‘ಇಂದು ಬಹಳಷ್ಟು ಜನರು ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಎಸಿಡಿಟಿ, ಸಂಧಿವಾತದಂತಹ ಅನೇಕ ರೋಗಗಳಿಗೆ ವರ್ಷಗಟ್ಟಲೆ ‘ಅಲೋಪತಿಕ್ ಔಷಧಗಳನ್ನು ಸೇವಿಸುತ್ತಿದ್ದಾರೆ. ಅವರಿಗೆ ‘ಅಲೋಪತಿಕ್ ಔಷಧಿಗಳು ಎಷ್ಟು ಅಭ್ಯಾಸವಾಗಿದೆ ಎಂದರೆ, ಆ ಔಷಧಿಗಳ ಹೊರತು ಅವರು ಜೀವನ ನಡೆಸುವುದೇ ಕಷ್ಟ ಎಂಬ ವಿಚಾರ ಅವರಲ್ಲಿದೆ. ಭವಿಷ್ಯದಲ್ಲಿ ಉದ್ಭವಿಸುವ ಮಹಾಯುದ್ಧ, ನೆರೆ, ಭೂಕಂಪಗಳಂತಹ ಭಯಂಕರ ಆಪತ್ತುಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲ ಸಾಮಗ್ರಿಗಳ ಜೊತೆಗೆ ಔಷಧಗಳು ಕೂಡ ಸಿಗುವುದು ಕಠಿಣವಾಗಬಹುದು. ಯುದ್ಧದ ಕಾಲದಲ್ಲಿ ಔಷಧಗಳ ಸಂಗ್ರಹವನ್ನು ಹೆಚ್ಚಾಗಿ ಸೈನಿಕರಿಗಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಔಷಧಗಳ ಕೊರತೆಯಾಗುವುದು. ಈ ದೃಷ್ಟಿಯಿಂದ ಕುಟುಂಬಕ್ಕಾಗಿ ಬೇಕಾಗುವ ಔಷಧಗಳನ್ನು ಆಪತ್ಕಾಲದ ಮೊದಲೇ ಖರೀದಿಸಿಡಬೇಕಾಗಿದೆ.
೧. ‘ಅಲೋಪತಿಕ್ ಔಷಧಗಳ ಮಿತಿ ಮತ್ತು ಆಯುರ್ವೇದ ಮತ್ತು ‘ಹೊಮಿಯೋಪತಿಕ್ ಔಷಧಗಳ ಲಾಭ
‘ಅಲೋಪತಿಕ್ ಔಷಧಗಳನ್ನು ಒಮ್ಮೆ ೩ ತಿಂಗಳಿಗಿಂತ ಹೆಚ್ಚು ಕಾಲ ಖರೀದಿ ಮಾಡಲು ಆಗುವುದಿಲ್ಲ. ತದ್ವಿರುದ್ಧ ನಾವು ಆಯುರ್ವೇದ ಮತ್ತು ‘ಹೊಮಿಯೋಪತಿಕ್ ಔಷಧಗಳನ್ನು ಕುಟುಂಬದವರಿಗೆ ಬೇಕಾಗುವಷ್ಟು ಖರೀದಿ ಮಾಡಿ ಇಟ್ಟುಕೊಳ್ಳಬಹುದು. ಈ ಔಷಧಿಯನ್ನು ಯೋಗ್ಯ ರೀತಿಯಲ್ಲಿ ಶೇಖರಣೆ ಮಾಡಿದರೆ ಅದು ೪-೫ ವರ್ಷಗಳಿಗಿಂತ ಹೆಚ್ಚು ಕಾಲದವರೆಗೆ ಉಳಿಯುತ್ತದೆ. ಕೆಲವೊಂದು ಔಷಧಿಗಳು ಶಾಶ್ವತವಾಗಿ ಉಳಿಯುವಂತಹದ್ದಿರುತ್ತದೆ, ಎಂದರೆ ಅದಕ್ಕೆ ‘ಕೊನೆಯ ದಿನಾಂಕ (ಎಕ್ಸ್‌ಪಾಯರಿ ಡೇಟ್) ಇರುವುದಿಲ್ಲ, ನಾವು ನಮ್ಮ ಮನೆಯ ಟೆರೇಸ್ ಅಥವಾ ಅಂಗಳದಲ್ಲಿ ಅನೇಕ ರೋಗಗಳಿಗೆ ಉಪಯುಕ್ತವಿರುವಂತಹ ಆಯುರ್ವೇದ ವನಸ್ಪತಿಗಳನ್ನು ಬೆಳೆಸಬಹುದು. ಸನಾತನವು ‘ಔಷಧ ವನಸ್ಪತಿಗಳನ್ನು ಬೆಳೆಸುವುದು ಹೇಗೆ ಎನ್ನುವ ವಿಷಯದಲ್ಲಿ ಗ್ರಂಥಗಳನ್ನು ಕೂಡ ಪ್ರಸಿದ್ಧಪಡಿಸಿದೆ.
೨. ‘ಅಲೋಪತಿಕ್ ಔಷಧಿಗಳ ಜೊತೆಗೆ ಆಯುರ್ವೇದ ಮತ್ತು ‘ಹೊಮಿಯೋಪತಿಕ್ ಔಷಧಗಳನ್ನು ಸೇವಿಸಲು ಪ್ರಾರಂಭಿಸಿರಿ !
ಈ ಮೇಲಿನ ಎಲ್ಲ ವಿಷಯಗಳನ್ನು ಗಮನಿಸಿ ಯಾರು ಕೇವಲ ‘ಅಲೋಪತಿಕ್ ಔಷಧಗಳನ್ನೇ ಅವಲಂಬಿಸಿದ್ದೀರೋ ಅವರು ಈಗಿನಿಂದಲೇ ಆಯುರ್ವೇದ ಮತ್ತು ‘ಹೊಮಿಯೋಪತಿಕ್ ಔಷಧಿಗಳ ಕಡೆಗೆ ಹೊರಳಬೇಕು. ಆಯುರ್ವೇದ ಅಥವಾ ‘ಹೊಮಿಯೋಪತಿಕ್ ವೈದ್ಯರ ಸಲಹೆಗನುಸಾರ ‘ಅಲೋಪತಿಕ್ ಔಷಧಗಳ ಜೊತೆಗೆ ನಿಧಾನವಾಗಿ ಆಯುರ್ವೇದ ಅಥವಾ ‘ಹೊಮಿಯೋಪತಿಕ್ ಔಷಧಗಳನ್ನು ಆರಂಭಿಸಬೇಕು. ಈ ಔಷಧಗಳ ಪರಿಣಾಮ ಕಾಣಿಸಲು ಆರಂಭವಾದಾಗ ನಿಧಾನವಾಗಿ ‘ಅಲೋಪತಿಕ್ ಔಷಧಗಳ ಪ್ರಮಾಣ ವನ್ನು ಕಡಿಮೆಗೊಳಿಸಿ ಮುಂದೆ ಅದರ ಅವಶ್ಯಕತೆಯಿಲ್ಲದಂತೆ ಮಾಡಬೇಕು.
೩. ಔಷಧವಿಲ್ಲದೆಯೆ ರೋಗಮುಕ್ತವಾಗುವ ತಂತ್ರ !
ಆಯುರ್ವೇದದ ತತ್ತ್ವಗಳನ್ನು ನಿಯಮಿತವಾಗಿ ಆಚರಣೆ ಮಾಡಿದರೆ ನಾವು ಶಾಶ್ವತವಾಗಿ ಆರೋಗ್ಯವಂತರಾಗಿರಬಹುದು. ಈ ವಿಷಯದಲ್ಲಿ ಸನಾತನ ‘ಆಯುರ್ವೇದವನ್ನು ಪಾಲಿಸಿ ಔಷಧಗಳಿಲ್ಲದೇ ಆರೋಗ್ಯವಂತರಾಗಿ ! ಎನ್ನುವ ಗ್ರಂಥವನ್ನು ಪ್ರಕಟಿಸಿದೆ.
‘ತಜ್ಞರ ಮಾರ್ಗದರ್ಶನದಲ್ಲಿ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಕಲಿತು ಅದನ್ನು ನಿಯಮಿತವಾಗಿ ಯೋಗ್ಯ ರೀತಿಯಲ್ಲಿ ಮಾಡಿದರೆ ಅನೇಕ ವ್ಯಾಧಿಗಳು ಔಷಧ ಇಲ್ಲದೆಯೇ ಗುಣವಾಗುತ್ತವೆ, ಎಂಬುದು ಅನೇಕ ಜನರ ಅನುಭವವಾಗಿದೆ. ಈ ಮೇಲಿನ ವಿಷಯಗಳನ್ನು ಇಂದಿನಿಂದಲೇ ಆರಂಭಿಸಬೇಕು. ಮನುಷ್ಯಜನ್ಮವು ಅತೀ ಮಹತ್ವದ್ದಾಗಿದೆ. ಔಷಧವಿಲ್ಲದೆ ಜೀವನವನ್ನು ವ್ಯರ್ಥ ಮಾಡುವ ಬದಲು ಈ ಮೇಲಿನ ದೃಷ್ಟಿಕೋನಕ್ಕನುಸಾರ ಕೃತಿ ಮಾಡಿ ಆಪತ್ಕಾಲದಲ್ಲಿ ಮಾನವಜನ್ಮವನ್ನು ಕಾಪಾಡಿಕೊಳ್ಳಿ ಹಾಗೂ ಅದನ್ನು ಸಾಧನೆಗಾಗಿ ಉಪಯೋಗಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕಗೊಳಿಸಿರಿ ! – ಪೂ. ಶ್ರೀ. ಸಂದೀಪ ಆಳಶಿ (೧೨.೫.೨೦೧೦)