ಸನಾತನ ನಿರ್ಮಿತ ಸಾತ್ತ್ವಿಕ ಮೂರ್ತಿಗಳ ಗಣಕೀಯ ತ್ರಿಮಿತಿಕರಣ ಸೇವೆಯಲ್ಲಿ ಪಾಲ್ಗೊಳ್ಳಿ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ‘ಕಲೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿ’ ಎಂಬ ಸಂಕಲ್ಪನೆಯನ್ನು ಮಂಡಿಸಿದರು. ಅದರಂತೆ ಅವರು ಕಲಾಸೇವೆಯಲ್ಲಿ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನಕ್ಕನುಸಾರ ಮೂರ್ತಿ ಸೇವೆಯಲ್ಲಿರುವ ಸಾಧಕರು ಶ್ರೀ ಗಣೇಶನ ಸಾತ್ತ್ವಿಕ ಮೂರ್ತಿಯನ್ನು ನಿರ್ಮಿಸಿದ್ದಾರೆ. ಆಧುನಿಕ ವಿಜ್ಞಾನವನ್ನು ಉಪಯೋಗಿಸಿ ಅದನ್ನು ಸಾತ್ತ್ವಿಕ ಕಲಾಕೃತಿ ನಿರ್ಮಾಣಕ್ಕೆ ಬಳಸಿ ಹೆಚ್ಚೆಚ್ಚು ಜನರಿಗೆ ಈ ಮೂರ್ತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಈ ಮೂರ್ತಿಯ ಗಣಕೀಯ (ಕಂಪ್ಯೂಟರ್) ತ್ರಿಮಿತಿಯ ರಚನೆ ಮಾಡಲು ನಿಯೋಜಿಸಲಾಗಿದೆ. ಅದಕ್ಕಾಗಿ ‘ಬ್ಲೆಂಡರ್‌’, ‘ಝೆಡ್‌ಬ್ರಶ್’ ಮೊದಲಾದ ಗಣಕೀಯ ತಂತ್ರಾಂಶ (‘ಸಾಫ್ಟ್‌ವೇರ್‌’ಗಳ) ಜ್ಞಾನ ಇರುವುದು ಆವಶ್ಯಕವಾಗಿದೆ. ಸಾಧಕರು, ಹಿತಚಿಂತಕರು ಅಥವಾ ವಾಚಕರಿಗೆ ಇಂತಹ ಗಣಕೀಯ ತಂತ್ರಾಂಶಗಳ ಜ್ಞಾನವಿದ್ದರೆ ಅವರು ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಬಂದು ಸಾಧಕರಿಗೆ ಕಲಿಸಬಹುದು. ಇಂತಹ ಸೇವೆಯನ್ನು ಮಾಡುವ ಮತ್ತು ಸಾತ್ತ್ವಿಕ ಕಲಾಕೃತಿಗಳ ನಿರ್ಮಿತಿಯಲ್ಲಿ ಯೋಗದಾನ ನೀಡಲು ಇಚ್ಛಿಸುವವರು ಅಥವಾ ಯಾರಿಗೆ ಪೂರ್ಣವೇಳೆ ಆಶ್ರಮದಲ್ಲಿದ್ದು ಈ ಸೇವೆ ಮಾಡಲು ಇಚ್ಚೆ ಇದೆ, ಅಂತಹವರು, ತಮ್ಮ ಹೆಸರು, ಲಭ್ಯವಿರುವ ಸಮಯ ಮತ್ತು ಇತರ ಮಾಹಿತಿಗಳನ್ನು ಜಿಲ್ಲಾಸೇವಕರ ಮೂಲಕ ತಿಳಿಸಬೇಕಾಗಿದೆ.

ಸಂಪರ್ಕ: ಶ್ರೀ. ಅಭಿಜಿತ ಸಾವಂತ,

ಸಂಚಾರವಾಣಿ ಸಂಖ್ಯೆ. : ೮೭೯೩೬೭೮೧೭೮