ಶಿವರಾಜ್ಯಾಭಿಷೇಕ ದಿನ ! ತಿಥಿ: ಜ್ಯೇಷ್ಠ ಶುಕ್ಲ ಪಕ್ಷ 13 (4.6.2020)

5 ಸುಲ್ತಾನರ ಜೊತೆ ಹೋರಾಡಿ, ಭಯೋತ್ಪಾದನೆಯನ್ನು ಕೊನೆಗೊಳಿಸಿ, ‘ಹಿಂದವೀ ಸ್ವರಾಜ್ಯ’ವನ್ನು ಸ್ಥಾಪಿಸಿದ ಛತ್ರಪತಿ !, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಛತ್ರಪತಿ ಶಿವರಾಯರಂತಹ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಮಾಡುವುದು ಅನಿವಾರ್ಯ !

ಸನಾತನದ ಧರ್ಮಪ್ರಚಾರಕರು ಮತ್ತು ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಜನ್ಮದಿನ

ಸನಾತನದ ಧರ್ಮಪ್ರಚಾರಕರು ಮತ್ತು ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಜನ್ಮದಿನ
ಜ್ಯೇಷ್ಠ ಶುಕ್ಲ ಪಕ್ಷ ನವಮಿ (೩೧. ೫. ೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

ಹಿಂದೂಗಳ ಸ್ವಾಭಿಮಾನಕ್ಕಾಗಿ ಹೋರಾಡಿದ ಮಹಾರಾಣಾ ಪ್ರತಾಪ್

ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡಲು ನಿಂತ ಸ್ವಾಭಿಮಾನಿ ರಾಜ ಮಹಾರಾಣಾ ಪ್ರತಾಪ್ ! ಅವರು ಹಳದೀಘಾಟ್‌ನ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು. ಅವರು ‘ಮೇವಾಡಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ರಾಜವೈಭವ ಭೋಗಿಸುವುದಿಲ್ಲ !’ ಎಂಬ ಪ್ರತಿಜ್ಞೆಯನ್ನು ಅಪಾರ ಯಾತನೆಗಳನ್ನು ಸಹಿಸಬೇಕಾಗಿ ಬಂದರೂ ಪಾಲಿಸಿದರು

ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ ನಿಮಿತ್ತ ವೈಶಾಖ ಕೃಷ್ಣ ಪಕ್ಷ ಷಷ್ಠಿ (೧೨.೫.೨೦೨೦)

ಅಖಂಡ ಹಿಂದೂ ರಾಷ್ಟ್ರವನ್ನು ಪುರಸ್ಕರಿಸಿದ ಸ್ವಾ. ಸಾವರಕರ ಯುವಕರಾಗಿದ್ದಾಗ ಇಂಗ್ಲೆಂಡಿಗೆ ಹೋಗಿ ಸಶಸ್ತ್ರ ಕ್ರಾಂತಿಯ ಬಲೆ ಹೆಣೆದ, ಎರಡು ಬಾರಿ ಜೀವಾವಧಿ ಶಿಕ್ಷೆಯನ್ನು ಭೋಗಿಸಿದ ಜಗತ್ತಿನ ಏಕೈಕ ಕ್ರಾಂತಿಕಾರರೆಂದರೆ ಸ್ವಾತಂತ್ರ್ಯವೀರ ಸಾವರಕರರು !

೧೮೫೭ ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನದ ನಿಮಿತ್ತ (ಮೇ ೧೦)

ಕಾನಪುರದ ಮೇಲೆ ಹಲ್ಲೆಯನ್ನು ಮಾಡಿದ ಮೇಲೆ ಆಂಗ್ಲರನ್ನು ತೋಪಿನಿಂದ ನಷ್ಟಗೊಳಿಸುವುದೆಂದು ಕ್ರಾಂತಿಕಾರರು ಆಯೋಜಿಸಿದ್ದರು. ಸಿಪಾಯಿಗಳು ಆಗಾಗ ಹಲ್ಲೆಯನ್ನೂ ಮಾಡುತ್ತಿದ್ದರು. ೧೮ ಜೂನ್ ೧೮೫೭ ರಂದು ಅಯೋಧ್ಯೆಯ ಸಿಪಾಯಿಗಳು ಆಂಗ್ಲರ ಮೇಲೆ ನಡೆಸಿದ ಹಲ್ಲೆಯು ಇತಿಹಾಸಕ್ಕೆ ಭೂಷಣವಾಗಿತ್ತು.

ವ್ಯಾಸ ಮಹರ್ಷಿಗಳ ಶ್ಲೋಕ ಮತ್ತು ಅರ್ಥ

ಪರಾಶರ ಮುನಿಗಳ ಪುತ್ರ, ಪರಮ ಪುರುಷ, ವಿಶ್ವ ಮತ್ತು ದೇವರುಗಳ ಜ್ಞಾನದ ಉತ್ಪತ್ತಿ ಸ್ಥಾನ, ವಿದ್ಯೆ ಮತ್ತು ವಿಫುಲ ಬುದ್ಧಿಯನ್ನು ಹೊಂದಿರುವ, ವೇದ ಮತ್ತು ವೇದಾಂಗವನ್ನು ತಿಳಿದಿರುವ, ಚಿರಂಜೀವಿ, ಶಾಂತ ಹಾಗೂ ವಿಷಯಗಳ ಮೇಲೆ ವಿಜಯವನ್ನು ಹೊಂದಿರುವ, ಶುದ್ಧವಾದ ತೇಜ ಪ್ರಕಾಶಿಸುತ್ತಿರುವ, ಜ್ಞಾನವಂತನಾಗಿರುವ ಭಗವಾನ ವೇದವ್ಯಾಸರಿಗೆ ನಾನು ಸದಾ ಸರ್ವದಾ ಶರಣಾಗಿದ್ದೇನೆ.