ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡಿಟ್ಟುಕೊಳ್ಳಿ !

ಪರಾತ್ಪರ ಗುರು ಡಾ. ಆಠವಲೆ

ಆಪತ್ಕಾಲದ ದೃಷ್ಟಿಯಿಂದ ಮಾಡಬೇಕಾದ ಇತರ ಸಿದ್ಧತೆ

೧. ಮನೆಯಲ್ಲಿ ಅನಾವಶ್ಯಕವಾಗಿರುವ ವಸ್ತುಗಳನ್ನು ಕಡಿಮೆ ಮಾಡಲು ಪ್ರಾರಂಭಿಸಬೇಕು !

೨. ಎರಡು ಬೇರೆ ಬೇರೆ ಕಂಪನಿಗಳ ‘ಸಿಮ್ ಕಾರ್ಡ ಇರುವ ಸಂಚಾರವಾಣಿಯನ್ನು ಹತ್ತಿರವಿಟ್ಟುಕೊಳ್ಳಬೇಕು ! : ಒಂದರ ‘ರೇಂಜ್ ಸಿಗದಿದ್ದರೆ ಇನ್ನೊಂದರ ‘ರೇಂಜ್ ಸಿಗಬಹುದು.

೩. ಸಂಬಂಧಿಕರು, ಅಕ್ಕಪಕ್ಕದವರು, ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಇತ್ಯಾದಿ ಅತ್ಯಾವಶ್ಯಕವಿರುವ ಸ್ಥಳದ ದೂರವಾಣಿ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಬೇರೆಯೇ ಪುಸ್ತಕದಲ್ಲಿ ನೋಂದಣಿ ಮಾಡಿಟ್ಟುಕೊಳ್ಳಬೇಕು ! : ಆಪತ್ಕಾಲದಲ್ಲಿ ಸಂಚಾರವಾಣಿ ಚಾಲನೆಯಲ್ಲಿ ಇರುವ ಖಾತ್ರಿಯಿಲ್ಲದಿರುವುದರಿಂದ ಈ ರೀತಿ ಮಾಡಬೇಕು.

೪. ನೆರೆಹಾವಳಿಯ ಪ್ರಸಂಗದಲ್ಲಿ ಸರಕಾರದಿಂದ ಮುನ್ಸೂಚನೆ ದೊರಕಿದ ಬಳಿಕ ಕೆಲವು ನಿಮಿಷಗಳಲ್ಲಿಯೇ ಮನೆಯಿಂದ ತಕ್ಷಣ ಹೊರಬರ ಬೇಕಾದಲ್ಲಿ ಪೂರ್ವತಯಾರಿಯೆಂದು ಒಂದು ಸಣ್ಣ ಪೆಟ್ಟಿಗೆಯಲ್ಲಿ (‘ಬ್ರೀಫಕೇಸ್‌ನಲ್ಲಿ) ಮಹತ್ವದ ಕಾಗದಪತ್ರಗಳನ್ನು (ಉದಾ. ರೇಶನ್‌ಕಾರ್ಡ್, ಆಧಾರಕಾರ್ಡ, ಬ್ಯಾಂಕ್ ಪಾಸ್‌ಬುಕ್) ಮತ್ತು ಇತರ ಆವಶ್ಯಕ ಸಾಮಗ್ರಿಗಳನ್ನು ಕ್ರೋಢೀಕರಿಸಿ ಇಟ್ಟುಕೊಳ್ಳಬೇಕು !

೫. ಮನೆಯ ರಕ್ಷಣೆಗಾಗಿ ನಾಯಿ, ಹಾಲು ಕೊಡಲು ದನ, ಹೊಲ ಮತ್ತು ಎತ್ತಿನಗಾಡಿಗಾಗಿ ಎತ್ತು, ಪ್ರಯಾಣಕ್ಕಾಗಿ ಕುದುರೆ ಇತ್ಯಾದಿಗಳನ್ನು ಸಾಕಬೇಕು.- ಪರಾತ್ಪರ ಗುರು ಡಾ. ಆಠವಲೆ

(ಆಧಾರ : ಸನಾತನದ ಮುಂಬರುವ ಗ್ರಂಥ ‘ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವಸಿದ್ಧತೆ)