ಯಾವುದೇ ಅಪರಿಚಿತ ‘ಲಿಂಕ್‌’ಅನ್ನು ‘ಕ್ಲಿಕ್’ ಮಾಡಬೇಡಿ ಹಾಗೂ ‘ಡಿಲೀಟ್’ ಮಾಡಿ !

ಸಾಧಕರಿಗೆ ಸೂಚನೆ ಹಾಗೂ ಧರ್ಮಪ್ರೇಮಿ, ಹಿತಚಿಂತಕರು ಹಾಗೂ ವಾಚಕರಲ್ಲಿ ವಿನಂತಿ !

ಸದ್ಯ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಮೋಸ ಹಾಗೂ ನಕಲಿ ಸಂದೇಶಗಳ ಮೂಲಕ ನಮ್ಮ ಖಾಸಗಿ ಮಾಹಿತಿ ‘ಹ್ಯಾಕ್’ ಮಾಡುವಂತಹ ‘ಲಿಂಕ್‌’ಗಳು ವ್ಯಾಪಕವಾಗಿ ಹರಡುತ್ತಿವೆ. ಇದರ ಒಂದು ಮಾದರಿ ಎಂದರೆ ಕೆಲವು ಸಾಧಕ, ಧರ್ಮಪ್ರೇಮಿ, ವಾಚಕರಿಗೆ ಹಾಗೂ ಹಿತಚಿಂತಕರಿಗೆ ‘ನಿಮ್ಮ ಕುಟುಂಬದವರ ಛಾಯಾಚಿತ್ರ ನೋಡಿ, This is a picture of your family http://of1zgcahn.top/login’ ಈ ರೀತಿಯ ‘ಲಿಂಕ್’ ಬರುತ್ತಿರುವುದರ ಬಗ್ಗೆ ಸಾಧಕರು ತಿಳಿಸಿದ್ದಾರೆ. ಈ ‘ಲಿಂಕ್’ ನಮ್ಮ ಸಂಪರ್ಕದಲ್ಲಿರುವ ಓರ್ವ ವ್ಯಕ್ತಿಯ ಹೆಸರಿನಲ್ಲಿ ಬರುತ್ತದೆ. ಹಾಗಾಗಿ ನಾವು ಕುತೂಹಲದಿಂದ ಆ ‘ಲಿಂಕ್’ ತೆರೆಯಲು ಪ್ರಯತ್ನಿಸಿದರೆ, ಅದರಲ್ಲಿ ನಮ್ಮ ಕೆಲವು ವೈಯಕ್ತಿಕ ಮಾಹಿತಿ ಉದಾಹರಣೆಗೆ ಟೆಲಿಗ್ರಾಂ ನಂಬರ್, ಅದರ ಪಾಸ್‌ವರ್ಡ್ ಇತ್ಯಾದಿಗಳನ್ನು ಕೇಳಲಾಗುತ್ತದೆ. ಈ ಮಾಹಿತಿ ನೀಡಿ ಲಿಂಕ್‌ ಅನ್ನು ತೆರೆದರೆ ಅದರಲ್ಲಿ ಅಶ್ಲೀಲ ಅಥವಾ ಬೇಡದಿರುವ ಛಾಯಾಚಿತ್ರಗಳು ಕಾಣಿಸುತ್ತವೆ. ಅದರೊಂದಿಗೆ ಇಂತಹ ‘ಲಿಂಕ್’ ಮೂಲಕ ನಮ್ಮ ‘ಸ್ಮಾರ್ಟ್‌ಫೋನ್‌’ನ ಮಾಹಿತಿ ‘ಹ್ಯಾಕ್’ ಮಾಡುವ ಪ್ರಯತ್ನ ಇರಬಹುದು.

ಆದ್ದರಿಂದ ಸಾಧಕರು, ಧರ್ಮಪ್ರೇಮಿಗಳು, ವಾಚಕರು, ಹಿತಚಿಂತಕರಿಗೆ ಈ ರೀತಿಯ ‘ಲಿಂಕ್’ ಸಿಕ್ಕಿದ್ದಲ್ಲಿ ಅದನ್ನು ತೆರೆಯದೇ (ಓಪನ್‌ ಮಾಡದೇ) ಆ ಸಂದೇಶವನ್ನು ‘ಡಿಲೀಟ್’ ಮಾಡಿರಿ. ಇದರಿಂದ ಮುಂದಾಗಬಹುದಾದ ಅನರ್ಥ ತಪ್ಪಿಸಬಹುದು. ಯಾವುದೇ ಪರಿಸ್ಥಿತಿಯಲ್ಲಿ ಗಲಿಬಿಲಿಯಾಗದೇ, ಹೆದರದೇ ಈ ರೀತಿಯ ‘ಲಿಂಕ್’ ಡಿಲೀಟ್‌ ಮಾಡಿ ಅದರತ್ತ ನಿರ್ಲಕ್ಷ ಮಾಡಿರಿ.

ಟಿಪ್ಪಣಿ – ತಾಂತ್ರಿಕ ದೃಷ್ಟಿಯಿಂದ ಈ ‘ಲಿಂಕ್‌’ನಲ್ಲಿ ‘http’ ಈ ರೀತಿ ಕೇವಲ ೪ ಅಕ್ಷರಗಳು ಇರುತ್ತವೆ. ಇದರಿಂದ ಈ ‘ಲಿಂಕ್’ ಅಸುರಕ್ಷಿತ ಎಂಬುದು ತಿಳಿಯುತ್ತದೆ. ‘ಲಿಂಕ್’ ಸುರಕ್ಷಿತ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಪ್ರಯತ್ನಿಸಬಾರದು ಮತ್ತು ‘ಲಿಂಕ್’ ತೆರೆಯದೇ ತಕ್ಷಣ ‘ಡಿಲೀಟ್’ ಮಾಡಬೇಕು.