ಅಭಿವ್ಯಕ್ತಿ ಸ್ವಾತಂತ್ರ್ಯದ ದಿಕ್ಕನ್ನು ಭಾರತವಿರೋಧಿ ಶಕ್ತಿಗಳು ನಿರ್ಧರಿಸಿವೆ ! – ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರ, ಸನಾತನ ಸಂಸ್ಥೆ

ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರ, ಸನಾತನ ಸಂಸ್ಥೆ

ರಾಮನಾಥಿ, ಜೂನ 22 (ವಾರ್ತೆ) – ಹಿಂದೂ ಧರ್ಮ ಅನೈತಿಕತೆಯನ್ನು ಅಧರ್ಮವೆಂದು ಪರಿಗಣಿಸುತ್ತದೆ. ವಿಶ್ವಕಲ್ಯಾಣದ ಭಾವನೆಯಿಂದ ಕಾರ್ಯ ಮಾಡುವುದು ಧರ್ಮವಾಗಿದೆ. ಯೋಗ್ಯ ಕೃತಿಯನ್ನು ಧರ್ಮವೆನ್ನಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಇತರರಿಗೆ ತೊಂದರೆ ಕೊಡುವುದು ಅಧರ್ಮವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮುಖ್ಯ ಅಡಚಣೆಯೇನೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯವೋ ಸ್ವೇಚ್ಛಾಚಾರವೋ? ಎನ್ನುವುದನ್ನು ಯಾರು ದೃಢಪಡಿಸುವರು? ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಯಾವುದು? ಎನ್ನುವುದನ್ನು ಭಾರತವಿರೋಧಿ ಶಕ್ತಿಯು ದಿಕ್ಕು ತಪ್ಪಿಸಲು ನಿರ್ಧರಿಸಿವೆ. ಇದರಲ್ಲಿ ಎಡಪಂಥಿಗಳು ಮುಂಚೂಣಿಯಲ್ಲಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅನಾವಶ್ಯಕ ಪ್ರಸಾರ ಮಾಡಲಾಗಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವು ಕಮ್ಯುನಿಸ್ಟ, ಎಡಪಂಥಿಯರು, ನಕ್ಸಲರು ಮುಂತಾದ ರಾಷ್ಟ್ರವಿರೋಧಿ ಶಕ್ತಿಗಳ ಪರವಾಗಿದೆ. ಸಂವಿಧಾನದ ಕಲಂ 19(1ಎ) ಅನುಸಾರ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ; ಆದರೆ 19(2) ಅನುಸಾರ ಭಾರತದ ಅಖಂಡತ್ವದ ದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಬಂಧಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಅನುಕೂಲಕರವಾಗುವಂತೆ ಉಪಯೋಗಿಸಲಾಗುತ್ತಿದೆ. ಶಬರಿಮಲಾ ದೇವಸ್ಥಾನದಲ್ಲಿ ಸ್ತ್ರೀಯರ ಪ್ರವೇಶಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಶಗಳನ್ನು ಉಪಸ್ಥಿತಗೊಳಿಸಲಾಗುತ್ತಿದೆ; ಆದರೆ ಇತರ ಧರ್ಮದವರ ವಿಷಯದಲ್ಲಿ ಈ ಅಭಿವ್ಯಕ್ತಿ ಸ್ವಾತಂತ್ರ್ಯದವರು ಬಾಯಿ ತೆರೆಯುವುದಿಲ್ಲ ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ ಚೇತನ ರಾಜಹಂಸ ಇವರು ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ 6ನೇ ದಿನದಂದು ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

(ಸೌಜನ್ಯ – Hindu Janajagruti Samiti)