ಶಿಕ್ಷಣದಿಂದ ಆಧ್ಯಾತ್ಮವನ್ನು ಬೇರ್ಪಡಿಸಿ ಕೇವಲ ಉದ್ಯೋಗ ನೀಡುವ ಸಾಧನ ಮಾಡಿರುವುದರ ದುಷ್ಪರಿಣಾಮ !

ಇಂದು ಜೀವನ ನಡೆಸಲು ವ್ಯಕ್ತಿಯನ್ನು ಸಮರ್ಥಗೊಳಿಸುವ ಪ್ರಕ್ರಿಯೆಗೆ ಶಿಕ್ಷಣ ಎನ್ನುತ್ತಾರೆ. ಇಂದಿನ ಶಿಕ್ಷಣ ನಮಗೆ ಕೇವಲ ಉದ್ಯೋಗ ನೀಡಲು ಸಾಧ್ಯವಾಗುತ್ತದೆ. ಉದ್ಯೋಗಕ್ಕಾಗಿ ಶಿಕ್ಷಣದಿಂದ, ನೈತಿಕತೆಯು ಕುಸಿಯುತ್ತ ಹೊರಟಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಆರ್ಥಿಕ ಹಗರಣಗಳು, ಕಳ್ಳತನ, ಅಪಹರಣ, ಕ್ರೋಧದಲ್ಲಿ ಯಾರದಾದರೂ ಪ್ರಾಣ ತೆಗೆಯುವ ಮುಂತಾದ ಘಟನೆ ದಿನನಿತ್ಯ ನಡೆಯುತ್ತಿವೆ. ಶಿಕ್ಷಣದ ಮೌಲ್ಯ ತಿಳಿದು ಅದರಲ್ಲಿ ಆಧ್ಯಾತ್ಮ ಅಳವಡಿಸಿಕೊಳ್ಳುವ ಬದಲು, ಶಿಕ್ಷಣವನ್ನು ಕೇವಲ ಜೀವನ ನಡೆಸುವ ಸಾಧನವನ್ನಾಗಿ ಮಾಡಿದ್ದೇವೆ. ಇಂದಿನ ಶಿಕ್ಷಣ ನಮಗೆ ಒಬ್ಬ ಒಳ್ಳೆಯ ಮನುಷ್ಯನಾಗುವ ಪ್ರೇರಣೆಯನ್ನಲ್ಲ ಅದು ನಮಗೆ ಆತ್ಮಕ್ಕೆಂದ್ರಿತ ಮತ್ತು ಭೌತಿಕ ಆಸಕ್ತಿ ಇರುವವರನ್ನಾಗಿ ಮಾಡುತ್ತಿದೆ. ಇಂದಿನ ವಿದ್ಯಾರ್ಥಿ ಸುಶಿಕ್ಷಿತನಾಗುತ್ತಿದ್ದಂತೆ ದೇಶ, ಸಮಾಜ ಮತ್ತು ಕುಟುಂಬದಿಂದ ಬೇರ್ಪಡುತ್ತಿದ್ದಾನೆ ಮತ್ತು ತನ್ನಿಂದಲೇ ದೂರವಾಗುತ್ತಿದ್ದಾನೆ. ಮುಂದೆ ಹೋಗಿ ಇದರ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ಅವನಿಗೆ ತನ್ನ ಪರಂಪರೆ, ಪ್ರಾಚೀನ ಜ್ಞಾನ ಭಂಡಾರ, ಸಂಸ್ಕೃತಿಗಳ ಜ್ಞಾನವೇ ಇಲ್ಲ. ಇಂದು ಮಾನವೀಯ ಮೌಲ್ಯ, ಸಂಸ್ಕಾರಗಳ ಬಗ್ಗೆ ಒತ್ತು ನೀಡಲಾಗುತ್ತಿಲ್ಲ. ನಿಜವೆಂದರೆ ಶಿಕ್ಷಣ ವ್ಯಕ್ತಿಯ ಆಂತರಿಕ ವಿಕಾಸ ಮತ್ತು ಮನುಷ್ಯನನ್ನು ಶ್ರೇಷ್ಠ ಮಾನವದಲ್ಲಿ ರೂಪಾಂತರಿಸುವ ಪ್ರಕ್ರಿಯೆಯಾಗಿದೆ.(ಆಧಾರ: ‘ಮಾಸಿಕ ಸಂಸ್ಕಾರಮ,ಮಾರ್ಚ್೨೦೧೮)