ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಚೀನಾದ ಜಗತ್ತಿನ ವಿರುದ್ಧದ ಜೈವಿಕ ಯುದ್ಧ !

ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ

ಕೊರೋನಾ ಅಥವಾ ಕೋವಿಡ್-೧೯ ಅಥವಾ ಚೀನಾದ ವಿಷಾಣುವಿನ ಮಾಹಾಮಾರಿಯಿಂದ ಜಗತ್ತು ತತ್ತರಿಸಿದೆ. ‘ಈ ವಿಷಾಣು (ವೈರಸ್) ಜಗತ್ತಿನಲ್ಲಿ ಹರಡುವುದರ ಹಿಂದೆ ಚೀನಾದ ಸಂಚಿದೆ, ಎಂದು ಅನೇಕ ಬಾರಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಹಾಗಾದರೆ ‘ಕೊರೋನಾ ವಿಷಾಣುವಿನ ಮೂಲಕ ಚೀನಾವು ಭಾರತ ಹಾಗೂ ಜಗತ್ತಿನ ಮೇಲೆ ಹೇರಿದ ಮೂರನೇ ಮಹಾಯುದ್ಧವಾಗಿದೆಯೇ ?, ‘ಇದಕ್ಕೆ ನಾವು ‘ಜೈವಿಕ ಯುದ್ಧವೆಂದು ಹೇಳಬಹುದೇ ?, ‘ಈ ಜೈವಿಕ ಯುದ್ಧದಿಂದ ಅಮೇರಿಕಾ ಹಾಗೂ ಯುರೋಪಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮೇಲೆ ಏನು ಪರಿಣಾಮವಾಗಿದೆ ?, ಇಂತಹ ಸ್ಥಿತಿಯಲ್ಲಿ ಭಾರತ ಏನು ಕಾಳಜಿಯನ್ನು ತೆಗೆದುಕೊಳ್ಳಬೇಕು. ಇಂತಹ ಅನೇಕ ಅಂಗಗಳ ಮೇಲೆ ಪ್ರಕಾಶ ಬೀರುವ (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ ಇವರ ಈ ಲೇಖನವನ್ನು ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ.

೧. ಕೊರೋನಾದ ಸೋಂಕು ಇದು ಚೀನಾವು ಜಗತ್ತಿನ ಮೇಲೆ ಹೇರಿದ ಮೂರನೇ ಮಹಾಯುದ್ಧ !

ಮೊದಲನೆಯ ಮತ್ತು ಎರಡನೆಯ ಮಹಾಯುದ್ಧದಿಂದ ಜಗತ್ತಿಗೆ ಎಷ್ಟು ಹಾನಿಯಾಗಿತ್ತೊ, ಅದಕ್ಕಿಂತ ಹೆಚ್ಚು ಹಾನಿ ಈ ಕೊರೋನಾದ ಹರಡುವಿಕೆಯಿಂದ ಆಗಿದೆ. ಆದ್ದರಿಂದ ಚೀನಾ ಆರಂಭಿಸಿದ ಈ ಯುದ್ಧಕ್ಕೆ ‘ಮೂರನೆಯ ಮಹಾಯುದ್ಧ ಎಂದು ಹೇಳಬಹುದು. ನಾವು ಇದಕ್ಕೆ ಆಂಗ್ಲ ಭಾಷೆಯಲ್ಲಿ ‘ಬಯೋಲಾಜಿಕಲ್ ವಾರ್ ಅಂದರೆ ‘ಜೈವಿಕ ಯುದ್ಧ ಎಂದು ಹೇಳುತ್ತೇವೆ. ಸ್ವಾತಂತ್ರ್ಯದ ನಂತರ ಭಾರತ ೧೯೪೭, ೧೯೬೨, ೧೯೬೫, ೧೯೭೧ ಮತ್ತು ೧೯೯೯ ರ ಕಾರ್ಗಿಲ್ ಯುದ್ಧವನ್ನು ಎದುರಿಸಿದೆ. ಪಾಕಿಸ್ತಾನ ಬೆಂಬಲಿತ ಉಗ್ರವಾದ ಮತ್ತು ಚೀನಾ ಬೆಂಬಲಿತ ಮಾವೋವಾದದೊಂದಿಗೂ ನಾವು ಹೋರಾಡುತ್ತಿದ್ದೇವೆ. ಇದರಿಂದಾಗಿರುವ ಎಲ್ಲ ಹಾನಿಯನ್ನು ಒಟ್ಟುಗೂಡಿಸಿದರೆ ಎಷ್ಟಾಗುವುದೋ, ಅದಕ್ಕಿಂತಲೂ ಹೆಚ್ಚು ಹಾನಿ ಈ ಜೈವಿಕ ಯುದ್ಧದಲ್ಲಿ ಆಗಿದೆ; ಆದ್ದರಿಂದ ಚೀನಾ ಆರಂಭಿಸಿರುವುದು ಜೈವಿಕ ಯುದ್ಧವೇ ಆಗಿದೆ ಎಂದು ಹೇಳಬೇಕು.

ಈ ಜೈವಿಕಾಸ್ತ್ರವು ಚೀನಾದ ವುಹಾನದಲ್ಲಿನ ಪ್ರಯೋಗಾಲಯದಲ್ಲಿ ಸಿದ್ಧವಾಗುತ್ತಿತ್ತೇ ? ಈ ಶಸ್ತ್ರವನ್ನು ಉದ್ದೇಶಪೂರ್ವಕ ಹೊರಗೆ ಬಿಡಲಾಗಿದೆಯೋ ಅಥವಾ ತಪ್ಪಿ ಹೊರಗೆ ಬಂದಿದೆ ? ಎಂಬುದರ ಬಗ್ಗೆ ಸದ್ಯ ವಿಶ್ಲೇಷಣೆ ನಡೆಯುತ್ತಿದೆ ಹಾಗೂ ಮುಂಬರುವ ಕೆಲವು ದಿನಗಳಲ್ಲಿ ಅದು ಸ್ಪಷ್ಟವಾಗಬಹುದು. ಒಂದು ವಿಷಯ ಮಾತ್ರ ಖಚಿತವಾಗಿದೆ, ಈ ಶಸ್ತ್ರವು ಚೀನಾದ ವುಹಾನ್‌ನಲ್ಲಿನ ಪ್ರಯೋಗಾಲಯದಿಂದಲೇ ಹೊರಗೆ ಬಂದಿದೆ ಮತ್ತು ಅಲ್ಲಿಂದ ಅದು ಪ್ರಾರಂಭದಲ್ಲಿ ಚೀನಾದಲ್ಲಿ ಮತ್ತು ನಂತರ ಜಗತ್ತಿನಲ್ಲಿ ಎಲ್ಲೆಡೆ ಹರಡಿದೆ. ಇಂತಹ ಜೈವಿಕಾಸ್ತ್ರಗಳ ಬಗ್ಗೆ ಯಾವುದಾದರು ದೇಶವು ಸಂಶೋಧನೆ ಮಾಡಬಹುದೇ ? ಅದರ ಉತ್ತರ ‘ಇಲ್ಲವೆಂದೇ ಹೇಳಬೇಕಾಗುತ್ತದೆ ! ನಾವು ಕೇವಲ ಔಷಧಗಳ ಬಗ್ಗೆ ಸಂಶೋಧನೆ ಮಾಡಬಹುದು; ಆದರೆ ಹೊಸ ಶಸ್ತ್ರಗಳ, ಅಣು ಶಸ್ತ್ರಗಳ, ಜೈವಿಕ ಆಥವಾ ರಾಸಾಯನಿಕ ಶಸ್ತ್ರಗಳ ನಿರ್ಮಾಣ ಮಾಡಲು ಸಂಯುಕ್ತ ರಾಷ್ಟ್ರದ ಬಂಧನವಿದೆ .

೨. ಜಗತ್ತಿನಾದ್ಯಂತದ ಪ್ರಸಾರಮಾಧ್ಯಮಗಳ ಜನಾಭಿಪ್ರಾಯ ಚೀನಾದ ವಿರುದ್ಧ !

ಕೊರೋನಾದ ವಿಷಾಣು ಚೀನಾದಲ್ಲಿ ಹರಡಿದೆ; ಆದರೆ ಈ ವಿಷಾಣು ವುಹಾನ್‌ಗೆ ಮಾತ್ರ ಸೀಮಿತವಾಗಿತ್ತು. ಅದು ಚೀನಾದಲ್ಲಿನ ಬೀಜಿಂಗ್, ಶಾಂಘೈ ಮುಂತಾದ ದೊಡ್ಡ ನಗರಗಳಿಗೆ ಹರಡಲಿಲ್ಲ. ವುಹಾನ್‌ನಲ್ಲಿನ ಈ ಹರಡುವಿಕೆಯನ್ನು ಕೆಲವೇ ದಿನಗಳಲ್ಲಿ ನಿಯಂತ್ರಿಸಲಾಯಿತು. ಈ ವಿಷಾಣು ಚೀನಾದಲ್ಲಿ ಹರಡಲಿಲ್ಲ; ಆದರೆ ಅದು ಯುರೋಪ್, ಅಮೇರಿಕಾ ಮುಂತಾದ ಚೀನಾದಿಂದ ಸಾವಿರಾರು ಕಿ.ಮೀ. ದೂರವಿರುವ ರಾಷ್ಟ್ರಗಳಲ್ಲಿ ಹರಡಿತು. ಈ ವಿಷಾಣು ಭಾರತದೊಂದಿಗೆ ಇಷ್ಟು ದೂರದ ದೇಶಗಳಿಗೆ ಹರಡಿತು, ಆದರೆ ಚೀನಾದ ಇತರ ಭಾಗಗಳಿಗೆ ಏಕೆ ಹರಡಲಿಲ್ಲ ? ಎಂಬುದರ ವಿಶ್ಲೇಷಣೆಯೂ ಆಗಬೇಕು.

ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್  ಟ್ರಂಪ್ ಇವರು ಮೇ ೧೪ ರಂದು ‘ಇದು ಚೀನಾವು ಆರಂಭಿಸಿದ ಜೈವಿಕ (ಬಯೋಲಾಜಿಕಲ್) ಯುದ್ಧವಾಗಿದ್ದು ನಾವು ಚೀನಾದೊಂದಿಗಿನ ಎಲ್ಲ ಸಂಬಂಧವನ್ನು ಸಂಪೂರ್ಣವಾಗಿ ಕಡಿದು ಹಾಕಬಹುದು. ಜಗತ್ತಿನಲ್ಲಿನ ಪ್ರಸಾರ ಮಾಧ್ಯಮಗಳನ್ನು ನೋಡಿದರೆ ಯುರೋಪ್ ಮತ್ತು ಅಮೇರಿಕಾದಲ್ಲಿನ ಪ್ರಸಾರಮಾಧ್ಯಮಗಳಲ್ಲಿನ ಜನಾಭಿಪ್ರಾಯವು ಚೀನಾದ ವಿರುದ್ಧವಿದೆ. ಅಷ್ಟೆ ಅಲ್ಲದೇ, ಏಶಿಯಾ ಖಂಡದಲ್ಲಿ ಈ ವಿಷಾಣು ಹರಡಿರುವ ದೇಶಗಳಲ್ಲಿನ ಸರಕಾರ, ಪ್ರಸಾರಮಾಧ್ಯಮಗಳು ಮತ್ತು ಜನಾಭಿಪ್ರಾಯವೂ ಚೀನಾದ ವಿರುದ್ಧವೇ ಇದೆ.

೩. ಚೀನಾದಿಂದ ಆತ್ಮಘಾತ ಮಾಡಿಕೊಂಡ ಇಟಲಿಯಿಂದ ಭಾರತ ಪಾಠ ಕಲಿಯಬೇಕು !

ಇಟಲಿಯಂತಹ ಪ್ರಗತಿಶೀಲ ದೇಶದಲ್ಲಿನ ವೈದ್ಯಕೀಯ ವ್ಯವಸ್ಥೆ ಅಥವಾ ಆರೋಗ್ಯ ಸೇವೆಯು ಅತ್ಯಂತ ಉತ್ತಮವಾಗಿದ್ದು ಜನರು ಕೂಡ ಸುಶಿಕ್ಷಿತರಾಗಿದ್ದಾರೆ. ಆದರೂ ಅಲ್ಲಿ ವಿಷಾಣು ಹೇಗೆ ಹರಡಿತು ? ಇಟಲಿ ಈ ಸಂಕಟದಿಂದ ಸಂಪೂರ್ಣ ಜರ್ಜರಿತವಾಗಿದೆ. ಅದರ ಆರ್ಥಿಕ ಸ್ಥಿತಿ ಸಂಪೂರ್ಣ ಕೆಟ್ಟು ಹೋಗಿದೆ. ಎರಡನೆಯ ಯುದ್ಧದಲ್ಲಿ ಅದಕ್ಕೆ ಎಷ್ಟು ಹಾನಿಯಾಗಿರಲಿಲ್ಲವೋ, ಅದಕ್ಕಿಂತಲೂ ಹೆಚ್ಚು ಹಾನಿ ಕೊರೋನಾದಿಂದಾಗಿದೆ. ಇದು ನಿರ್ದಿಷ್ಟವಾಗಿ ಹೇಗಾಯಿತು ? ಎಂಬುದನ್ನು ನಾವು ನೋಡಿದರೆ, ಭಾರತ ಇದರಿಂದ ಬಹಳಷ್ಟನ್ನು ಕಲಿಯಬಹುದು.

ಇಟಲಿಯಲ್ಲಿ ಕೆಲವು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದವು. ಅವು ಸಹಕಾರದ ಭಾವನೆಯಿಂದ ಚೀನಾಗೆ ಇಟಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವೇಶ ನೀಡಲಾರಂಭಿಸಿದವು. ನಂತರ ಚೀನಾ ಕ್ರಮೇಣ ಇಟಲಿಯ ಆರ್ಥವ್ಯವಸ್ಥೆ, ರಾಜಕೀಯ ಪಕ್ಷಗಳು, ಅದರ ಪ್ರಸಾರಮಾಧ್ಯಮಗಳಲ್ಲಿ ನುಸಳಲು ಪ್ರಾರಂಭಿಸಿತು. ಅಲ್ಲಿನ ತಥಾಕಥಿತ ವಿದ್ವಾಂಸರಿಗೆ ‘ಚೀನಾ ಒಂದು ಒಳ್ಳೆಯ ಮಿತ್ರವಾಗಿದೆ. ಅದಕ್ಕೆ ನಾವು ಆರ್ಥಿಕ ಸಹಾಯ ಮಾಡಿದರೆ ನಮ್ಮ ದೇಶಕ್ಕೆ ಲಾಭವಾಗಬಹುದು, ಎಂದು ಅನಿಸಿತು. ಆದರೆ ಎಲ್ಲವೂ ಇದರ ವಿರುದ್ಧವಾಯಿತು. ಚೀನಾ ಇಟಲಿಯಲ್ಲಿ ಅಕ್ರಮವಾಗಿ ನುಸುಳಿದ್ದರೂ ಅನೇಕ ಚೀನೀಯರು ಅಕ್ರಮವಾಗಿ ಇಟಲಿಯಲ್ಲಿ ನುಸುಳಿದರು. ಚೀನಿಯರು ಇಟಲಿಯ ಜನರಿಗಿಂತ ಹೆಚ್ಚು ಪ್ರಮಾಣದಲ್ಲಿ ಕೆಲಸ ಮಾಡುವವರಾಗಿರುವುದರಿಂದ ಅವರು ಕ್ರಮೇಣ ಅಲ್ಲಿನ ಉದ್ಯೋಗ ಕ್ಷೇತ್ರದಲ್ಲಿ ಪ್ರವೇಶ ಮಾಡಿದರು. ಅವರು ಅನೇಕ ಆರ್ಥಿಕ ವ್ಯವಹಾರಗಳನ್ನು ವಶಪಡಿಸಿಕೊಂಡರು (Takeover) ಹಾಗೂ ಕ್ರಮೇಣ ಇಟಲಿಯಲ್ಲಿನ ಅನೇಕ ಮಹತ್ವದ ಉದ್ಯೋಗ ಮತ್ತು‘ಬ್ರ್ಯಾಂಡ್ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಚೀನಾದ ವರ್ಚಸ್ಸು ಎಷ್ಟು ಹೆಚ್ಚಾಗುತ್ತಾ ಹೋಯಿತೆಂದರೆ, ಅದು ೨೦೧೯ ರಲ್ಲಿ ‘One Belt,One Road’ ಈ ಪ್ರಕಾರವನ್ನು ಆರಂಭಿಸಿತು. ಅದಕ್ಕನುಸಾರ ರಸ್ತೆಗಳು ಭೂಮಿಯ ಮೇಲಿರಲಿ ಅಥವಾ ಸಾಗರದಲ್ಲಿರಲಿ, ಅವು ಚೀನಾದ ಕಾರ್ಖಾನೆಗಳಿಂದ ಆರಂಭವಾಗುವವು ಹಾಗೂ ಇಟಲಿಯಲ್ಲಿ, ಯುರೋಪ್‌ನಲ್ಲಿ ಎಲ್ಲಿ ಮಾರುಕಟ್ಟೆಯಿದೆಯೊ, ಅಲ್ಲಿಯವರೆಗೆ ಹೋಗಿ ತಲಪುವವು. ಅರ್ಥಾತ ಈ ರಸ್ತೆಗಳ ಅತೀ ಹೆಚ್ಚು ಉಪಯೋಗ ಚೀನಾಗೆ ಆಗುವುದಿತ್ತು. ಇದರಲ್ಲಿ ಇಟಲಿ ಭಾಗವಹಿಸಿತು ಮತ್ತು ಚೀನಾದಿಂದ ಆಮದಾಗುವ ಚೀನಾದ ವಸ್ತುಗಳು ಇಟಲಿಯ ಬಂದರಿಗೆ ಬಂದು ಒಟ್ಟಾಗ ತೊಡಗಿದವು. ಅದರಿಂದ ಚೀನಾದ ನಾಗರಿಕರು ಇಟಲಿಗೆ ಬಂದುಹೋಗುವವರ ಸಂಖ್ಯೆ ಹೆಚ್ಚಾಯಿತು.ಆದ್ದರಿಂದ ಇಟಲಿಯಲ್ಲಿ ಕೊರೋನಾದ ವಿಷಾಣು ಹರಡಲು ಅನುಕೂಲವಾಯಿತು.

೪. ಜನರನ್ನು ಸಾವಿನ ದವಡೆಗೆ ತಳ್ಳುವ ಇಟಲಿಯ ‘ಚೀನಾ ಜನರನ್ನು ಆಲಂಗಿಸಿರಿ ಅಭಿಯಾನ !

ಕೆಲವು ತಿಂಗಳುಗಳ ಹಿಂದೆ ಚೀನಾದ ವುಹಾನ್‌ನಲ್ಲಿ ಕೊರೋನಾದ ಹರಡುವಿಕೆ ಆರಂಭವಾಯಿತು. ಆಗ ಇಟಲಿಯ ಒಂದು ನಗರದ ಮಹಾಪೌರರು ಈ ಸೋಂಕಿನ ಭೀತಿಗೆ ‘ಪಾಶ್ಚಾತ್ಯರ ಪ್ರಸಾರತಂತ್ರವೆಂದು ಹೀಯಾಳಿಸಿದರು. ಅವರು ‘ಚೀನಾ ಒಳ್ಳೆಯ ದೇಶವಾಗಿದೆ, ಎಂದು ಜಗತ್ತಿಗೆ ತೋರಿಸಲು ನಾವು ವುಹಾನ್‌ನಿಂದ ಇಟಲಿಗೆ ಬರುವ ನಾಗರಿಕರನ್ನು ಆಲಂಗಿಸೋಣ, ಎಂದು ಹೇಳಿದರು. ಈ ಅಭಿಯಾನಕ್ಕೆ ‘ಹಗ್ ದ ಚೈನೀಸ್ (ಚೀನೀ ಜನರನ್ನು ಆಲಂಗಿಸಿರಿ) ಎಂದು ಹೇಳಲಾಗುತ್ತದೆ. ಈ ಅಭಿಯಾನ ಇಟಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಆರಂಭವಾಯಿತು. ಅನಂತರ ವುಹಾನ್ ಮತ್ತು ಚೀನಾದಿಂದ ಇಟಲಿಗೆ ಬರುವ ಹಾಗೂ ಚೀನಾಗೆ ಹೋಗಿರುವ; ಆದರೆ ಹಿಂದಿರುಗಿ ಬಂದಿರುವ ಇಟಲಿಯ ನಾಗರಿಕರಿಂದ ಈ ವಿಷಾಣು ಅತೀ ವೇಗದಿಂದ ಹರಡಿತು. ಮುಂದೇನಾಯಿತು ? ಇಟಲಿಯ ಅರ್ಥವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯು ನೆಲಕ್ಕುರುಳಿತು. ಇದರ ಅನೇಕ ಧ್ವನಿಚಿತ್ರ ಸುರುಳಿಗಳು ಮತ್ತು ಲೇಖನಗಳು ಪ್ರಸಿದ್ಧವಾಗಿವೆ. ಅದರಿಂದ ಅವರ ಅವಸ್ಥೆ ಎಷ್ಟು ಭಯಾನಕವಾಗಿದೆ ಎಂಬುದು ನಮಗೆ ತಿಳಿಯುತ್ತದೆ.

೫. ಭಾರತಕ್ಕೆ ಇಟಲಿಯಿಂದ ಕಲಿಯುವಂತಹದ್ದು ತುಂಬಾ ಇದೆ !

ಇಟಲಿಯಲ್ಲಿ ಏನು ಘಟಿಸಿತೊ, ಅದಕ್ಕೆ ಪ್ರತ್ಯುತ್ತರ ನೀಡಲು ಅವರ ಸರಕಾರ ಸಮರ್ಥವಿದೆ; ಆದರೆ ‘ಅಂತಹ ಆರ್ಥಿಕ, ರಾಜಕೀಯ, ಮಾಧ್ಯಮಗಳಲ್ಲಿನ ನುಸುಳುವಿಕೆಯನ್ನು ಭಾರತದಲ್ಲಿಯೂ ಚೀನಾ ಮಾಡಬಹುದೇ ?, ‘ಚೀನಾ ನಮ್ಮ ‘ಸ್ಮಾಲ್ ಸ್ಕೇಲ್ ಸೆಕ್ಟರ್ (ಲಘು ಉದ್ಯೋಗ) ಮತ್ತು ‘ಮಿಡಲ್ ಸ್ಕೇಲ್ ಸೆಕ್ಟರ್ (ಮಧ್ಯಮ ಪ್ರಮಾಣದಲ್ಲಿನ ಉದ್ಯೋಗ)ಗಳನ್ನು ನಾಶ ಮಾಡಬಹುದೇ ?, ‘ಚೀನಾ ಪಾಕಿಸ್ತಾನದ ಸಹಾಯದಿಂದ ನಮಗೆ ತೊಂದರೆಗಳನ್ನು ಕೊಡಬಹುದೇ ? ಇಂತಹ ಅನೇಕ ಪ್ರಶ್ನೆಗಳಿವೆ. ಇದರ ಬಗ್ಗೆ ಭಾರತ ಜಾಗರೂಕವಾಗಿರುವುದರ ಆವಶ್ಯಕತೆಯಿದೆ. ಚೀನಾದ ಈ ನುಸುಳುವಿಕೆಯು ಕಾಲ್ಪನಿಕ ಕಥೆಯಲ್ಲ, ಇದು ಸತ್ಯವಾಗಿದೆ. ಕೆಲವು ವರ್ಷಗಳ ಹಿಂದೆ ‘ಯುನೈಟೆಡ್ ಸೋವಿಯತ್ ಸೋಶಾಲಿಸ್ಟ್ ರಿಪಬ್ಲಿಕ್ ಒಂದು ಬಲಿಷ್ಟ ಆಡಳಿತ ವ್ಯವಸ್ಥೆಯಾಗಿತ್ತು. ಅದು ೧೯೭೦ ಮತ್ತು ೧೯೮೦ ರಲ್ಲಿ ಭಾರತದ ವಿವಿಧ ಸಂಸ್ಥೆಗಳಲ್ಲಿ ನುಸುಳಲು ಪ್ರಯತ್ನ ಮಾಡಿತ್ತು. ರಶ್ಯಾದ ‘ಕೆಜಿಬಿ ಈ ಬೆಹುಗಾರಿಕಾ ಸಂಸ್ಥೆಯಲ್ಲಿ ಮಿಟ್ರೋವಿನ್ ಹೆಸರಿನ ಬೇಹುಗಾರನಿದ್ದನು. ಅನಂತರ ಅವನು ೧೯೯೩ ರಲ್ಲಿ ರಶ್ಯಾದಿಂದ ಓಡಿಹೋಗಿ ಯುರೋಪ್‌ನಲ್ಲಿ ನೆಲೆಸಿದನು. ಅವನು ‘ಮಿಟ್ರೋವೀನ ಆರ್ಚಿವ್ ಎನ್ನುವ ಒಂದು ಪುಸ್ತಕ ಬರೆದಿದ್ದಾನೆ. ಆ ಪುಸ್ತಕದಲ್ಲಿ ರಶ್ಯಾದ ‘ಕೆಜಿಬಿಯು ಹೇಗೆ ಆಯೋಜನೆಗಳನ್ನು ಮಾಡಿತ್ತು, ಎಂಬುದನ್ನು ಚೆನ್ನಾಗಿ ವಿವರಿಸಿದ್ದಾನೆ. ಈ ಪುಸ್ತಕದಲ್ಲಿಯೆ ಒಂದು ಕಡೆ ಅವನು ‘ಭಾರತದ ರಾಜಕೀಯ ಪಕ್ಷಗಳಲ್ಲಿ ಕೆಜಿಬಿ ಹೇಗೆ ನುಸುಳಿತು, ಇದರ ಬಗ್ಗೆಯೂ ಬರೆದಿದ್ದಾನೆ. ಇದರಲ್ಲಿ ಯಾರಿಗೆ ಎಷ್ಟು ಹಣವನ್ನು ಕೊಡಲಾಯಿತು, ಇದರ ಬಗ್ಗೆಯೂ ಹೆಸರುಗಳೊಂದಿಗೆ ಉಲ್ಲೇಖವಿದೆ. (ಈ ಪುಸ್ತಕ ಜಾಲತಾಣದಲ್ಲಿ ಉಪಲಬ್ದವಿದೆ) ಇದರ ಬಗ್ಗೆ ಭಾರತದ ಸಂಸತ್ತಿನಲ್ಲಿಯೂ ಚರ್ಚೆಯಾಗಿತ್ತು; ಆದರೆ ಮುಂದೇನೂ ಆಗಲಿಲ್ಲ. ಆದ್ದರಿಂದ ಚೀನಾದಿಂದ ಇಂತಹ ನುಸುಳುವಿಕೆಯ ಪ್ರಯತ್ನ ನಿಜವಾಗಿಯೂ ನಡೆಯುತ್ತಿದೆ. ಇದಕ್ಕೆ ನಾವು ಹೇಗೆ ಪ್ರತ್ಯುತ್ತರ ನೀಡುವೆವು, ಎಂಬುದನ್ನು ನೋಡುವುದು ಮಹತ್ವದ್ದಾಗಿದೆ.

೬. ಕೊರೋನಾದ ಕಾಲದಲ್ಲಿ ಚೀನಾದಂತಹ ದೇಶಗಳು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ನುಸುಳಬಾರದೆಂದು ಭಾರತ ಸರಕಾರ ಹೊರಡಿಸಿದ ಸುಗ್ರೀವಾಜ್ಞೆ ಪ್ರಶಂಸನೀಯವಾಗಿದೆ

ಕೆಲವು ದಿನಗಳ ಹಿಂದೆ ಮನೆಗಳಿಗೆ ಸಾಲ ಕೊಡುವ ನಮ್ಮ ‘ಎಚ್.ಡಿ.ಎಫ್.ಸಿ. ಬ್ಯಾಂಕ್‌ನ ‘ಶೇರ್ಗಳನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಲು ಚೀನಾ ಪ್ರಯತ್ನ ಮಾಡಿತ್ತು; ಚೀನಾದ ವಿಷಾಣುಗಳಿಂದಾಗಿ ಭಾರತದ ಶೇರ್ ಮಾರುಕಟ್ಟೆ ಬಹಳ ಕೆಳಗಿಳಿದಿದೆ. ಈ ಪರಿಸ್ಥಿತಿಯಲ್ಲಿ ಭಾರತ ಸರಕಾರ ಒಂದು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿತು. ‘ಕೊರೋನಾದ ಮಹಾಮಾರಿಯ ಕಾಲದಲ್ಲಿ ಶೇರ್ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿರುವಾಗ ನೆರೆಯ ದೇಶಗಳು ಭಾರತದಲ್ಲಿ ಹೂಡಿಕೆಯನ್ನು ಮಾಡಿ ಮತ್ತು ‘ಪ್ರೆಡೆಟರಿ ಕ್ರಮ ತೆಗೆದುಕೊಂಡು ಭಾರತೀಯ ಕಂಪನಿಗಳಲ್ಲಿನ ಶೇರ್‌ಗಳನ್ನು ಖರೀದಿಸಲು ಬರುವುದಿಲ್ಲ, ಎನ್ನುವ ಆದೇಶವನ್ನು ಹೊರಡಿಸಿತು. ಇದರಲ್ಲಿ ನೆರೆ ರಾಷ್ಟ್ರಗಳ ಸಮಾವೇಶವಿದೆ. ನಿಜ ನೋಡಿದರೆ ಚೀನಾದ ಹೂಡಿಕೆಯನ್ನು ಸ್ವಾಗತಿಸಬೇಕಿತ್ತು; ಆದರೆ ಇಂತಹ ಸಮಯದಲ್ಲಿ ಅಡ್ಡದಾರಿಯಿಂದ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ನುಸುಳುವ ಪ್ರಯತ್ನ ನಡೆಯಬಹುದು. ವಿಶೇಷವಾಗಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಇದು ನಿಲ್ಲಬೇಕು. ಇದು ಭಾರತ ಸರಕಾರದ ಅತ್ಯಂತ ಪ್ರಶಂಸನೀಯ ನಿರ್ಣಯವಾಗಿತ್ತು.

೭. ಭಾರತೀಯರು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು !

ಭಾರತ ಇನ್ನೊಂದು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿದೆ. ನಮ್ಮ ದೇಶದಲ್ಲಿ ಬೇಕಾದಷ್ಟು ಔಷಧಗಳಿವೆ. ನಾವು ಜಗತ್ತಿಗೆ ಔಷಧಗಳನ್ನು ಪೂರೈಸುತ್ತೇವೆ. ಅದರಿಂದಾಗಿ ಭಾರತಕ್ಕೆ ‘ಜಗತ್ತಿನ ಫಾರ್ಮಸಿ (ಔಷಧಾಲಯ) ಎಂದು ಹೇಳಲಾಗುತ್ತದೆ. ಕೊರೋನಾದ ಈ ಸಂಕಟಕಾಲವನ್ನು ನಾವು ಒಂದು ಅವಕಾಶವೆಂದು ರೂಪಾಂತರಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಅನೇಕ ಔಷಧಗಳನ್ನು ನಾವು ವಿವಿಧ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದೇವೆ. ನಮ್ಮ ಔಷಧ ಉದ್ಯೋಗವನ್ನು ಮುಂದೆ ತೆಗೆದುಕೊಂಡು ಹೋಗಲು ಇದು ಒಳ್ಳೆಯ ಅವಕಾಶವಾಗಿದೆ. ಅದಕ್ಕನುಸಾರ ಮಲೇರಿಯಾಗೆ ಬೇಕಾಗುವ, ಆದರೆ ಪ್ರಸ್ತುತ ಕೊರೋನಾ ಕಾಯಿಲೆಗೆ ಉಪಯೋಗಿಸುತ್ತಿರುವ ಔಷಧಗಳನ್ನು ನಾವು ಯುರೋಪ್‌ನಲ್ಲಿನ ಎಲ್ಲ ರಾಷ್ಟ್ರಗಳಿಗೆ ಪೂರೈಸಿದ್ದೇವೆ. ಸಂಕಟಗಳು ಬರುವವು; ಆದರೆ ಅವುಗಳನ್ನು ಅವಕಾಶಗಳಲ್ಲಿ ರೂಪಾಂತರಗೊಳಿಸುವುದು ಮಹತ್ವದ್ದಾಗಿದೆ. ನಮ್ಮ ದೇಶ ಇದನ್ನೇ ಮಾಡುತ್ತಿದೆ. ನಾವು ಇದರಲ್ಲಿ ಖಂಡಿತ ಕೈಜೋಡಿಸಬಹುದು. ಪ್ರಧಾನಮಂತ್ರಿಗಳು ಹೇಳಿರುವ ಹಾಗೆ ನಾವು ‘ಮೇಕ್ ಇನ್ ಇಂಡಿಯಾದ ಮೂಲಕ ಆತ್ಮನಿರ್ಭರವಾಗಲು ಪ್ರಯತ್ನಿಸುತ್ತಿದ್ದೇವೆ. ಭಾರತೀಯರು ಇದರ ಕಡೆಗೆ ಗಮನ ಹರಿಸಬೇಕು. ಅನೇಕ ಅನಾವಶ್ಯಕ ವಿಷಯಗಳು ಉದಾ. ಚೀನಾದ ಆಟಿಗೆಗಳು, ಪಟಾಕಿಗಳು, ಅಲಂಕಾರಿಕ ವಸ್ತುಗಳು ನಮಗೆ ಬೇಡ. ಇಂತಹ ವಸ್ತುಗಳನ್ನು ದೂರವಿಡಬೇಕು. ಸಾಧ್ಯವಿದ್ದಷ್ಟು ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಭಾರತೀಯರು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು. – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ

ಕೊರೋನಾದಿಂದಾಗಿರುವ ನಷ್ಟವನ್ನು ಭರಿಸಲು ಭಾರತ ಚೀನಾದ ಮೇಲೆ ಒತ್ತಡ ಹಾಕಬೇಕು !

ಎರಡನೆಯ ಮಹಾಯುದ್ಧದ ನಂತರ ಜರ್ಮನಿಯ ವಿರುದ್ಧ ‘ನುರಿಮಬರ್ಗ್ ಟ್ರಯಲ್ ಎನ್ನುವ ಒಂದು ಖಟ್ಲೆಯನ್ನು ನಡೆಸಲಾಗಿತ್ತು. ಅದರಲ್ಲಿ ‘ಜರ್ಮನಿಯು ಮಾನವತೆಯ ವಿರುದ್ಧ ಆರಂಭಿಸಿದ ಮಹಾಯುದ್ಧವಾಗಿತ್ತು ಹಾಗೂ ಅದರಿಂದ ಮಾನವತೆಗೆ ತುಂಬಾ ಹಾನಿಯಾಯಿತು, ಎಂದು ಹೇಳಲಾಗಿತ್ತು. ಈ ಖಟ್ಲೆಯು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯಿತು. ಆಗ ಜರ್ಮನಿಯಲ್ಲಿ ಯಾರ ನೇತೃತ್ವವಿತ್ತೊ, ಅವರಿಗೆ ಅಂತರರಾಷ್ಟ್ರೀಯ ಕಾನೂನಿಗನುಸಾರ ನ್ಯಾಯಾಲಯ ಶಿಕ್ಷೆ ನೀಡಿತು. ಇಂದು ಅಂತಹ ಖಟ್ಲೆಯ ಅವಶ್ಯಕತೆಯಿದೆಯೆ ? ಸಂಪೂರ್ಣ ಜಗತ್ತಿಗೆ ಆಗಿರುವ ಹಾನಿಯನ್ನು ಚೀನಾ ತುಂಬಿಸಬೇಕೆ ? ಸಂಕ್ಷಿಪ್ತದಲ್ಲಿ ಇದರ ಉತ್ತರವೇನೆಂದರೆ, ‘ಹೌದು ಖಂಡಿತವಾಗಿ ತುಂಬಿಸಿಕೊಡಬೇಕು ! ಭಾರತ ತನ್ನ ಮಿತ್ರ ದೇಶಗಳ ಮೂಲಕ ಈ ಹಾನಿಯನ್ನು ತುಂಬಿಸಿ ಕೊಡುವಂತೆ ಒತ್ತಡ ಹೇರಬೇಕು. ಚೀನಾ ಸಹಜವಾಗಿ ಹಾನಿಯನ್ನು ತುಂಬಿಸಲಿಕ್ಕಿಲ್ಲ. ಅದಕ್ಕಾಗಿ ನಮಗೆ ರಾಜಕೀಯ ತಂತ್ರಗಳೊಂದಿಗೆ ಇತರ ಎಲ್ಲ ತಂತ್ರಗಳನ್ನು ಉಪಯೋಗಿಸಬೇಕಾಗಬಹುದು