ಮದ್ಯಮಾರಾಟಕ್ಕೆ ಅನುಮತಿ ನೀಡಿದ ಸರಕಾರದ ನಿರ್ಣಯದ ಬಗ್ಗೆ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ನೀಡಿದ ಮಾರ್ಮಿಕ ಟಿಪ್ಪಣಿ
ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ಮಂಡಿಸಿದ ಅಂಶಗಳು
ಮುಂಬಯಿ – ‘ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ಸರಕಾರಗಳು ಮದ್ಯ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವುದು ದುರ್ದೈವದ ಸಂಗತಿಯಾಗಿದೆ ಹಾಗೂ ಅದು ಸತ್ವಹೀನ ನೇತೃತ್ವವನ್ನು ತೋರಿಸುತ್ತದೆ. ಕ್ರಿಕೇಟ್‌ನ ಭ್ರಷ್ಟಾಚಾರದ ಆರೋಪದ ವರದಿಯನ್ನು ನೀಡುವಾಗ ಕಾನೂನು ಆಯೋಗವು ‘ಕ್ರಿಕೇಟ್ ಜೂಜಿನಿಂದ ಆದಾಯ ಬರುತ್ತದೆ; ಆದ್ದರಿಂದ ಅದನ್ನು ಅಧಿಕೃತಗೊಳಿಸಬೇಕು’, ಎಂದು ಶಿಫಾರಸ್ಸು ಮಾಡಿತ್ತು. ಇದರ ಅರ್ಥ ಉತ್ಪನ್ನ ಸಿಗುತ್ತದೆ ಎಂದು ನಾಳೆ ಜೂಜಿನ ಅಡ್ಡೆಗಳು, ವೇಶ್ಯಾವಾಟಿಕೆಗಳು, ಅಮಲು ಪದಾರ್ಥಗಳು ಮನೆಯೊಳಗೆ ನುಗ್ಗಬಹುದು. ಮದ್ಯದ ಮಾಧ್ಯಮದಿಂದ ಹೆಚ್ಚಾಗುವ ಅಪರಾಧಗಳಿಂದಾಗಿ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಕೂಡ ಒತ್ತಡ ಬರುತ್ತದೆ. ನೈತಿಕತೆಯನ್ನು ಮದ್ಯದ ಲೋಟದಲ್ಲಿ ಮುಳುಗಿಸುವ ಸರಕಾರಗಳು ಈ ವಿಷಯದ ಬಗ್ಗೆ ಗಂಭೀರ ವಿಚಾರ ಮಾಡಬೇಕು, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ‘ಸನಾತನ ಪ್ರಭಾತ’ದ ಪ್ರತಿನಿಧಿಯ ಜೊತೆಗೆ ಮಾತನಾಡುವಾಗ ಸ್ಪಷ್ಟವಾಗಿ ಹೇಳಿದರು.
೧. ಮದ್ಯದ ಮೇಲೆ ಅಬಕಾರಿ ತೆರಿಗೆಯನ್ನು (ಎಕ್ಸೈಜ್ ಟ್ಯಾಕ್ಸ್) ತೆಗೆದುಕೊಳ್ಳಲಾಗುತ್ತದೆ. ರಾಜ್ಯಗಳ ಒಟ್ಟು ಆದಾಯ ನೋಡಿದರೆ ಮದ್ಯದಿಂದ ಬರುವ ನಿಧಿ ಅತ್ಯಲ್ಪವಾಗಿರುತ್ತದೆ; ಆದರೆ ಅದರ ಹೆಚ್ಚುತ್ತಿರುವ ಪ್ರಮಾಣ ಮಾತ್ರ ಭಯಾನಕವಾಗಿದೆ. ಆರ್ಥಿಕ ವರ್ಷ ೨೦೧೨-೧೩ ರಲ್ಲಿ ಅಬಕಾರಿ ತೆರಿಗೆಯಿಂದ ಬಂದಿರುವ ಉತ್ಪನ್ನವು ೯ ಸಾವಿರದ ೨೯೭ ಕೋಟಿ ರೂಪಾಯಿಗಳಷ್ಟಿತ್ತು, ೨೦೧೬-೧೭ ರಲ್ಲಿ ಈ ಉತ್ಪನ್ನವು ಹೆಚ್ಚಾಗಿ ೧೨ ಸಾವಿರದ ೨೮೮ ಕೋಟಿ ರೂಪಾಯಿಯಷ್ಟು ಆಗಿತ್ತು. ಅಂದರೆ ಕೇವಲ ೪ ವರ್ಷಗಳಲ್ಲಿ ಅದು ಒಂದುವರೆ ಪಟ್ಟು ಹೆಚ್ಚಾಗಿತ್ತು. ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಿರುವುದೂ ಕಾರಣವಾಗಿದ್ದರೂ ಉತ್ಪನ್ನ ಹೆಚ್ಚಾಯಿತೆಂದರೆ, ಇದರ ಅರ್ಥ ಮದ್ಯ ಸೇವಿಸುವುದರ ಪ್ರಮಾಣವೂ ಹೆಚ್ಚಾಯಿತು.
೨. ತೆರಿಗೆಯನ್ನು ಸಂಗ್ರಹಿಸಲು ಸರಕಾರಕ್ಕೂ ಕೆಲವೊಂದು ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ, ಉದಾ. ಭೂಮಿಯ ಖರೀದಿ-ಮಾರಾಟ ವ್ಯವಹಾರದಲ್ಲಿನ ತೆರಿಗೆಯಿಂದ ಉತ್ಪನ್ನ ಸಿಗುತ್ತದೆ; ಆದರೆ ಅದಕ್ಕಾಗಿ ‘ಸ್ಟ್ಯಾಂಪ್ ಪೇಪರ್’ ಅಥವಾ ದಾಖಲೆ ಮಾಡಿಕೊಳ್ಳುವ ಅಧಿಕಾರಿಗಳ ವೇತನ ಇತ್ಯಾದಿ ಖರ್ಚಾಗುತ್ತಿರುತ್ತದೆ. ಅಬಕಾರಿ ತೆರಿಗೆಯ ವಿಷಯದಲ್ಲಿ ಇಂತಹ ಖರ್ಚಿನ ಪ್ರಮಾಣವು ಸ್ವಲ್ಪ ಕಡಿಮೆಯಿದೆ. ಮದ್ಯದ ಅಬಕಾರಿ ತೆರಿಗೆಯಿಂದ ಉತ್ಪನ್ನ ಹೆಚ್ಚಾದರೂ, ಅದರಿಂದಾಗುವ ಹಾನಿಯು ಭಯಾನಕವಾಗಿದೆ. ನಾವು ನೈತಿಕತೆಯನ್ನು ಹೇಗೆ ಒತ್ತೆ ಇಡುತ್ತಿದ್ದೇವೆ, ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
೩. ದೇಶದಲ್ಲಿ ಪ್ರತಿವರ್ಷ ಮದ್ಯವನ್ನು ಕುಡಿಯುವುದರಿಂದ ೫ ಲಕ್ಷ ಜನರು ಸಾಯುತ್ತಾರೆ. ಮದ್ಯದಿಂದಾಗಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತದೆ. ಅಪರಾಧಗಳ ತನಿಖೆಗಳನ್ನು ಮಾಡಲು ಪುನಃ ಸರಕಾರದ ಹಣ ಖರ್ಚಾಗುತ್ತದೆ. ಈ ಪ್ರಕರಣಗಳು ಮುಂದೆ ನ್ಯಾಯಾಲಯಕ್ಕೆ ಹೋಗುತ್ತವೆ. ಅದರಲ್ಲಿಯೂ ಪುನಃ ಸರಕಾರದ ಹಣ ಖರ್ಚಾಗುತ್ತದೆ. ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆಯಿಂದ ಸರಕಾರಕ್ಕೆ ಆದಾಯ ಸಿಗುವುದಿಲ್ಲ. ಅದು ಕೇವಲ ಖರ್ಚಿರುತ್ತದೆ. ಇದು ಸರಕಾರದ ಮೇಲೆ ಬರುವ ಹಣದ ಒತ್ತಡವಲ್ಲವೇ ?
೪. ಅಪರಾಧಗಳಲ್ಲಿ ಒಂದು ಕೌಟುಂಬಿಕ ಹಿಂಸಾಚಾರದ್ದಾಗಿರುತ್ತದೆ. ಮದ್ಯದ ಅಮಲಿನಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊಡೆಯುವುದು, ಅದರಿಂದಾಗುವ ಖಟ್ಲೆಗಳು, ದಂಪತಿಗಳ ವಿವಾಹ ವಿಚ್ಛೇದನೆ ಪ್ರಕ್ರಿಯೆ, ಅದರಿಂದ ಒಡೆದು ಹೋಗುವ ಕುಟುಂಬಗಳು, ಅದರಿಂದ ನಿರ್ಮಾಣವಾಗುವ ಮಾನಸಿಕ ಒತ್ತಡ ಮುಂತಾದವುಗಳನ್ನು ನಾವು ಗಮನದಲ್ಲಿ ತೆಗೆದುಕೊಳ್ಳಬೇಕು.
೫. ‘ಮದ್ಯಮಾರಾಟದಿಂದ ಆದಾಯ ಹೆಚ್ಚಾಗುತ್ತದೆ’, ಎಂದು ಹೇಳುವುದಾದರೆ, ‘ರಸ್ತೆ ಅಪಘಾತಗಳಿಂದ ಆಸ್ಪತ್ರೆಗಳ ಮತ್ತು ಔಷಧಗಳ ಕಂಪನಿಗಳ ವ್ಯಾಪಾರ ಹೆಚ್ಚಾಗುತ್ತದೆ’, ಎಂದು ಹೇಳಬಹುದೇ ? ಹೀಗೆ ಹೇಳಲಾಗುವುದಿಲ್ಲ; ಏಕೆಂದರೆ ಇದು ಅರ್ಥಾರ್ಜನೆಯ ಯೋಗ್ಯ ಮಾರ್ಗವಲ್ಲ. ಬಾವು ಬಂದಿರುವುದು ಮತ್ತು ವ್ಯಾಯಾಮ ಮಾಡಿ ದಷ್ಟಪುಷ್ಟವಾದ ಶರೀರದಲ್ಲಿ ಹೇಗೆ ವ್ಯತ್ಯಾಸವಿದೆಯೋ, ಇದು ಕೂಡ ಹಾಗೆಯೇ ಆಗಿದೆ.
೬. ಮದ್ಯದ ಅಂಗಡಿಗಳನ್ನು ತೆರೆಯುವುದು, ಆ ಅಂಗಡಿಗಳ ಮುಂದೆ ನಿರ್ಮಾಣವಾದ ಉದ್ದುದ್ದ ಸಾಲುಗಳು, ಮದ್ಯವನ್ನು ಖರೀದಿಸಿದ ಮೊದಲ ವ್ಯಕ್ತಿಯು ವಾಹಿನಿಗಳಿಗೆ ನೀಡಿದ ಸಂದರ್ಶನ ಹಾಗೂ ಅದನ್ನು ನೋಡುವ ವೀಕ್ಷಕರು, ಇವೆಲ್ಲವೂ ನೈತಿಕತೆಯ ಅವನತಿಯನ್ನು ತೋರಿಸುತ್ತವೆ.
೭. ‘ನನಗೆ ಹೇಗೆ ಬದುಕಬೇಕಾಗಿದೆ, ಹಾಗೆ ಬದುಕಲು ಬಿಡಿ !’, ಈ ವ್ಯಕ್ತಿಸ್ವಾತಂತ್ರ್ಯವು ಸಮಾಜದ ಆರೋಗ್ಯಕ್ಕೆ ಮಾರಕವಾಗುತ್ತಿದ್ದರೆ, ಅದಕ್ಕೆ ಏನು ಮಾಡಬೇಕು ? ಅಂದರೆ ಕಾನೂನು ಕೂಡ ಸಾರ್ವಜನಿಕ ಆರೋಗ್ಯ ಹಾಗೂ ಸುವ್ಯವಸ್ಥೆಗೆ ಮಹತ್ವವನ್ನು ನೀಡುತ್ತದೆ.
೮. ಮಹಾರಾಷ್ಟ್ರ ಸರಕಾರಕ್ಕೆ ಸಾಲವನ್ನು ತೀರಿಸಲು ಹೊಸ ಸಾಲವನ್ನು ಮಾಡಬೇಕಾಗುತ್ತಿದೆ. ೧೦೦ ರೂಪಾಯಿಗಳ ಸಾಲಕ್ಕೆ ಸರಕಾರ ೮ ರೂಪಾಯಿ ಬಡ್ಡಿಯನ್ನು ಕೊಡುತ್ತಿದೆ ಮತ್ತು ಆ ೧೦೦ ರೂಪಾಯಿಗಳ ಹೂಡಿಕೆಯಲ್ಲಿ ಸರಕಾರಕ್ಕೆ ಕೇವಲ ೫ ಪೈಸೆಯಷ್ಟು ಲಾಭ ಬರುತ್ತಿದೆ, ಅಂದರೆ ಎಲ್ಲಿಯೋ ಬಹಳಷ್ಟು ಪ್ರಮಾಣದಲ್ಲಿ ತಪ್ಪಾಗುತ್ತಿದೆ, ಇದನ್ನು ಸ್ವೀಕರಿಸಲು ಯಾರೂ ತಯಾರಿಲ್ಲ, ಇನ್ನು ಅದಕ್ಕೆ ನಿವಾರಣೆಯನ್ನು ಕಂಡು ಹಿಡಿಯುವುದು ದೂರದ ಮಾತಾಯಿತು.
೯. ‘People get government that they deserve’ (ಜನರು ಹೇಗೆ ಇರುತ್ತಾರೆಯೋ, ಹಾಗೆ ಅವರಿಗೆ ಸರಕಾರ ಸಿಗುತ್ತದೆ) ಎನ್ನುವ ಒಂದು ಗಾದೆಯಿದೆ. ನಮ್ಮ ಸ್ಥಿತಿಯೂ ಹಾಗೆಯೇ ಆಗಿದೆಯೇ ?, ಎಂಬುದನ್ನು ವಿಚಾರ ಮಾಡಬೇಕು.