ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪೀಡಿತ ಹಿಂದೂಗಳನ್ನು ಭಾರತಕ್ಕೆ ಬರುವ ಪ್ರಕ್ರಿಯೆಯು ಸುಲಭವಾಗುವಂತೆ ಮಾಡುವುದು ಅಗತ್ಯವಿದೆ !

ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಜಾರಿಗೆ ತರುವ ಮೂಲಕ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಈ ಇಸ್ಲಾಮೀ ದೇಶದಲ್ಲಿಯ ಪೀಡಿತ ಅಲ್ಪಸಂಖ್ಯಾತ ಹಿಂದೂಗಳಿಗೆ ದೊಡ್ಡ ಭರವಸೆಯನ್ನು ನೀಡಿದೆ; ಆದರೆ ಭಾರತಕ್ಕೆ ಬರುವ ಪ್ರಕ್ರಿಯೆಯು ಇನ್ನೂ ಹಳೆಯದು ಮತ್ತು ದೋಷಪೂರಿತವಾಗಿದೆ, ಅದರಲ್ಲಿ ಸುಧಾರಣೆ ಮಾಡುವುದು ಅಗತ್ಯವಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಪಾಕಿಸ್ತಾನವನ್ನು ‘ರಿಯಾಸತ್-ಎ- ದೀನಾ’ ಅಂದರೆ ಕಾಫೀರಮುಕ್ತ ದೇಶವನ್ನು ಮಾಡುವ ಘೋಷಣೆ ಮಾಡಿ ಜಿಹಾದಿಗಳು ಮತ್ತು ಮತಾಂಧರ ಹಿಂದೂವಿರೋಧಿ ಚಟುವಟಿಕೆಗಳಿಗೆ ಮುಕ್ತಗೊಳಿಸಿದ್ದಾರೆ ಎಂದು ಪೀಡಿತ ಪಾಕಿಸ್ತಾನಿ ಹಿಂದೂಗಳಿಗಾಗಿ ಕಾರ್ಯ ಮಾಡುವ ಅಂತರರಾಷ್ಟ್ರೀಯ ಸಂಘಟನೆಯಾದ ‘ನಿಮಿತ್ತೇಕಂ ಇದರ ಅಧ್ಯಕ್ಷ ಶ್ರೀ. ಜಯ ಆಹುಜಾ ಹೇಳಿದ್ದಾರೆ.

’ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಳಿವಿನ ಅಂಚಿನಲ್ಲಿರುವ ಹಿಂದೂಗಳು’ ಈ ಕುರಿತು ಜೂನ್ ೨೬ ರಂದು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ವಿಶೇಷ ಆನ್‌ಲೈನ್ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಭಾರತ ಸೇವಾಶ್ರಮ ಸಂಘದ ಸ್ವಾಮಿ ಪ್ರದೀಪ್ತಾನಂದ ಮಹಾರಾಜ, ಹಿರಿಯ ಸಂಪಾದಕ ಶ್ರೀ. ಅಭಿಜಿತ ಮಜುಮದಾರ್, ಸ್ಥಳಾಂತರಗೊಂಡ ಪಾಕಿಸ್ತಾನಿ ಹಿಂದೂ ಶ್ರೀ. ಭಗಚಂದ ಭಿಲ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ಸಂಬೋಧಿಸಿದರು. ‘ಫೇಸ್‌ಬುಕ್ ಮತ್ತು ‘ಯೂ ಟ್ಯೂಬ್ ಮೂಲಕ ೪೫ ಸಾವಿರ ಜನರು ಕಾರ್ಯಕ್ರಮವನ್ನು ವೀಕ್ಷಿಸಿದರೆ, ೧ ಲಕ್ಷದ ೨೫ ಸಾವಿರ ಜನರ ವರೆಗೆ ತಲುಪಿದೆ.

ಬಾಂಗ್ಲಾದೇಶದಲ್ಲಿ ‘ಹಿಂದೂ ಮೈನಾರಿಟಿ ವಾಚ್’ ಸಂಸ್ಥಾಪಕ ಪೂ. ನ್ಯಾಯವಾದಿ ರವೀಂದ್ರ ಘೋಷ್ ಇವರು ತಮ್ಮ ಸಂದೇಶದಲ್ಲಿ, “ನಾವು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದೆವು; ಆದಾಗ್ಯೂ, ಅದೇ ಬಾಂಗ್ಲಾದೇಶವು ಸ್ವತಂತ್ರವಾದಾಗ ಜಾತ್ಯತೀತವಾಗಲಿಲ್ಲ, ಇಸ್ಲಾಮಿಕ್ ಆಯಿತು ಮತ್ತು ಹಿಂದೂ ಅಲ್ಪಸಂಖ್ಯಾತರು ದೌರ್ಜನ್ಯಗಳನ್ನು ಸಹಿಸಿಕೊಳ್ಳುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂದು ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಆಡಳಿತವು ಹಿಂದೂಗಳೊಂದಿಗೆ ತಾರತಮ್ಯ ಮಾಡುತ್ತಿದೆ ಮತ್ತು ಅವರೊಂದಿಗೆ ಕೀಳಾಗಿ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ಹಿರಿಯ ಪತ್ರಕರ್ತ ಶ್ರೀ. ಅಭಿಜಿತ್ ಮಜುಂದಾರ್‌ರವರು ಮಾತನಾಡುತ್ತಾ, “ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ಸಕ್ರಿಯವಾಗಿವೆ; ಆದರೆ ಬಾಂಗ್ಲಾದೇಶದಲ್ಲಿ ಇಲ್ಲ. ಆದ್ದರಿಂದ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಬಹಿರಂಗವಾಗುವುದಿಲ್ಲ. ಅಲ್ಲಿನ ಪೀಡಿತ ಹಿಂದೂಗಳ ಕರುಣಾಜನಕ ಕಥೆಗಳನ್ನು ಜಾಗತಿಕ ವೇದಿಕೆಯಲ್ಲಿ ಮಂಡಿಸಬೇಕು. ಈ ಮೂಲಕ ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ನಿರ್ಮಾಣವಾಗುತ್ತದೆ. ಇದಕ್ಕೆ ಶಿಸ್ತುಬದ್ಧ ಮತ್ತು ದೀರ್ಘಕಾಲೀನ ಮಾಹಿತಿ ಆಂದೋಲನ ಅಗತ್ಯವಿದೆ, ಎಂದಿದ್ದಾರೆ.

ಈ ಸಮಯದಲ್ಲಿ ಸ್ವಾಮಿ ಪ್ರದೀಪ್ತಾನಂದ ಮಹಾರಾಜರು ಮಾತನಾಡುತ್ತಾ, ‘ನೆಹರು ಹಾಗೂ ಗಾಂಧಿಯವರು ಭಾರತವನ್ನು ವಿಭಜನೆ ಮಾಡದಿರುವ ಬಗ್ಗೆ ಭರವಸೆಯನ್ನು ಕೊಟ್ಟಿದರೂ ಭಾರತ ವಿಭಜನೆ ಆಯಿತು; ಆದರೆ ನಾವು ಅದನ್ನು ಇತಿಹಾಸದಲ್ಲಿ ನೆನಪಿಟ್ಟುಕೊಳ್ಳಲಿಲ್ಲ. ಇಂದು ಬಾಂಗ್ಲಾದೇಶವಷ್ಟೇ ಅಲ್ಲ ಪ.ಬಂಗಾಲದಲ್ಲಿಯೂ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಈ ದೃಷ್ಟಿಯಿಂದ ಹಿಂದೂಗಳು ಸ್ವಂತದ ಹಾಗೂ ಧರ್ಮದ ರಕ್ಷಣೆಗಾಗಿ ಸದೃಢವಾಗುವುದು ಅಗತ್ಯವಿದೆ’ ಎಂದು ಹೇಳಿದರು.

ಇದೇ ಪ್ರಸಂಗದಲ್ಲಿ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮಾತನಾಡುತ್ತ, ‘ಹಿಂದೂ ಜನಜಾಗೃತಿ ಸಮಿತಿಯು ಈ ಎರಡೂ ದೇಶ ಗಳಲ್ಲಿಯ ಹಿಂದೂಗಳ ಮೇಲೆ ಆಗುವಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಿದೆ. ಇದರ ಬಗ್ಗೆ ಆಂದೋಲನವನ್ನೂ ಮಾಡಿದೆ. ಇದರ ಬಗ್ಗೆ ಇನ್ನಷ್ಟು ಹಿಂದೂ ಸಮಾಜದಲ್ಲಿ ಜಾಗೃತಿಯನ್ನು ನಿರ್ಮಿಸಿ ಅವರಿಗೆ ನ್ಯಾಯ ಒದಗಿಸಲು ಸಂಘಟಿತವಾಗಿ ಪ್ರಯತ್ನ ಮಾಡುವುದು ಅಗತ್ಯವಿದೆ ಎಂದು ಹೇಳಿದರು.

         ಪಾಕಿಸ್ತಾನದಿಂದ ೨೦೦೯ ರಲ್ಲಿ ನಿರಾಶ್ರಿತರಾಗಿ ಭಾರತಕ್ಕೆ ಬಂದಿದ್ದ ಶ್ರೀ. ಭಾಗಚಂದ ಭೀಲ್ ಇವರು ಮಾತನಾಡುತ್ತಾ, ‘ಪಾಕಿಸ್ತಾನದಲ್ಲಿ ಹಿಂದೂಗಳ ಧ್ವನಿ ಕ್ಷಿಣಿಸಿದೆ. ಹಿಂದೂಗಳಿಗೆ ಹೊಂದಿಕೊಂಡು ವಾಸಿಸಬೇಕಾಗುತ್ತಿದೆ. ಅಲ್ಲಿಯ ಸಂಪೂರ್ಣ ವ್ಯವಸ್ಥೆಯು ಹಿಂದೂವಿರೋಧಿಯಾಗಿದೆ. ಪಾಕಿಸ್ತಾನದ ಸದನದಲ್ಲಿ ಹಿಂದೂ ಕುಟುಂಬದ ಮೇಲಾಗಿರುವ ದೌರ್ಜನ್ಯದ ಬಗ್ಗೆ ಸ್ವಲ್ಪ ಪ್ರಮಾಣದಲ್ಲಿ ಧ್ವನಿ ಎತ್ತಿದರೆ ದುರ್ಬಲ ಹಿಂದೂ ಕುಟುಂಬದ ಅವಸ್ಥೆ ಇನ್ನೂ ದಯನೀಯವಾಗಿದೆ’ ಎಂದು ಹೇಳಿದರು. ಬಂಗಾಲದಲ್ಲಿ ‘ಟ್ರುಥ’ ಮಾಸಿಕ ಸಂಪಾದಕರು ಹಾಗೂ ‘ಶಾಸ್ತ್ರಧರ್ಮ ಸಭೆ’ಯ ಪೂ. ಶಿವನಾರಾಯಣ ಸೇನ್ ಇವರು ವಿಡಿಯೋ ಮೂಲಕ ತಮ್ಮ ವಿಚಾರವನ್ನು ಮಂಡಿಸಿದರು.