‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸದಾ ಜೊತೆಯಲ್ಲಿ ಇದ್ದಾರೆ’, ಎಂಬ ಭಾವವಿರುವ ಉಜಿರೆಯ ಸನಾತನದ ೧೩೦ ನೇ ಸಂತರಾದ ಪೂ. (ಶ್ರೀಮತಿ) ಕಮಲಮ್ಮ (ವಯಸ್ಸು ೮೧ ವರ್ಷ) !

ಪೂ. (ಶ್ರೀಮತಿ) ಕಮಲಮ್ಮ

ಪೂಜ್ಯ ಶ್ರೀಮತಿ ಕಮಲಮ್ಮ ಇವರು ನವಂಬರ ೧೮, ೨೦೨೪ ರಂದು ಸಂತ ಪದವಿಯಲ್ಲಿ ವಿರಾಜಮಾನರಾದರು ಎಂದು ಸನಾತನದ ೭೫ ನೇ ಸಂತರಾದ ಪೂಜ್ಯ ರಮಾನಂದ ಗೌಡ ಇವರು ಘೋಷಿಸಿದರು. ಅವರ ಗುಣವೈಶಿಷ್ಟ್ಯಗಳ ಬಗ್ಗೆ ಧರ್ಮಪ್ರಸಾರ ಸೇವಕಿ ಸೌ. ಮಂಜುಳಾ ಗೌಡ ಇವರಿಗೆ ಅರಿವಾದ ಅಂಶಗಳನ್ನು ಇಲ್ಲಿ ನೀಡಲಾಗಿದೆ

೧.  ಶ್ರೀಮತಿ ಕಮಲಮ್ಮ ಇವರಿಗೆ ಸನಾತನ ಸತ್ಸಂಗದಲ್ಲಿ ಮತ್ತು ‘ಶ್ರೀ ಗುರುದೇವ ದತ್ತ |’ ಈ ನಾಮಜಪಿಸಲು ಆರಂಭಿಸಿದ ನಂತರ ಮನಸ್ಸಿನ ಸ್ಥಿತಿಯಲ್ಲಾದ ಸುಧಾರಣೆ

‘ಶ್ರೀಮತಿ ಕಮಲಮ್ಮ ಇವರ ಆರಂಭಿಕ ಜೀವನದ ತುಂಬ ಕಷ್ಟಕರವಾಗಿತ್ತು. ಅವರು ಜೀವನದಲ್ಲಿ ತುಂಬ ಕಠಿಣ ಪ್ರಸಂಗಗಳನ್ನು ಅನುಭವಿಸಿದ್ದಾರೆ. ಬೀಡಿ ಕಟ್ಟುವ ಕೆಲಸವನ್ನು ಮಾಡಿ, ಅವರು ಮನೆ ನಡೆಸುತ್ತಿದ್ದರು. ‘ಪ್ರತಿ ದಿನವನ್ನು ಹೇಗೆ ಕಳೆಯುವುದು; ಎಂಬ ಚಿಂತೆ ಸತತವಾಗಿ ಅವರನ್ನು ಕಾಡುತ್ತಿತ್ತು.

ಸಾಧನೆಗೆ ಬರುವ ಮೊದಲು ಮನೆಯ ಅನೇಕ ಕಠಿಣ ಪ್ರಸಂಗಗಳಿಂದಾಗಿ ಅವರ ಮನಸ್ಸು ಅತ್ಯಂತ ವಿಚಲಿತವಾಗಿತ್ತು. ಆಗ ಅವರಿಗೆ ಒಂದು ಆಧ್ಯಾತ್ಮಿಕ ಸಂಪ್ರದಾಯದ ಪರಿಚಯವಾಯಿತು. ಆ ಸಂಪ್ರದಾಯದ ವ್ಯಕ್ತಿಯೊಬ್ಬರು ಅವರಿಗೆ ಸನಾತನದ ಸತ್ಸಂಗಕ್ಕೆ ಹೋಗಲು ಹೇಳಿದರು. ಅಂದಿನಿಂದ ಅವರು ಒಮ್ಮೆಯೂ ಸನಾತನದ ಸತ್ಸಂಗವನ್ನು ತಪ್ಪಿಸಲಿಲ್ಲ. ಸತ್ಸಂಗದಲ್ಲಿ ಹೇಳಿದ್ದನ್ನೆಲ್ಲ ಅವರು ಕೃತಿ ಮಾಡಲು ಪ್ರಯತ್ನಿಸಿದರು, ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಆರಂಭಿಸಿದ ನಂತರ ಅವರ ಮನಸ್ಸಿನ ಸ್ಥಿತಿ ತುಂಬ ಸುಧಾರಿಸಿತು.

ಸೌ. ಮಂಜುಳಾ ಗೌಡ

೨. ಶ್ರೀಮತಿ ಕಮಲಮ್ಮ ಇವರ ಗುಣವೈಶಿಷ್ಟ್ಯಗಳು

೨ ಅ. ಹಸನ್ಮುಖಿ ಮತ್ತು ಮುಗ್ಧ ಸ್ವಭಾವ : ಕಮಲಮ್ಮ ಸತತ ಹಸನ್ಮುಖಿಯಾಗಿರುತ್ತಾರೆ. ಅವರು ಚಿಕ್ಕ ಮಗುವಿನಂತೆ ತುಂಬ ಮುಗ್ಧಭಾವದವರಾಗಿದ್ದಾರೆ

೨ ಆ. ಸೇವೆಯ ತಳಮಳ : ಕಮಲಮ್ಮ ಇವರ ಮನಸ್ಸಿನಲ್ಲಿ ‘ಸಾಧನೆಯಿಂದ ತಮಗೆ ಲಾಭವಾದಂತೆ ಎಲ್ಲರಿಗೂ ಲಾಭವಾಗಬೇಕು’ ಎಂಬ ತಳಮಳವಿದೆ. ಹಾಗಾಗಿ ಅವರು ಪ್ರತಿಯೊಬ್ಬರಿಗೂ ಸಾಧನೆ ಮಾಡಲು ಹೇಳುತ್ತಾರೆ. ಅವರು ಇದು ವರೆಗೆ ‘ಪತ್ರಿಕೆಗೆ ಚಂದಾದಾರ ಮಾಡಿಸುವುದು, ಗ್ರಂಥ ಪ್ರದರ್ಶನ ಕಕ್ಷೆ ಏರ್ಪಡಿಸು ವುದು ಮತ್ತು ಪ್ರಸಾರ ಸೇವೆ’, ಇಂತಹ ಸೇವೆ ಮಾಡಿದ್ದಾರೆ.

೧. ಗುರುಪೂರ್ಣಿಮೆ ಹತ್ತಿರ ಬಂದಾಗ ಕಮಲಮ್ಮ ಇವರು ತಮ್ಮ ಕುಟುಂಬದವರು, ಪರಿಚಿತರು ಹಾಗೂ ಇತರ ವ್ಯಕ್ತಿಗಳಿಂದ ಅರ್ಪಣೆ ಪಡೆಯಲು ಪ್ರಯತ್ನಿಸುತ್ತಾರೆ.

೨. ಕಮಲಮ್ಮನವರು ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ತಳಮಳದಿಂದ ವಿತರಣೆ ಮಾಡುತ್ತಾರೆ. ‘ಆ ಉತ್ಪಾದನೆಗಳ ಚೈತನ್ಯ ಎಲ್ಲರ ವರೆಗೆ ತಲುಪಬೇಕು’, ಎಂದು ಅವರಿಗೆ ಅನಿಸುತ್ತದೆ, ಅದೇ ರೀತಿ ಸನಾತನದ ಗ್ರಂಥಗಳ ಮಹತ್ವವನ್ನು ಹೇಳಿ ಅವರು ಗ್ರಂಥವನ್ನು ಹೆಚ್ಚೆಚ್ಚು ಜನರ ವರೆಗೆ ತಲುಪಿಸುವ ದೃಷ್ಟಿಯಿಂದ ಪ್ರಯತ್ನಿಸುತ್ತಾರೆ.

೨ ಇ. ಭಾವ

೨ ಇ ೧. ‘ಸನಾತನದ ಸಾಧಕರೇ’ ನನ್ನ ಕುಟುಂಬ’, ಎಂದು ಭಾವವಿರುವುದು : ಕಮಲಮ್ಮರಿಗೆ ತಮ್ಮ ಕುಟುಂಬಕ್ಕಿಂತ ಸಾಧಕರ ಬಗ್ಗೆ ತುಂಬ ಪ್ರೇಮವೆನಿಸುತ್ತದೆ, ‘ಸನಾತನದ ಸಾಧಕ’ರೇ ನನ್ನ ಕುಟುಂಬವಾಗಿದೆ, ಎಂದು ಅವರ ಭಾವವಿದೆ. ಸಾಧಕರನ್ನು ನೋಡಿದಾಗ ಅವರಿಗೆ ಬಹಳ ಆನಂದವಾಗುತ್ತದೆ,

೨ ಇ ೨. ಪೂ. ರಮಾನಂದ ಗೌಡ ಇವರನ್ನು ನೋಡಿ ಭಾವ ಜಾಗೃತವಾಗುವುದು : ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ ಕೆಲವೊಮ್ಮೆ ಕಮಲಮ್ಮರನ್ನು ಭೇಟಿ ಯಾಗಲು ಅವರ ಮನೆಗೆ ಹೋಗುತ್ತಿದ್ದರು. ಆಗ ಅಜ್ಜಿಯವರ ಭಾವಜಾಗೃತಿಯಾಗುತ್ತಿತ್ತು ಮತ್ತು ಅವರಿಗೆ ಮಾತನಾಡಲು ಆಗುವುದೇ ಇಲ್ಲ. ಅವರಿಗಾಗಿ ‘ಏನು ಮಾಡಲಿ’ ಎಂದು ಅವರ ಸ್ಥಿತಿಯಾಗುತ್ತಿತ್ತು.

೨ ಇ ೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಸನಾತನ ಸಂಸ್ಥೆಯ ಬಗ್ಗೆ ಭಾವ

ಅ. ಸದ್ಯ ಕಮಲಮ್ಮನವರ ಶಾರೀರಿಕ ಸ್ಥಿತಿ ಕ್ಷೀಣಿಸಿದೆ, ‘ಅವರು ನಡೆಯುವಾಗ ಬೀಳಬಹುದು’, ಎಂಬ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಅವರು ಒಂದೆಡೆ ಸೇವೆಗಾಗಿ ಒಬ್ಬರೇ ಹೋಗುತ್ತಿದ್ದರು, ಆಗ ಅವರು ದಾರಿ ತಪ್ಪಿ ಒಂದು ಕೆರೆಯ ದಿಕ್ಕಿನತ್ತ ಹೋಗ ತೊಡಗಿದರು. ಅಷ್ಟರಲ್ಲಿ ಪರಿಚಿತ ವ್ಯಕ್ತಿಯೊಬ್ಬರು ಬಂದು ಅವರನ್ನು ಕರೆದರು. ಆಗ ‘ತಾವು ದಾರಿ ತಪ್ಪಿರುವುದು’ ಅವರಿಗೆ ತಿಳಿಯಿತು. ಅವರು ಇನ್ನಷ್ಟು ಮುಂದೆ ಹೆಜ್ಜೆ ಇಡುತ್ತಿದ್ದರೆ ಕೆರೆಯಲ್ಲಿ ಬೀಳುತ್ತಿದ್ದರು. ಈ ಪ್ರಸಂಗದ ನಂತರ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ನನ್ನನ್ನು ಕಾಪಾಡಿದರು. ಅವರು ಸದಾ ನನ್ನ ಜೊತೆಗಿರುತ್ತಾರೆ,’ ಎಂದು ಅವರು ಹೇಳಿದರು ಮತ್ತು ಅವರ ಭಾವಜಾಗೃತಿಯಾಗುತ್ತಿತ್ತು.

ಆ. ಒಮ್ಮೆ ಕಮಲಮ್ಮ ಸೇವೆಗಾಗಿ ಬಸ್‌ನಲ್ಲಿ ಹೋಗಲಿದ್ದರು. ಆ ಬಸ್‌ ಹತ್ತುವಾಗ ಆಕಸ್ಮಿಕವಾಗಿ ಬಸ್‌ ಮುಂದೆ ಚಲಿಸಿ ಅವರು ಕೆಳಗೆ ಬಿದ್ದರು, ಆಗ ಹತ್ತಿರದ ಜನರು ಸಹಾಯ ಮಾಡಲು ಧಾವಿಸಿದರು. ಆದರೆ ಅವರು ಸಹಜವಾಗಿ ಎದ್ದು ನಡೆಯತೊಡಗಿದರು. ಅವರಿಗೇನೂ ಆಗಿರಲಿಲ್ಲ. ಆಗಲೂ ‘ಪ.ಪೂ. ಗುರುದೇವರು ಸತತ ನನ್ನ ಜೊತೆಗಿರುತ್ತಾರೆ ಮತ್ತು ಅವರೇ ನನ್ನ ಕಾಳಜಿ ವಹಿಸುತ್ತಾರೆ’, ಎಂದು ಅವರು ಹೇಳಿದರು.

ಇ. ಸನಾತನ ಸಂಸ್ಥೆಯ ಬಗ್ಗೆ ಯಾರಾದರೂ ಕೆಟ್ಟದಾಗಿ ಹೇಳಿದರೆ ಅದು ಕಮಲಮ್ಮಗೆ ಇಷ್ಟವಾಗುವುದಿಲ್ಲ. ‘ನನ್ನ ಬಗ್ಗೆ ಏನಾದರೂ ಹೇಳಿದರೆ ತೊಂದರೆಯಿಲ್ಲ ಆದರೆ ‘ಸನಾತನ ಸಂಸ್ಥೆ ಮತ್ತು ಪ.ಪೂ. ಗುರುದೇವ’ ಇವರ ಬಗ್ಗೆ ಯಾರೂ ಏನೂ ಹೇಳಬಾರದು’, ಎಂದು ಅವರು ಹೇಳುತ್ತಾರೆ.

ಈ. ಕಮಲಮ್ಮನವರು ಸತತ ಮನಸ್ಸಿನಿಂದ ಗುರುದೇವರನ್ನು ಸ್ಮರಿಸುತ್ತಾರೆ ಮತ್ತು ಅವರು ಸತತ ಗುರುದೇವರೊಂದಿಗೆ ಮಾತನಾಡುತ್ತಿರುತ್ತಾರೆ. ‘ನನ್ನ ಜೀವನದಲ್ಲಿ ಪ.ಪೂ. ಗುರುದೇವರನ್ನು ಬಿಟ್ಟು ಬೇರಾರೂ ಇಲ್ಲ’, ಎಂದು ಅವರು ಹೇಳುತ್ತಿರುತ್ತಾರೆ.

೩. ಕಮಲಮ್ಮ ಇವರ ಮನೆಯ ಕೋಣೆಯಲ್ಲಾದ ಬದಲಾವಣೆ

ಒಮ್ಮೆ ಪೂ. ರಮಾನಂದ ಅಣ್ಣನವರು ಕಮಲಮ್ಮ ಇವರನ್ನು ಭೇಟಿಯಾಗಲು ಅವರ ಕೋಣೆಗೆ ಹೋಗಿದ್ದರು, ಆಗ ‘ಕೋಣೆಯ ವಾತಾವರಣ ತುಂಬ ಚೈತನ್ಯಮಯವಾಗಿದೆ ಕೋಣೆಯೇ ಬದಲಾಗಿದೆ’, ಎಂದು ಹೇಳಿದರು.’

– ಸೌ. ಮಂಜುಳಾ ರಮಾನಂದ ಗೌಡ, ಮಂಗಳೂರು (೭.೮.೨೦೨೪)

(‘ಈ ಬರವಣಿಗೆಯನ್ನು ಶ್ರೀಮತಿ ಕಮಲಮ್ಮ ಇವರು ಸಂತಪದವಿಯಲ್ಲಿ ವಿರಾಜಮಾನರಾಗುವ ಮೊದಲಿನದ್ದಾಗಿದೆ ಹಾಗಾಗಿ ಲೇಖನದಲ್ಲಿ ಕಮಲಮ್ಮ ಇವರ ಹೆಸರಿನ ಮುಂದೆ ‘ಪೂ.’ ಎಂದು ಹಾಕಿಲ್ಲ.’ – ಸಂಕಲನಕಾರರು)