ವೃದ್ಧಾಪ್ಯಕಾಲದಲ್ಲಿ ವೃದ್ಧರು ಹೇಗೆ ವರ್ತಿಸಬೇಕು ?, ಇದರ ಬಗೆಗಿನ ಕೆಲವು ಸುಲಭ ಅಂಶಗಳು
೨೧ ನೇ ಶತಮಾನದ ಕಡೆಗೆ ಮಾರ್ಗಕ್ರಮಣ ಮಾಡುತ್ತಿರುವಾಗ ಹೆಚ್ಚುಕಡಿಮೆ ಶೇ. ೮೦ ರಷ್ಟು ಮಕ್ಕಳು (ಹುಡುಗರು, ಹುಡುಗಿಯರು) ತಮಗೆ ಜನ್ಮ ನೀಡಿದ ತಾಯಿ-ತಂದೆಯರನ್ನು ದುರ್ಲಕ್ಷ ಮಾಡುತ್ತಾರೆ. ಯಾರು ನಮ್ಮನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ, ಚಿಕ್ಕವರಿಂದ ದೊಡ್ಡವರನ್ನಾಗಿ ಮಾಡಿದರೋ, ಅವರನ್ನೇ ನಾವು ದೊಡ್ಡವರಾದ ಮೇಲೆ ಅಥವಾ ವಿವಾಹವಾದ ಮೇಲೆ ದ್ವೇಷಿಸುತ್ತೇವೆ ಅಥವಾ ಅವರ ತಿರಸ್ಕಾರ ಮಾಡುತ್ತೇವೆ