ಇಟಲಿ ಕೊರೋನಾ ಪೀಡಿತವಾಗಲು ಅಲ್ಲಿನ ಚೀನಾಪ್ರೇಮಿ ಸಾಮ್ಯವಾದಿಗಳೇ ಜವಾಬ್ದಾರರು !

ಕೊರೋನಾ ಇಂದಿನವರೆಗೆ ಅತಿ ಹೆಚ್ಚು ಹಬ್ಬಿದ ದೇಶಗಳಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. ‘ಇಟಲಿ ಚೀನಾದಿಂದ ಸಾವಿರಾರು ಕಿ.ಮೀ. ದೂರದಲ್ಲಿರುವಾಗ ಅಲ್ಲಿ ಕೊರೋನಾ ಹೇಗೆ ಇಷ್ಟೊಂದು ಹರಡಿತು ?’, ಎಂದು ಪ್ರತಿಯೊಬ್ಬರಿಗೂ ಪ್ರಶ್ನೆ ಮೂಡುತ್ತಿದೆ. ಇದೇನು ಒಮ್ಮೆಲೆ ಆಗಲಿಲ್ಲ. ಅದರ ಹಿಂದೆ ಬಹಳ ದೊಡ್ಡ ಹಾಗೂ ಮಹತ್ವದ ಹಿನ್ನೆಲೆ ಅಡಗಿದೆ. ಇಟಲಿಯ ಚೀನಾಪ್ರೇಮಿ ಸಾಮ್ಯವಾದಿ ಆಡಳಿತ ಮತ್ತು ವಿಸ್ತಾರದ ಆಸೂರಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಚೀನಾಕ್ಕೆ ಇಟಲಿ ಹಾಸಿದ ರತ್ನಗಂಬಳಿ, ಇವು ಅದರ ಹಿಂದಿನ ಮಹತ್ವದ ಕಾರಣಗಳಾಗಿವೆ. ಅದರ ಮೇಲೆ ಬೆಳಕು ಚೆಲ್ಲುವ ಈ ಲೇಖನ…

೧. ಇಟಲಿಯಲ್ಲಿ ಹೆಚ್ಚುತ್ತಿರುವ ಚೀನಾದ ಹಸ್ತಕ್ಷೇಪ !

‘ಇಟಲಿಯಲ್ಲಿನ ‘ಡೆಮಾಕ್ರೆಟಿಕ್ ಪಾರ್ಟಿ’ ಈ ಸಾಮ್ಯವಾದಿ (ಕಮ್ಯುನಿಸ್ಟ್) ಪಕ್ಷದ ಮುಖಂಡ ಹಾಗೂ ಫ್ಲಾರೆನ್ಸ್‌ನ ಮಾಜಿ ಮಹಾಪೌರ ಮಾತ್ತೇಯೋ ರೆಂತ್ಸಿ ಇವರು ಅನೇಕ ಅಡ್ಡಿ ಅಡಚಣೆಗಳನ್ನು ಎದುರಿಸಿ ಫೆಬ್ರವರಿ ೨೦೧೪ ರಲ್ಲಿ ಇಟಲಿಯ ಪ್ರಧಾನಮಂತ್ರಿಯಾದರು. ತೀವ್ರ ಎಡಪಂಥೀಯ ವಿಚಾರಸರಣಿಯವರಾದ ಪ್ರಧಾನಮಂತ್ರಿ ರೆಂತ್ಸಿ ಇವರ ಕಾಲದಲ್ಲಿ ಒಂದೆಡೆ ಇಟಲಿ ಮತ್ತು ಚೀನಾ ಸರಕಾರದಲ್ಲಿ ಕೊಡುಕೊಳ್ಳುವಿಕೆ ನಡೆದಿರುವಾಗ ಇನ್ನೊಂದೆಡೆ ಇಟಲಿಯಲ್ಲಿ ಆರ್ಥಿಕ ಸ್ಥಿತಿ ಸರಿಯಾಗಿರಲಿಲ್ಲ. ಬ್ಯಾಂಕ್‌ಗಳು ಬಂದಾಗಲಿಲ್ಲ; ಆದರೆ ಅವು ಕುಸಿದವು. ಪಿಂಚಣಿ ನಿಧಿ ಖಾಲಿಯಾಯಿತು. ಇಟಲಿಯ ಕಾನೂನುಗಳು ಮತ್ತು ಯುರೋಪಿಯನ್ ಸಂಘದಿಂದ ಅಮೇರಿಕಾ ಮತ್ತು ಬ್ರಿಟನ್‌ದೊಂದಿಗೆ ಆಗಿರುವ ವ್ಯಾಪಾರ ಒಪ್ಪಂದ ಇವುಗಳಿಗೆ ಸ್ವಲ್ಪವೂ ಹೆದರದೆ ಚೀನಾದವರು ಇಟಲಿಯ ಉತ್ತರ ಭಾಗದಲ್ಲಿ ಸ್ಥಿರ ಆಸ್ತಿ ಮತ್ತು ಸ್ಥಳೀಯ ವ್ಯಾಪಾರ-ವ್ಯವಸಾಯಗಳನ್ನು ಖರೀದಿಸಲು ಆರಂಭಿಸಿದರು. ಇಟಲಿಯಲ್ಲಿನ ದೂರಸಂಚಾರ, ಕಾರ್ಖಾನೆಗಳು, ಫ್ಯಾಶನ್ ಉದ್ಯೋಗಗಳಂತಹ ಕ್ಷೇತ್ರಗಳಲ್ಲಿ ಚೀನಾ ಮುನ್ನುಗ್ಗಿದೆ. ಚೀನಾದ ಈ ಕೃತ್ಯಗಳತ್ತ ಪ್ರಧಾನಮಂತ್ರಿ ರೆಂತ್ಸಿಯವರ ಸರಕಾರ ಉದ್ದೇಶಪೂರ್ವಕವಾಗಿ ದುರ್ಲಕ್ಷ ಮಾಡುತಿತ್ತು. ಇನ್ನೊಂದೆಡೆ ‘ಚೀನಾ ವ್ಯಾಪಾರ ಒಪ್ಪಂದಕ್ಕೆ ಹೆದರುವುದಿಲ್ಲ’, ಎಂಬುದು ಕಾಣಿಸುತ್ತಿದ್ದರೂ ಅಮೇರಿಕಾದ ಅಂದಿನ ರಾಷ್ಟ್ರಾಧ್ಯಕ್ಷ ಬರಾಕ್ ಓಬಾಮಾ ಮತ್ತು ಬ್ರಿಟನ್ನಿನ ಅಂದಿನ ಪ್ರಧಾನಮಂತ್ರಿ ಡೇವಿಡ್ ಕೆಮರೂನ್ ‘ತುಟಿ ಬಿಚ್ಚಲಿಲ್ಲ. ಚೀನಾದ ಇಟಲಿಯಲ್ಲಿನ ಹೆಚ್ಚುತ್ತಿರುವ ಹಸ್ತಕ್ಷೇಪವನ್ನು ಜನರ ಮುಂದೆ ಬರಲು ಬಿಡಲೇ ಇಲ್ಲ.

೨. ಇಟಲಿಯಲ್ಲಿನ ಉದ್ಯೋಗ ವ್ಯಾಪಾರಗಳನ್ನು ಒಂದರ ಹಿಂದೆ ಒಂದು ಕಬಳಿಸುತ್ತಿರುವ ವಿಸ್ತಾರವಾದಿ ಚೀನಾ !

ಈ ನಡುವಿನ ಕಾಲಾವಧಿಯಲ್ಲಿ ಇಟಲಿಯನ್ ಕಂಪನಿಗಳ ಶೇ. ೨೭ ರಷ್ಟು, ಅಂದರೆ ೩೦೦ ಕ್ಕಿಂತಲೂ ಹೆಚ್ಚು ಕಂಪನಿಗಳನ್ನು ಚೀನಾ ಕಬಳಿಸಿತ್ತು. ಆ ಕಂಪನಿಗಳ ಬೆಲೆ ಸುಮಾರು ೧೦೦ ದಶಲಕ್ಷ ಯುರೋ (೮೩೧ ಕೋಟಿ ೫೪ ಲಕ್ಷ ರೂಪಾಯಿ)ಗಳಿಗಿಂತ ಸ್ವಲ್ಪ ಕಡಿಮೆಯಿತ್ತು, ಇಂತಹ ಕಂಪನಿಗಳನ್ನು ವಶಪಡಿಸಿಕೊಂಡು ಚೀನಾ ಇಟಲಿಯ ಅರ್ಥವ್ಯವಸ್ಥೆಯಲ್ಲಿ ೫ ಅಬ್ಜ ಯುರೋ (೪೧ ಸಾವಿರದ ೫೮೬ ಕೋಟಿಗಿಂತಲೂ ಹೆಚ್ಚು ರೂಪಾಯಿ) ಗಳನ್ನು ಹೂಡಿಕೆ ಮಾಡಿದೆ. ‘ಫಿಯಾಟ-ಕ್ರೈಸ್ಲರ್’, ‘ಪ್ರಿಝಮಾಯನ’ ಹಾಗೂ ‘ಟೆರನಾ’ ಈ ಪ್ರಮುಖ ಇಟಲಿಯನ್ ಕಂಪನಿಗಳ ನಿಯಂತ್ರಣ ಸಹ ಈಗ ಚೀನಾದ ವಶವಾಗಿದೆ. ಇಂದು ಇಟಲಿಯಲ್ಲಿನ ಉದ್ಯೋಗ ವ್ಯವಹಾರಗಳ ಸ್ಥಿತಿ ಹೇಗಾಗಿದೆಯೆಂದರೆ, ವಾಹನಗಳಿಗೆ ಹೊಸ ‘ಪಿರೆಲ್ಲಿ’ ಟಯರ್‌ಗಳನ್ನು ಹಾಕಿಸಿಕೊಂಡರೂ ಅದರ ಲಾಭಾಂಶವು ಚೀನಾದ ಬೊಕ್ಕಸಕ್ಕೆ ಹೋಗುತ್ತದೆ ! ಇಟಲಿಯಲ್ಲಿನ ದೂರಸಂಚಾರ ಸೇವೆಯನ್ನು ಕೊಡುವ ಕಂಪನಿ ಮತ್ತು ‘ಈಎನ್‌ಐ’ಗಳಂತಹ ಪ್ರಮುಖ ಗ್ರಾಹಕ ಸೇವೆಯನ್ನು ಕೊಡುವ ಕಂಪನಿಗಳು ಈಗ ಚೀನಾದ ಸರಕಾರಿ ಸಂಸ್ಥೆಗಳ ಒಡೆತನದ್ದಾಗಿವೆ. ಇಟಲಿಯಲ್ಲಿನ ಮಿಲಾನ್‌ನ ಸೆಗ್ರೆಟ್ ಈ ಉಪನಗರದಲ್ಲಿ ‘ಹುವಾಯ್’ ಈ ಚೀನಾ ದೂರಸಂಚಾರ ಸಂಸ್ಥೆಯು ಮೊದಲ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ‘ಮೈಕ್ರೋವೇವ್’ನ ಸಂಶೋಧನೆಯಿಂದ ‘೫ ಜಿ’ ಸಂಚಾರವಾಣಿ ತಂತ್ರಜ್ಞಾನವನ್ನು ವಿಕಸಿತಗೊಳಿಸಿತು. ಇಟಲಿಯ ೫ ಪ್ರಮುಖ ಬ್ಯಾಂಕ್‌ಗಳು ಸದ್ಯ ಚೀನಾದ ಒಡೆತನದ್ದಾಗಿವೆ ! ಚೀನಾ ಅತಿ ಹೆಚ್ಚು ಹಣವನ್ನು ಇಟಲಿಯ ಫ್ಯಾಶನ್ ಉದ್ಯಮಗಳಲ್ಲಿ ಹೂಡಿದೆ. ‘ಪಿಂಕೋ ಪಾಲಿನೋ’, ‘ಮಿಸ್ ಸಿಕ್ಸಸ್ಟಿ’, ‘ಸರ್ಜಿಓ ತಾಚ್ಚನೀ’, ‘ರಾಬರ್ಟಾ ಡೀ ಕೆಮೆರಿನೋ’ ಹಾಗೂ ‘ಮರಿಯೆಲ್ಲಾ ಬುರ್ರ‍ಾನಿ’ ಇತ್ಯಾದಿ ಹೆಸರಾಂತ ಫ್ಯಾಶನ್ ಬ್ರಾಂಡ್‌ಗಳು ಈಗ ಶೇ. ೧೦೦ ರಷ್ಟು ಚೀನಾದ ಒಡೆತನದ್ದಾಗಿವೆ. ಚೀನಾ ಇಟಲಿಯಲ್ಲಿನ ಕಂಪನಿಗಳನ್ನು ಒಂದರ ಹಿಂದೆ ಒಂದರಂತೆ ಖರೀದಿಸುತ್ತಿರುವಾಗ ಇಟಲಿಯ ಪ್ರಧಾನಮಂತ್ರಿ ರೆಂತ್ಸಿ ಕೈಕಟ್ಟಿ ಶಾಂತವಾಗಿ ಎಲ್ಲವನ್ನೂ ನೊಡುತ್ತಿದ್ದರು. ಈ ಚೀನಾದ ಕಂಪನಿಗಳಿಗೆ ಅನೇಕ ಬಾರಿ ‘ಕಸ್ಟಮ್ಸ್’ ತಪಾಸಣೆಯನ್ನು ಮಾಡಿಸಿಕೊಳ್ಳುವ ಪ್ರಸಂಗ ಕೂಡ ಬರಲಿಲ್ಲ. ಸಾವಿರಾರು ಚೀನಿಯರು ಮಿಲಾನ್‌ಮಾರ್ಗದಿಂದ ಇಟಲಿಗೆ ಅಕ್ರಮವಾಗಿ ನುಸುಳಿದರು ಹಾಗೂ ಹೋಗುವಾಗ ಹಣ, ತಂತ್ರಜ್ಞಾನ ಮತ್ತು ಇಟಲಿಯನ್ ಕಂಪನಿಗಳ ವ್ಯಾಪಾರದ ಗೌಪ್ಯತೆಗಳನ್ನು ಕಸಿದುಕೊಂಡು ಹೋದರು. ದೇಶಕ್ಕೆ ಅವಮಾನವಾಗಿದ್ದರಿಂದ ಡಿಸೆಂಬರ್ ೨೦೧೬ ರಲ್ಲಿ ಇಟಲಿಯ ಪ್ರಧಾನಮಂತ್ರಿ ಮಾತ್ತೆಯೊ ರೆಂತ್ಸೀ ಇವರನ್ನು ಎತ್ತಂಗಡಿ ಮಾಡಲಾಯಿತು. ಅಷ್ಟರವರೆಗೆ ಚೀನಾ ಇಟಲಿಯಲ್ಲಿನ ಅರ್ಥಕಾರಣದಲ್ಲಿ ನುಸುಳುತ್ತಾ ಅಲ್ಲಿನ ಎಲ್ಲ ಮಾರುಕಟ್ಟೆಯನ್ನೇ ವಶಪಡಿಸಿಕೊಂಡಿತ್ತು.

೩. ಇಟಲಿಯಲ್ಲಿನ ಚೀನಾವಿರೋಧಿ ನೇತೃತ್ವವು ಡ್ರೆಗಾನ್‌ನನ್ನು ಚದುರಿಸಲು ಮಾಡಿದ ಪ್ರಯತ್ನವು ಒಂದು ರೀತಿಯಲ್ಲಿ ವಿಫಲವೇ ಆಯಿತು !

ಇಟಲಿಯಲ್ಲಿ ಆಡಳಿತ ಹಸ್ತಾಂತರವಾಗಿ ‘ಲೇಗಾ ನಾರ್ಡ್’ ಎಂಬ ಚೀನಾವಿರೋಧಿ ಸಮಾಜವಾದಿ ಪಕ್ಷದ ಮಾತ್ತೆಯೊ ಸಲ್ವಿನೀ ಅಧಿಕಾರಕ್ಕೆ ಬಂದರು. ಅವರು ಅನಧಿಕೃತವಾಗಿ ದೇಶದಲ್ಲಿ ನುಸುಳಿದ ಚೀನಿ ಜನರ ಅಡ್ಡೆಗಳನ್ನು ಮುಚ್ಚಿ ಅವರನ್ನು ದೇಶದ ಹೊರಗೆ ಅಟ್ಟಲು ಆಯೋಜನಾಬದ್ಧವಾಗಿ ಅಭಿಯಾನವನ್ನು ಆರಂಭಿಸಿದರು. ಚೀನಾ ಜನರು ಇಟಲಿಯಲ್ಲಿ ಮುಕ್ತವಾಗಿ ಓಡಾಡುವುದನ್ನು ತಡೆದರು; ಆದರೆ ಸಾಲ್ವಿನೀ ಇವರ ಅಧಿಕಾರ ಹೆಚ್ಚು ಕಾಲ ಉಳಿಯಲಿಲ್ಲ. ಸಾಮ್ಯವಾದಿಯಾಗಿದ್ದ ಇಟಲಿಯ ‘ಡಿಎನ್‌ಎ’ದಲ್ಲಿಯೇ ಸಮಾಜವಾದ ಬೇರು ಬಿಟ್ಟಿದ್ದರಿಂದ ಸಾಲ್ವಿನೋ ಅಧಿಕಾರದಿಂದ ಕೆಳಗಿಳಿದ ಕೂಡಲೆ ಪಕ್ಷೇತರ ನೇತಾರ ಜ್ಯುಸೇಪ್ ಕಾಂತೆ ಇವರು ಅಧಿಕಾರಕ್ಕೆ ಬಂದ ಕೂಡಲೇ ಪುನಃ ಚೀನಾ ಓಲೈಕೆಯ ನಿಲುವನ್ನು ತೆಗೆದುಕೊಂಡಿತು. ಅವರ ಹೇಳಿಕೆಗನುಸಾರ ಬಂದರುಗಳನ್ನು ಚೀನಾಕ್ಕಾಗಿ ಪುನಃ ತೆರೆಯಲಾಯಿತು. ಮಧ್ಯಪೂರ್ವ ಹಾಗೂ ಪೂರ್ವ ಆಫ್ರಿಕನ್ ದೇಶಗಳಿಂದ ಯಾವುದೇ ಅಧಿಕೃತ ಕಾಗದಪತ್ರಗಳಿಲ್ಲದೆ ಸ್ಥಳಾಂತರಿತರ ಅನಿಯಂತ್ರಿತ ಪ್ರವಾಹ ಪುನಃ ಇಟಲಿಗೆ ಬರಲು ಆರಂಭವಾಯಿತು.

೪. ಚೀನಾದ ವ್ಯೂಹಾನದಿಂದಲೇ ಇಟಲಿಯಲ್ಲಿ ಕೊರೋನಾ ರೋಗವು ಹರಡಿತು !

ಇಟಲಿಯಲ್ಲಿ ಈಗ ಪುನಃ ಮುಕ್ತ ಪ್ರವೇಶ ಸಿಕ್ಕಿರುವುದರಿಂದ ಪ್ರಾಮುಖ್ಯವಾಗಿ ಚೀನಾದ ವ್ಯೂಹಾನ ಪ್ರಾಂತದಿಂದ ದೊಡ್ಡ ಪ್ರಮಾಣದಲ್ಲಿ ಜನರು ಇಟಲಿಯಲ್ಲಿನ ಮಿಲಾನದಲ್ಲಿ ಬಂದರು. ಡಿಸೆಂಬರ್ ೨೦೧೯ ರಲ್ಲಿ ಬಹುಸಂಖ್ಯಾತ ಚೀನಾ ಜನರ ವಸತಿಯಿರುವ ಇಟಲಿಯಲ್ಲಿನ ಲೋಂಬಾರ್ಡೀಯ ಭಾಗದಲ್ಲಿ ‘ಕೊರೋನಾ’ ನುಸುಳಿದ ಸಂಕೇತ ಸಿಕ್ಕಿತು. ‘ಕೊರೋನಾ ವೈರಾಣು ಚೀನಾದ ವ್ಯೂಹಾನ್‌ನಿಂದಲೇ ಬಂದಿದೆ’, ಎಂಬುದರ ಬಗ್ಗೆ ವೈದ್ಯಕೀಯ ತಜ್ಞರಲ್ಲಿ ಕಿಂಚಿತ್ತೂ ಭಿನ್ನಾಭಿಪ್ರಾಯವಿಲ್ಲ. ಈಗ ಇಟಲಿಯಲ್ಲಿನ ಆರೋಗ್ಯ ವ್ಯವಸ್ಥೆಯು ತುಂಬಾ ಅವ್ಯವಸ್ಥಿತವಾಗಿದೆ. ಮೊದಲು ರೆಂತ್ಸಿ ಹಾಗೂ ನಂತರ ಕಾಂತೆಯವರ ಸರಕಾರ ಅನಧಿಕೃತವಾಗಿ ವಲಸೆ ಬಂದವರನ್ನು ಓಲೈಸಲು ಅಪಾರ ಹಣ ಖರ್ಚು ಮಾಡಿರುವುದರಿಂದಲೇ ಇಟಲಿಯಲ್ಲಿ ಆರೋಗ್ಯ ಸೇವೆಗಾಗಿ ಹಣದ ಬೆಂಬಲ ಉಳಿದಿಲ್ಲ. ಅದ್ದರಿಂದ ಇಟಲಿಯಲ್ಲಿನ ಆರೋಗ್ಯ ವ್ಯವಸ್ಥೆಯೇ ಇಂದು ‘ವೆಂಟಿಲೇಟರ್’ನಲ್ಲಿದೆ.

೫. ಭ್ರಷ್ಟಾಚಾರ ಮತ್ತು ದುಂದುವೆಚ್ಚದಿಂದಾಗಿ ಇಟಲಿಯಲ್ಲಿನ ನಿರುದ್ಯೋಗದಲ್ಲಿ ಹೆಚ್ಚಳ !

೨೦೧೫ ರಲ್ಲಿ ಇಟಲಿಯ ರಾಜಧಾನಿ ರೋಮ್‌ನ ಪೂರ್ವಕ್ಕಿರುವ ಅಮಾಟ್ರೈಸ್‌ನಲ್ಲಿ ಪ್ರಳಯಕಾರಿ ಭೂಕಂಪ ಬಂದಿತ್ತು. ಈ ಭೂಕಂಪದಿಂದಾಗಿ ಈ ಪರಿಸರದಲ್ಲಿನ ಊರುಗಳು ಸಂಪೂರ್ಣ ನೆಲಸಮವಾಗಿದ್ದವು. ಆಗ ಜಗತ್ತಿನಾದ್ಯಂತದಿಂದ ಸಹಾಯವೆಂದು ಬಂದಿರುವ ಬಹಳಷ್ಟು ಹಣ ಭ್ರಷ್ಟಾಚಾರದಿಂದ ತುಂಬಿದ ಇಟಲಿಯಲ್ಲಿನ ರೇಂತ್ಸಿ ಸರಕಾರದಿಂದ ಭೂಕಂಪ ಪೀಡಿತರಿಗೆ ತಲುಪಲೇ ಇಲ್ಲ. ಆ ಹಣವನ್ನು ಸ್ಥಳಾಂತರರಿಗಾಗಿ ಖರ್ಚು ಮಾಡಲಾಯಿತು !

ಸರಕಾರದ ದೊಡ್ಡದಾದ ಹಾಗೂ ನಿಯಂತ್ರಣವಿಲ್ಲದ ಖರ್ಚು ಹಾಗೂ ಅನಧಿಕೃತ ಸ್ಥಳಾಂತರಿತರ ಭಾರ ಮತ್ತು ನಿಷ್ಕ್ರಿಯತೆ, ಇದರಿಂದ ಇಟಲಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ. ೩೫ ರಿಂದ ೪೦ ರಷ್ಟಾಗಿದೆ. ಅಲ್ಲಿ ಪ್ರತಿಯೊಬ್ಬರಿಗೂ ಉದರನಿರ್ವಹಣೆಗಾಗಿ ಕೆಲವು ನಿರ್ಧಿಷ್ಟ ಮೊತ್ತವನ್ನು ಕೊಡುವ ‘ಫ್ಯಾಡ್ ಸರಕಾರ ಆರಂಭಿಸಿದೆ. ನೀವು ಒಂದು ವೇಳೆ ಡೆಮೋಕ್ರಟಿಕ್ ಪಕ್ಷದವರಾಗಿದ್ದರೆ, ನೀವು ಕೆಲಸವನ್ನು ಮಾಡಿದರೂ ಅಥವಾ ಮಾಡದೇ ಇದ್ದರೂ, ನಿಮಗೆ ಸರಕಾರದಿಂದ ನಿರ್ಧಿಷ್ಟ ಮೊತ್ತವನ್ನು ನೀಡಲಾಗುತ್ತದೆ. ತದ್ವಿರುದ್ಧ ಯಾರು ಪ್ರಾಮಾಣಿಕತನದಿಂದ ಕೆಲಸವನ್ನು ಮಾಡುತ್ತಿರುತ್ತಾರೆಯೋ, ಅವರ ಮೇಲೆ ಮಾತ್ರ ಸರಕಾರ ತೆರಿಗೆಯನ್ನು ಹೆಚ್ಚಿಸುತ್ತಿದೆ. ಉದಾಹರಣೆಗಾಗಿ ನೀವು ಯಾವ ಕಟ್ಟಡದಲ್ಲಿ ವಾಸಿಸುತ್ತೀರೊ, ಅದಕ್ಕಿರುವ ಬಾಲ್ಕನೀಯ ನೆರಳು ಕೆಳಗೆ ನೆಲದ ಮೇಲೆ ಬೀಳುತ್ತದೆ, ಆದ್ದರಿಂದ ಇಟಲಿಯಲ್ಲಿ ಅದಕ್ಕೆ ‘ನೆರಳು ತೆರಿಗೆ’ಯನ್ನು ಹೇರಲಾಗುತ್ತದೆ !

೬. ಇಟಲಿಯಲ್ಲಿನ ಕಾನೂನುದ್ರೋಹಿ ಸರಕಾರವನ್ನು ವಿಸರ್ಜನೆ ಮಾಡುವುದು ಆವಶ್ಯಕವಾಗಿದೆ !

ಚೀನೀ ಜನರು ಕೊರೋನಾ ವೈರಾಣುವನ್ನು (ವೈರಸ್‌ನ್ನು) ಇಟಲಿಯಲ್ಲಿ ಹಾಗೂ ಜಗತ್ತಿನಲ್ಲಿ ಎಲ್ಲ ಕಡೆಗೆ ಹರಡಿದರು. ಅತೀ ಎಡಪಂಥೀಯ ರಾಜಕಾರಣ ಹಾಗೂ ಅವರ ಚೀನಾಪ್ರೇಮಿ ಧೋರಣೆಯು ಅದಕ್ಕೆ ನೀರುಗೊಬ್ಬರ ಹಾಕಿತು. ಎಪ್ರಿಲ್ ೧೩ ರ ವರೆಗೆ ಇಟಲಿಯಲ್ಲಿ ಕೊರೋನಾದಿಂದ ೨೧ ಸಾವಿರದ ೬೭ ಜನರು ಬಲಿಯಾದರು. ೧ ಲಕ್ಷದ ೬೨ ಸಾವಿರದ ೪೮೮ ಜನರು ಕೊರೋನಾಪೀಡಿತರಾಗಿದ್ದಾರೆ. ಅವರಲ್ಲಿ ೩೭ ಸಾವಿರದ ೧೩೦ ವ್ಯಕ್ತಿಗಳು ಇಲ್ಲಿಯವರೆಗೆ ಗುಣಮುಖರಾಗಿದ್ದಾರೆ. ಆಲ್ಪ್ಸ್ ಪರ್ವತಸಾಲಿನಲ್ಲಿ ಎತ್ತರದಲ್ಲಿರುವ ನಗರಗಳಿಂದ ಸಿಸಿಲಿಯಾ ಹಾಗೂ ಸಾರ್ದೇನಿಯಾ ಈ ಪ್ರಾಚೀನ ಸಮುದ್ರ ದಡದವರೆಗಿನ ಇಟಲಿಯಲ್ಲಿನ ಹೆಚ್ಚಿನ ಮನೆಗಳು ಪಾಳು ಬೀಳದಿದ್ದರೂ, ಅವು ಭೂತದ ನಗರಗಳಾಗುವ ಮಾರ್ಗದಲ್ಲಿವೆ. ಪ್ರತಿದಿನದ ದೈನಂದಿನ ಜೀವನದ ಜನಸಂದಣಿ ಈಗ ಅಲ್ಲಿ ಕಾಣಿಸುವುದಿಲ್ಲ. ವ್ಯಾಟಿಕನ್ ಸಿಟಿ ಕೂಡ ತನ್ನ ಪ್ರವೇಶದ್ವಾರಗಳನ್ನು ಮುಚ್ಚಿಕೊಂಡಿದೆ. ಅಲ್ಲಿ ಸಶಸ್ತ್ರ ಕಾವಲುಗಾರರು ಕಾವಲು ಕಾಯುತ್ತಿದ್ದಾರೆ. ಒಟ್ಟು ೬ ಕೋಟಿ ನಾಗರಿಕರು ಲಾಕ್‌ಡೌನ್‌ದಲ್ಲಿದ್ದಾರೆ(Lockdown). ಯಾರಿಗೆ ಈ ವಿಷಯ ತಿಳಿದಿತ್ತು ಅಥವಾ ಯಾರಿಗೆ ಈ ಮಾಹಿತಿ ಇರಬೇಕಾಗಿತ್ತು, ಅಂತಹ ಕೆಲವು ಜನರು ಸಹ ಇದರಲ್ಲಿ ಇದ್ದಾರೆ. ಅದರ ದೋಷವನ್ನು ಯಾರ ಮೇಲೆ ಹೇರಬೇಕು, ಎಂಬುದರ ಆಳವಾದ ಅಭ್ಯಾಸ ಮಾಡಿದ ನಂತರ ‘ಈ ಕೊರೋನಾ ಸಾಮ್ಯವಾದಿಗಳಿಂದಾಗಿಯೇ ಇಟಲಿಯಲ್ಲಿ ಮತ್ತು ಜಗತ್ತಿನಾದ್ಯಂತ ಹರಡಿತು’, ಎಂಬುದು ಈಗ ಸ್ಪಷ್ಟವಾಗಿದೆ. ಕೊರೋನಾದೊಂದಿಗೆ ಹೋರಾಡುವ ಅಮೇರಿಕಾ ಸಹ ಇದರಿಂದ ಪಾಠ ಕಲಿಯುವ ಸಮಯ ಬಂದಿದೆ. ಅದಕ್ಕಾಗಿ ಭವಿಷ್ಯದಲ್ಲಿ ಸರಳ ಹಾಗೂ ಸುಲಭ ಉಪಾಯಗಳ ಕಾರ್ಯಾಚರಣೆಯನ್ನು ಮಾಡಬೇಕಾಗುವುದು. ‘ಸಂವಿಧಾನವನ್ನು ಮೂಲೆಗುಂಪು ಮಾಡುವ ಮತ್ತು ಕಾನೂನಿನ ಪಾಲನೆ ಮಾಡದಿರುವ ಇಟಲಿಯಲ್ಲಿನ ರಾಜಕೀಯ ನೇತಾರರ ಸರಕಾರವನ್ನು ವಿಸರ್ಜನೆ ಮಾಡುವುದೇ ಈ ಕಾರ್ಯಾಚರಣೆಯಾಗಿದೆ !’ – ಲೇಖಕ ಜಿಯಾಕೊಮಿನೋ ನಿಕೊಲಾಝೋ, ಇಟಲಿ.