CBI Appeal to US Govt.: ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ರಿಂದ ಮಾಹಿತಿ ಪಡೆಯಲು ಸಿಬಿಐ ಅಮೇರಿಕಾಗೆ ಮನವಿ ಮಾಡಲಿದೆ

ಬೋಫೋರ್ಸ್ ಪ್ರಕರಣ ಪುನಃ ತೆರೆಯಲಿದೆ !

ನವದೆಹಲಿ – ಬೋಫೋರ್ಸ್‌ ಪ್ರಕರಣವನ್ನು ಪುನಃ ತೆರೆಯಬಹುದು. ಈ ಪ್ರಕರಣದಲ್ಲಿ ಅಮೆರಿಕದಲ್ಲಿನ  ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ನಿಂದ ಮಾಹಿತಿ ಪಡೆಯಲು ಕೇಂದ್ರೀಯ ತನಿಖಾ ದಳ (ಸಿಬಿಐ) ಶೀಘ್ರದಲ್ಲೇ ಅಮೇರಿಕಾಕ್ಕೆ ನ್ಯಾಯಾಲಯದ ಮನವಿ ಪತ್ರವನ್ನು ಕಳುಹಿಸಲಿದೆ. ಹರ್ಷಮನ್ ಇವರು 1987 ರಲ್ಲಿ 64 ಕೋಟಿ (ಈಗಿನ ಸುಮಾರು ರೂ 1 ಸಾವಿರ ಕೋಟಿ ರೂಪಾಯಿ) ರೂಪಾಯಿಗಳ ಬೋಫೋರ್ಸ್ ಲಂಚದ   ಹಗರಣದ ಮಹತ್ವದ ಮಾಹಿತಿಯನ್ನು ಭಾರತೀಯ ಸಂಸ್ಥೆಗಳಿಗೆ (ಏಜೆನ್ಸಿಗಳಿಗೆ) ಕೊಡಲು ಸಿದ್ಧತೆ ನಡೆಸಿದ್ದರು.

1. ಅಂದಿನ ರಾಜೀವ್ ಗಾಂಧಿ ಸರಕಾರದ ಅವಧಿಯಲ್ಲಿ, ಹೊವಿತ್ಜರ್ ಗನ್‌ಗಳಿಗಾಗಿ ಸ್ವೀಡನ್ ಸಂಸ್ಥೆಯಾದ ಬೋಫೋರ್ಸ್‌ನೊಂದಿಗೆ 1 ಸಾವಿರದ 437 ಕೋಟಿ ರೂಪಾಯಿಗಳ ಒಪ್ಪಂದದಲ್ಲಿ ಲಂಚ ಪಡೆದಿರುವ ಆರೋಪವಿತ್ತು.

2. ದೆಹಲಿ ಉಚ್ಚನ್ಯಾಯಾಲಯವು 2004 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅಮಾಯಕ ಎಂದು ಖುಲಾಸೆಗೊಳಿಸಿತ್ತು. ಒಂದು ವರ್ಷದ ನಂತರ, ನ್ಯಾಯಾಲಯವು ಈ ಪ್ರಕರಣದಲ್ಲಿ ಹಿಂದೂಜಾ ಸಹೋದರರು ಸೇರಿದಂತೆ ಉಳಿದ ಆರೋಪಿಗಳ ವಿರುದ್ಧದ ಎಲ್ಲಾ ಆರೋಪಗಳನ್ನು ವಾಪಸ್ಸು ಪಡೆಯಿತು. ಆಪಾದಿತ ಮಧ್ಯವರ್ತಿ ಒಟ್ಟಾವಿಯೊ ಕ್ವಾತ್ರೋಚಿ ಅವರನ್ನೂ ನ್ಯಾಯಾಲಯವು 2011 ರಲ್ಲಿ  ಖುಲಾಸೆಗೊಳಿಸಿತ್ತು.

3. ಅಧಿಕಾರಿಗಳು, ಈ ವರ್ಷ ಅಕ್ಟೋಬರ್‌ನಲ್ಲಿ ಮನವಿ ಪತ್ರ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯು ಸುಮಾರು 90 ದಿನಗಳನ್ನು ತೆಗೆದುಕೊಳ್ಳಬಹುದು. ಪ್ರಕರಣದ ತನಿಖೆಗಾಗಿ ಮಾಹಿತಿ ಪಡೆಯುವುದು ಇದರ ಉದ್ದೇಶ ಎಂದಿದ್ದಾರೆ.