ಯುವಕರಿಗೆ ಭಾರತೀಯ ಸೈನ್ಯದಲ್ಲಿ ನೌಕರಿ ನೀಡುವ ಪ್ರಸ್ತಾಪ : ಒಂದು ಕ್ರಾಂತಿಕಾರಿ ನಿರ್ಣಯ
ಕೆಲವು ಕಾಲಕ್ಕಾಗಿ ಸೈನ್ಯದಲ್ಲಿ ನೌಕರಿ ಮಾಡುವುದು ಹೊಸ ವಿಷಯವೇನಲ್ಲ. ಭಾರತೀಯ ಸೈನ್ಯದಲ್ಲಿ ‘ಟೆರಿಟೋರಿಯಲ್ ಆರ್ಮಿ’ ಎಂಬ ಹೆಸರಿನ ಒಂದು ಪದ್ಧತಿಯಿದೆ. ಕೇವಲ ಮಹಾರಾಷ್ಟ್ರದ ಜನರ ಬಗ್ಗೆ ಮಾತನಾಡುವುದಾದರೆ, ಪುಣೆ ಮತ್ತು ಕೊಲ್ಹಾಪುರದಲ್ಲಿ ‘ಟಿಎ ಬೆಟಾಲಿಯನ್ಸ್’ ಇದೆ. ‘ಟಿಎ ಬೆಟಾಲಿಯನ್ಸ್’ ಅಂದರೆ ಅವರು ‘ಪಾರ್ಟ್‌ಟೈಮ್ ಸೋಲ್ಜರ‍್ಸ್’ ಆಗಿರುತ್ತಾರೆ.