ರಾಷ್ಟ್ರ ಮತ್ತು ಧರ್ಮಕ್ಕಾಗಿ ಸ್ವಾಮೀಜಿಯವರು ಮಾಡುತ್ತಿದ್ದ ಕಾರ್ಯಕ್ಕೆ ಸನಾತನ ಸಂಸ್ಥೆಯ ನಮನ !
೩೦ ನವೆಂಬರ್ ೨೦೨೦ ರಂದು ಸನಾತನ ಆಶ್ರಮದಲ್ಲಿ ಭೇಟಿಯಾದ ಸಮಯದಲ್ಲಿ ಚರ್ಚಿಸಿತ್ತಿರುವ ಡಾ. ಜಯಂತ ಬಾಳಾಜಿ ಆಠವಲೆ ಮತ್ತು ಪ.ಪೂ. ಸ್ವಾಮಿ ಗೋವಿಂದದೇವ ಗಿರಿ
ತಾವು ಹಿಂದೂ ಧರ್ಮದ ಪುನರ್ಸ್ಥಾಪನೆಗಾಗಿ ಜೀವನವನ್ನು ಸಮರ್ಪಿಸಿದ್ದೀರಿ. ತಮ್ಮ ದಿವ್ಯ ಕಾರ್ಯದಿಂದ ದೇಶ-ವಿದೇಶಗಳ ಸಾವಿರಾರು ಹಿಂದೂಗಳು ಸನಾತನ ಧರ್ಮದ ಬಗ್ಗೆ ಜಾಗೃತರಾಗಿದ್ದಾರೆ. ತೇಜಸ್ವಿ ಮಾತುಗಳು ಮತ್ತು ಭವ್ಯ ದಿವ್ಯವಾದ ವಾಣಿ, ಇವು ನಿಮ್ಮ ವೈಶಿಷ್ಟ್ಯವಾಗಿವೆ. ಸನಾತನ ಸಂಸ್ಥೆಯ ರಜತಮಹೋತ್ಸವದ ಅಂಗವಾಗಿ ತಮ್ಮ ಅಮೃತಮಹೋತ್ಸವದ ನಿಮಿತ್ತ ತಮ್ಮನ್ನು ಕೃತಜ್ಞತಾಪೂರ್ವಕ ಸನ್ಮಾನಿಸುವುದು, ಇದು ನಮಗಾಗಿ ಅಮೃತ ಘಳಿಗೆಯಾಗಿದೆ. ತಮ್ಮಿಂದಾಗುತ್ತಿರುವ ಜ್ಞಾನದಾನ ಅತುಲನೀಯ ಕಾರ್ಯವು ಸಂತ ಜ್ಞಾನೇಶ್ವರ ಮಹಾರಾಜರದ್ದೇ ಸ್ಮರಣೆಯನ್ನು ಮಾಡಿಸುತ್ತದೆ.
ತಾವು ತಮ್ಮ ಕೇವಲ ೧೫ ನೇ ವಯಸ್ಸಿನಲ್ಲಿ ಶ್ರೀಮದ್ಭಗವದ್ಗೀತೆಯ ಬಗ್ಗೆ ಮೊದಲನೇ ಪ್ರವಚನವನ್ನು ಮಾಡಿದ್ದೀರಿ ಮತ್ತು ತಾವು ಕೇವಲ ೧೭ ನೇ ವಯಸ್ಸಿನಲ್ಲಿಯೇ ಶ್ರೀಮದ್ ಭಾಗವತ ಕಥೆಯ ಶುಭಾರಂಭವನ್ನು ಮಾಡಿರುವಿರಿ. ಕಳೆದ ಅನೇಕ ದಶಮಾನಗಳಿಂದ ತಾವು ತಮ್ಮ ವಾಣಿಯಿಂದ ಹಿಂದೂಗಳಿಗೆ ರಾಮಾಯಣ, ಮಹಾಭಾರತ, ಭಾಗವತ, ಜ್ಞಾನೇಶ್ವರಿ, ದಾಸಬೋಧ ಮುಂತಾದವುಗಳಲ್ಲಿನ ಧರ್ಮಜ್ಞಾನದ ಅಮೃತಪಾನವನ್ನು ಮಾಡುತ್ತಿದ್ದೀರಿ.
ತಮ್ಮ ‘ಗೀತಾ ಪರಿವಾರ’ ಸಂಸ್ಥೆಯ ಮಾರ್ಗದರ್ಶನ ಕ್ಕನುಸಾರ ಅಮೇರಿಕ, ದುಬೈ, ಓಮಾನ್, ಆಸ್ಟ್ರೇಲಿಯಾ ಮುಂತಾದ ೧೦ ದೇಶಗಳ ಭಕ್ತರು ಭಗವದ್ಗೀತೆಯನ್ನು ಪಠಿಸುತ್ತಿದ್ದಾರೆ. ತಾವು ವೇದಗಳ ಪ್ರಸಾರಕ್ಕಾಗಿ ‘ಮಹರ್ಷಿ ವೇದವ್ಯಾಸ ಪ್ರತಿಷ್ಠಾನ’ದ ಮೂಲಕ ಆಸೇತುಹಿಮಾಲಯದ ವರೆಗೆ ೩೭ ವೇದವಿದ್ಯಾಲಯ ಗಳನ್ನು ಸ್ಥಾಪಿಸಿದ್ದೀರಿ. ‘ಶ್ರೀಕೃಷ್ಣ ಸೇವಾ ನಿಧಿ’ಯ ಅಂತರ್ಗತ ಶ್ರೇಷ್ಠ ಸಂತರ ಸಾಹಿತ್ಯಗಳನ್ನು ಪ್ರಕಟಿಸುವ ಮೂಲಕ ತಾವುಮನುಕುಲಕ್ಕಾಗಿ ಅಲೌಕಿಕ ಜ್ಞಾನದ ಭಂಡಾರವನ್ನು ಲಭ್ಯಗೊಳಿಸಿದ್ದೀರಿ. ರಾಮಜನ್ಮಭೂಮಿಯ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಇಂದು ತಾವು ಭವ್ಯದಿವ್ಯ ವಾಗಿರುವ ಶ್ರೀರಾಮ ಮಂದಿರದ ಕೋಶಾಧ್ಯಕ್ಷ ಪದವಿಯಲ್ಲಿ ವಿರಾಜಮಾನರಾಗಿರುವಿರಿ.
ತಾವು ಹಿಂದೂ ಧರ್ಮದ ಪುನರುಜ್ಜೀವನದ ಬ್ರಾಹ್ಮತೇಜ ಯುಕ್ತ ಕಾರ್ಯವನ್ನು ಮಾಡುತ್ತಿದ್ದೀರಿ, ಅದೇ ರೀತಿ ಧರ್ಮದ್ರೋಹಿಗಳನ್ನು ಖಂಡಿಸುವಾಗ ತಾವು ಕ್ಷಾತ್ರತೇಜವನ್ನು ವ್ಯಕ್ತಪಡಿಸುತ್ತೀರಿ. ‘ರಾಜ್ಯಾಡಳಿತವು ಹೇಗೆ ಧರ್ಮನಿಷ್ಠವಾಗಿರ ಬೇಕು ?’, ಈ ಬಗ್ಗೆ ತಮ್ಮ ಸ್ಪಷ್ಟ ಮಾತುಗಳು ಮುಂದಿನ ಅನೇಕ ಪೀಳಿಗೆಗಾಗಿ ಮಾರ್ಗದರ್ಶಕವಾಗಿರುತ್ತವೆ. ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಗಾಗಿ ವಿಪುಲ ಮತ್ತು ವೈವಿಧ್ಯಮಯ ಕಾರ್ಯಗಳ ಮೂಲಕ ತಾವು ಸನಾತನ ಧರ್ಮದ ಆಧಾರಸ್ಥಂಭವಾಗಿದ್ದೀರಿ.
ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಸಾಕಾರ ರೂಪವಾಗಿರುವ ಭಗವಾನ ಪರಶುರಾಮನ ಭೂಮಿಯಲ್ಲಿ ನೆರವೇರುತ್ತಿರುವ ಸನಾತನ ಸಂಸ್ಥೆಯ ರಜತಮಹೋತ್ಸವದ ಸಮಾರಂಭದಲ್ಲಿ ತಮ್ಮಂತಹ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದಿಂದ ತುಂಬಿದ ಋಷಿತುಲ್ಯ ವಿಭೂತಿಯ ಸನ್ಮಾನದ ಸುವರ್ಣಾವಕಾಶ ಸಿಕ್ಕಿರುವುದು ನಮ್ಮ ಪರಮ ಭಾಗ್ಯವಾಗಿದೆ. ರಾಷ್ಟ್ರ, ಧರ್ಮ ಮತ್ತು ಅಖಿಲ ಮನುಕುಲಕ್ಕಾಗಿ ತಾವು ಮಾಡುತ್ತಿರುವ ಕಾರ್ಯಕ್ಕಾಗಿ ನಾವು ನತಮಸ್ತಕರಾಗಿದ್ದೇವೆ.
– ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ (೩೦.೧೧.೨೦೨೪)