ಸಾಧಕರಿಗೆ ಸೂಚನೆ !
೧೪.೧.೨೦೨೪ ರಂದು ಮಕರಸಂಕ್ರಾಂತಿ ಇದೆ. ಈ ಅವಧಿಯಲ್ಲಿ, ಸುಮಂಗಲಿ ಸ್ತ್ರೀಯರು ಇತರ ಮಹಿಳೆಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಮಗ್ರಿಗಳನ್ನು ಬಾಗಿನವೆಂದು ನೀಡುತ್ತಾರೆ.
ಸನಾತನ ಗ್ರಂಥಗಳು, ಹಾಗೆಯೇ ಸಾತ್ತ್ವಿಕ ಉತ್ಪನ್ನಗಳನ್ನು ಬಾಗಿನವೆಂದು ನೀಡುವುದು ಸರ್ವೋತ್ತಮವಾಗಿದೆ. ಆದ್ದರಿಂದ ಸಾಧಕರು ಆದಷ್ಟು ಬೇಗ ವಾಚಕರನ್ನು, ಜಿಜ್ಞಾಸುಗಳನ್ನು, ಮಹಿಳಾ ಮಂಡಳಿಗಳನ್ನು ಹಾಗೂ ಉಳಿತಾಯ ಸಂಘಗಳನ್ನು ಸಂಪರ್ಕಿಸಿ ಸಾತ್ತ್ವಿಕ ಬಾಗಿನ ನೀಡುವ ಮಹತ್ವವನ್ನು ತಿಳಿಸಬೇಕು ಮತ್ತು ಸನಾತನದ ಗ್ರಂಥಗಳು, ಕಿರುಗ್ರಂಥಗಳು, ಉತ್ಪನ್ನಗಳನ್ನು ಬಾಗಿನವೆಂದು ನೀಡುವಂತೆ ಪ್ರೋತ್ಸಾಹಿಸಬೇಕು. ನೀವು ಬಾಗಿನ ಕೊಡುವ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಬಯಸಿದರೆ, ಅದರ ಬೇಡಿಕೆಯನ್ನು ಈಗಿನಿಂದಲೇ ಕೊಡಬೇಕಾಗುತ್ತದೆ. ಬಾಗಿನವನ್ನು ನೀಡಲು ಸಮಾಜದಿಂದ ಗ್ರಂಥಗಳು ಅಥವಾ ಉತ್ಪನ್ನಗಳಿಗೆ ಬೇಡಿಕೆಯಿದ್ದರೆ, ಸಾಧಕರು ಅವುಗಳನ್ನು ಸ್ಥಳೀಯ ವಿತರಕರಿಗೆ ನೀಡಬೇಕು.