ಎನ್.ಸಿ.ಇ.ಆರ್.ಟಿ. ಮತ್ತು ಎಸ್.ಸಿ.ಇ.ಆರ್.ಟಿ.ಗೆ ಮದ್ರಾಸ್ ಹೈಕೋರ್ಟ್ ನಿಂದ ನಿರ್ದೇಶನ
ಚೆನ್ನೈ – ಮದ್ರಾಸ್ ಹೈಕೋರ್ಟ್ ಎನ್.ಸಿ.ಇ.ಆರ್.ಟಿ. (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್), ಹಾಗೆಯೇ ಎಸ್.ಸಿ.ಇ.ಆರ್.ಟಿ. (ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಂದರೆ ಸ್ಟೇಟ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಕೌನ್ಸಿಲ್) ಈ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಆರ್ಯ-ದ್ರಾವಿಡ ಸಿದ್ಧಾಂತವನ್ನು ಪಠ್ಯಕ್ರಮದ ಮೂಲಕ ಕಲಿಸಬೇಕೇ ಅಥವಾ ಬೇಡವೇ ಎಂಬುದನ್ನು ವಿಚಾರ ಮಾಡುವಂತೆ ನಿರ್ದೇಶನ ನೀಡಿದೆ. ಈ ಸಂಬಂಧ ಮಹಾಲಿಂಗಂ ಬಾಲಾಜಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬಾಲಾಜಿ ಅವರ ಅರ್ಜಿಯನ್ನು ಪ್ರತಿನಿಧಿಯಾಗಿ ಪರಿಗಣಿಸಿ 12 ವಾರಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯವು ಈ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
ಅರ್ಜಿದಾರರು ತಮ್ಮ ದೂರಿನಲ್ಲಿ, ಶಿಕ್ಷಣ ತಜ್ಞರು ‘ಆರ್ಯ ಮತ್ತು ದ್ರಾವಿಡ ಈ 2 ಜಾತಿಗಳಿವೆ’ ಇದು ಜನರನ್ನು ವಿಭಜಿಸುತ್ತಿದ್ದಾರೆ. ಈ ‘ಆರ್ಯ-ದ್ರಾವಿಡ ಸಿದ್ಧಾಂತ’ ಸುಳ್ಳು. ಇದು ವಿದ್ಯಾರ್ಥಿಗಳ ಸುಸಂಸ್ಕೃತ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೊಡ್ಡ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ನ್ಯಾಯಮೂರ್ತಿ ಕೆ.ಆರ್. ಶ್ರೀಮಾನ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರ ಪೀಠವು, ನ್ಯಾಯಾಲಯವು ಇತಿಹಾಸ ಅಥವಾ ವಂಶದ ಉತ್ಪತ್ತಿಯ ವಿಷಯದಲ್ಲಿ ಪರಿಣತರಲ್ಲ. ಅರ್ಜಿದಾರರು ಪ್ರತಿಪಾದಿಸಿದ ‘ಆರ್ಯ-ದ್ರಾವಿಡ ಸಿದ್ಧಾಂತ’ ಮಾನ್ಯವಾಗಿದೆಯೇ ಅಥವಾ ಅಮಾನ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳದೆ ನ್ಯಾಯಾಲಯವು ಈ ವಿಷಯದಲ್ಲಿ ಅರ್ಜಿದಾರರಿಗೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ನ್ಯಾಯಾಲಯವು, ‘ಈ ನಿರ್ಧಾರವನ್ನು ನ್ಯಾಯಾಲಯವಲ್ಲ, ಬದಲಾಗಿ ಈ ಕ್ಷೇತ್ರದ ತಜ್ಞರು ತೆಗೆದುಕೊಳ್ಳುವುದ ಯೋಗ್ಯವಾಗಿದೆ’, ಎಂದು ಹೇಳುತ್ತಾ ಹಾಗೂ ಶಿಕ್ಷಣ ಸಂಸ್ಥೆಗಳಿಗೂ ನಿರ್ದೇಶನ ನೀಡುತ್ತಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ತೀರ್ಪು ನೀಡಿತು.