ಕೆಲವು ವರ್ಷಗಳ ಹಿಂದೆ ಒಬ್ಬ ಯುವಕನು ‘ಐಸಿಸ್ ಉಗ್ರ ಸಂಘಟನೆಗೆ ಸೇರಲು ಇರಾಕ್ ಹೊರಟಿದ್ದನು. ಅವನನ್ನು ಭಾರತದ ಗುಪ್ತಚರ ವಿಭಾಗದವರು ಭಾಗ್ಯನಗರದ (ಹೈದ್ರಾಬಾದ್) ವಿಮಾನ ನಿಲ್ದಾಣದಲ್ಲಿ ತಡೆದರು. ಮಹಾರಾಷ್ಟ್ರದ ಕಲ್ಯಾಣದಿಂದ ೪ ಯುವಕರು ಐಸಿಸ್‌ಗೆ ಸೇರಲು ಮನೆಯಿಂದ ಓಡಿಹೋಗಿದ್ದರು. ಅವರಲ್ಲಿನ ಒಬ್ಬ ಯುವಕನು ಜನವರಿ ೨೬ ರಂದು ಸ್ಫೋಟಕಗಳಿಂದ ಕೂಡಿದ ವಾಹನದೊಂದಿಗೆ ಭಾರತದಲ್ಲಿ ಅಮೇರಿಕಾದ ರಾಷ್ಟ್ರಪತಿಗಳ ಮೇಲೆ ಆಕ್ರಮಣ ಮಾಡುವುದಾಗಿ ಬೆದರಿಕೆ ಹಾಕಿದನು. ಅವರೆಲ್ಲರೂ ‘ಆನ್‌ಲೈನ್ ಜಿಹಾದ್‌ಕ್ಕೆ ಬಲಿಯಾಗಿದ್ದರು. ಈ ಘಟನೆಗಳಿಂದ ಗಣಕಯಂತ್ರದ ಜಾಲತಾಣದಲ್ಲಿ ಹೇಗೆ ಜಿಹಾದ್‌ನ ಪ್ರಸಾರಮಾಡಲಾವಾಗುತ್ತದೆ ?, ಅದಕ್ಕೆ ಯುವಕರು ಹೇಗೆ ಬಲಿಯಾಗುತ್ತಿದ್ದಾರೆ ?, ಎಂಬುದನ್ನು ಹುಡುಕುವುದು ಮಹತ್ವದ್ದಾಗಿದೆ. ಭಾರತದಲ್ಲಿನ ಸಾವಿರಾರು ಯುವಕರು ಮನೆಯಿಂದ ಹೋಗಿದ್ದಾರೆ. ಅವರಲ್ಲಿ ಶೇ. ೨ ರಷ್ಟು ಯುವಕರು ಜಿಹಾದ್‌ನ ಪ್ರಸಾರಕ್ಕೆ ಬಲಿಯಾಗಿ ಮನೆಯಿಂದ ಹೋಗಿದ್ದರೂ ಅದು ದೊಡ್ಡ ಅಪಾಯವಾಗಿದೆ. ಇದರಿಂದಾಗಿ ‘ಆನ್‌ಲೈನ್ ಜಿಹಾದ್ ವಿಷಯದಲ್ಲಿ ಹೆಚ್ಚು ವಿಚಾರ ಮಾಡಿ ಮತ್ತು ಅದರ ವಿರುದ್ಧ ತಕ್ಷಣ ಕೃತಿಶೀಲವಾಗುವುದು ಆವಶ್ಯಕವಾಗಿದೆ, ಎಂಬುದನ್ನೇ ಈ ಲೇಖನದ ಮೂಲಕ ಬಿಂಬಿಸಲು ಪ್ರಯತ್ನಿಸಲಾಗಿದೆ.
೧. ಯುವಕರಿಗೆ ‘ಆನ್‌ಲೈನ್ ಜಿಹಾದ್ದ ಬಗ್ಗೆ ಆಕರ್ಷಣೆ ಅನಿಸುತ್ತಿರುವುದರ ಕಾರಣಗಳು
ಭಾರತೀಯ ಸೈನಿಕರು ಅಧ್ಯಯನ ಮಾಡಿ ಯುವಕರು ಉಗ್ರವಾದಿ ಗಳಾಗುವುದರ ಹಿಂದಿನ ಕಾರಣಗಳನ್ನು ಕಂಡು ಹಿಡಿದರು. ಪಾಕಿಸ್ತಾನದ ಗುಪ್ತಚರರ ಸಂಸ್ಥೆ ಐ.ಎಸ್.ಐ. ಮತ್ತು ಉಗ್ರವಾದವನ್ನು ಹರಡುವ ಅನೇಕ ಭಾರತೀಯ ಸಂಸ್ಥೆಗಳು ಉಗ್ರವಾದಿ ಸಂಘಟನೆಗಳಿಗೆ ಮನುಷ್ಯಬಲವನ್ನು ಪೂರೈಸಲು ಸಹಾಯ ಮಾಡುತ್ತವೆ. ಅನೇಕ ಯುವಕರ ಬುದ್ಧಿಭ್ರಮಣೆವನ್ನು ಮಾಡಲಾಗುತ್ತದೆ. ಅನಂತರ ಅವರಿಗೆ ಪ್ರೋತ್ಸಾಹನಾತ್ಮಕ ತರಬೇತಿ ನೀಡಲಾಗುತ್ತದೆ. ಅನಂತರ ಅವರನ್ನು ಒಂದು ದೊಡ್ಡ ಉಗ್ರವಾದಿ ಸಂಘಟನೆಯಲ್ಲಿ ತರಬೇತಿಗಾಗಿ ಇರಾನ್, ಅಫ್ಘಾನಿಸ್ತಾನ, ಸಿರಿಯಾ ಅಥವಾ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಪ್ರಾರಂಭದಲ್ಲಿ ಅವರಿಗೆ ಉಗ್ರವಾದಿಗಳ ಆಡಳಿತದ ಸ್ತರದಲ್ಲಿನ ಕೆಲಸಗಳನ್ನು ನೀಡಲಾಗುತ್ತದೆ. ಯಾವುದೇ ಒಬ್ಬ ಯುವಕನು ಕಟ್ಟರ್‌ವಾದಿಯಾಗಬಹುದು ಎಂದು ಗಮನಕ್ಕೆ ಬಂದರೆ ಬಾಂಬ್‌ಸ್ಫೋಟ ಮಾಡುವುದು, ಆತ್ಮಾಹುತಿ ದಾಳಿಗಳನ್ನು ಮಾಡುವುದು, ಇಂತಹ ಕೆಲಸಗಳನ್ನು ನೀಡಲಾಗುತ್ತದೆ.
೨. ಉಗ್ರವಾದ ನಿರ್ಮಾಣವಾಗುವುದರ ಕಾರಣಗಳು
ಶೇ. ೪೦ ರಿಂದ ೪೫ ರಷ್ಟು ಯುವಕರನ್ನು ಬಲವಂತವಾಗಿ ಉಗ್ರವಾದಿ ಸಂಘಟನೆಗಳಿಗೆ ಕಳುಹಿಸಲಾಗುತ್ತದೆ. ಶೇ. ೩೦ ರಿಂದ ೩೫ ರಷ್ಟು ಯುವಕರು ಆರ್ಥಿಕ ಕಾರಣಗಳಿಂದಾಗಿ ಉಗ್ರವಾದದ ಮಾರ್ಗಕ್ಕಿಳಿಯುತ್ತಾರೆ. ಉಗ್ರವಾದಿ ಸಂಘಟನೆಗಳಲ್ಲಿ ಸೇರಿಕೊಂಡ ನಂತರ ಅವರಿಗೆ ಬಹಳಷ್ಟು ಹಣ ಸಿಗುತ್ತದೆ. ನೌಕರಿಯಲ್ಲಿ ಸಿಗುವ ಹಾಗೆಯೇ ಅವರಿಗೆ ವೇತನವನ್ನು ನೀಡಲಾಗುತ್ತದೆ. ಯಾವುದಾದರೂಂದು ಉಗ್ರವಾದಿ ಕೃತ್ಯವನ್ನು ಮಾಡಿದರೆ ಹೆಚ್ಚು ಹಣ ಸಿಗುತ್ತದೆ. ಶೇ. ೩೦ ರಿಂದ ೩೫ ರಷ್ಟು ಜನರು ಧಾರ್ಮಿಕ ಕಾರಣಗಳಿಂದ ಉಗ್ರವಾದಿಗಳಾಗುತ್ತಾರೆ. ಒಂದು ವೇಳೆ ನಾವು ಯುವಕರಿಗೆ ನೌಕರಿಗಳನ್ನು ಕೊಟ್ಟರೆ, ಅನೇಕ ಜನರನ್ನು ನಾವು ಉಗ್ರವಾದದ ಕಡೆಗೆ ಹೋಗದಂತೆ ತಡೆಯಬಹುದು.
೩. ಜಾಲತಾಣದ ಮೂಲಕ ನಡೆಯುವ ಅಪಪ್ರಚಾರ
ಇಂದು ಗಣಕಯಂತ್ರದಲ್ಲಿನ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಅದರಲ್ಲಿ ಅವರ ಧರ್ಮದ ಮೇಲೆ ಎಷ್ಟು ಅನ್ಯಾಯ ಹಾಗೂ ಹೇಗೆ ಆಕ್ರಮಣಗಳನ್ನು ಮಾಡಲಾಗಿದೆ, ಎಂಬುದನ್ನು ತೋರಿಸಲಾಗುತ್ತದೆ. ಆದ್ದರಿಂದ ಇಂತಹ ಅಪಪ್ರಚಾರಗಳಿಗೆ ಗಣಕಯಂತ್ರಗಳ ಜಾಲತಾಣದ ಮೂಲಕವೇ ಪ್ರತ್ಯುತ್ತರ ನೀಡುವ ಅವಶ್ಯಕತೆಯಿದೆ. ಅನೇಕ ವೆಬ್‌ಸೈಟ್ಸ್, ಬ್ಲಾಗ್ಸ್, ಟ್ವಿಟರ್, ವಿ-ಅಂಚೆ ಮತ್ತು ಕಿರುಸಂದೇಶಗಳ ಮೂಲಕ ಇಂತಹ ಅಪಪ್ರಚಾರವನ್ನು ಮಾಡಲಾಗುತ್ತದೆ. ಆದ್ದರಿಂದ ಇಂತಹ ಸಾಧನಗಳ ಮೇಲೆ ಗಮನ ಇಡುವುದು ಮಹತ್ವದ್ದಾಗಿದೆ. ಗೂಗಲ್ ಮತ್ತು ಇಂಟರ್‌ನೆಟ್ ಕಂಪನಿಗಳ ಸಹಾಯ ಪಡೆದು ಇವುಗಳನ್ನು ತಡೆಯುವುದು ಆವಶ್ಯಕವಾಗಿದೆ. ಬಹಳಷ್ಟು ಉಗ್ರವಾದಿಗಳ ಮನಸ್ಸಿನ ಮೇಲೆ ತಾತ್ಕಾಲಿಕ ಅತಿಕ್ರಮಣಕಾರಿ ವಿಚಾರಗಳ ಪ್ರಭಾವ ಬೀರಿರುತ್ತದೆ. ಅನೇಕರಿಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿರುವುದಿಲ್ಲ; ಆದ್ದರಿಂದ ಬಂದೂಕಿನ ಬಲದಿಂದ ಅವರಿಗೆ ಸಮಾಜದಲ್ಲಿ ಸಿಕ್ಕಿರುವ ಸ್ಥಾನಮಾನ ಮಹತ್ವದ್ದಾಗಿರುತ್ತದೆ. ಹೆಚ್ಚಿನ ಯುವಕರು ೨೦ ರಿಂದ ೩೦ ವರ್ಷ ವಯಸ್ಸಿನವರಾಗಿರುತ್ತಾರೆ. ಅವರ ವಿವಾಹವಾಗಿರುವುದಿಲ್ಲ. ಯಾವುದಾದರೊಂದು ಕಾರಣದಿಂದ ಅವರ ಕುಟುಂಬದೊಂದಿಗಿರುವ ಸಂಬಂಧವು ಕುಂಠಿತವಾಗುತ್ತಾ ಹೋಗಿರುತ್ತದೆ.
೪. ನಾವು ಉಗ್ರವಾದದ ಪ್ರಸಾರ ಮಾಡುವವರಿಗಿಂತ ಒಂದು ಹೆಜ್ಜೆ ಮುಂದಿರಬೇಕು !
ನಾವು ಅವರ ಮೇಲೆ ಗಮನವಿಟ್ಟರೆ ಆರ್ಥಿಕ ಹಾಗೂ ಮಾನಸಿಕ ಸ್ತರದ ಉಪಾಯ ಮಾಡಬಹುದು. ಒಂದು ವೇಳೆ ಅವರ ವಿಚಾರಗಳಲ್ಲಿ ಬದಲಾವಣೆಯನ್ನು ಮಾಡಲು ಸಾಧ್ಯವಾದರೆ, ಉಗ್ರವಾದದ ಕಡೆಗೆ ಹೋಗುವ ಯುವಕರ ಪ್ರಮಾಣವು ಖಂಡಿತಾ ಕಡಿಮೆಯಾಗುವುದು.ಇದಕ್ಕಾಗಿ ಆರ್ಥಿಕ ಹಾಗೂ ಮಾನಸಿಕ ಹೋರಾಟವನ್ನು ಗೆಲ್ಲುವುದು ಆವಶ್ಯಕವಾಗಿದೆ. ಉಗ್ರವಾದದ ಸ್ವರೂಪವು ಯಾವಾಗಲೂ ಬದಲಾಗುತ್ತಿರುತ್ತದೆ. ಆದ್ದರಿಂದ ಅದರ ಉಪಾಯಗಳು ಸಕ್ಷಮ, ತತ್ಪರತೆಯ ಹಾಗೂ ಪರಿಸ್ಥಿತಿಗನುಸಾರ ಇರಬೇಕು. ನಾವು ಉಗ್ರವಾದದ ಪ್ರಸಾರವನ್ನು ಮಾಡುವ ವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದೆ ಇರುವುದು ಅವಶ್ಯಕವಾಗಿದೆ.
೫. ಸರಕಾರ ಉಗ್ರವಾದವನ್ನು ಹೇಗೆ ಎದುರಿಸಬೇಕು ?
ಕೆಲವು ವರ್ಷಗಳ ಹಿಂದೆ ವಿವಿಧ ರಾಜ್ಯಗಳ ಡಿಜಿಪಿಗಳ ಕೇಂದ್ರೀಯ ಗೃಹಸಚಿವರೊಂದಿಗಿನ ‘ಸಭೆಯಲ್ಲಿ ‘ಆನ್‌ಲೈನ್ ಜಿಹಾದ್ನ ಬಗ್ಗೆ ವಿಚಾರ ಮಾಡಲಾಯಿತು. ಅಪಪ್ರಚಾರವನ್ನು ತಡೆಯಲು ಕೃತಿಗಳ ಯೋಜನೆಯನ್ನು ಮಾಡಲು ಹೇಳಲಾಯಿತು. ಗಣಕಯಂತ್ರ ಅಂತರ್ಜಾಲ (ಕಂಪ್ಯೂಟರ್ ನೆಟವರ್ಕ) ವ್ಯಾಪ್ತಿಯು ತುಂಬಾ ದೊಡ್ಡದಾಗಿದೆ. ಆದ್ದರಿಂದ ಒಂದು ಸಂಸ್ಥೆ ಅದರ ಮೇಲೆ ಗಮನವನ್ನಿಡಲು ಸಾಧ್ಯವಿಲ್ಲ. ಎಲ್ಲ ಸಂಸ್ಥೆಗಳ ಹೊರತು ದೇಶಭಕ್ತ ದೇಶಪ್ರೇಮಿ ನಾಗರಿಕರಿಕರಿಗೂ ಗಮನಹರಿಸಲು ಹೇಳಬಹುದು. ಇಂದು ಭಾರತದಲ್ಲಿ ಸುಮಾರು ೨೦ ಕೋಟಿಗಳಿಗಿಂತ ಹೆಚ್ಚು ನಾಗರಿಕರು ಗಣಕಯಂತ್ರದಲ್ಲಿನ ಅಂತರ್ಜಾಲವನ್ನು ಉಪಯೋಗಿಸುತ್ತಿದ್ದಾರೆ. ಫೇಸ್‌ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಿಯವಾಗಿರುವ ಯುವಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಯಾವುದಾದರೊಂದು ಸಾಫ್ಟ್‌ವೇರ್‌ನ್ನು ಉಪಯೋಗಿಸಿ ಮಾಡುವ ಸಂಭಾಷಣೆಗಳ ಮೇಲೆ ಗಮನವನ್ನಿಡುವುದು ಆವಶ್ಯಕವಾಗಿದೆ. ಇಂದು ‘ಯುಟ್ಯೂಬ್ನಲ್ಲಿ ಅನೇಕ ಪ್ರಚೋದನಾಕಾರಿ ‘ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಇಂತಹ ವಿಡಿಯೋಗಳನ್ನು ಅಥವಾ ತಪ್ಪು ಮಾಹಿತಿಯನ್ನು ನೀಡುವ ಲೇಖನಗಳನ್ನು ತಕ್ಷಣ ‘ಬ್ಲಾಕ್ ಮಾಡಬೇಕು. ದೇಶದ್ರೋಹಿ ವಿಡಿಯೋ, ಛಾಯಾಚಿತ್ರಗಳು ಮತ್ತು ಲೇಖನಗಳನ್ನು ಅಪ್‌ಲೋಡ್ ಮಾಡುವವರಿಗೆ ಶಿಕ್ಷೆ ನೀಡಬೇಕು.
೬. ಯುವಕರ ಮೇಲೆ ಗಮನವಿಡಲು ‘ಅಪರೇಶನ್ ಚಕ್ರವ್ಯೂಹ ಪ್ರಾರಂಭ
ಇಂದು ಅನೇಕ ಸಂಸ್ಥೆಗಳು ಆನ್‌ಲೈನ್ ‘ರಿಕ್ರೂಟ್ ಆಗಿರುವ ಯುವಕರನ್ನು ಭಾರತದಲ್ಲಿಯೇ ಉಗ್ರವಾದಿಗಳನ್ನಾಗಿ ತಯಾರಿಸುವ ಪ್ರಯತ್ನ ಮಾಡುತ್ತಿವೆ. ಕೆಲವು ಸಂಸ್ಥೆಗಳು / ಧರ್ಮಶಿಕ್ಷಕರು ಇಂತಹ ತರಬೇತಿಗಳನ್ನು ಈ ಯುವಕರಿಗೆ ಭಾರತದಲ್ಲಿಯೇ ನೀಡುತ್ತಿದ್ದಾರೆ. ಇಂದು ಉಗ್ರವಾದವನ್ನು ಹರಡಲು ಸೌದಿ ಅರೇಬಿಯಾದಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತದೆ. ಅದನ್ನು ತಡೆಯಬೇಕು. ಭಾರತದಲ್ಲಿ ಕೆಲವು ಧಾರ್ಮಿಕ ಸ್ಥಳಗಳು ಕೂಡ ಇಂತಹ ಉಗ್ರವಾದ ವನ್ನು ಹೆಚ್ಚಿಸಲು ಹಣ ಖರ್ಚು ಮಾಡುತ್ತವೆ; ಆದ್ದರಿಂದ ಪ್ರಚಂಡ ಪ್ರಮಾಣದಲ್ಲಿ ಉತ್ಪನ್ನವಿರುವ ಧಾರ್ಮಿಕ ಸ್ಥಳಗಳ ಮೇಲೆಯೂ ದೃಷ್ಟಿ ಯನ್ನಿಡುವುದು ಅವಶ್ಯಕವಾಗಿದೆ. ಅನೇಕ ಶ್ರೀಮಂತ ವ್ಯಾಪಾರಿಗಳು ತಮ್ಮ ಉತ್ಪನ್ನದಲ್ಲಿನ ಕೆಲವೊಂದು ಹಣವನ್ನು ಉಗ್ರವಾದವನ್ನು ಹೆಚ್ಚಿಸಲು ಖರ್ಚು ಮಾಡುತ್ತಾರೆ. ಮಹಾರಾಷ್ಟ್ರದ ಕಲ್ಯಾಣದಲ್ಲಿನ ಯುವಕರನ್ನು ಇರಾಕ್‌ಗೆ ಕಳುಹಿಸುವುದರಲ್ಲಿ ಕೆಲವು ವ್ಯಾಪಾರಿಗಳ ಕೈವಾಡವಿತ್ತು. ಇಂತಹವರ ಮೇಲೆಯೂ ನಿಗಾ ಇಟ್ಟು ಅವರನ್ನು ಹಿಡಿಯುವುದು ಮಹತ್ವದ್ದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಭಾಷಣೆಯ ಅನೇಕ ಸಾಧನಗಳು ಉಪಲಬ್ಧ ಇವೆ. ಇಂತಹ ಪ್ರಚಾರಗಳ ಮೇಲೆ ಗಮನವನ್ನಿಡುವುದು ಮಹತ್ವದ್ದಾಗಿದೆ. ಗೃಹಸಚಿವಾಲಯವು ‘ಆಪರೇಶನ್ ಚಕ್ರವ್ಯೂಹ ಹೆಸರಿನ ಒಂದು ಹೊಸ ಆಂದೋಲನವನ್ನು ಗಣಕೀಯ ಅಂತರ್ಜಾಲದಲ್ಲಿ (ಕಂಪ್ಯೂಟರ ನೆಟವರ್ಕ್) ಆರಂಭಿಸಿದೆ. ಇಂತಹ ಯುವಕರ ಮೇಲೆ ಕಣ್ಣಿಡುವುದೇ ಅದರ ಉದ್ದೇಶವಾಗಿದೆ.
೭. ಉಗ್ರವಾದಕ್ಕೆ ಸೇರುವ ಈ ಯುವಕರ ಮೇಲೆ ನಿಗಾ ಇಡಲು ಕುಟುಂಬ ಮತ್ತು ಸಂಬಂಧಿಕರ ಸಹಾಯ ಪಡೆಯಬೇಕು !
ಯುರೋಪಿನ ಅನೇಕ ದೇಶಗಳಲ್ಲಿ ಇಂತಹ ಯುವಕರ ಮೇಲೆ ನಿಗಾ ಇಡುವ ಪ್ರಯತ್ನ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಅವರ ಅನುಭವವನ್ನು ಉಪಯೋಗಿಸಿಕೊಂಡು ನಾವು ಮುಂದೆ ಹೋಗಬೇಕು. ಒಬ್ಬ ಯುವಕನು ‘ಆನ್‌ಲೈನ್ ಜಿಹಾದ್ನಲ್ಲಿ ಸಿಲುಕಿದರೆ ಕೂಡಲೇ ಅವನ ಮೇಲೆ ಕಣ್ಣಿಡಲಾಗುತ್ತದೆ. ದುರ್ಭಾಗ್ಯವೆಂದರೆ ಅವರ ಸಂಖ್ಯೆ ಸಾವಿರಗಟ್ಟಲೇ ಇರುವುದರಿಂದ ಅವರ ಮೇಲೆ ಗಮನವಿರಿಸುವುದು ಕಠಿಣವಾಗಿದೆ. ಇಂತಹ ಸಮಯದಲ್ಲಿ ಅವರ ಕುಟುಂಬದವರು ಮತ್ತು ಸಂಬಂಧಿಕರು ಅವರ ಮೇಲೆ ಗಮನ ಇಡುವುದರ ಆವಶ್ಯಕತೆಯಿದೆ; ಏಕೆಂದರೆ, ೨೪ ಗಂಟೆಗಳ ಯಾವುದೇ ಯುವಕನ ಮೇಲೆ ಗುಪ್ತಚರರು ಗಮನವಿಡಲು ಸಾಧ್ಯವಿಲ್ಲ.
೮. ಸಲಹಾ ಕೇಂದ್ರಗಳ ಆವಶ್ಯಕತೆ
ಯುರೋಪ್‌ನಲ್ಲಿ ಇದಕ್ಕೆ ‘ಸಾಂಸ್ಕೃತಿಕ ಉಗ್ರವಾದ ಎಂದು ಹೇಳಲಾಗುತ್ತದೆ. ಯಾವಾಗ ನಮಗೆ ನಮ್ಮ ಧರ್ಮದ ಬಗ್ಗೆ ಹೆಚ್ಚು ಪ್ರೇಮ ನಿರ್ಮಾಣವಾಗುತ್ತದೆಯೋ, ಆಗ ನಾವು ಕೇವಲ ನಮ್ಮ ಧರ್ಮದ ಪ್ರಚಾರವನ್ನೇ ಮಾಡಲು ಆರಂಭಿಸುತ್ತೇವೆ ಮತ್ತು ನಾವು ಇತರರ ವಿರುದ್ಧ ಮಾತನಾಡಲು ಪ್ರಾರಂಭಿಸುತ್ತೇವೆ, ಆಗ ನಮ್ಮ ಮತ್ತು ಇತರ ಸಮಾಜದಲ್ಲಿನ ಸಾಂಸ್ಕೃತಿಕ ದೂರ ಬೆಳೆಯುತ್ತಾ ಹೋಗುತ್ತದೆ. ಈ ರೀತಿಯಲ್ಲಿ ಉಗ್ರವಾದದ ಕಡೆಗೆ ಹೊರಳುವ ಈ ಯುವಕರಿಗಾಗಿ ದೇಶದಲ್ಲಿ ಸಲಹಾ ಕೇಂದ್ರಗಳನ್ನು ನಿರ್ಮಾಣ ಮಾಡಬೇಕು.
೯. ಉಗ್ರವಾದವನ್ನು ತಡೆಯಲು ಸರಕಾರವು ಸರ್ವಸಮಾವೇಶಕ ಉಪಾಯಗಳನ್ನು ಅವಲಂಬಿಸಬೇಕು !
ಇಂತಹ ಯುವಕರ ಮೇಲೆ ತರಬೇತುದಾರರಿಂದ ಅವರ ಮನಸ್ಸಿನ ಮೇಲೆ ಆಗಿರುವ ಅತಿಕ್ರಮಣಕಾರಿ ವಿಚಾರಗಳನ್ನು ತಡೆಯಲು ಸಹಾಯ ಮಾಡಬಹುದು. ಈ ಭಯಂಕರ ಅಪಾಯದ ಬಗ್ಗೆ ಎಲ್ಲರನ್ನೂ ಜಾಗರೂಕಗೊಳಿಸುವುದು ಆವಶ್ಯಕವಾಗಿದೆ. ಸರ್ವಸಮಾವೇಶಕ ಉಪಾಯಗಳನ್ನು ಮಾಡಿ ವೈಚಾರಿಕ ಉಗ್ರವಾದವನ್ನು ತಡೆಯಬೇಕು. ಉಗ್ರವಾದವನ್ನು ತಡೆಗಟ್ಟಲು ಸರ್ವಸಮಾವೇಶಕ ಉಪಾಯಗಳ ಕಾರ್ಯವು ಆದಷ್ಟು ಬೇಗ ಆಗಬೇಕು. ಈ ಕಟ್ಟರ್‌ವಾದದ ಮೇಲೆ ನಿರ್ಬಂಧ ಹೇರಲು ಸರಕಾರ ಆಕ್ರಮಕ ಹಾಗೂ ಸಕ್ರಿಯ ಭೂಮಿಕೆಯನ್ನು ತೆಗೆದುಕೊಳ್ಳಬೇಕು. – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ