ ಅಹಂ ಕರಗಿಹೋಗುತ್ತದೆ.

೨ ಆ. ದಾಸ್ಯಭಕ್ತಿಯು ಬೇಗನೆ ಜಾಗೃತವಾಗುವುದು : ಹನುಮಂತನು ಪ್ರಭು ಶ್ರೀರಾಮನ ದಾಸ್ಯಭಕ್ತಿಯನ್ನು ಮಾಡಿದ್ದಾನೆ. ಆದುದರಿಂದ ಅವನ ಉಪಾಸನೆಯನ್ನು ಮಾಡುವ ಉಪಾಸಕರಲ್ಲಿ ದಾಸ್ಯಭಕ್ತಿಯು ಬೇಗನೆ ಜಾಗೃತವಾಗಲು ಸಹಾಯವಾಗುತ್ತದೆ.

೨ ಇ. ಕೆಟ್ಟ ಶಕ್ತಿಗಳ ತೊಂದರೆ ಆಗದಿರುವುದು : ಹನುಮಂತನಲ್ಲಿ ಪ್ರಕಟ ಶಕ್ತಿಯು ಶೇ. ೭೦ ರಷ್ಟಿದೆ. ಆದುದರಿಂದ ಅವನ ಉಪಾಸನೆಯನ್ನು ಮಾಡುವವರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುವುದಿಲ್ಲ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿದ್ದರೆ ಅದು ಬೇಗನೆ ದೂರವಾಗುತ್ತದೆ. ಹನುಮಂತನ ಉಪಾಸನೆಯನ್ನು ಮಾಡುವವರ ಬಳಿ ಭೂತ, ಪ್ರೇತ, ರಾಕ್ಷಸ ಇತ್ಯಾದಿ ಕೆಟ್ಟ ಶಕ್ತಿಗಳು ಬರುವುದಿಲ್ಲ.

೨ ಈ. ಭಗವಂತನ ಪ್ರಾಪ್ತಿಯನ್ನು ಮಾಡಿಕೊಳ್ಳುವ ಮಾರ್ಗವು ಸಿಗುವುದು : ಹನುಮಂತನ ಉಪಾಸನೆಯಿಂದ ಉಪಾಸಕನಲ್ಲಿ ಭಕ್ತಿ ಜಾಗೃತವಾಗಿ ಅವನಿಗೆ ಭಗವಂತನ ಪ್ರಾಪ್ತಿಯನ್ನು ಮಾಡಿಕೊಳ್ಳುವ ಮಾರ್ಗ ಸಿಗುತ್ತದೆ. ಯಾವ ರೀತಿ ಬೀಗದ ಕೈಯಿಂದ ಬೀಗ ತೆರೆಯುತ್ತದೆಯೋ, ಅದರಂತೆ ಹನುಮಂತನಿಂದ ರಾಮನೆಡೆಗೆ ಹೋಗುವ ಮಾರ್ಗವು ಸುಗಮವಾಗುತ್ತದೆ.

೨ ಉ. ಅಷ್ಟಮಹಾಸಿದ್ಧಿ ಮತ್ತು ನವನಿಧಿಗಳು ಪ್ರಾಪ್ತವಾಗುವುದು : ಹನುಮಂತನ ಕೃಪೆಯಿಂದ ಆತ್ಮಾರಾಮನ ದರ್ಶನವಾಗಿ ಆತ್ಮಜ್ಞಾನ ಪ್ರಾಪ್ತವಾಗುತ್ತದೆ. ಅದರಂತೆಯೇ ಅಧ್ಯಾತ್ಮದಲ್ಲಿ ವಿವಿಧ ಅಂಗಗಳ ಜ್ಞಾನ ಪ್ರಾಪ್ತವಾಗುತ್ತದೆ. ಹನುಮಂತನು ಅಷ್ಟಮಹಾಸಿದ್ಧಿ (ಟಿಪ್ಪಣಿ ೧) ಮತ್ತು ನವನಿಧಿ (ಟಿಪ್ಪಣಿ ೨)ಗಳ ದಾತನಾಗಿದ್ದಾನೆ. ಅವನ ಉಪಾಸನೆಯನ್ನು ಮಾಡುವವರಿಗೂ ಅಷ್ಟಮಹಾಸಿದ್ಧಿ ಮತ್ತು ನವನಿಧಿಗಳು ಪ್ರಾಪ್ತವಾಗುತ್ತವೆ.

ಟಿಪ್ಪಣಿ ೧ಅಷ್ಟಮಹಾಸಿದ್ಧಿ : ಅಷ್ಟಮಹಾಸಿದ್ಧಿಗಳೆಂದರೆ ಗೂಢ ಶಕ್ತಿಗಳು. ಮುಖ್ಯವಾಗಿ ಎಂಟು ವಿಧದ ಗೂಢ ಶಕ್ತಿಗಳಿವೆ.

(ಆಧಾರ : ಭಕ್ತಿಕೋಶ)

ಟಿಪ್ಪಣಿ ೨ – ನವನಿಧಿ : ಕುಬೇರನು ದೈವೀ ಸಂಪತ್ತಿನ ಒಡೆಯನಾಗಿದ್ದಾನೆ.

ಅವನಲ್ಲಿ ಪ್ರಮುಖ ಒಂಬತ್ತು ವಿಧದ ಸಂಪತ್ತುಗಳಿವೆ. ಅವುಗಳಿಗೆ ‘ನವನಿಧಿ’ ಎಂದೂ ಹೇಳುತ್ತಾರೆ. ಅವು ಮುಂದಿನಂತಿವೆ. ‘ಮಹಾಪದ್ಮ, ಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ ಮತ್ತು ಖರ್ವ.’ ಖರ್ವ ಎಂದರೆ ೧೦೦ ಅಬ್ಜ. – (ಆಧಾರ : ಭಕ್ತಿಕೋಶ)

ಕೃತಜ್ಞತೆ

ಭಗವಂತನು ಹನುಮಂತನ ಮಾಹಿತಿಯನ್ನು ನೀಡಿ ನಮ್ಮೆಲ್ಲ ಸಾಧಕರಿಗೆ ಮಾರ್ಗದರ್ಶನವನ್ನು ಮಾಡಿದನು ಮತ್ತು ಕೃತಾರ್ಥ ರನ್ನಾಗಿ ಮಾಡಿದನು. ಇದಕ್ಕಾಗಿ ನಾವು ಭಗವಂತನ ಚರಣಗಳಲ್ಲಿ ಕೃತಜ್ಞರಾಗೋಣ.’ – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೩.೨೦೧೯)

ಹಿಂದೂಗಳೇ, ಈಶ್ವರನ ಮೇಲಿನ ಭಾವ-ಭಕ್ತಿಯನ್ನು ಹೆಚ್ಚಿಸಲು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಲು ಭಕ್ತಶಿರೋಮಣಿ ಹನುಮಂತನ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡೋಣ