AMU Minority Status No Change : ಅಲಿಗಡ ಮುಸ್ಲಿಂ ವಿದ್ಯಾಪೀಠದ ‘ಅಲ್ಪಸಂಖ್ಯಾತ ಸಂಸ್ಥೆ’ ಸ್ಥಾನ ಖಾಯಂ !

ಸರ್ವೋಚ್ಚ ನ್ಯಾಯಾಲಯದ ನಿರ್ಣಯ

ಗಾಝಿಯಾಬಾದ್ (ಉತ್ತರ ಪ್ರದೇಶ) – ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರ ಅಧ್ಯಕ್ಷತೆಯಲ್ಲಿ ೭ ನ್ಯಾಯಾಧೀಶರ ಖಂಡಪೀಠವು ರಾಜ್ಯದಲ್ಲಿನ ಅಲಿಗಡ್ ನ ‘ಅಲಿಗಡ ಮುಸ್ಲಿಂ ವಿದ್ಯಾಪೀಠಕ್ಕೆ’ ನೀಡಿರುವ ‘ಅಲ್ಪಸಂಖ್ಯಾತ ಸಂಸ್ಥೆ’ಯ ಸ್ಥಾನ ಖಾಯಂಗೊಳಿಸಿದೆ. ೨೦೦೫ ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ವಿದ್ಯಾಪೀಠಕ್ಕೆ ‘ಅಲ್ಪಸಂಖ್ಯಾತ ಸಂಸ್ಥೆ’ ಎಂದು ಸ್ಥಾನ ನೀಡಲು ನಿರಾಕರಿಸಿತ್ತು. ಈ ನಿರ್ಣಯಕ್ಕೆ ವಿದ್ಯಾಪೀಠದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ವಿದ್ಯಾಪೀಠಕ್ಕೆ ಸಂವಿಧಾನದ ಕಲಂ ೩೦ ರ ಅಡಿಯಲ್ಲಿ ಅಲ್ಪಸಂಖ್ಯಾತ ಸ್ಥಾನ ದೊರೆತಿದೆ.

೧೯೨೦ ರಲ್ಲಿ ಬ್ರಿಟಿಷ ಸರಕಾರದ ಸಹಾಯದಿಂದ ಮುಸಲ್ಮಾನರು ಅಲೆಗಡ್ ಮುಸ್ಲಿಂ ವಿದ್ಯಾಪೀಠ ಕಾನೂನು ರೂಪಿಸಿ ವಿದ್ಯಾಪೀಠದ ಸ್ಥಾಪನೆ ಮಾಡಿದರು. ವಿದ್ಯಾಪೀಠದ ವಿರೋಧಿಗಳ ಅಭಿಪ್ರಾಯ, ರಾಜ ಮಹೇಂದ್ರ ಪ್ರತಾಪ ಸಿಂಹ ಇವರು ಈ ವಿದ್ಯಾಪೀಠದ ಸ್ಥಾಪನೆಗಾಗಿ ೧೯೨೯ ರಲ್ಲಿ ೩.೦೪ ಎಕರೆ ಭೂಮಿ ದಾನ ನೀಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಈ ವಿದ್ಯಾಪೀಠದ ಸಂಸ್ಥಾಪಕ ಸರ್ ಅಹಮದ್ ಖಾನ್ ಅಲ್ಲ, ಹಿಂದೂ ರಾಜ ಮಹೇಂದ್ರ ಪ್ರತಾಪ ಸಿಂಗ್ ಆಗಿದ್ದಾರೆ ಎಂದು ವ್ಯಕ್ತವಾಗುತ್ತಿದೆ.