ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ನವ ದೆಹಲಿ – ‘ಪ್ಯೂ ರಿಸರ್ಚ್ ಸೆಂಟರ್’ನ ಈ ಸಂಸ್ಥೆಯ ಸಮೀಕ್ಷೆಯ ವರದಿಯಲ್ಲಿ ಹಲವಾರು ಅಂಶಗಳು ಬಹಿರಂಗವಾಗುತ್ತಿದೆ. ‘ಹಿಂದೂಗಳಿಗೆ ಅತ್ಯಂತ ಇಷ್ಟವಾದ ದೇವರು ಯಾರು ?’ ಎಂದು ಹಿಂದೂಗಳಿಗೆ ಈ ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಯಿತು. ಈ ಸಮಯದಲ್ಲಿ ಶೇ. ೯೭ ರಷ್ಟು ಹಿಂದೂಗಳು ಆಸ್ತಿಕರೆಂದು ಹೇಳುತ್ತಾ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶ ದೇವರ ಮೇಲೆ ಅತಿ ಹೆಚ್ಚು ಶ್ರದ್ಧೆ ಇದೆ ಎಂದು ನಮೂದಿಸಿದ್ದಾರೆ. ಇನ್ನೊಂದು ಕಡೆ ಬೌದ್ಧರಲ್ಲಿ ಮೂರನೇ ಒಂದು ಭಾಗ ಜನರು, ದೇವರ ಮೇಲೆ ನಂಬಿಕೆ ಇಡುತ್ತಿಲ್ಲ ಎಂದು ಹೇಳಿದ್ದಾರೆ.

೧. ಸಮೀಕ್ಷೆಯಲ್ಲಿ ಹಿಂದೂಗಳಿಗೆ ವಿವಿಧ ದೇವತೆಗಳ ಚಿತ್ರಗಳನ್ನು ತೋರಿಸಿ ಪ್ರಶ್ನಿಸಲಾಯಿತು. ಅದರಲ್ಲಿ ಶೇ. ೪೪ ರಷ್ಟು ಹಿಂದೂಗಳು ಭಗವಾನ್ ಶಿವ, ಶೇ. ೩೫ ರಷ್ಟು ಹಿಂದೂಗಳು ಶ್ರೀ ಹನುಮಂತ ಹಾಗೂ ಶೇ. ೨೨ ರಷ್ಟು ಹಿಂದೂಗಳು ಶ್ರೀ ಗಣೇಶ ದೇವರು ಶ್ರದ್ಧಾಸ್ಥಾನವಾಗಿದೆ ಎಂದು ಹೇಳಿದ್ದಾರೆ.

೨. ಪಶ್ಚಿಮ ಭಾರತದಲ್ಲಿ ಶೇ ೪೬ ರಷ್ಟು ಜನರು, ಪೂರ್ವದಲ್ಲಿ ಶೇ. ೧೫ ರಷ್ಟು ಜನರು ಶ್ರೀ ಗಣೇಶನು ತಮ್ಮ ಶ್ರದ್ಧಾಸ್ಥಾನ ಆಗಿದ್ದಾರೆ ಎಂದು ಹೇಳಿದ್ದಾರೆ. ಪೂರ್ವೋತ್ತರ ಭಾರತದ ಶೇ. ೪೬ ರಷ್ಟು ಜನರು ಭಗವಾನ ಶ್ರೀಕೃಷ್ಣನ ಮೇಲೆ ಹೆಚ್ಚು ಶ್ರದ್ಧೆ ಇದೆ ಎಂದು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಈ ಶೇಕಡಾವಾರು ೧೪ ರಷ್ಟು ಇತ್ತು.