ಜೆಕೋಕಾಬಾದ್ (ಪಾಕಿಸ್ತಾನ)ದ ಹಿಂದೂ ಯುವಕ ಅಶೋಕ ಕುಮಾರ ಇವನಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕಾಯಿತು !

ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದುಸ್ಥಿತಿ !

ಜೆಕೋಕಾಬಾದ (ಪಾಕಿಸ್ತಾನ) – ‘ಇಲ್ಲಿನ ಸಿಜಾವಲ ಗ್ರಾಮದ ಹಿಂದೂ ಯುವಕ ಅಶೋಕ ಕುಮಾರ ಇವನಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಲವಂತಪಡಿಸಲಾಯಿತು. ಇಲ್ಲಿ ಅಂಚಿನಲ್ಲಿರುವ ಅಲ್ಪಸಂಖ್ಯಾತರಿಗೆ ಬೇರೆ ದಾರಿಯೇ ಇಲ್ಲ. ಒಂದು ಅವರು ಈ ದೇಶದಿಂದ ವಲಸೆ ಹೋಗಬೇಕು ಅಥವಾ ಇಸ್ಲಾಂಗೆ ಮತಾಂತರಗೊಳ್ಳಬೇಕು. ಅದರ ಹೊರತಾಗಿ ಅವರು ಇಲ್ಲಿ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ’, ಎಂದು ‘ಹಿಂದುಸ್ ಆರ್ಗನೈಜೆಶನ ಆಫ್ ಸಿಂಧ’ನ ಸಂಸ್ಥಾಪಕ ಮತ್ತು ಮುಖ್ಯ ಸಂಘಟಕ ನಾರಾಯಣ ದಾಸ ಭಿಲ ಇವರು ಟ್ವೀಟ್ ಮಾಡಿದ್ದಾರೆ.