ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಅಖಿಲ ಮನುಕುಲಕ್ಕೆ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ

ಪರಾತ್ಪರ ಗುರು ಡಾ. ಆಠವಲೆ

ನೆರೆ, ಭೂಕಂಪ, ಮೂರನೇ ಮಹಾಯುದ್ಧ, ಕೊರೋನಾ ಮಹಾಮಾರಿಯಂತಹ ಸಂಕಟಗಳು ಮುಂತಾದ ಆಪತ್ಕಾಲದಲ್ಲಿ ಸುರಕ್ಷಿತವಾಗಿ ಉಳಿಯಲು ಮಾಡಬೇಕಾದ ಸಿದ್ಧತೆಯ ಬಗೆಗಿನ ಈ ಲೇಖನಮಾಲೆಯಲ್ಲಿನ ಮೊದಲ ಲೇಖನದಲ್ಲಿ ಒಲೆ, ಗೋಬರ್-ಗ್ಯಾಸ್ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೋಡಿದೆವು. ಎರಡನೆಯ ಲೇಖನದಲ್ಲಿ ತರಕಾರಿ, ಹಣ್ಣುಗಳು ಮುಂತಾದವುಗಳ ತೋಟಗಾರಿಕೆ ಮಾಡುವ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆವು.  ಈಗ ಈ ಲೇಖನದಲ್ಲಿ ದೀರ್ಘ ಕಾಲ ಉಳಿಯುವ ಪದಾರ್ಥಗಳ ವಿವೇಚನೆಯನ್ನು ಮಾಡಲಾಗಿದೆ. ಆಪತ್ಕಾಲದಲ್ಲಿ ನಿತ್ಯದಂತೆ ಅಲ್ಪಾಹಾರ ಅಥವಾ ಭೋಜನವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಉಪವಾಸಬೀಳುವ ಪ್ರಸಂಗ ಬರಬಾರದೆಂದು, ಮನೆಯಲ್ಲಿ ಮೊದಲೇ ದೀರ್ಘಕಾಲ ಉಳಿಯುವ ಪದಾರ್ಥಗಳನ್ನು ಮಾಡಿಟ್ಟರೆ ಉಪಯೋಗವಾಗುವುದು. ಲೇಖನ-೩

೧. ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ವಿವಿಧ ಸಿದ್ಧತೆಗಳು !

೧ ಅ ೫. ವಿವಿಧ ದೀರ್ಘಕಾಲ ಉಳಿಯುವ ತಿಂಡಿತಿನಿಸುಗಳನ್ನು ಖರೀದಿಸಿಡುವುದು ಅಥವಾ ಮನೆಯಲ್ಲಿ ತಯಾರಿಸಿಡುವುದು

ಆಪತ್ಕಾಲದಲ್ಲಿ ಅಡುಗೆಯ ಇಂಧನದ ಅಭಾವವಾಗುವುದು, ಮನೆಯಲ್ಲಿ ಎಲ್ಲ ಜನರೂ ಕಾಯಿಲೆ ಬೀಳುವುದು, ಆಕಸ್ಮಿಕವಾಗಿ ಇತರ ಸ್ಥಳಗಳಿಗೆ ಸ್ಥಳಾಂತರವಾಗುವುದು, ಪೇಟೆಯಲ್ಲಿ ತರಕಾರಿ ಇತ್ಯಾದಿಗಳು ಸಿಗದಿರುವುದು ಮುಂತಾದ ಪರಿಸ್ಥಿತಿಗಳು ಉದ್ಭವಿಸಬಹುದು. ಇಂತಹ ಸಮಯದಲ್ಲಿ ನಿತ್ಯದಂತೆ ತಿಂಡಿ ಮತ್ತು ಭೋಜನವನ್ನು ತಯಾರಿಸಲು ಸಾಧ್ಯವಾಗುವುದು ಎಂದು ಹೇಳಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ದೀರ್ಘಕಾಲ ಬಾಳುವ ಸಂಗ್ರಹಿಸಿಟ್ಟ ತಿಂಡಿ ತಿನಿಸುಗಳು ಉಪಯುಕ್ತವಾಗುವವು.

ಅ. ಮುಂದೆ ನೀಡಿದ ಪದಾರ್ಥಗಳ ಪೈಕಿ ಕೆಲವು ಪದಾರ್ಥಗಳು (ಉದಾ. ಖಾಕರಾ, ಉಪ್ಪಿನಕಾಯಿ, ಪಾನೀಯಗಳು) ಪೇಟೆಯಲ್ಲಿ ಸಿಗುತ್ತವೆ. ಅವುಗಳನ್ನು ಖರೀದಿಸಿಡಬಹುದು. ಮನೆಯಲ್ಲಿಯೂ ಇಂತಹ ಪದಾರ್ಥಗಳನ್ನು ತಯಾರಿಸುವ ರೂಢಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು; ಏಕೆಂದರೆ ಮುಂದೆ ಹೇಗೆ, ಆಪತ್ಕಾಲವು ತೀವ್ರವಾಗುತ್ತಾ ಹೋಗುವುದೋ, ಹಾಗೆ ಈ ಪದಾರ್ಥಗಳು ಪೇಟೆಯಲ್ಲಿ ಸಿಗುವುದೂ ಕಠಿಣವಾಗುವುದು.

ಆ. ಮುಂದೆ ನೀಡಿದ ಪದಾರ್ಥಗಳು ಉದಾಹರಣೆಗಳಾಗಿವೆ, ಹಾಗೆಯೇ ಅವುಗಳನ್ನು ಕೊಡುವಾಗ ಹೆಚ್ಚಾಗಿ ಮಹಾರಾಷ್ಟ್ರದ ದೃಷ್ಟಿಯಿಂದ ವಿಚಾರ ಮಾಡಲಾಗಿದೆ. ವಾಚಕರಿಗೆ ತಮ್ಮ ರಾಜ್ಯ ಅಥವಾ ದೇಶಕ್ಕನುಸಾರ ಗೊತ್ತಿರುವ ದೀರ್ಘಕಾಲ ಬಾಳುವ ಪದಾರ್ಥಗಳನ್ನೂ ಖರೀದಿಸಬಹುದು ಅಥವಾ ಮನೆಯಲ್ಲಿ ತಯಾರಿಸಬಹುದು.

ಇ. ನಾವು ಈ ಲೇಖನದಲ್ಲಿ ದೀರ್ಘಕಾಲ ಬಾಳುವ ಪದಾರ್ಥಗಳನ್ನು ತಯಾರಿಸುವ ಕೃತಿಯ ಬಗ್ಗೆ ಕೊಟ್ಟಿಲ್ಲ. ಈ ಕೃತಿಗಳು ಹೆಚ್ಚಿನವರಿಗೆ ಗೊತ್ತಿರುತ್ತವೆ. ಆದರೆ ಆಪತ್ಕಾಲದ ದೃಷ್ಟಿಯಿಂದ ವಿಚಾರ ಮಾಡಿ ಬಹುತೇಕ ಸ್ಥಳಗಳಲ್ಲಿ ‘ದೀಘ್ರ ಕಾಲ ಬಾಳಿಕೆ ಬರುವ ಪದಾರ್ಥಗಳನ್ನು ಹೆಚ್ಚು ಕಾಲ ಹೇಗೆ ಉಳಿಸಬಹುದು’, ಈ ಸಂದರ್ಭದಲ್ಲಿನ ಉಪಯುಕ್ತ ಸೂಚನೆಗಳನ್ನು ನೀಡಲಾಗಿದೆ.

‘ಬಾಳಿಕೆಬರುವ ಪದಾರ್ಥಗಳನ್ನು ಹೇಗೆ ತಯಾರಿಸಬೇಕು’, ಎಂಬುದರ ಬಗೆಗಿನ ಮಾಹಿತಿಯು ವಾಚಕರಿಗೆ ಇಲ್ಲದಿದ್ದರೆ ಅವರು ಈ ಮಾಹಿತಿಯನ್ನು ಕುಟುಂಬದಲ್ಲಿನ ಹಿರಿಯರಿಂದ ತಿಳಿದುಕೊಳ್ಳಬೇಕು ಅಥವಾ ಅದಕ್ಕಾಗಿ ಪಾಕಶಾಸ್ತ್ರದ ಪುಸ್ತಕಗಳನ್ನು ಓದಬೇಕು ಅಥವಾ ಈ ಪದಾರ್ಥಗಳ ‘ಯೂ ಟ್ಯೂಬ್’ನಲ್ಲಿ ನೀಡಿದ ಕೃತಿಗಳನ್ನು ನೋಡಬೇಕು.

ಈ. ಲೇಖನದಲ್ಲಿ ಸಾಧ್ಯವಿದ್ದಲ್ಲಿ ಬಾಳಿಕೆಬರುವಂತಹ ಪದಾರ್ಥಗಳ ಉಳಿಯುವ ಸರಾಸರಿ ಕಾಲಾವಧಿಯನ್ನೂ ನೀಡಲಾಗಿದೆ. ಈ ಕಾಲಾವಧಿಯು ಆಯಾ ಪ್ರದೇಶದಲ್ಲಿಗಳಲ್ಲಿನ ಹವಾಮಾನ, ಬಾಳಿಕೆ ಬರುವ ಪದಾರ್ಥಗಳನ್ನು ತಯಾರಿಸುವಾಗ ತೆಗೆದುಕೊಂಡ ಕಾಳಜಿ ಮುಂತಾದ ಘಟಕಗಳ ಮೇಲೆಯೂ ಅವಲಂಬಿಸಿದೆ.

೧ ಅ ೫ ಅ. ಅಕ್ಕಿಯ ಹಿಟ್ಟು ಮತ್ತು ರಾಗಿಯ ಹಿಟ್ಟು, ಹಾಲಿನ ಪೌಡರ್ ಮುಂತಾದ ಪದಾರ್ಥಗಳು

೧ ಅ ೫ ಅ ೧. ಅಕ್ಕಿಯ ಮತ್ತು ರಾಗಿಯ ಹಿಟ್ಟು

ರಾಗಿಯ ಹಿಟ್ಟು

‘ಈ ಹಿಟ್ಟುಗಳಲ್ಲಿ ರಾಗಿಯ ಹಿಟ್ಟು ಹೆಚ್ಚು ಪೌಷ್ಟಿಕವಾಗಿದೆ. ಅಕ್ಕಿಯನ್ನು ೩ – ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಚಾಣಗಿಯಲ್ಲಿ ಬಸಿಯಲು ಇಡಬೇಕು. ಸಾಧಾರಣ ೧ ಗಂಟೆಯ ನಂತರ ಅಕ್ಕಿಯಲ್ಲಿನ ನೀರು ಬಸಿದು ಹೋದನಂತರ ಮತ್ತು ಅದರಲ್ಲಿನ ಹಸಿತನ ಕಡಿಮೆಯಾದ ನಂತರ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಮಧ್ಯಮ ಉಷ್ಣತೆಯ ಮೇಲೆ ಹುರಿಯಬೇಕು. ಒಂದು ಬಾರಿಗೆ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡರೆ ಅವು ಅರಳಿನಂತೆ ಅರಳುತ್ತವೆ. ಕೊನೆಗೆ ಎಲ್ಲ ಅಕ್ಕಿಯ ಹಿಟ್ಟು ಮಾಡಿ ಒಣ ಭರಣಿಯಲ್ಲಿ ತುಂಬಿಡಬೇಕು. ಈ ಹಿಟ್ಟು ಸಾಧಾರಣ ೩ ತಿಂಗಳು ಕಾಲ ಉಳಿಯುತ್ತದೆ. ಈ ಹಿಟ್ಟನ್ನು ಹಾಲು, ಮೊಸರು, ಮಜ್ಜಿಗೆ ಅಥವಾ ಸಾರಿನೊಂದಿಗೆ ತಿನ್ನಬಹುದು. ಹಿಟ್ಟನ್ನು ಹಾಲಿನೊಂದಿಗೆ ಸೇವಿಸುವುದಾದರೆ ಅದರಲ್ಲಿ ರುಚಿಗಾಗಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬಹುದು.ಅಕ್ಕಿಯ ಹಿಟ್ಟು ತಯಾರಿಸುವ ಪದ್ಧತಿಯಂತೆಯೇ ರಾಗಿಯ ಹಿಟ್ಟನ್ನೂ ತಯಾರಿಸಿಡಬಹುದು. ಈ ಹಿಟ್ಟು ಸಹ ಸಾಧಾರಣ ೩ ತಿಂಗಳುಗಳ ಕಾಲ ಉಳಿಯುತ್ತದೆ.

೧ ಅ ೫ ಅ ೨. ಜವೆಗೋದಿಯ ಹಿಟ್ಟು

ಜವೆಗೋದಿಯ ಹಿಟ್ಟು

ಗೋದಿಯನ್ನು ತೊಳೆದು ಬಸಿಯಲು ಇಡಬೇಕು. ಸಾಧಾರಣ ೧ ಗಂಟೆಯಲ್ಲಿ ಗೋದಿಯಲ್ಲಿನ ನೀರು ಬಸಿದ ಮೇಲೆ ಮತ್ತು ಅದರಲ್ಲಿನ ತೇವಾಂಶ ಕಡಿಮೆಯಾದ ಮೇಲೆ ಅದನ್ನು ಮಧ್ಯಮ ಉಷ್ಣತೆಯ ಮೇಲೆ ಹುರಿಯಬೇಕು. ಅದರಲ್ಲಿ ಕಡಲೆ ಬೇಳೆ ಮತ್ತು ಜೀರಿಗೆಯನ್ನು ಹುರಿದು ಹಾಕಬೇಕು. ಎಲ್ಲವನ್ನು ಸೇರಿಸಿ ಅದರ ಹಿಟ್ಟು ಮಾಡ ಬೇಕು. ಈ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಅಥವಾ ಒಣಗಿದ ಭರಣಿಯಲ್ಲಿ ತುಂಬಿಡಬೇಕು. ಈ ಹಿಟ್ಟನ್ನು ನೀರು ಅಥವಾ ಹಾಲಿನಲ್ಲಿ ಹಾಕಿ ರುಚಿಗನುಸಾರ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬೇಕು. ಈ ಹಿಟ್ಟು ಸಾಧಾರಣ ೬ ತಿಂಗಳು ತಾಳುತ್ತದೆ.

ಪ್ರದೇಶಗಳಿಗನುಸಾರ ಜವೆಗೋದಿಯ ಹಿಟ್ಟು ಮಾಡುವ ಪದ್ಧತಿಯು ಬೇರೆ ಬೇರೆಯಾಗಿರುತ್ತದೆ. ಕೆಲವು ಕಡೆಗಳಲ್ಲಿ ಗೋದಿಯನ್ನು ಉಪಯೋಗಿಸದೇ ಜವೇ ಗೋದಿಯನ್ನು ಉಪಯೋಗಿಸುತ್ತಾರೆ ಮತ್ತು ಕೆಲವು ಕಡೆಗಳಲ್ಲಿ ಕೇವಲ ಕಡಲೆಗಳನ್ನು ಹುರಿದು ಅದರ ಹಿಟ್ಟು ಮಾಡುತ್ತಾರೆ. ೫ ರಿಂದ ೭ ಧಾನ್ಯಗಳನ್ನು ಒಟ್ಟು ಸೇರಿಸಿ ಮೇಲಿನಂತೆ ಹುರಿದು ಅದರ ಹಿಟ್ಟನ್ನೂ ಮಾಡಲು ಬರುತ್ತದೆ.’

– ಶ್ರೀಮತಿ ಕ್ಷಮಾ ರಾಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಫೆಬ್ರುವರಿ ೨೦೨೦)

೧ ಅ ೫ ಅ ೩. ಗೋದಿ ಅಥವಾ ರಾಗಿಯ ‘ಸತ್ತ್ವ’

ಗೋದಿ ಅಥವಾ ರಾಗಿಯ ‘ಸತ್ತ್ವ’

‘ಗೋದಿ ಅಥವಾ ರಾಗಿಯ ರಸವನ್ನು ತೆಗೆದು ಅದನ್ನು ಚೆನ್ನಾಗಿ ಒಣಗಿಸಿದರೆ ಅದರ ಪುಡಿ ತಯಾರಾಗುತ್ತದೆ. ಅದಕ್ಕೆ ‘ಸತ್ತ್ವ’ ಎಂದು ಹೇಳುತ್ತಾರೆ. ಈ ಪುಡಿಯು ಪೌಷ್ಟಿಕವಾಗಿದ್ದು ಹಾಲಿನಲ್ಲಿ ಅಥವಾ ನೀರಿನಲ್ಲಿ ಬೇಯಿಸಿ ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬಹುದು. ಈ ಪುಡಿಯು ಸಾಧಾರಣ ೩ ತಿಂಗಳು ಉಳಿಯುತ್ತದೆ.’ – ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ. (ಫೆಬ್ರುವರಿ ೨೦೧೯)

೧ ಅ ೫ ಅ ೪. ಯಂತ್ರಗಳ ಮೂಲಕ ಪ್ರಕ್ರಿಯೆ ಮಾಡಿದ ಪೌಷ್ಟಿಕ ಪದಾರ್ಥಗಳು

ಹಾಲಿನ ಪುಡಿ(ಹುಡಿ), ಚಿಕ್ಕ ಮಕ್ಕಳಿಗಾಗಿ ವಿವಿಧ ಪೋಷಕ ಘಟಕಗಳಿರುವ ಪುಡಿಗಳು, ಉದಾ. ಲ್ಯಾಕ್ಟೊಜೆನ್, (Lactogen), ಸೆರಿಲ್ಯಾಕ್ (Cerelac), ಸೆರಿಲ್ಯಾಕ್’ನ್ನು ಪೂರಕ ಆಹಾರವೆಂದು ರೋಗಿಗಳು ಮತ್ತು ವಯೋವೃದ್ಧರು ತಿನ್ನಬಹುದು.

೧ ಅ ೫ ಆ. ಬಿಸಿಲಿನಲ್ಲಿ ಒಣಗಿಸಿದ ರೊಟ್ಟಿ, ಹಾಗೆಯೇ ಬೆಲ್ಲದ ಹೋಳಿಗೆ ಇತ್ಯಾದಿ ಪದಾರ್ಥಗಳು

೧ ಅ ೫ ಆ ೧. ಜೋಳ ಮತ್ತು ಸೆಜ್ಜೆಯ ರೊಟ್ಟಿ

ಜೋಳ ಮತ್ತು ಸೆಜ್ಜೆಯ ರೊಟ್ಟಿ

‘ಈ ರೊಟ್ಟಿಗಳನ್ನು ಮಾಡುವ ಮೊದಲು ಹಿಟ್ಟಿನಲ್ಲಿ ರುಚಿಗಾಗಿ ಖಾರ, ಉಪ್ಪು ಮತ್ತು ಹಿಂಗನ್ನು ಹಾಕಬಹುದು.

ಅ. ಜೋಳದ ಹಿಟ್ಟಿನ ಬಹಳ ತೆಳುವಾದ ರೊಟ್ಟಿಗಳನ್ನು ಮಾಡಿ ಅವುಗಳನ್ನು ಬಿಸಿಲಿನಲ್ಲಿ ಪೂರ್ತಿ ಬಿರುಸಾಗುವಂತೆ ಒಣಗಿಸಬೇಕು. ಈ ರೊಟ್ಟಿಗಳು ಸಾಧಾರಣ ೧ ತಿಂಗಳು ಉಳಿಯುತ್ತವೆ.

ಆ, ಸೆಜ್ಜೆಯ ಹಿಟ್ಟಿನಿಂದಲೂ ಅತಿ ತೆಳುವಾದ ರೊಟ್ಟಿಗಳನ್ನು ಮಾಡಿ ಅವುಗಳನ್ನು ಬಿಸಿಲಿನಲ್ಲಿ ಬಿರುಸಾಗುವರೆಗೆ ಒಣಗಿಸಬೇಕು. ಈ ರೊಟ್ಟಿಗಳು ಜೋಳದ ರೊಟ್ಟಿಗಿಂತ ಹೆಚ್ಚು ರುಚಿಯಾಗಿರುತ್ತದೆ. ಈ ರೊಟ್ಟಿಗಳು ಸಾಧಾರಣ ೨ ತಿಂಗಳು ಉಳಿಯುತ್ತವೆ.

ಬಿಸಿಲಿನಲ್ಲಿ ಬಿರುಸಾಗಿ ಒಣಗಿದ ರೊಟ್ಟಿಗಳನ್ನು ಗಟ್ಟಿ ಮುಚ್ಚಳವಿರುವ ಡಬ್ಬದಲ್ಲಿ ತುಂಬಿಡಬೇಕು. ಈ ರೊಟ್ಟಿಗಳನ್ನು ತುಂಡು ಮಾಡಿ ಅವುಗಳ ಮೇಲೆ ಬಿಸಿ ಸಾರನ್ನು ಹಾಕಿಕೊಂಡು ತಿನ್ನಲು ಬರುತ್ತದೆ.

೧ ಅ ೫ ೨. ಬೆಲ್ಲದ ಹೊಳಿಗೆ

ಬೆಲ್ಲದ ಹೋಳಿಗೆಯನ್ನು ಚೆನ್ನಾಗಿ ಬೇಯಿಸಬೇಕು. ಹೋಳಿಗೆಯನ್ನು ಬೇಯಿಸಿದ ನಂತರ ಅದನ್ನು ಸಂಪೂರ್ಣ ತಣ್ಣಗಾಗಲು ಬಿಡಬೇಕು. ಹೋಳಿಗೆ ಬಿಸಿಯಿರುವಾಗ ಒಂದರ ಮೇಲೊಂದು ಇಡಬಾರದು. ಹೋಳಿಗೆಗಳು ತಣ್ಣಗಾದ ನಂತರ ಗಟ್ಟಿ ಮುಚ್ಚಳವಿರುವ ಡಬ್ಬಿಯಲ್ಲಿ ತುಂಬಿಡಬೇಕು. ಇಂತಹ ಹೋಳಿಗೆಗಳು ಸಾಧಾರಣ ೧ ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಉಳಿಯುತ್ತವೆ.

೧ ಅ ೫ ಆ ೩. ಖಾಕರಾ

ಜೋಳ ಮತ್ತು ಸೆಜ್ಜೆಯ ರೊಟ್ಟಿ

ಮೆಂತ್ಯೆ, ಜೀರಿಗೆ, ಮಸಾಲೆ (ಉದಾ. ಚಾಟ್ ಮಸಾಲಾ, ಗರಂ ಮಸಾಲಾ) ಮುಂತಾದ ಸ್ವಾದವುಳ್ಳ ಖಾಕರಾಗಳನ್ನು ತಯಾರಿಸಲು ಬರುತ್ತದೆ. ಇದಕ್ಕಾಗಿ ಗೋದಿಯ ಹಿಟ್ಟಿನಲ್ಲಿ ನಮಗೆ ಯಾವ ರುಚಿಯ ಖಾಕರಾಗಳನ್ನು ತಯಾರಿಸುವುದಿದೆಯೋ, ಆ ಪದಾರ್ಥಗಳನ್ನು ಹಾಕಿ ಹಿಟ್ಟನ್ನು ಗಟ್ಟಿಯಾಗಿ ಮಿದಿಯಬೇಕು. ಕಣಕವನ್ನು (ನಾದಿದ ಹಿಟ್ಟು) ಅತ್ಯಂತ ತೆಳುವಾಗಿ ಲಟ್ಟಿಸಬೇಕು. ಅದನ್ನು ತವೆಯ ಮೇಲೆ (ಹಂಚಿನ ಮೇಲೆ) ಬೇಯಿಸುವಾಗ ಸ್ವಚ್ಛವಾದ ಚಿಕ್ಕ ಬಟ್ಟೆಯಿಂದ ಪೂರ್ತಿ ಚಪಾತಿಯ ಮೇಲೆ ಒತ್ತಿ ಮಂದ ಉಷ್ಣತೆಯ ಮೇಲೆ ಬೇಯಿಸಬೇಕು. ಅದನ್ನು ಎಲ್ಲಿಯೂ ಉಬ್ಬಲು ಬಿಡಬಾರದು. ನಂತರ ಚಪಾತಿಯನ್ನು ಪೂರ್ಣ ತಣ್ಣಗಾಗಲು ಬಿಡಬೇಕು. ಖಾಕರಾ ತಣ್ಣಗಾದ ನಂತರ ಗಟ್ಟಿ ಮುಚ್ಚಳವಿರುವ ಡಬ್ಬದಲ್ಲಿ ತುಂಬಿಡಬೇಕು. ಇವು ಸಾಧಾರಣ ೩ ತಿಂಗಳು ಉಳಿಯುತ್ತವೆ.

೧ ಅ ೫ ಇ. ಗೋಧಿ ಹಿಟ್ಟಿನ ಮತ್ತು ಇತರ ಧಾನ್ಯಗಳ ಹಿಟ್ಟುಗಳ ಉಂಡೆಗಳು (ಲಾಡು)

ಗೋಧಿ ಹಿಟ್ಟಿನ ಉಂಡೆಗಳು

ಸಕ್ಕರೆಯ ಪುಡಿ ಅಥವಾ ಬೆಲ್ಲವನ್ನು ಹಾಕಿದ ಗೋಧಿಯ ಹಿಟ್ಟಿನ ಉಂಡೆಗಳು ೧ – ೨ ತಿಂಗಳು ಬಾಳುತ್ತವೆ. ರಾಗಿಯ ಹಿಟ್ಟು, ಕಡಲೆಹಿಟ್ಟು, ಹೆಸರುಬೇಳೆಯ ಹಿಟ್ಟು ಮುಂತಾದವುಗಳ ಉಂಡೆಗಳೂ ೧ – ೨ ತಿಂಗಳು ಬಾಳುತ್ತವೆ.

೧ ಅ ೫ ಈ. ಮಾವಿನ ಹೋಳಿಗೆ ಮತ್ತು ಹಲಸಿನ ಹೋಳಿಗೆ

ಹಲಸಿನ ಹೋಳಿಗೆ

ಇವುಗಳನ್ನು ಬಿರುಸಾದ ಬಿಸಿಲಿನಲ್ಲಿ ಒಣಗಿಸಬೇಕು. ಮಾವಿನ ಹೋಳಿಗೆಯ ಮೇಲೆ ಆವಶ್ಯಕವಿರುವಷ್ಟು ಬಿಸಿ ನೀರನ್ನು ಹಾಕಿ ಅದನ್ನು ಕರಗಿಸಿದರೆ ಮಾವಿನ ಶೀಕರಣೆಯಂತೆ ಚಪಾತಿಗೆ ಹಚ್ಚಿಕೊಂಡು ತಿನ್ನಬಹುದು. ಮಾವಿನ ಹೊಳಿಗೆ ಮತ್ತು ಹಲಸಿನ ಹೊಳಿಗೆ ಸಾಧಾರಣ ೧ ವರ್ಷ ಉಳಿಯುತ್ತವೆ.’

– (ಪೂ.) ವೈದ್ಯ ವಿನಯ ಭಾವೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಜನವರಿ ೨೦೨೦)

೧ ಅ ೫ ಉ. ಮಾವಿನ ಹಣ್ಣಿನ ರಸ

ಮಾವಿನ ಹಣ್ಣಿನ ರಸ

೧. ಮಾವಿನ ಹಣ್ಣಿನ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಆ ಮಿಶ್ರಣವನ್ನು ಪೂರ್ಣ ಒಣಗುವವರೆಗೆ ಬಿಸಿಲಿನಲ್ಲಿ ಇಡಬೇಕು. ಈ ರೀತಿ ಒಣಗಿದ ರಸವನ್ನು ತಂಪುಪೆಟ್ಟಿಗೆಯಲ್ಲಿ ಇಟ್ಟರೆ ಸಾಧಾರಣ ಒಂದೂವರೆಯಿಂದ ಎರಡು ವರ್ಷಗಳ ಕಾಲ ಉಳಿಯುತ್ತದೆ. ಮತ್ತು ತಂಪುಪೆಟ್ಟಿಗೆ ಹೊರಗಿಟ್ಟರೆ ಸಾಧಾರಣ ೧ ವರ್ಷ ಉಳಿಯುತ್ತದೆ.

೨. ಮಾವಿನ ಹಣ್ಣಿನ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಆ ಮಿಶ್ರಣವನ್ನು ‘ಗ್ಯಾಸ್’ ಮೇಲೆ ಅಥವಾ ಒಲೆಯ ಮೇಲೆ ಬೇಯಿಸಬೇಕು. ಈ ಬೇಯಿಸಿದ ರಸವನ್ನು ಶೀತಕಪಾಟಿನಲ್ಲಿಟ್ಟರೆ ಸಾಧಾರಣ ೧ ವರ್ಷ ಉಳಿಯುತ್ತದೆ. (ಶೀತಕಪಾಟಿನಲ್ಲಿಡದಿದ್ದರೆ ಅದಕ್ಕೆ ಬುರುಸು ಬರಬಹುದು.)

೧ ಅ ೫ ಊ. ಸಾಕರಾಂಬಾ, ಮಾವಿನಕಾಯಿಯ ಗುಳಂಬಾ

ಸಾಕರಾಂಬಾ

‘ಇವು ಸಕ್ಕರೆಯ ಅಥವಾ ಬೆಲ್ಲದ ಪಾಕದಲ್ಲಿನ ಪದಾರ್ಥಗಳಾಗಿವೆ. ಈ ಪದಾರ್ಥಗಳು ಚೆನ್ನಾಗಿ ಉಳಿಯಲು ಪಾಕವನ್ನು ಏರುಪಾಕ (ಪಕ್ಕಾ) ಮಾಡಬೇಕು. ಇದರಿಂದ ಪಾಕದಲ್ಲಿ ಸ್ವಲ್ಪವೂ ನೀರಿನ ಅಂಶ ಉಳಿಯುವುದಿಲ್ಲ ಮತ್ತು ಮಾಡಿದ ಪದಾರ್ಥವು ಹೆಚ್ಚು ಕಾಲ ಉಳಿಯುತ್ತದೆ. ಏರುಪಾಕವನ್ನು ಮಾಡುವುದರಿಂದ ಪದಾರ್ಥದಲ್ಲಿ ‘ಪ್ರಿಝರರ್ವೇಟಿವ್’ (ಪದಾರ್ಥಗಳು ಕೆಡಬಾರದೆಂದು ಹಾಕಬೇಕಾದ ರಾಸಾಯನಿಕ ಪದಾರ್ಥ)’ ಹಾಕಬೇಕಾಗುವುದಿಲ್ಲ.

೧ ಅ ೫ ಊ ೧. ಸಾಕರಾಂಬಾ

ಇದನ್ನು ಹಸಿ ಮಾವಿನಕಾಯಿಗಳಿಂದ ಅಥವಾ ಹಣ್ಣು ಮಾವಿನಕಾಯಿಗಳಿಂದ ತಯಾರಿಸಲಾಗುತ್ತದೆ. ಸಾಕರಾಂಬಾ ವರ್ಷವಿಡಿ ಸಹಜವಾಗಿ ತಾಳುತ್ತದೆ.

೧ ಅ ೫ ಊ ೨. ಮಾವಿನಕಾಯಿಯ ಛುಂದಾ (ಮಾವಿನ ಕಾಯಿಯನ್ನು ಹೆರೆದು ಅದರಲ್ಲಿ ಆವಶ್ಯಕತೆಗನುಸಾರ ಪದಾರ್ಥಗಳನ್ನು ಹಾಕಿ ತಯಾರಿಸಿದ ಮಿಶ್ರಣ)

ಮಾವಿನಕಾಯಿಯ ಛುಂದಾ ೧೫ ರಿಂದ ೨೦ ದಿನಗಳ ಕಾಲ ಕಡು ಬಿಸಿಲಿನಲ್ಲಿ ಇಡಬೇಕು. ಮಾವಿನ ಕಾಯಿಯ ಛುಂದಾ ಬಹಳ ವರ್ಷಗಳ ವರೆಗೆ ಉಳಿಯುತ್ತದೆ.

೧ ಅ ೫ ಊ ೩. ನೆಲ್ಲಿಕಾಯಿ, ಮಿಡಿ (ಉಪ್ಪಿನಕಾಯಿಗೆ ಬಳಸುವ ಚಿಕ್ಕ ಗಾತ್ರದ ಮಾವಿನಕಾಯಿ), ಸ್ಟ್ರಾಬೆರಿ, ಕಿತ್ತಲೆ ಹಣ್ಣು ಮುಂತಾದವುಗಳ ‘ಜೆಲಿ’ ಮತ್ತು ಜ್ಯಾಮ್’ ಸಾಧಾರಣ ೧ ವರ್ಷಗಳ ಕಾಲ ಉಳಿಯುತ್ತವೆ.’

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮಿರಜ. (ಫೆಬ್ರವರಿ ೨೦೧೯) (ಮುಂದುವರಿಯುವುದು)

(ಆಧಾರ : ಸನಾತನದ ಮುಂಬರುವ ಗ್ರಂಥಮಾಲಿಕೆ ‘ಆಪತ್ಕಾಲ ದಲ್ಲಿ ಜೀವರಕ್ಷಣೆಗಾಗಿ ಮಾಡಬೇಕಾದ ಪೂರ್ವಸಿದ್ಧತೆ’)

(ಪ್ರಸ್ತುತ ಲೇಖನಮಾಲೆಯ ಸರ್ವಾಧಿಕಾರವು (ಕ್ವಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿಯಿದೆ.)

(ಈ ಲೇಖನವನ್ನು www.sanatan.org ಈ ಜಾಲತಾಣದಲ್ಲಿ ಓದಿರಿ.)