ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯುಕ್ರೇನ್ ವಿಷಯದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ವಿಷಯ ತುರಿಕೆ !
ನ್ಯೂಯಾರ್ಕ್ – ಪಾಕಿಸ್ತಾನವೇ ಭಯೋತ್ಪಾದಕರ ಸುರಕ್ಷಿತ ಆಶ್ರಯ ತಾಣವಾಗಿದೆ, ಎಂದು ಭಾರತದ ಅಧಿಕಾರಿ ಪ್ರತೀಕ ಮಾಥೂರ ಇವರು ಪಾಕಿಸ್ತಾನಕ್ಕೆ ನೇರ ನುಡಿಯಲ್ಲಿ ಖಂಡಿಸಿದೆ. ವಿಶ್ವಸಂಸ್ಥೆಯ ಮಹಾಸಭಾ ೧೧ ನೇ ಆಪತ್ಕಾಲಿನ ಸಭೆಯಲ್ಲಿ ಯುಕ್ರೇನ್ ನಲ್ಲಿ ಶಾಂತಿ ಪ್ರಸ್ತಾಪಿಸುವ ವಿಷಯದ ಪ್ರಸ್ತಾವಿನ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಪಾಕಿಸ್ತಾನದ ಅಧಿಕಾರಿಯಿಂದ ಕಾಶ್ಮೀರ ವಿರೋಧಿ ವಿಷಯ ತುರಿಸಿತು. ಅದಕ್ಕೆ ಮಾಥೂರ ಇವರು ಖಂಡಿಸುತ್ತಾ ಪಾಕಿಸ್ತಾನದ ಬಾಯಿ ಮುಚ್ಚಿಸಿದರು. ಅವರು, “ಪಾಕಿಸ್ತಾನದ ಈ ಕೃತ್ಯ ಅನಾವಶ್ಯಕ ಪ್ರಚೋದನೆ ನೀಡುವುದಾಗಿದೆ. ಅದು ಮೊದಲು ತನ್ನ ಕೃತ್ಯಗಳು ನೋಡಬೇಕು.” ಎಂದು ಹೇಳಿದರು.
India slams Pakistan after it rakes up J&K during UNGA session on Ukraine https://t.co/bS1JsEle2x
— TOI India (@TOIIndiaNews) February 24, 2023
ರಷ್ಯಾ – ಯುಕ್ರೇನ ವಿವಾದದಲ್ಲಿ ಭಾರತ ಮತ್ತೊಮ್ಮೆ ತಟಸ್ಥ !
ರಷ್ಯಾ – ಯುಕ್ರೇನ್ ಇವರಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮಂಡಿಸಲಾದ ಪ್ರಸ್ತಾವದ ಮೇಲೆ ಮತದಾನದಲ್ಲಿ ಭಾರತವು ತಟಸ್ಥವಾಗಿ ಉಳಿದಿದೆ. ಈ ಸಮಯದಲ್ಲಿ ಭಾರತವು ‘ಒಂದು ವರ್ಷದ ನಂತರ ಆದರೂ ಜಗತ್ತು ರಷ್ಯಾ – ಯುಕ್ರೇನ್ ಯುದ್ಧ ನಿಲ್ಲಿಸುವಲ್ಲಿ ತಲುಪಿದೆಯೆ ?’, ಎಂಬ ಪ್ರಶ್ನೆಯು ಉಪಸ್ಥಿತಗೊಳಿಸಿತು. ಈ ಮತದಾನದಲ್ಲಿ ೧೯೩ ಸದಸ್ಯ ದೇಶಗಳಲ್ಲಿ ೧೪೧ ಜನರು ಈ ಪ್ರಸ್ತಾವದ ಪರವಾಗಿ ಹಾಗೂ ೭ ಜನರು ವಿರೋಧದಲ್ಲಿ ಮತದಾನ ಮಾಡಿದರು. ಇತರ ದೇಶಗಳು ತಟಸ್ಥವಾಗಿ ಉಳಿದವು.
ಸಂಪಾದಕೀಯ ನಿಲುವುಮೇಲಿಂದ ಮೇಲೆ ಈ ರೀತಿಯ ಅರ್ಥವಿಲ್ಲದ ಸೂತ್ರಗಳನ್ನು ಮಂಡಿಸಿ ವಿಶ್ವಸಂಸ್ಥೆಯ ಅಮೂಲ್ಯ ಸಮಯ ಹಾಳು ಮಾಡುವುದರ ಬಗ್ಗೆ ಪಾಕಿಸ್ತಾನವನ್ನು ಸಭೆಯಿಂದ ಬಹಿಷ್ಕರಿದುದಕ್ಕೆ ಭಾರತ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಬೇಕು ! |