ಸುವರ್ಣಭೂಮಿ ಭಾರತ ! 

೧. ಭಾರತಕ್ಕೆ ಸೂರ್ಯನಾರಾಯಣನು ಬೇಕಾದಷ್ಟು ಬಿಸಿಲು (ಚಿನ್ನ) ಕೊಡುತ್ತಿರುವುದರಿಂದ ಭಾರತ ಭೂಮಿಗೆ ‘ಸುವರ್ಣಭೂಮಿ ಎಂದು ಹೇಳಲಾಗುವುದು ಹಾಗೂ ಮಳೆಗಾಲವು ನಿರ್ಧಿಷ್ಟ ಋತುವಿನಲ್ಲಿ ಆರಂಭವಾಗುವುದರಿಂದ ಭಾರತದಲ್ಲಿ ಸಮೃದ್ಧಿಯುಕ್ತ ಚಕ್ರಗಳು ನಿಯಮಿತವಾಗಿ ನಡೆಯುತ್ತಿರುವುದು

‘ನಮ್ಮ ದೇಶವು ಸುವರ್ಣಭೂಮಿಯಾಗಲು ಒಂದು ಕಾರಣವೆಂದರೆ, ನಮಗೆ ಸಿಗುವ ಸೂರ್ಯಪ್ರಕಾಶ. ಪೃಥ್ವಿಗೋಲಕ್ಕೆ ಸಂಬಂಧಿಸಿ ವಿಚಾರ ಮಾಡಿದರೆ ಉತ್ತರ ಗೋಲಾರ್ಧದಲ್ಲಿ ಭೂ-ಪ್ರದೇಶವು ದಕ್ಷಿಣಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ ಎಂದು ಗಮನಕ್ಕೆ ಬರುತ್ತದೆ. ಅದರಲ್ಲಿ ಭಾರತದ ಸ್ಥಾನ ಸಾಧಾರಣ ಉತ್ತರ ಅಂಕ್ಷಾಂಶ ೭ ರಿಂದ ೩೫ ಅಂಶಕ್ಕೆ ಮತ್ತು ಪೂರ್ವ ರೇಖಾಂಶ ೭೦ ರಿಂದ ೧೦೦ ಅಂಶದ ನಡುವೆ ಬರುತ್ತದೆ. ಆದ್ದರಿಂದ ದಿನ ಮತ್ತು ರಾತ್ರಿ ಇವುಗಳಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ನಮಗೆ ಸೂರ್ಯನಾರಾಯಣನು ಬೇಕಾದಷ್ಟು ಬಿಸಿಲು, ಅಂದರೆ ಚಿನ್ನವನ್ನು ಕೊಡುತ್ತಾನೆ. ಅದೇ ರೀತಿ ಮೂರೂ ದಿಕ್ಕುಗಳಲ್ಲಿ ಸಮುದ್ರ ಮತ್ತು ಉತ್ತರಕ್ಕೆ ಹಿಮಾಲಯ ಪರ್ವತವಿರುವುದರಿಂದ ದೇಶವು ನಿಜವಾದ ಅರ್ಥದಲ್ಲಿ ಸುಫಲಾಮ್ ಆಗಿದೆ. ಮಳೆಗಾಲವು ನಿರ್ದಿಷ್ಟ ಋತುವಿನಲ್ಲಿಯೇ ಬರುವುದರಿಂದ ನಮ್ಮ ದೇಶದಲ್ಲಿ ವಾತಚಕ್ರ, ಜಲಚಕ್ರ, ಭೂಚಕ್ರ ಮತ್ತು ಕೃಷಿಚಕ್ರ ಈ ಸಮೃದ್ಧಿದಾಯಕ ಚಕ್ರಗಳು ನಿಯಮಿತವಾಗಿ ತಿರುಗುತ್ತಿರುತ್ತವೆ. ನಮ್ಮ ದೇಶ ಮತ್ತು ನಮ್ಮ ಜನತೆ ಇವರಿಗೆ ಒಂದು ರೀತಿಯ ಸ್ಥೈರ್ಯ, ಸಮೃದ್ಧಿ ಮತ್ತು ಆರೋಗ್ಯದಾಯಕ ಬುದ್ಧಿಯು ಪ್ರಾಪ್ತಿಯಾಗಿದೆ. ಇದಕ್ಕೆ ನಮ್ಮ ಇತಿಹಾಸವು ಸಾಕ್ಷಿಯಾಗಿದೆ.

೨. ಹಿರಣ್ಯಗರ್ಭ ಮತ್ತು ಸೂರ್ಯಕಿರಣ

ಸೂರ್ಯನಿಗೆ ವೇದಗಳಲ್ಲಿ ‘ಹಿರಣ್ಯಗರ್ಭ ಎಂದು ಹೇಳಲಾಗಿದೆ. ಹಿರಣ್ಯಗರ್ಭ ಎಂದರೆ, ‘ಯಾರ ಅಂತರಂಗದಲ್ಲಿ ಚಿನ್ನವಿರುತ್ತದೆಯೊ, ಅದು. ಈ ಸುವರ್ಣವು ಸೂರ್ಯಕಿರಣದಲ್ಲಿರುತ್ತದೆ.

೩. ಸೂರ್ಯನ ಕಿರಣಗಳಲ್ಲಿನ ‘ಸುವರ್ಣ ವನಸ್ಪತಿ ಹಾಗೂ ಶಾಕಾಹಾರಿ ಪ್ರಾಣ ಇವುಗಳ ಮೂಲಕ ಸಿಗುತ್ತಿರುವುದು

ಸೂರ್ಯನ ಕಿರಣಗಳಲ್ಲಿನ ಸುವರ್ಣವು ವನಸ್ಪತಿಗಳಲ್ಲಿ, ನಂತರ ವನಸ್ಪತಿಗಳಿಂದ ಪ್ರಾಣಿಗಳಲ್ಲಿ, ವಿಶೇಷವಾಗಿ ಹಸುವಿನಲ್ಲಿ, ಹಾಗೂ ಹಾಲು, ತುಪ್ಪ ಇತ್ಯಾದಿಗಳಿಂದ ಅಥವಾ ಕುರಿ, ಆಡು ಇತ್ಯಾದಿ ಶಾಕಾಹಾರಿ ಪ್ರಾಣಿಗಳ ಮಾಂಸಗಳಿಂದ ನಮಗೆ ಸಿಗುತ್ತದೆ. ಈ ಭೂಮಾತೆಯ ಕೃಪೆಯಿಂದಾಗಿ, ನಾವು ಭಾರತೀಯರು ಬುದ್ಧಿವಂತರಾಗಿದ್ದೇವೆ. ! – ಶ್ರೀ.ಶ್ರೀ.ಭಟ್ (ಆಧಾರ : ಮಾಸಿಕ ‘ಧನುರ್ಧಾರಿ ಜುಲೈ ೨೦೧೫)