ಅಧಃಪತನ ಮತ್ತು ಪಾಪಕ್ಕೆ ಭಯವೇ ಕಾರಣ. ಭಯದಿಂದಲೇ ದುಃಖವು ಪ್ರಾಪ್ತವಾಗುತ್ತದೆ. ಭಯವು ಸಾವಿಗೆ ಕಾರಣವಾಗುತ್ತದೆ. ಎಲ್ಲ ಕೆಟ್ಟ ವಿಷಯಗಳು ಭಯದಿಂದ ಉತ್ಪನ್ನವಾಗುತ್ತವೆ ಮತ್ತು ಈ ಭಯಕ್ಕೆ ಕಾರಣವೇನು ? ಸ್ವಂತದ ನಿಜವಾದ ಸ್ವರೂಪದ ಅಜ್ಞಾನವೇ ನಮ್ಮ ಭಯಕ್ಕೆ ಕಾರಣವಾಗಿದೆ. ನಮ್ಮ ಪೈಕಿ ಪ್ರತಿಯೊಬ್ಬರು ಆ ರಾಜಾಧಿರಾಜ ಪರಮೇಶ್ವರನ ವಾರಸುದಾರರಾಗಿದ್ದೇವೆ.
(ಆಧಾರ : ‘ಸ್ವಾಮೀ ವಿವೇಕಾನಂದ ಮ್ಹಣತಾತ’, ರಾಮಕೃಷ್ಣ ಮಠ, ನಾಗಪುರ.)