ಮುಸಲ್ಮಾನ ಆಕ್ರಮಕರು ಭಾರತದ ಮೇಲೆ ದಾಳಿ ಮಾಡಿ ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿ ಮತ್ತು ದರ್ಗಾಗಳನ್ನು ಕಟ್ಟಿದರು, ಈ ಇತಿಹಾಸ ಹೊಸತೇನಲ್ಲ. ಮುಸಲ್ಮಾನರು ಹಿಂದೂಗಳ ದೇವಸ್ಥಾನಗಳನ್ನು ಕೆಡಹುವ ಹಿಂದಿನ ಮುಖ್ಯ ಕಾರಣವೆಂದರೆ, ಇಸ್ಲಾಂನಲ್ಲಿ ಮೂರ್ತಿಪೂಜೆಗೆ ಸ್ಥಾನವಿಲ್ಲ ಹಾಗೂ ಅವರ ಧರ್ಮಗ್ರಂಥದಲ್ಲಿ ಇಂತಹ ಸ್ಥಳಗಳನ್ನು ಧ್ವಂಸ ಮಾಡಬೇಕೆಂದು ಹೇಳಲಾಗಿದೆ. ಮುಸಲ್ಮಾನ ದಾಳಿಕೋರರು ಅದನ್ನೇ ಪಾಲಿಸುತ್ತಿದ್ದರು ಹಾಗೂ ಅವರು ಭಾರತದಲ್ಲಿ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ಕೆಲವು ಇತಿಹಾಸತಜ್ಞರು ಮತ್ತು ಇಸ್ಲಾಮಿನ ಜ್ಞಾನವಿರುವವರು ಹೇಳುವುದೇನೆಂದರೆ, ಎಲ್ಲಿ ಇನ್ನಿತರ ಧರ್ಮದವರ ಪ್ರಾರ್ಥನಾಸ್ಥಳಗಳಿವೆಯೋ, ಅವುಗಳನ್ನು ಕೆಡವಿ ಅಲ್ಲಿ ಮಸೀದಿ ಕಟ್ಟುವುದು ಇಸ್ಲಾಮ್‌ಗನುಸಾರ ತಪ್ಪಾಗುತ್ತದೆ. ‘ಒಂದು ವೇಳೆ ಹಾಗಿರುತ್ತಿದ್ದರೆ, ಇಷ್ಟು ಆಕ್ರಮಕರು ಮಾಡಿರುವ ಕೃತ್ಯಗಳು ಇಸ್ಲಾಮ್‌ವಿರೋಧಿಯಾಗಿದ್ದವು ಹಾಗೂ ಇಂದು ಈ ಇಸ್ಲಾಮ್‌ವಿರೋಧಿ ಕೃತ್ಯಗಳನ್ನು ಅವರ ವಂಶಜರು ಸಮರ್ಥಿಸು ತ್ತಿದ್ದಾರೆ, ಅದು ಕೂಡ ತಪ್ಪಾಗಿದೆ’, ಎಂದೇ ಹೇಳಬೇಕಾಗುತ್ತದೆ. ಅದರಲ್ಲಿಯೂ ಹೀಗೆ ಸಮರ್ಥನೆ ಮಾಡುವವರು ಇಸ್ಲಾಮ್‌ನ ದೊಡ್ಡ ದೊಡ್ಡ ಧರ್ಮಗುರುಗಳು ಹಾಗೂ ಜ್ಞಾನಿಗಳಾಗಿದ್ದಾರೆ ಎಂಬುದು ವಿಶೇಷ ! ‘ಇದರ ಅರ್ಥವೇನಿರಬಹುದು ?’ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಒಂದು ವೇಳೆ ಇಸ್ಲಾಮ್‌ಗನುಸಾರ ಇತರ ಧರ್ಮದವರ ಪ್ರಾರ್ಥನಾಸ್ಥಳದಲ್ಲಿ ಮಸೀದಿ ನಿರ್ಮಿಸುವುದು ತಪ್ಪಾಗುತ್ತದೆ ಎಂಬುದು ಸತ್ಯವಾಗಿದ್ದರೆ, ದೇಶದಲ್ಲಿರುವ ಸಾವಿರಾರು ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಬೇಕಾಗುತ್ತದೆ. ಅವರ ಇಂದಿನ ಮಾನಸಿಕತೆಯನ್ನು ನೋಡುವಾಗ ಇದು ಅಸಾಧ್ಯವಾಗಿದೆ. ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಇತಿಹಾಸ ಸ್ಪಷ್ಟವಾಗಿರುವಾಗ ಮುಸಲ್ಮಾನರು ತಾವಾಗಿ ಈ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಲಿಲ್ಲ. ಅದಕ್ಕಾಗಿ ಹಿಂದೂಗಳು ನ್ಯಾಯಾಲಯ ದಲ್ಲಿ ಹೋರಾಡಿ ಅದನ್ನು ಪಡೆಯಬೇಕಾಯಿತು. ಆದ್ದರಿಂದ ಇನ್ನಿತರ ದೇವಸ್ಥಾನಗಳನ್ನೂ ಹೀಗೆಯೇ ಮಾಡಬೇಕಾಗುತ್ತದೆ, ಎಂಬುದರಲ್ಲಿ ಸಂಶಯವೇ ಇಲ್ಲ. ಇಂದು ದೇಶದಲ್ಲಿ ೨೦ ಕೋಟಿ ಮುಸಲ್ಮಾನರಿದ್ದಾರೆ; ಆದರೆ ಅವರಲ್ಲಿ ಪುರಾತತ್ವತಜ್ಞ ಕೆ.ಕೆ. ಮಹಮ್ಮದ ಇವರ ಹೊರತು ಒಬ್ಬ ಮುಸಲ್ಮಾನ ಕೂಡ ಇಲ್ಲಿ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡು ಅದನ್ನು ಹಿಂದೂಗಳಿಗೆ ಒಪ್ಪಿಸ ಬೇಕೆಂದು ಹೇಳುವುದಿಲ್ಲ.’ ಇದರಿಂದ ಮುಸಲ್ಮಾನರ ಭಾವನೆ ಹೇಗಿದೆ ಎಂಬುದು ಅರಿವಾಗುತ್ತದೆ. ಭಾರತದಲ್ಲಿ ಮೋಹನದಾಸ ಗಾಂಧಿಯವರು ಸರ್ವಧರ್ಮಸಮಭಾವದ ಗುಟುಕನ್ನು ಕುಡಿಸಿದರು; ಆದರೆ ಈ ಗುಟುಕನ್ನು ಕೇವಲ ಹಿಂದೂಗಳಿಗೆ ಅವರ ಮೂಗು ಒತ್ತಿ ಹಿಡಿದು ಕುಡಿಸಲಾಯಿತು, ಮುಸಲ್ಮಾನರು ಅದನ್ನು ಎಸೆದುಬಿಟ್ಟರು. ವಾಸ್ತವದಲ್ಲಿ ಅವರಿಗೆ ಗುಟುಕನ್ನು ಕುಡಿಸುವ ಪ್ರಯತ್ನವಾಗಲಿಲ್ಲ. ಆದ್ದರಿಂದ ಹಿಂದೂಗಳು ಮಾತ್ರ ಸರ್ವಧರ್ಮಸಮಭಾವವನ್ನು ಪಾಲಿಸುತ್ತಾ ಆತ್ಮಾಘಾತ ಮಾಡಿಕೊಳ್ಳಲು ಪ್ರಾರಂಭಿಸಿದರು. ಆದರೆ ಈಗ ಹಿಂದೂಗಳು ಈ ಗುಟುಕಿನ ಪ್ರಭಾವದಿಂದ ಹೊರಗೆ ಬರಲು ಪ್ರಾರಂಭಿಸಿದ್ದಾರೆ ಹಾಗೂ ಈಗ ಅವರಿಗೆ ಅವರ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಅರಿವಾಗುತ್ತಿದೆ. ಅವರಲ್ಲಿ ಧರ್ಮಾಭಿಮಾನ ಜಾಗೃತವಾಗುತ್ತಿದೆ ಹಾಗೂ ಅವರು ಈಗ ಅವರ ದೇವಸ್ಥಾನಗಳನ್ನು ಹಿಂದಿರುಗಿಸಲು ಹೇಳುತ್ತಿದ್ದಾರೆ. ಇದು ಹಿಂದೂಗಳಿಗೆ ಆನಂದದ ವಿಷಯವಾಗಿದ್ದರೂ ಅದಕ್ಕಾಗಿ ತುಂಬಾ ದೊಡ್ಡ ಸಂಘರ್ಷ ಮಾಡಬೇಕಾಗುವುದು. ಈ ಸಂಘರ್ಷವು ದೇವರು ಮತ್ತು ಸಂತರ ಆಶೀರ್ವಾದವಿಲ್ಲದೇ ಯಶಸ್ವಿಯಾಗಲಿಕ್ಕಿಲ್ಲ. ಇದನ್ನೇ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ‘ದೇವಸ್ಥಾನಗಳಿಗಾಗಿ ನಮ್ಮ ಸಂಘರ್ಷ ಮುಂದುವರಿಯುವುದು’, ಎಂದು ಹೇಳಿದ್ದಾರೆ. ಇದರಿಂದ ಹಿಂದೂಗಳಿಗೆ ಸಂಘರ್ಷ ಮಾಡದೆ ಬೇರೆ ಪರ್ಯಾಯವಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ಸಂತರ ಆಜ್ಞೆ ಪಾಲಿಸುವುದರಿಂದಲೇ ಹಿಂದೂಗಳ ಉದ್ಧಾರವಾಗಬಹುದು !
ಕಳೆದ ಅನೇಕ ದಶಕಗಳಲ್ಲಿ ಹಿಂದೂಗಳಿಂದ ಕಾಶಿ, ಮಥುರಾ ಮತ್ತು ಅಯೋಧ್ಯೆ ಈ ಮೂರು ಪ್ರಮುಖ ತೀರ್ಥಕ್ಷೇತ್ರಗಳಲ್ಲಿನ ಮಸೀದಿಗಳ ವಿಷಯದಲ್ಲಿ ಆಂದೋಲನ ನಡೆಯುತ್ತಿತ್ತು. ಈ ತೀರ್ಥಕ್ಷೇತ್ರಗಳನ್ನು ಮುಕ್ತಗೊಳಿಸುವುದು ಹಿಂದೂಗಳ ಪ್ರಮುಖ ಕಾರ್ಯವಾಗಿತ್ತು. ಅದನ್ನು ಹಿಂದೂಗಳು ಇಂದಿಗೂ ಮಾಡುತ್ತಿದ್ದಾರೆ. ಅದು ಇಂದಿನ ವರೆಗೆ ಪೂರ್ಣವಾಗಿಲ್ಲ. ಶ್ರೀರಾಮಮಂದಿರದ ವಿಷಯದಲ್ಲಿ ಹಿಂದೂಗಳಿಗೆ ಯಶಸ್ಸು ಸಿಕ್ಕಿತು ಹಾಗೂ ಅಲ್ಲಿ ಭವ್ಯ ದೇವಸ್ಥಾನ ನಿರ್ಮಾಣವಾಯಿತು; ಆದರೆ ಕಾಶಿ ಮತ್ತು ಮಥುರಾದಲ್ಲಿ ನ್ಯಾಯಾಂಗ ಸಂಘರ್ಷ ನಡೆಯುತ್ತಿದೆ. ಕಳೆದ ದಶಕದಿಂದ ಹಿಂದೂಗಳು ಮಧ್ಯಪ್ರದೇಶದಲ್ಲಿನ ಧಾರದಲ್ಲಿನ ಭೋಜಶಾಲೆ, ಕುತುಬಮಿನಾರ್, ತಾಜಮಹಾಲ್ ಇವುಗಳನ್ನೂ ಕೇಳುತ್ತಿದ್ದರು; ಆದರೆ ಅವುಗಳಲ್ಲಿನ ಭೋಜಶಾಲೆಯ ಹೊರತು ಉಳಿದ ೨ ಸ್ಥಳದಲ್ಲಿ ಹಿಂದೂಗಳಿಗೆ ಯಶಸ್ಸು ಸಿಗಲಿಲ್ಲ. ಈಗ ಹಿಂದೂಗಳಲ್ಲಿ ಹೆಚ್ಚೆಚ್ಚು ಜಾಗೃತಿಯಾಗುತ್ತಿದ್ದು ಸಂಭಲದಲ್ಲಿನ ಹರಿಹರ ದೇವಸ್ಥಾನದ ವಿಷಯದಲ್ಲಿ ಹಿಂದೂಗಳ ಹೋರಾಟ ಆರಂಭವಾಗಿದೆ. ಇಲ್ಲಿ ಕಲಿಯುಗದ ಅಂತ್ಯದಲ್ಲಿ ಭಗವಾನ ವಿಷ್ಣುವಿನ ಕಲ್ಕಿ ಅವತಾರ ಆಗಲಿಕ್ಕಿದೆ. ಆದ್ದರಿಂದ ಈ ದೇವಸ್ಥಾನಕ್ಕೂ ಅಷ್ಟೇ ಮಹತ್ವವಿದೆ. ಅದರ ಜೊತೆಗೆ ಅಜ್ಮೇರ ದರ್ಗಾದ ವಿಷಯದಲ್ಲಿ ನ್ಯಾಯಾಂಗ ಹೋರಾಟ ಆರಂಭವಾಗಿದೆ. ಈ ಹೋರಾಟ ನಡೆಯುತ್ತಿರುವಾಗಲೇ ಮಹಾರಾಷ್ಟ್ರದ ಕಲ್ಯಾಣದಲ್ಲಿನ ದುರ್ಗಾಡಿ ದೇವಸ್ಥಾನದ ಹೋರಾಟವನ್ನು ಹಿಂದೂಗಳು ಗೆದ್ದುಕೊಂಡಿರು ವುದು ದೊಡ್ಡ ಯಶಸ್ಸಾಗಿದೆ. ಇಲ್ಲಿ ಕಳೆದ ೫ ದಶಕಗಳಿಂದ ಹಿಂದೂಗಳು ಹೋರಾಡುತ್ತಿದ್ದರು ಕೊನೆಗೆ ದೇವಿಯ ಆಶೀರ್ವಾದದಿಂದ ಯಶಸ್ಸುಗಳಿಸಲು ಸಾಧ್ಯವಾಯಿತು. ಈಗ ಈ ಮೇಲಿನ ಪ್ರಕರಣಗಳಲ್ಲಿಯೂ ಮುಂಬರುವ ಕೆಲವು ವರ್ಷಗಳಲ್ಲಿ ಹಿಂದೂಗಳಿಗೆ ಯಶಸ್ಸು ಸಿಗುವುದು, ಎಂದು ಆಶಿಸೋಣ. ಆ ಅವಧಿಯಲ್ಲಿಯೆ ದೇಶದಲ್ಲಿನ ಇನ್ನಿತರ ಅನೇಕ ದೇವಸ್ಥಾನಗಳ ಮುಕ್ತಿಗಾಗಿ ಹೋರಾಟ ಆರಂಭವಾಗಬಹುದು. ಉತ್ತರಪ್ರದೇಶದಲ್ಲಿ ಕೆಲವೊಂದು ಸ್ಥಳದಲ್ಲಿ ಅದು ಆರಂಭವಾಗಿದೆ. ಬೇರೆ ಕಡೆಗಳಲ್ಲಿಯೂ ಆರಂಭವಾಗಬಹುದು. ಪೂ. ಸೀತಾರಾಮ ಗೋಯಲ ಇವರ ದೇವಸ್ಥಾನಗಳಿಗೆ ಸಂಬಂಧಿಸಿದ ಪುಸ್ತಕದಲ್ಲಿ ಎಲ್ಲೆಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆಯೋ, ಅಂತಹ ೧೮ ಸಾವಿರ ದೇವಸ್ಥಾನಗಳ ಮಾಹಿತಿ ನೀಡಿದ್ದಾರೆ. ಹಿಂದೂಗಳು ಈಗ ಎಲ್ಲ ದೇವಸ್ಥಾನಗಳನ್ನು ಮುಕ್ತಗೊಳಿಸಲು ಸಂಘಟಿತರಾಗುತ್ತಿದ್ದಾರೆ; ಏಕೆಂದರೆ ದೇವಸ್ಥಾನಗಳು ಹಿಂದೂಗಳ ಸ್ವಾಭಿಮಾನವಾಗಿದೆ.
ಅವುಗಳ ಮೇಲೆ ಆಘಾತ ಮಾಡಿ ಹಿಂದೂಗಳಿಗೆ ಸವಾಲೊಡ್ಡಲಾಗಿತ್ತು. ಈಗ ಹಿಂದೂಗಳು ಈ ಸವಾಲನ್ನು ಸ್ವೀಕರಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ‘ಪ್ರತಿಯೊಂದು ಮಸೀದಿಯ ಕುರಿತು ಹಿಂದೂಗಳು ದಾವೆ ಹೂಡಬಾರದು’, ಎನ್ನುವ ಅರ್ಥದ ಹೇಳಿಕೆಗಳು ಕೆಲವು ಹಿಂದೂ ರಾಜಕಾರಣಿಗಳಿಂದ ಕೇಳಿ ಬರುತ್ತಿದೆ. ಅವರ ಹೇಳಿಕೆಯ ಹಿಂದಿನ ಉದ್ದೇಶವೇನೆಂದರೆ, ದೇಶದಲ್ಲಿ ಅಶಾಂತಿ ಸೃಷ್ಟಿಸಿ ಅದರಿಂದ ಭಾರತದ ವಿಕಾಸ ಹಾಗೂ ವಿದೇಶ ನೀತಿಯ ಮೇಲೆ ಪರಿಣಾಮವಾಗಬಹುದು ಎಂಬುದಾಗಿದೆ. ಅವರ ಹೇಳಿಕೆ ಸ್ವಲ್ಪ ಮಟ್ಟಿಗೆ ಯೋಗ್ಯವೆಂದು ಅನಿಸಿದರೂ, ಈಗ ಸಂತರಿಗೆ ಏನನಿಸುತ್ತದೋ, ಅದಕ್ಕನುಸಾರ ವರ್ತಿಸುವುದು ಆವಶ್ಯಕವಾಗಿದೆ. ಸಂತರಿಗೆ ತ್ರಿಕಾಲಜ್ಞಾನವಿರುತ್ತದೆ. ಆದ್ದರಿಂದ ‘ಭವಿಷ್ಯದ ಉದರ ದಲ್ಲಿ ಏನೆಲ್ಲ ಅಡಗಿದೆಯೋ, ಅದೇ ಮುಂದೆ ಬರಲಿಕ್ಕಿದೆ, ಅದನ್ನು ನೋಡಿದಾಗ ಸಂತರು ಹೇಳುವುದನ್ನು ಪಾಲಿಸಿದರೆ ನಮ್ಮ ಉದ್ಧಾರವೇ ಆಗುವುದು, ಎನ್ನುವ ಭಾವವನ್ನಿಟ್ಟು ಕೃತಿ ಮಾಡಬೇಕಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ೧೬ ನೇ ವಯಸ್ಸಿನಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪನೆಯ ಕುರಿತು ರಾಯರೇಶ್ವರನ ಚರಣಗಳಲ್ಲಿ ಪ್ರಾರ್ಥನೆ ಮಾಡಿದರು ಹಾಗೂ ಮುಂದಿನ ಕೆಲವೇ ದಶಕಗಳಲ್ಲಿ ಭಾರತದಲ್ಲಿ ಹಿಂದವೀ ಸ್ವರಾಜ್ಯ ನಿರ್ಮಾಣವಾಯಿತು. ಒಂದು ವೇಳೆ ‘ಇದು ಅಸಾಧ್ಯ ಹಾಗೂ ಅದರಿಂದ ಸಂಘರ್ಷ ವಾಗಬಹುದು’, ಎಂದು ವಿಚಾರ ಮಾಡಿದ್ದರೆ, ಅದು ಸಾಧ್ಯವಾಗು ತ್ತಿರಲಿಲ್ಲ. ಸಂಘರ್ಷ ಮಾಡಬೇಕಾಯಿತು ಎಂಬುದು ಸತ್ಯವೇ ಆಗಿತ್ತು; ಆದರೆ ಸಂಘರ್ಷದ ಹೊರತು ಯಶಸ್ಸು ಸಿಗುವುದಿಲ್ಲ, ಎಂಬುದು ಕೂಡ ಅಷ್ಟೇ ಸತ್ಯವಾಗಿದೆ. ಆದ್ದರಿಂದ ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಸಂಘರ್ಷ ಮಾಡಲು ಸಿದ್ಧರಾಗಿದ್ದೇವೆಯೆಂದು ಹೇಳುತ್ತಿದ್ದಾರೆ; ಏಕೆಂದರೆ ಸಂಘರ್ಷ ದಿಂದ ಹಿಂದೂಗಳಿಗೇ ವಿಜಯವಾಗುವುದು ಹಾಗೂ ಮುಂದೆ ಭಾರತ ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಪ್ರಯಾಣಿಸಲಿಕ್ಕಿದೆ ಎಂಬುದು ಅವರಿಗೆ ತಿಳಿದಿದೆ. ಒಂದು ಸಾವಿರ ವರ್ಷಗಳ ಗುಲಾಮಗಿರಿಯ ಇತಿಹಾಸವನ್ನು ಅಳಿಸಿ ಹಿಂದೂಗಳು ದೇವಸ್ಥಾನಗಳನ್ನು ಮುಕ್ತಗೊಳಿಸಬೇಕಾಗಿದೆ. ಅಂತಹ ಸಂದರ್ಭದಲ್ಲಿ ದೇಶದಲ್ಲಿ ಯಾರಾದರೂ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದರೆ, ಅದನ್ನು ಯೋಗ್ಯ ರೀತಿಯಲ್ಲಿ ಬಂದೋಬಸ್ತ್ ಮಾಡಲು ಹಿಂದೂಗಳು ಆರಿಸಿ ಕಳುಹಿಸಿದ ಸರಕಾರಗಳು ಪ್ರಯತ್ನಿಸಬೇಕು. ಸದ್ಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹಾಗೆ ಪ್ರಯತ್ನಿಸುತ್ತಿದ್ದಾರೆ. ಹಾಗೆಯೆ ಆದರೆ ಎಲ್ಲವೂ ಶಾಂತಿಯಿಂದ ನಡೆಯಬಹುದು !