ಸಾಧಕರೆ, ವಿವಾಹಯೋಗ್ಯ ವರ ಅಥವಾ ವಧು ಇವುಗಳ ಆಯ್ಕೆಮಾಡುವಾಗ, ಅವರ ವ್ಯಾವಹಾರಿಕ ಮಾಹಿತಿಗಳ ಜೊತೆಗೆ ‘ಅವರಿಗೆ ಸಾಧನೆ ಮಾಡುವ ಆಸಕ್ತಿ ಇದೆಯೇ ?’, ಇದನ್ನೂ ತಿಳಿದುಕೊಳ್ಳಿರಿ !

ವಿವಾಹವಾಗಲು ಇಚ್ಛಿಸುವ ಸಾಧಕರಿಗೆ ಸೂಚನೆ

ಸಮಾಜದಲ್ಲಿ ವಿವಾಹ ನಿರ್ಧರಿಸುವ ಮೊದಲು ಎರಡೂ ಕುಟುಂಬದವರು ವಧು-ವರರ ಕುಲ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಸದಸ್ಯರು ಮುಂತಾದ ವಿವಿಧ ರೀತಿಯ ಮಾಹಿತಿ ತಿಳಿದುಕೊಳ್ಳುತ್ತಾರೆ ಮತ್ತು ಇದು ಆವಶ್ಯಕವು ಇರುತ್ತದೆ. ವಿವಾಹ ಇಚ್ಛುಕ ಸಾಧಕರು ಈ ವ್ಯಾವಹಾರಿಕ ಮಾಹಿತಿಯ ಜೊತೆಗೆ ‘ಭಾವೀ ಪತಿ ಅಥವಾ ಪತ್ನಿ ಅವರಿಗೆ ‘ಸಾಧನೆಯ ಆಸಕ್ತಿ ಇದೆಯೇ ?’, ಇದರ ಮಾಹಿತಿಯನ್ನೂ ಪಡೆಯಬೇಕು; ಏಕೆಂದರೆ ವಿವಾಹದ ನಂತರ ‘ತಮ್ಮ ಸಂಗಾತಿಗೆ ಸಾಧನೆಯ ಆಸಕ್ತಿ ಇಲ್ಲ; ಸಾಧನೆಗಾಗಿ ಸಮಯ ನೀಡುವುದು ಅವರಿಗೆ ಇಷ್ಟ ಇಲ್ಲ’, ಎಂದು ತಿಳಿದರೆ ವಿವಾಹಿತ ಸಾಧಕರ ಸಾಧನೆಯಲ್ಲಿ ಹಾನಿ ಆಗುತ್ತದೆ. ಮನೆಯಲ್ಲಿ ಸಾಧನೆಗಾಗಿ ವಿರೋಧವಾಗುತ್ತಿದ್ದರೆ ಸಾಧಕರ ಸಾಧನೆಯು ನಿಲ್ಲಬಹುದು. ಯಾರಾದರೊಬ್ಬನಿಗೆ ಸಾಧನೆಯ ಆಸಕ್ತಿ ಇಲ್ಲದಿದ್ದರೆ, ಅವನಲ್ಲಿ ಬದಲಾವಣೆ ಮಾಡುವುದು ಕಠಿಣವಾಗುತ್ತದೆ.

ವಾಸ್ತವದಲ್ಲಿ ‘ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು’, ಇದುವೇ ಮನುಷ್ಯಜನ್ಮ ಪಡೆಯುವ ನಿಜವಾದ ಕಾರಣವಿದೆ. ಈಶ್ವರಪ್ರಾಪ್ತಿಯಾಗಲು ಸಾಧಕರು ಸಾಧನೆಯನ್ನು ಮಾಡಬೇಕು ಮತ್ತು ಅದನ್ನು ಜೀವನದ ಪ್ರತಿಯೊಂದು ಹಂತದಲ್ಲೂ ಮಾಡಬೇಕು. ಆದ್ದರಿಂದ ಸಾಧನೆಗೆ ಪೂರಕವಾದ ಪರಿಸರ ಮತ್ತು ಸಂಗಾತಿಯನ್ನು ಆರಿಸಿಕೊಂಡರೆ, ಸಾಧಕನ ಸಾಧನೆಯಲ್ಲಿ ಯಾವುದೇ ಅಡ್ಡಿಯಾಗದೇ ಅದು ನಿರಾತಂಕ ವಾಗಿ ಸತತ ಮುಂದುವರಿಯುತ್ತದೆ ಮತ್ತು ‘ಈಶ್ವರಪ್ರಾಪ್ತಿ’ಯಾಗುವ ದೃಷ್ಟಿಯಿಂದ ಅವನು ಮುಂದೆ ಸಾಗತೊಡಗುತ್ತಾನೆ.

‘ಜನ್ಮ, ಮೃತ್ಯು ಮತ್ತು ವಿವಾಹ’ ಈ ಮೂರು ವಿಷಯಗಳು ಪ್ರಾರಬ್ಧದ ಅಧೀನವಾಗಿದ್ದು ಅವು ಪ್ರಾರಬ್ಧಕ್ಕನುಸಾರವೇ ಘಟಿಸುತ್ತದೆ. ಹೀಗಿದ್ದರೂ, ಸಾಧಕರು ತಮ್ಮ ಕ್ರಿಯಮಾಣ ಕರ್ಮವನ್ನು ಬಳಸಿಕೊಂಡು ‘ಸಾಧನೆಯನ್ನು ಅಖಂಡವಾಗಿ ಮುಂದುವರಿಸುವ’ ಉದ್ದೇಶದಿಂದ ಸಾಧನೆ ಮಾಡುವವನು ಅಥವಾ ಸಾಧನೆಗಾಗಿ ಪೂರಕವಿರುವ ಸಂಗಾತಿ ಆಯ್ಕೆ ಮಾಡಲು ಒತ್ತು ನೀಡುವುದು ಮತ್ತು ಮನುಷ್ಯಜನ್ಮದ ಸಾರ್ಥಕ ಮಾಡಿಕೊಳ್ಳಬೇಕು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ