ಸನಾತನ ಆಶ್ರಮ (ರಾಮನಾಥಿ, ಫೋಂಡಾ), ಗೋವಾ – ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು. ನವೆಂಬರ್ 30 ರಂದು ಮಧ್ಯಾಹ್ನ ಅವರು ಸನಾತನದ ಆಶ್ರಮಕ್ಕೆ ಭೇಟಿ ನೀಡಿದರು. ಈ ಮಂಗಲಮಯ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮದ ಮಾಜಿ ಸಮೂಹ ಸಂಪಾದಕ ಪೂ. ಪೃಥ್ವಿರಾಜ ಹಜಾರೆ, ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ತರಾಗಿರುವ ಶ್ರೀ. ವೀರೇಂದ್ರ ಮರಾಠೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾಗಿರುವ ಶ್ರೀ. ಚೇತನ ರಾಜಹಂಸ ಮತ್ತು ಆಶ್ರಮದ ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.
ಆಶ್ರಮದಲ್ಲಿ ಅವರ ಆಗಮನದ ಸಮಯದಲ್ಲಿ ಸನಾತನದ ಶೇ. 66 ಆಧ್ಯಾತ್ಮಿಕ ಮಟ್ಟವನ್ನು ಹೊಂದಿರುವ ಸಾಧಕ ಶ್ರೀ. ವಿನಾಯಕ ಆಗವೇಕರ ಅವರು ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರಿಗೆ ಕುಂಕುಮದ ತಿಲಕವನ್ನು ಹಚ್ಚಿದರು. ಹಾಗೂ ಶೇ. 64 ಆಧ್ಯಾತ್ಮಿಕ ಮಟ್ಟದ ಸಾಧಕಿ ಸೌ. ಮಂಜೀರಿ ವಿನಾಯಕ ಆಗವೇಕರ ಅವರು ಆರತಿ ಬೆಳಗಿಸಿದರು. ಪ.ಪೂ. ಸ್ವಾಮಿಜಿಯವರ ಆಗಮನದಿಂದ ಆಶ್ರಮದ ವಾತಾವರಣ ಭಾವಮಯವಾಗಿತ್ತು. ಸನಾತನದ ಸಾಧಕ ಶ್ರೀ. ಅಭಿಷೇಕ ಪೈ ಅವರು ಪ.ಪೂ. ಸ್ವಾಮಿಜಿಯವರಿಗೆ ಸನಾತನದ ಆಶ್ರಮದಲ್ಲಿ ಕೈಕೊಳ್ಳಲಾಗುತ್ತಿರುವ ರಾಷ್ಟ್ರ, ಧರ್ಮ, ಸಂಗೀತ, ಕಲೆ, ಆಧ್ಯಾತ್ಮಿಕ ಸಂಶೋಧನೆ ಸೇರಿದಂತೆ ಹಲವು ಕಾರ್ಯಗಳು ಹಾಗೂ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ ಮತ್ತು ಆಶ್ರಮ ಪ್ರದೇಶದಲ್ಲಿರುವ ದೇವಸ್ಥಾನಗಳ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರೂ ಉಪಸ್ಥಿತರಿದ್ದರು. ಈ ಹಿಂದೆ ಮಾರ್ಚ್ 2014ರಲ್ಲಿ ಪ.ಪೂ. ಸ್ವಾಮೀಜಿಯವರು ಅವರು ಆಶ್ರಮವನ್ನು ಭೇಟಿ ಮಾಡಿದ್ದರು.
1. ಆಶ್ರಮವನ್ನು ನೋಡುವಾಗ ಕಲೆ ಸಂಬಂಧಿತ ಮಾಹಿತಿಯನ್ನು ತಿಳಿದುಕೊಳ್ಳುವಾಗ ಪ.ಪೂ. ಸ್ವಾಮೀಜಿಯವರು, “ನಿಮ್ಮ ಕಲೆ ಈಶ್ವರನ ಚರಣಗಳಿಗೆ ಸಮರ್ಪಿತವಾದರೆ, ಅದು ಧನ್ಯವಾಯಿತು” ಎಂದು ಉದ್ಗರಿಸಿದರು. ಹಾಗೂ ಸೂಕ್ಷ್ಮ ಜಗತ್ತಿನ ವಿಷಯದ ಪ್ರದರ್ಶನವನ್ನು ಕುತೂಹಲದಿಂದ ತಿಳಿದುಕೊಂಡರು.
2. ಆಶ್ರಮದ ಅನ್ನಪೂರ್ಣಾ ಕೋಣೆ(ಅಡುಗೆ ಮನೆ)ಯಲ್ಲಿ ಅನ್ನಪೂರ್ಣಾ ದೇವಿಯ ಮೂರ್ತಿಯನ್ನು ನೋಡಿ ಅವರು ವಾರಾಣಸಿ (ಉತ್ತರಪ್ರದೇಶ)ಯ ಅನ್ನಪೂರ್ಣಾದೇವಿ ದೇವಸ್ಥಾನದ ದರ್ಶನದ ಘಟನೆಯನ್ನು ಸ್ಮರಿಸಿದರು.
3. ಭೋಜನಕಕ್ಷೆಯಲ್ಲಿರುವ ಫಲಕದ ಮೇಲೆ ಸಾಧಕರು ತಮ್ಮ ತಪ್ಪುಗಳನ್ನು ಸ್ವತಃ ಬರೆಯುವ ಮಾಹಿತಿ ತಿಳಿದು ಪ.ಪೂ. ಸ್ವಾಮಿ ಗಿರಿಯವರಿಗೆ ಬಹಳ ಆಶ್ಚರ್ಯವೆನಿಸಿತು.
4. ಮಹರ್ಷಿಯವರ ಆಜ್ಞೆಯಿಂದ ಆಶ್ರಮದ ಆವರಣದಲ್ಲಿ ಸ್ಥಾಪಿಸಲಾಗಿರುವ ಶ್ರೀರಾಮ ಶಾಲಿಗ್ರಾಮ ಮತ್ತು ಆಶ್ರಮದಲ್ಲಿರುವ ಶ್ರೀಕೃಷ್ಣನ ರಥದ ಪ್ರತಿಕೃತಿಯನ್ನು ನೋಡಿ ಪ.ಪೂ. ಸ್ವಾಮೀಜಿಯವರಿಗೆ ವಿಶೇಷವಾಗಿ ಆನಂದವಾಯಿತು.
ಮುಂಬಯಿಯ ಭಾರತಾಚಾರ್ಯ ಧರ್ಮಭೂಷಣ ಪೂ. ಪ್ರಾ. ಸು.ಗ. ಶೇವಡೆ ಅವರು ಆಶ್ರಮದಲ್ಲಿ ಪ.ಪೂ. ಸ್ವಾಮೀಜಿಯವರನ್ನು ಭೇಟಿಯಾಗಿ ಹಿಂದೂ ಧರ್ಮದ ಸದ್ಯದ ಸ್ಥಿತಿಯ ಬಗ್ಗೆ ಚರ್ಚಿಸಿದರು.
ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಮಂಗಳಕರ ಭೇಟಿ !ಆಶ್ರಮದಲ್ಲಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರ ಮಂಗಳಕರ ಭೇಟಿ ಆಯಿತು. ಈ ವೇಳೆ ಸಂತದ್ವಯರಲ್ಲಿ ಅಧ್ಯಾತ್ಮದ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪ.ಪೂ. ಸ್ವಾಮೀಜಿಯವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಹೂಮಾಲೆ, ವಸ್ತ್ರ ನೀಡಿ ಅತ್ಯಂತ ಗೌರವದಿಂದ ಸನ್ಮಾನಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರಾಣಶಕ್ತಿ ಕಡಿಮೆಯಿದ್ದರೂ ಅವರಲ್ಲಿರುವ ಪ.ಪೂ. ಸ್ವಾಮೀಜಿಯ ಮೇಲಿನ ವಿಶೇಷ ಪ್ರೀತಿಯಿಂದಾಗಿ ಅವರನ್ನು ಭೇಟಿ ಮಾಡಿದರು. |
‘ಸನಾತನ ಪ್ರಭಾತ’ವನ್ನು ಓದಿ ನನಗೂ ಪ್ರೇರಣೆ ಸಿಗುತ್ತದೆ !” – ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿಪ.ಪೂ. ಸ್ವಾಮಿ ಗಿರಿಯವರು ಆಶ್ರಮದಲ್ಲಿ ‘ಸನಾತನ ಪ್ರಭಾತ’ ಮುಖ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಅವರಿಗೆ ‘ಸನಾತನ ಪ್ರಭಾತ’ದ ಕಾರ್ಯದ ಮಾಹಿತಿಯನ್ನು ನೀಡಲಾಯಿತು. `ಸನಾತನ ಪ್ರಭಾತ’ವನ್ನು ಓದಿ ನನಗೂ ಪ್ರೇರಣೆ ಸಿಗುತ್ತದೆ. ನೀವು ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ” ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಮಂಗಲಮಯ ಸಂದರ್ಭದಲ್ಲಿ ‘ಸನಾತನ ಪ್ರಭಾತ’ ಮಾಧ್ಯಮದ ಸಮೂಹ ಸಂಪಾದಕರಾದ ಶ್ರೀ. ಯೋಗೇಶ ಜಲತಾರೆ ಅವರು ಪ.ಪೂ. ಸ್ವಾಮಿ ಗಿರಿಯವರಿಗೆ ‘ಸನಾತನ ಪ್ರಭಾತ’ದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಜನವರಿ 2024ರಲ್ಲಿ ಹೊರಡಿಸಿದ ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡಿದರು. |