ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ! – ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ

ಚಂದ್ರಯಾನ 3 ರ ಯಶಸ್ಸಿನಿಂದ ಜಗತ್ತಿನಾದ್ಯಂತ ಭಾರತಕ್ಕೆ ಅಭಿನಂದನೆ !

ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ

ನವ ದೆಹಲಿ – ಭಾರತದ ಯಾನ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವುದರಿಂದ ಜಗತ್ತಿನಾದ್ಯಂತ ಭಾರತದ ಶ್ಲಾಘನೆ ಮತ್ತು ಅಭಿನಂದನೆ ಮಾಡಲಾಗುತ್ತಿದೆ. ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮಿರ್ ಪುತಿನ ಇವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಅಭಿನಂದನೆ ಸಲ್ಲಿಸಿದರು. ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಇದು ದೊಡ್ಡ ಯಶಸ್ಸಾಗಿದೆ’, ಎಂದು ಅವರು ಹೇಳಿದರು. ಅಮೇರಿಕಾದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್ ಇವರು, ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವುದಕ್ಕಾಗಿ ಭಾರತಕ್ಕೆ ಅಭಿನಂದನೆ, ಈ ಅಭಿಯಾನದಲ್ಲಿ ಸಹಭಾಗಿಯಾಗಿರುವ ಎಲ್ಲಾ ವಿಜ್ಞಾನಿ ಮತ್ತು ಇಂಜಿನಿಯರಗಳ ನಂಬಲಾಗಂತಹ ಕಾರ್ಯವಾಗಿದೆ. ಈ ಅಭಿಯಾನದಲ್ಲಿ ನಿಮ್ಮ ಜೊತೆ ಸಹಭಾಗಿಯಾಗಿರುವ ನಮಗೆ ಅಭಿಮಾನವಿದೆ ಎಂದು ಹೇಳಿದರು. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಕೂಡ ಭಾರತಕ್ಕೆ ಅಭಿನಂದನೆ ಸಲ್ಲಿಸಿದೆ. ನಾಸಾ, ‘ಚಂದ್ರನ ಮೇಲೆ ಯಶಸ್ವಿಯಾಗಿ ಯಾನ ಇಳಿಸುವ ನಾಲ್ಕನೆಯ ದೇಶ ಆಗಿರುವುದಕ್ಕೆ ಭಾರತಕ್ಕೆ ಅಭಿನಂದನೆ, ಈ ಅಭಿಯಾನದಲ್ಲಿ ಭಾರತದ ಜೊತೆ ಕೆಲಸ ಮಾಡಲು ನಮಗೆ ಬಹಳ ಆನಂದ ತಂದಿದೆ. ನಾಸಾದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋಗೆ) ಅಂತರ ಅಳೆಯುವ ಮತ್ತು ಸಂಪರ್ಕದಲ್ಲಿರುವ ಉಪಕರಣಗಳು ನೀಡಿದೆ.

೧. ಬ್ರಿಟನ್ ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಯು.ಕೆ.ಎಸ್.ಎ. ಯು, ಭಾರತ ಇತಿಹಾಸ ರಚಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಯಶಸ್ಸು ಪಡೆದಿರುವುದಕ್ಕಾಗಿ ಭಾರತಕ್ಕೆ ಅಭಿನಂದನೆ ಎಂದು ಹೇಳಿದೆ.

೨ . ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ, ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾನ ಇಳಿಸಿದೆ. ಇದರಿಂದ ಮಾನವ ಜಾತಿಗೆ ಚಂದ್ರನನ್ನು ಹೆಚ್ಚು ಒಳ್ಳೆಯ ರೀತಿಯಲ್ಲಿ ತಿಳಿಯಲು ಸಹಾಯವಾಗುತ್ತದೆ. ಈ ಯಶಸ್ಸಿಗಾಗಿ ಇಸ್ರೋಕ್ಕೆ ಅಭಿನಂದನೆ ಎಂದು ಬರೆದಿದೆ.

೩. ಇಸ್ರೇಲ್ ನ ಭಾರತದಲ್ಲಿನ ರಾಯಭಾರಿ ನಾವೊರ ಗೀಲನ್ ಇವರು, ಇಸ್ರೋ ಮತ್ತು ಭಾರತದ ಹಾರ್ದಿಕ ಅಭಿನಂದನೆ ತಿಳಿಸಿದ್ದಾರೆ. ಚಂದ್ರಯಾನ 3 ರ ಯಶಸ್ಸು ಅತುಲನಿಯವಾಗಿದೆ; ಕಾರಣ ಇಲ್ಲಿಯವರೆಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಬೇರೆ ಯಾವುದೇ ದೇಶ ತಲುಪಲು ಸಾಧ್ಯವಾಗಿರಲಿಲ್ಲ. ನಿಮ್ಮ ಈ ಯಶಸ್ಸು ನಮ್ಮೆಲ್ಲರಿಗೂ ಚಂದ್ರನ ದಕ್ಷಣ ದ್ರುವಕೆ ತಲುಪುಲು ಪ್ರೇರಣೆ ನೀಡುತ್ತದೆ, ಎಂದು ಹೇಳಿದರು.

೪. ನೇಪಾಳದ ವಿದೇಶಾಂಗ ಸಚಿವ ಎನ್ ಪಿ ಸೌದ ಇವರು, ಚಂದ್ರಯಾನ 3 ರ ಯಶಸ್ವಿ ಕಾರ್ಯಕ್ಕಾಗಿ ಭಾರತಕ್ಕೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಭಾರತೀಯ ಸ್ನೇಹಿತರಿಗಾಗಿ ಇದು ಕೇವಲ ರಾಷ್ಟ್ರೀಯ ಹೆಮ್ಮೆಯ ಕ್ಷಣ ಅಷ್ಟೇ ಅಲ್ಲದೆ, ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಒಂದು ಮೈಲುಗಲ್ಲಾಗಿದೆ. ಈ ಕಾರ್ಯ ನಮ್ಮ ಜೀವನ ಸುಧಾರಿಸಲು ಸಹಾಯ ಮಾಡುವುದು ಎಂದು ಹೇಳಿದರು.

೫. ಮಾಲದೀವದ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಇವರು, ಭಾರತ ಇತಿಹಾಸ ಸೃಷ್ಟಿಸಿದೆ. ನಾವು ಭಾರತದ ನೆರೆಯ ದೇಶದವರೆಂದು ನಮಗೆ ಹೆಮ್ಮೆ ಇದೆ. ಇದು ಸಂಪೂರ್ಣ ಮಾನವತೆಯ ಯಶಸ್ಸಾಗಿದೆ. ಬಾಹ್ಯಾಕಾಶ ಸಂಶೋಧನೆಗಾಗಿ ಎಲ್ಲಾ ಮಾರ್ಗಗಳು ತೆರೆದಿದೆ. ಇತಿಹಾಸ ರಚಿಸಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆ ಎಂದು ಹೇಳಿದ್ದಾರೆ.