ಅಖಿಲ ಮನುಕುಲವು ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ

ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ

ನೆರೆ, ಭೂಕಂಪ, ಮೂರನೆ ಮಹಾಯುದ್ಧ, ಕೊರೋನಾ ಮಹಾಮಾರಿಯಂತಹ ಸಂಕಟ ಮುಂತಾದ ಅಪತ್ಕಾಲದ ಸಮಯದಲ್ಲಿ ಬದುಕಿ ಉಳಿಯಲು ಮಾಡಬೇಕಾದ ಸಿದ್ಧತೆಗಳಿಗೆ ಸಂಬಂಧಿಸಿದ ಈ ಲೇಖನದ ಮೊದಲ ಭಾಗದಲ್ಲಿ ಒಲೆ, ಗೋಬರ್-ಗ್ಯಾಸ್ ಇತ್ಯಾದಿಗಳ ಮಾಹಿತಿಯನ್ನು ತಿಳಿದುಕೊಂಡೆವು. ಈಗ ಎರಡನೆಯ ಭಾಗದಲ್ಲಿ ನಾವು ಮುಖ್ಯವಾಗಿ ಸೊಪ್ಪು, ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಬೆಳೆಸುವ ಬಗ್ಗೆ ತಿಳಿದುಕೊಳ್ಳಲಿಕ್ಕಿದ್ದೇವೆ. ಆಪತ್ಕಾಲದಲ್ಲಿ ನಾವು ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಬಾರದೆಂದು ಮೊದಲೇ ದವಸ-ಧಾನ್ಯಗಳನ್ನು ಸಾಕಷ್ಟು ಖರೀದಿ ಮಾಡಿ ಇಡುವ ಅವಶ್ಯಕತೆಯಿದೆ. ದವಸ-ಧಾನ್ಯಗಳನ್ನು ಎಷ್ಟು ಸಂಗ್ರಹ ಮಾಡಿದರೂ ಅದು ಕ್ರಮೇಣ ಮುಗಿಯುತ್ತದೆ. ಅಂತಹ ಸಮಯದಲ್ಲಿ ಆಹಾರದ ಕೊರತೆಯಾಗಬಾರದೆಂದು ಅದರ ಪೂರ್ವಸಿದ್ಧತೆಯೆಂದು ಸಾಧ್ಯವಿದ್ದರೆ ದವಸ-ಧಾನ್ಯಗಳನ್ನು ಬೆಳೆಸುವ ಅವಶ್ಯಕತೆಯೂ ಇದೆ. ಭತ್ತ ಮತ್ತು ಇತರ ದವಸ-ಧಾನ್ಯಗಳನ್ನು ಬೆಳೆಸುವುದು ಎಲ್ಲರಿಗೂ ಸಾಧ್ಯವಿಲ್ಲ; ಆದರೆ ಗೆಡ್ಡೆಗೆಣಸುಗಳು, ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬರುವ ಹಾಗೂ ಹನ್ನೆರಡು ತಿಂಗಳು ಕೂಡ ಬೆಳೆಯುವ ತರಕಾರಿ, ಹಾಗೂ ಬಹುಉಪಯೋಗಿ ಹಣ್ಣುಹಂಪಲುಗಳನ್ನು ಮನೆಯ ಪರಿಸರದಲ್ಲಿ ಮತ್ತು ಟೆರೇಸ್‌ನಲ್ಲಿ ಬೆಳೆಸಬಹುದು. ಈ ಬೇಸಾಯಕ್ಕೆ ಬೇಕಾಗುವ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನೀಡಲಾಗಿದೆ.

ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡುವ ವಿವಿಧ ಸಿದ್ಧತೆ !

೧ ಅ ೩. ದವಸಧಾನ್ಯಗಳನ್ನು ಬೆಳೆಸುವುದು, ಗೋಪಾಲನೆ ಇತ್ಯಾದಿಗಳನ್ನು ಮಾಡಲು ಈಗಿನಿಂದಲೆ ಆರಂಭಿಸಬೇಕು

ನಾವು ದವಸಧಾನ್ಯಗಳನ್ನು ಎಷ್ಟು ಸಂಗ್ರಹಿಸಿದರೂ ಅದು ಕ್ರಮೇಣ ಮುಗಿಯುತ್ತದೆ. ಅಂತಹ ಸಮಯದಲ್ಲಿ ಉಪವಾಸ ಬೀಳದಂತೆ ಪೂರ್ವಸಿದ್ಧತೆಯೆಂದು ದವಸಧಾನ್ಯಗಳನ್ನು ಬೆಳೆಸುವುದು, ಗೋಪಾಲನೆ ಇತ್ಯಾದಿ ಮಾಡುವ ಅವಶ್ಯಕತೆಯಿದೆ.

೧ ಅ ೩ ಅ. ಭತ್ತ ಮತ್ತು ಇತರ ದವಸ-ಧಾನ್ಯಗಳನ್ನು ಬೆಳೆಸುವುದು : ಕೃಷಿಕರಲ್ಲದವರು ಈ ವಿಷಯದಲ್ಲಿ ತಿಳಿದಿರುವವರಿಂದ ಕಲಿತುಕೊಳ್ಳಬೇಕು.

೧ ಅ ೩ ಆ. ತರಕಾರಿ, ಗೆಡ್ಡೆ-ಗೆಣಸುಗಳು ಮತ್ತು ಹಣ್ಣುಹಂಪಲುಗಳನ್ನು ಬೆಳೆಸುವುದು : ಈ ವಿಷಯದಲ್ಲಿ ವಾಚಕರಿಗೆ ಪರಿಚಯವಾಗಬೇಕೆಂದು ಮುಂದೆ ಸಂಕ್ಷಿಪ್ತದಲ್ಲಿ ವಿವರಿಸಲಾಗಿದೆ. ‘ತರಕಾರಿ, ಹಣ್ಣು-ಹಂಪಲುಗಳನ್ನು ಪ್ರತ್ಯಕ್ಷ ಬೆಳೆಸುವುದು ಮತ್ತು ಜೋಪಾನ ಮಾಡುವುದು ಹೇಗೆ ?, ಎನ್ನುವ ವಿಷಯದಲ್ಲಿ ಸನಾತನದ ಗ್ರಂಥ ಶೀಘ್ರದಲ್ಲಿಯೆ ಪ್ರಸಿದ್ಧವಾಗಲಿದೆ.

೧ ಅ ೩ ಆ ೧. ತರಕಾರಿ, ಗೆಡ್ಡೆ-ಗೆಣಸುಗಳನ್ನು ಬೆಳೆಸುವುದರ ಆವಶ್ಯಕತೆ

ಅ. ದವಸ-ಧಾನ್ಯಗಳನ್ನು ಕೆಲವು ತಿಂಗಳು ಕುಟುಂಬಕ್ಕೆ ಸಾಕಾಗುವಷ್ಟು ಸಂಗ್ರಹ ಮಾಡಬಹುದು; ಆದರೆ ಅದರ ತುಲನೆಯಲ್ಲಿ ತರಕಾರಿ, ಹಣ್ಣು ಹಂಪಲು ಇತ್ಯಾದಿಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ.

ಆ. ಆಪತ್ಕಾಲದಲ್ಲಿ ಆಹಾರದಲ್ಲಿ ತರಕಾರಿಗಳನ್ನು ಉಪಯೋಗಿಸಿದರೆ ಸಂಗ್ರಹಿಸಿದ ದವಸ-ಧಾನ್ಯಗಳನ್ನು ಹೆಚ್ಚು ಸಮಯ ಉಪಯೋಗಿಸಬಹುದು.

ಇ. ದವಸ-ಧಾನ್ಯಗಳ ಉತ್ಪಾದನೆ ಮಾಡಲು ದೊಡ್ಡ ಕೃಷಿಭೂಮಿ ಇರಬೇಕು. ಆದರೆ ತರಕಾರಿ, ಹಣ್ಣುಹಂಪಲುಗಳನ್ನು ಮನೆಯ ಟೆರೆಸ್ನಲ್ಲಿ ಮತ್ತು ಪರಿಸರದಲ್ಲಿಯೂ ಬೆಳೆಸಬಹುದು.

ಈ. ದವಸ-ಧಾನ್ಯಗಳ ತುಲನೆಯಲ್ಲಿ ಅನೇಕ ತರಕಾರಿಗಳು ಕಡಿಮೆ ಸಮಯದಲ್ಲಿ ಬೆಳೆಯುತ್ತವೆ.

ಉ. ಶರೀರಕ್ಕೆ ಬೇಕಾಗುವ ಘಟಕಗಳು, ಉದಾ. ಕೆಲವು ಜೀವಸತ್ತ್ವಗಳು, ಖನಿಜಗಳು, ನಾರಿನ ಅಂಶವಿರುವ (ಫೈಬರ್) ಪದಾರ್ಥಗಳು ಇವು ತರಕಾರಿಗಳು, ಗೆಡ್ಡೆ-ಗೆಣಸುಗಳು ಮತ್ತು ಹಣ್ಣುಹಂಪಲು ಇವುಗಳಿಂದ ನಮಗೆ ದೊರೆಯುತ್ತವೆ. ಆದುದರಿಂದ ಆಹಾರದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಗೆಡ್ಡೆ-ಗೆಣಸುಗಳು ಮತ್ತು ಹಣ್ಣುಹಂಪಲು ಇರಬೇಕು, ಎಂದು ಆಹಾರಶಾಸ್ತ್ರ ಹೇಳುತ್ತದೆ.

ಊ. ಪ್ರತಿದಿನ ಅನ್ನ-ಸಾರು, ರೊಟ್ಟಿ-ಚಪಾತಿಯ ಜೊತೆಗೆ ಹುಳಿ-ಸಾರುಗಳನ್ನೇ ಸೇವಿಸಿ ಬೇಸರ ಬಂದಿದ್ದರೆ ತರಕಾರಿಗಳಿಂದ ಅದು ದೂರವಾಗುತ್ತದೆ ಹಾಗೂ ತರಕಾರಿಯಿಂದ ಭೋಜನ ರುಚಿಕರವಾಗುತ್ತದೆ.

ಎ. ತರಕಾರಿಗಳು ಮತ್ತು ಹಣ್ಣುಗಳನ್ನು ಔಷಧವೆಂದು ಕೂಡ ಉಪಯೋಗಿಸಬಹುದು.

೧ ಅ ೩ ಆ ೨. ಆಪತ್ಕಾಲದ ದೃಷ್ಟಿಯಲ್ಲಿ ಯಾವ ತರಕಾರಿ, ಗೆಡ್ಡೆ ಗೆಣಸುಗಳು ಮತ್ತು ಹಣ್ಣುಗಳನ್ನು ಬೆಳೆಸುವುದು ಲಾಭದಾಯಕವಾಗುವುದು ?

‘ಆಪತ್ಕಾಲದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಬೆಳೆ ಬೆಳೆಸಲು ಪ್ರಯತ್ನಿಸಬೇಕು, ಎಂಬುದನ್ನು ಗಮನದಲ್ಲಿಟ್ಟು ಈ ಮುಂದಿನ ಬೆಳೆಗಳನ್ನು ಬೆಳೆಸುವುದು ಯೋಗ್ಯವಾಗಿದೆ – ಕೆಸವೊಂದನ್ನು ಬಿಟ್ಟು ಅನೇಕ ಸೊಪ್ಪುತರಕಾರಿಗಳು; ಚವಳಿಕಾಯಿ, ಎಲೆಕೋಸು, ಬಟಾಣಿ, ಹೂ ಕೋಸು, ಟೊಮೆಟೋ, ಬದನೆ, ಬೆಂಡೆಕಾಯಿ, ಮೆಣಸು, ಕುಂಬಳಕಾಯಿ ಮತ್ತು ಬಳ್ಳಿಗಳಲ್ಲಿ ಬೆಳೆಯುವ ಎಲ್ಲ ತರಕಾರಿಗಳು (ಉದಾ. ಅಲಸಂಡೆ, ತೊಂಡೆಕಾಯಿ); ಬಟಾಟೆ, ಬೀಟ್‌ರೂಟ್, ಕ್ಯಾರೆಟ್, ಮೂಲಂಗಿ, ಗೆಣಸು, ವಿದಾರಿಕಂದ, ಹೆಗ್ಗೆಣಸು ಇತ್ಯಾದಿ ಗೆಡ್ಡೆ-ಗೆಣಸುಗಳು; ಅನಾನಸ್, ಪಪ್ಪಾಯಿ, ಬಾಳೆಹಣ್ಣು, ಚಿಕ್ಕೂ ಮತ್ತು ದಾಳಿಂಬೆ ಇತ್ಯಾದಿ ಹಣ್ಣಿನ ಗಿಡಗಳು.

೧ ಅ ೩ ಆ ೩. ತರಕಾರಿಗಳನ್ನು, ಗೆಡ್ಡೆ-ಗೆಣಸುಗಳನ್ನು ಮತ್ತು ಹಣ್ಣುಹಂಪಲುಗಳನ್ನು ಯಾವಾಗ ಬೆಳೆಸಬೇಕು ?

ಹೆಚ್ಚಿನ ಸೊಪ್ಪು-ತರಕಾರಿಗಳು, ಬದನೆ, ಟೊಮೇಟೊ ಮತ್ತು ಬೆಂಡೆಕಾಯಿ ಈ ತರಕಾರಿಗಳನ್ನು ಯಾವಾಗ ಬೇಕಾದರೂ ಬೆಳೆಸಬಹುದು. ಬಳ್ಳಿಗಳಲ್ಲಿ (ಉದಾ. ತೊಂಡೆಕಾಯಿ) ಮತ್ತು ಚವಳಿಕಾಯಿಯಂತಹ ತರಕಾರಿಗಳನ್ನು ಮಳೆಗಾಲದ ಆರಂಭದಲ್ಲಿ ಅಥವಾ ಚಳಿಗಾಲದ ಕೊನೆಯಲ್ಲಿ ಬೆಳೆಸಬೇಕು. ಗೆಡ್ಡೆ-ಗೆಣಸುಗಳನ್ನು ಮತ್ತು ಹಣ್ಣುಗಳ ಗಿಡಗಳನ್ನು ಮಳೆಗಾಲ ಆರಂಭವಾದಾಗ ನೆಡಬೇಕು. – ಶ್ರೀ. ಅವಿನಾಶ ಜಾಧವ, ಸನಾತನ ಆಶ್ರಮ, ರಾಮನಾಥಿ ಗೋವಾ. (ಮಾರ್ಚ್ ೨೦೨೦)

೧ ಅ ೩ ಆ ೪. ಆಪತ್ಕಾಲದ ದೃಷ್ಟಿಯಲ್ಲಿ ಮನೆಯ ಬಾಲ್ಕನಿಯಲ್ಲಿ ಮತ್ತು ಟೆರೇಸ್‌ನಲ್ಲಿ ತರಕಾರಿಗಳನ್ನು ಬೆಳೆಸಲು ಮಣ್ಣಿನ ಕುಂಡಗಳಿಗಿಂತ ಬೇರೆ ಪರ್ಯಾಯಗಳನ್ನು ಅವಲಂಬಿಸುವ ಆವಶ್ಯಕತೆ

ಫ್ಲ್ಯಾಟ್‌ನ ಟೆರೆಸ್‌ನಲ್ಲಿ ತರಕಾರಿ ಮತ್ತು ಸೊಪ್ಪುಗಳನ್ನು ನೆಟ್ಟಿರುವುದು ಮನೆಯ ಪರಿಸರದಲ್ಲಿ ಪ್ಲಾಸ್ಟಿಕ್ ಬಕೇಟ್‌ನಲ್ಲಿ ತರಕಾರಿಯನ್ನು ನೆಡುವುದು ‘ಮಣ್ಣಿನ ಕುಂಡಗಳಲ್ಲಿ ಗಿಡಗಳನ್ನು ನೆಡುವುದು ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಆದರ್ಶವಾಗಿದೆ; ಆದರೆ ಮಣ್ಣಿನ ಕುಂಡಗಳನ್ನು ಎತ್ತಿಡುವಾಗ ಒಡೆಯಬಹುದು. ಆಪತ್ಕಾಲದಲ್ಲಿ ಏನಾಗಬಹುದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಕುಂಡಗಳು ಒಡೆದು ಆಗುವ ಹಾನಿಯನ್ನು ತಡೆಯಲು ಈ ಅವಧಿಯಲ್ಲಿ ಮಣ್ಣಿನ ಕುಂಡಗಳಿಗಿಂತ ತಗಡಿನ ಪಿಪಾಯಿ, ಎಣ್ಣೆಯ ತಗಡಿನ ಡಬ್ಬಿಗಳು, ಪ್ಲಾಸ್ಟಿಕ ಗೋಣಿಚೀಲಗಳು, ಚೀಲಗಳು, ಡಬ್ಬಿ ಅಥವಾ ಪಿಪಾಯಿ ಇತ್ಯಾದಿ ಪರ್ಯಾಯಗಳನ್ನು ಉಪಯೋಗಿಸುವುದು ಬಹಳ ಒಳ್ಳೆಯದು. ಈ ಪರ್ಯಾಯಗಳಿಂದ ಹೆಚ್ಚಿನ ನೀರು ಹರಿದು ಹೋಗಲು ಅದರ ಬುಡದಿಂದ ಅರ್ಧ ಇಂಚು ಎತ್ತರದ ಮೇಲೆ ೨-೩ ತೂತುಗಳನ್ನು ಮಾಡಬೇಕು. ಬುಡದಲ್ಲಿ ತೂತು ಮಾಡಿದರೆ ಗಿಡಗಳ ಬೇರುಗಳು ನೆಲದಲ್ಲಿ ಹೋಗುವ ಸಾಧ್ಯತೆ ಅಧಿಕವಿರುತ್ತದೆ, ಆದ್ದರಿಂದ ಬುಡದಲ್ಲಿ ತೂತುಗಳನ್ನು ಮಾಡಬಾರದು – ಶ್ರೀ. ಮಾಧವ ರಾಮಚಂದ್ರ ಪರಾಡ್ಕರ್, ಡಿಚೋಲಿ, ಗೋವಾ. (೨೮.೫.೨೦೨೦)

 ೧ ಅ ೩ ಆ ೫. ಮನೆಯ ಬಾಲ್ಕನಿಯಲ್ಲಿ ಬೆಳೆಸುವ ತರಕಾರಿಗಳು

‘ಬಾಲ್ಕನಿಯಲ್ಲಿ ದಿನದ ೩ – ೪ ಗಂಟೆ ಸೂರ್ಯಪ್ರಕಾಶ ಬರುತ್ತಿದ್ದಲ್ಲಿ, ಅಲ್ಲಿ ಬದನೆ, ಟೊಮೆಟೊ, ಮೆಣಸು, ಕೊತ್ತಂಬರಿ ಇತ್ಯಾದಿ ಬೆಳೆಸಬಹುದು. ಹೆಚ್ಚು ಸೂರ್ಯಪ್ರಕಾಶ ಇಲ್ಲದ್ದರೆ ಶುಂಠಿ ಬೆಳೆಸಬಹುದು.

೧ ಅ ೩ ಆ ೬. ಮನೆಯ ಟೆರೆಸ್‌ನಲ್ಲಿ ಬೆಳೆಸುವ ತರಕಾರಿಗಳು, ಗೆಡ್ಡೆ ಗೆಣಸುಗಳು ಮತ್ತು ಹಣ್ಣುಗಳು

ಮನೆಯ ಬಾಲ್ಕನಿಯಲ್ಲಿ ಬೆಳೆಸುವ ತರಕಾರಿಗಳು; ಹೆಚ್ಚಿನ ಸೊಪ್ಪು ತರಕಾರಿ; ‘ಹೂಕೋಸು, ಎಲೆಕೋಸು, ಗೋರಿಕಾಯಿ, ಬೆಂಡೆಕಾಯಿ ಇತ್ಯಾದಿ ತರಕಾರಿಗಳು; ತೊಂಡೆಕಾಯಿ ಯಂತಹ ಬಳ್ಳಿಯಲ್ಲಿ ಬೆಳೆಯುವ ತರಕಾರಿಗಳು; ಬಟಾಟೆ, ಮೂಲಂಗಿ, ಬೀಟ್ರೋಟ್ ಮತ್ತು ಕ್ಯಾರೆಟ್‌ನಂತಹ ಗೆಡ್ಡೆಗಳಿಗೆ ಸಂಬಂಧಿಸಿದ ತರಕಾರಿಗಳು ಹಾಗೂ ಅನಾನಸ್.

೧ ಅ ೩ ಆ ೭. ಮನೆಯ ಪರಿಸರದಲ್ಲಿ ಬೆಳೆಸುವ ತರಕಾರಿಗಳು ಮತ್ತು ಗೆಡ್ಡೆ-ಗೆಣಸುಗಳು

ಮನೆಯ ಬಾಲ್ಕನಿಯಲ್ಲಿ ಮತ್ತು ಮನೆಯ ಟೆರೆಸ್‌ನಲ್ಲಿ ಬೆಳೆಸ ಬಹುದಾದ ತರಕಾರಿಗಳು;  ಅಲಸಂಡೆ ಮುಂತಾದ ಬಳ್ಳಿಗಳಲ್ಲಿ ಬೆಳೆಯುವ ತರಕಾರಿ; ಅದೇ ರೀತಿ ಗೆಣಸು ಇತ್ಯಾದಿ ಗೆಡ್ಡೆಗಳು.

೧ ಅ ೩ ಆ ೮. ಮನೆಯ ಪರಿಸರದಲ್ಲಿ ಬೆಳೆಸುವ ಹಣ್ಣುಹಂಪಲುಗಳು

ನಿಂಬೆಹಣ್ಣು, ಬಾಳೆ, ಪೇರಲೆ, ಚಿಕ್ಕು, ಪಪ್ಪಾಯಿ, ಅನಾನಸ್, ಸೀತಾಫಲ ಮತ್ತು ಅಂಜೂರ – ಶ್ರೀ. ಅವಿನಾಶ ಜಾಧವ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಮಾರ್ಚ್ ೨೦೨೦)

೧ ಅ ೩ ಇ. ಹಸು ಮತ್ತು ಎತ್ತುಗಳನ್ನು ಸಾಕುವುದು

ಹಾಲು, ಗೋಮೂತ್ರ, ಸೆಗಣಿ ಬೆರಣಿ ಇತ್ಯಾದಿಗಳಿಗಾಗಿ ಹಸುಗಳನ್ನು ಮತ್ತು ಬೇಸಾಯ, ಎತ್ತಿನಗಾಡಿ ಇತ್ಯಾದಿಗಳಿಗಾಗಿ ಎತ್ತುಗಳು ಉಪಯೋಗವಾಗುತ್ತವೆ. ಹಸು ಮತ್ತು ಎತ್ತುಗಳನ್ನು ಸಾಕುವುದು, ಹಸುವಿನ ಹಾಲು ಕರೆಯುವುದು, ಈ ಜಾನುವಾರುಗಳಿಗೆ ಕಾಯಿಲೆ ಬಂದರೆ ಅವುಗಳಿಗೆ ಉಪಚಾರ ಮಾಡುವುದು ಇತ್ಯಾದಿಗಳ ವಿಷಯದಲ್ಲಿ ತಿಳಿದವರಿಂದ ಕಲಿತುಕೊಳ್ಳಬೇಕು.

೧ ಅ ೪. ಮಳೆಗಾಲದಲ್ಲಿ ತನ್ನಿಂತಾನೆ ಬೆಳೆಯುವ ಸೊಪ್ಪುತರಕಾರಿಗಳನ್ನು ಭೋಜನಕ್ಕಾಗಿ ಈಗಿಂದಲೆ ಉಪಯೋಗಿಸಲು ಆರಂಭಿಸುವುದು ಚೊಗಚೆ, ಗಂಟುಭಾರಂಗಿ, ಅಣ್ಣೆಸೊಪ್ಪು, ಉತ್ತರಾಣಿ ಇತ್ಯಾದಿ ತುಂಬಾ ಸೊಪ್ಪು ತರಕಾರಿಗಳನ್ನು ಉಪಯೋಗಿಸಬಹುದು. ತಾನಾಗಿ ಬೆಳೆಯುವ ಸೊಪ್ಪುಗಳ ಬಗ್ಗೆ ಗೊತ್ತಿಲ್ಲದಿದ್ದರೆ, ತಿಳಿದವರಿಂದ ಕೇಳಿ ತಿಳಿದುಕೊಳ್ಳಬಹುದು. ಕೊಲ್ಹಾಪುರದಲ್ಲಿನ ‘ನಿಸರ್ಗ ಮಿತ್ರ (ಸಂಪರ್ಕ : 9423858711)

ಈ ಸಂಸ್ಥೆ ‘ಔಷಧ ರಾನಭಾಜಿ ಎಂಬ ಹೆಸರಿನ ಗ್ರಂಥವನ್ನು ಪ್ರಕಾಶನ ಮಾಡಿದೆ. ಅದರಲ್ಲಿ ೬೧ ಪ್ರಕಾರದ ಔಷಧ ಸೊಪ್ಪುಗಳ ಮತ್ತು ಆಹಾರದಲ್ಲಿನ ಉಪಯೋಗಿಸುವ ಛಾಯಾಚಿತ್ರ ಸಹಿತ ಕೊಡಲಾಗಿದೆ. (ಮುಂದುವರಿಯುವುದು)

(ಆಧಾರ : ಸನಾತನದ ಮುಂಬರುವ ಗ್ರಂಥಮಾಲಿಕೆ ‘ಆಪತ್ಕಾಲದಲ್ಲಿ ಜೀವರಕ್ಷಣೆಗಾಗಿ ಮಾಡುವ ಪೂರ್ವಸಿದ್ಧತೆ)

ಪ್ರಸ್ತುತ ಲೇಖನಮಾಲೆಯ ಸರ್ವಾಧಿಕಾರ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಕಡೆಗೆ ಸಂರಕ್ಷಿತವಿದೆ.

ಪ್ರಸ್ತುತ ಲೇಖನವು ಸನಾತನ ಸಂಸ್ಥೆಯ ಸಂಕೇತಸ್ಥಳದಲ್ಲಿ https://www.sanatan.org/mr/world-war-preparation-and-survival-2 ಈ ಸಂಪರ್ಕ ಕೊಂಡಿಯಲ್ಲಿ ಲಭ್ಯವಿದೆ. ಅಲ್ಲಿ ಲೇಖನದ ಕೊನೆಯಲ್ಲಿ ಪ್ರಸ್ತುತ ಪಡಿಸಿದ ಲೇಖನದಲ್ಲಿನ ಅಂಶ ‘೧ ಅ ೩ ಆ. ತರಕಾರಿಗಳು, ಗೆಡ್ಡೆ ಗೆಣಸು ವರ್ಗದ ತರಕಾರಿಗಳು ಹಾಗೂ ಹಣ್ಣುಗಳ ಗಿಡಗಳು ಇವುಗಳ ತೋಟಗಾರಿಕೆ ಮಾಡುವುದು’ ಹಾಗೂ ಅಂಶ ‘೧ ಅ ೪. ಭೋಜನದಲ್ಲಿ ಅಡವಿ ತರಕಾರಿಗಳ (ಮಳೆಗಾಲದಲ್ಲಿ ತನ್ನಿಂದತಾನೆ ಅಂಕುರಿಸಿ ಹುಟ್ಟುವ ತರಕಾರಿಗಳ) ಉಪಯೋಗವನ್ನು ಇಂದಿನಿಂದಲೇ ಆರಂಭಿಸುವುದು’ ಇವುಗಳ ಸಂದರ್ಭದಲ್ಲಿ ಮಾಹಿತಿಜಾಲದಲ್ಲಿನ (ಇಂಟರನೆಟ್‌ನಲ್ಲಿ) ಕೆಲವು ಉಪಯುಕ್ತ ಸಂಪರ್ಕ ಕೊಂಡಿಯನ್ನು ಕೊಡಲಾಗಿದೆ. ಈ ಕೊಂಡಿಗಳಲ್ಲಿ ಈ ಅಂಶಗಳನ್ನು ಹೆಚ್ಚು ವಿಸ್ತಾರದಿಂದ ನೀಡಲಾಗಿರುವುದರಿಂದ ವಾಚಕರು ಸನಾತನ ಸಂಸ್ಥೆಯ ಸಂಕೇತಸ್ಥಳಕ್ಕೆ ಹೋಗಿ ಪ್ರಸ್ತುತ ಲೇಖನದ ಕೊನೆಯಲ್ಲಿ ಕೊಡಲಾದ ಕೊಂಡಿಯನ್ನು ಅವಶ್ಯವಾಗಿ ನೋಡಬೇಕು