ಸಾಧಕರೇ, ನಿತ್ಯದ ರೋಗಗಳಿಗಾಗಿ ಪ್ರಾಥಮಿಕ ಉಪಚಾರವೆಂದು ಸನಾತನದ ಆಯುರ್ವೇದೀಯ ಔಷಧಿಗಳನ್ನು ಉಪಯೋಗಿಸಿರಿ !

ಸಾಧಕರಿಗೆ ಸೂಚನೆ

ವೈದ್ಯ ಮೇಘರಾಜ ಪರಾಡಕರ್

‘ಸಾಧಕರೊಂದಿಗೆ ಮಾತನಾಡಿದಾಗ ಗಮನಕ್ಕೆ ಬಂದ ವಿಷಯವೇನೆಂದರೆ, ಅನೇಕ ಸಾಧಕರು ಸನಾತನದ ಆಯುರ್ವೇದೀಯ ಔಷಧಿಗಳನ್ನು ಖರೀದಿಸಿ ಮನೆಯಲ್ಲಿಟ್ಟಿದ್ದಾರೆ; ಆದರೆ ಅವುಗಳನ್ನು ಉಪಯೋಗಿಸಿ ನೋಡಿಲ್ಲ. ಕೆಲವೊಂದು ಸಾಧಕರ ಮಾತುಗಳಿಂದ ದಿನನಿತ್ಯದ ದೂರುಗಳಿಗಾಗಿ ಸನಾತನದ ಆಯುರ್ವೇದೀಯ ಔಷಧಿಗಳು ಮನೆಯಲ್ಲಿ ಲಭ್ಯವಿದ್ದರೂ ‘ಆ ಔಷಧಿಗಳು ನಮ್ಮಲ್ಲಿವೆ’, ಎಂಬುದು ನೆನಪಿಲ್ಲದ್ದರಿಂದ ಅವರು ಪೇಟೆಯಿಂದ ಹೊಸ ಔಷಧಿಗಳನ್ನು ಖರೀದಿಸಿದ್ದಾರೆ.

ಕೆಲವೊಮ್ಮೆ ವೈದ್ಯರ ಬಳಿ ತಕ್ಷಣ ಹೋಗುವ ಸ್ಥಿತಿ ಇರುವುದಿಲ್ಲ. ಕೆಲವೊಮ್ಮೆ ವೈದ್ಯರ ಬಳಿ ಹೋಗುವ ತನಕ ಔಷಧಿಗಳ ಆವಶ್ಯಕತೆಯಿರುತ್ತದೆ, ಕೆಲವೊಮ್ಮೆ ಸ್ವಲ್ಪ ಮಟ್ಟಿಗೆ ಔಷಧಿಯನ್ನು ತೆಗೆದುಕೊಂಡ ನಂತರ ವೈದ್ಯರ ಬಳಿ ಹೋಗುವ ಅವಶ್ಯಕತೆಯೇ ಬೀಳುವುದಿಲ್ಲ. ಸನಾತನದ ಆಯುರ್ವೇದೀಯ ಔಷಧಿಗಳನ್ನು ನಿತ್ಯದ ರೋಗಗಳಿಗೆ ಪ್ರಾಥಮಿಕ ಉಪಚಾರವೆಂದು ಉಪಯೋಗಿಸಬಹುದು. ಅವುಗಳನ್ನು ಕೇವಲ ಮನೆಯಲ್ಲಿ ತಂದಿಟ್ಟು ಉಪಯೋಗಿಸಿರಿ.

ಇದುವರೆಗೆ ‘ಸನಾತನ ಪ್ರಭಾತ’ದಲ್ಲಿ ಸನಾತನದ ಆಯುರ್ವೇದೀಯ ಔಷಧಿಗಳ ಕುರಿತು ಪ್ರಕಟಿಸಲಾದ ಎಲ್ಲ ಮಾಹಿತಿಯು ಮುಂದಿನ ಸಂಪರ್ಕಕೊಂಡಿಯಲ್ಲಿ (ಲಿಂಕನಲ್ಲಿ) ಲಭ್ಯವಿದೆ. ಈ ಸಂಪರ್ಕಕೊಂಡಿಯನ್ನು ಸಾಧಕರು ತಮ್ಮ ಬಳಿ ‘ಸೇವ್’ ಮಾಡಿಡಬೇಕು ಮತ್ತು ಔಷಧಿಗಳನ್ನು ಉಪಯೋಗಿಸಿ ನೋಡಬೇಕು. ಇನ್ನು ಮುಂದೆ ಔಷಧಿಗಳ ಬಗ್ಗೆ ಎಲ್ಲ ಮಾಹಿತಿಯೂ ಇದೇ ಸಂಪರ್ಕಕೊಂಡಿಯಲ್ಲಿ (ಲಿಂಕ್‌ನಲ್ಲಿ) ಲಭ್ಯವಿದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾನಾಥಿ, ಗೋವಾ

ಸನಾತನದ ಆಯುರ್ವೇದೀಯ ಔಷಧಗಳ ಮಾಹಿತಿಗಾಗಿ ಸಂಪರ್ಕಕೊಂಡಿ (ಲಿಂಕ್)  https://sanatanprabhat.org/kannada/category/vishesh-smarnika/ayurved

ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಶಾಂತ ನಿದ್ರೆಗೆ ಬ್ರಾಹ್ಮಿ ಚೂರ್ಣ

ಮುಂದಿನ ಎರಡೂ ಉಪಚಾರಗಳನ್ನು ಕಡಿಮೆ ಪಕ್ಷ ೩ ತಿಂಗಳಾದರೂ ಮಾಡಬೇಕು.

೧. ನಾಲ್ಕು ಚಮಚದಷ್ಟು ಬ್ರಾಹ್ಮಿ ಚೂರ್ಣವನ್ನು ೪ ಬಟ್ಟಲು ಕೊಬ್ಬರಿ ಎಣ್ಣೆಯಲ್ಲಿ ಸಾಧಾರಣ ೧ ನಿಮಿಷ ಕುದಿಸಬೇಕು. ನಂತರ ಆ ಎಣ್ಣೆಯನ್ನು ಸೋಸಿಕೊಳ್ಳಬೇಕು. ಎಣ್ಣೆ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿ ಅದರಲ್ಲಿ ೧೦ ಗ್ರಾಮ್ ಭೀಮಸೇನಿ ಕರ್ಪೂರವನ್ನು ಪುಡಿ ಮಾಡಿ ಹಾಕಬೇಕು ಮತ್ತು ಬಾಟಲಿಯ ಮುಚ್ಚಳವನ್ನು ಹಾಕಿಡಬೇಕು. ಪ್ರತಿದಿನ ರಾತ್ರಿ ಮಲಗುವಾಗ ಅದರಲ್ಲಿನ ೧-೨ ಚಮಚದಷ್ಟು ಎಣ್ಣೆಯನ್ನು ತಲೆಗೆ ಹಚ್ಚಿ ಮಲಗಬೇಕು.

೨. ರಾತ್ರಿ ಮಲಗುವಾಗ ೧ ಚಮಚ ಬ್ರಾಹ್ಮಿ ಚೂರ್ಣವನ್ನು ಅರ್ಧ ಬಟ್ಟಲು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.

೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು.

೨. ಇಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲಾಗಿದೆ. ೭ ದಿನಗಳಲ್ಲಿ ಗುಣಮುಖವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು. – ವೈದ್ಯ ಮೇಘರಾಜ ಪರಾಡಕರ.

ಸನಾತನದ ಆಯುರ್ವೇದ ಔಷಧಗಳು

‘ಸನಾತನ ಉಶೀರ (ಲಾವಂಚ) ಚೂರ್ಣ’ ಬ್ರಾಹ್ಮಿಚೂರ್ಣ ಮತ್ತು ಭೀಮಸೇನಿ ಕರ್ಪೂರ ಲಭ್ಯವಿದೆ.