ಹಣದ ವಿನಿಮಯ, ಆರ್ಥಿಕ ಅಥವಾ ಭೂವ್ಯವಹಾರ, ವಿವಾಹ ಹೊಂದಾಣಿಕೆ ಮುಂತಾದ ವೈಯಕ್ತಿಕ ವಿಷಯಗಳನ್ನು ತಮ್ಮ ಜವಾಬ್ದಾರಿಯಿಂದ ಮಾಡಬೇಕು

ಸಾಧಕರಿಗೆ ಸೂಚನೆ ಮತ್ತು ವಾಚಕರು ಹಾಗೂ ಹಿತಚಿಂತಕರಲ್ಲಿ ವಿನಂತಿ !

ಸನಾತನ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಈ ಅವಧಿಯಲ್ಲಿ ಸಾಧಕರ, ವಾಚಕರ, ಹಿತಚಿಂತಕರ ಪರಸ್ಪರ ಪರಿಚಯವಾಗಿ ಅವರು ಅಧ್ಯಾತ್ಮ ಮತ್ತು ಸಾಧನೆಯೊಂದಿಗೆ ವೈಯಕ್ತಿಕ ಸ್ತರದಲ್ಲಿ ಕೆಲವು ವ್ಯವಹಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಲ್ಲಿ ಸಾಲವೆಂದು ಹಣದ ವಿನಿಮಯ ಮಾಡುವುದು, ಸಾಲ ಮಾಡಲು ಸಹಾಯ ಮಾಡುವುದು ಅಥವಾ ಜಾಮೀನು ನಿಲ್ಲುವುದು, ಭೂಮಿಯ ಖರೀದಿ-ಮಾರಾಟದ ವ್ಯವಹಾರ ಹಾಗೂ ಮದುವೆ ಹೊಂದಿಸುವುದು ಇತ್ಯಾದಿಗಳು ಸಾಮಾಜಿಕ ಭಾವನೆಯಿಂದ ನಡೆಯುತ್ತಿವೆ.

ಸನಾತನ ಸಂಸ್ಥೆಯು ಅಧ್ಯಾತ್ಮಪ್ರಸಾರ, ಸಮಾಜಸಹಾಯ ಮತ್ತು ರಾಷ್ಟ್ರರಕ್ಷಣೆ ಇವುಗಳಿಗಾಗಿ ಕಾರ್ಯನಿರತವಾಗಿದೆ. ಇದರಲ್ಲಿ ವೈಯಕ್ತಿಕ ಹಿತಸಂಬಂಧವನ್ನು ಕಾಪಾಡುವುದು ಸ್ವಾಭಾವಿಕವಾಗಿ ಬರುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ಆರ್ಥಿಕ ವ್ಯವಹಾರ, ಭೂಮಿ ಖರೀದಿ-ಮಾರಾಟ ಮಾಡುವುದು ಅಥವಾ ವಿವಾಹ ಹೊಂದಾಣಿಕೆಗಾಗಿ ಸಂಬಂಧಪಟ್ಟವರು ತಮ್ಮ ವೈಯಕ್ತಿಕ ಸ್ತರದಲ್ಲಿ ಯೋಗ್ಯ ಕಾಳಜಿ ವಹಿಸಿ ಅದನ್ನು ತಮ್ಮ ಜವಾಬ್ದಾರಿಯಿಂದ ಮಾಡಬೇಕೆಂದು ಸವಿನಯ ವಿನಂತಿ.

ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ.