
೨೦೨೦ ನೇ ಇಸವಿಯಿಂದ ಜಗತ್ತಿನಾದ್ಯಂತದ ಜನರಿಗೆ ಕೊರೋನಾ ವಿಷಾಣುಗಳ (ವೈರಸ್) ಸಂಕಟ ಎದುರಾಗಿದೆ ಮತ್ತು ೨ ವರ್ಷಗಳಾದರೂ ಇದುವರೆಗೂ ಆ ವಿಷಾಣುಗಳ ಸೋಂಕು ಜನರಿಗೆ ಆಗುತ್ತಲೇ ಇದೆ. ಅಂತಹುದರಲ್ಲಿ ಈಗ ಕೊರೋನಾದ ಹೊಸ ತಳಿಯಾಗಿರುವ ಓಮಿಕ್ರಾನ್ ಹೆಸರಿನ ವಿಷಾಣುಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಕೊರೋನಾ ವಿಷಾಣುಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಯಾವ ನಾಮಜಪವನ್ನು ಮಾಡಬೇಕು ಮತ್ತು ಅದನ್ನು ಎಷ್ಟು ಸಮಯ ಮಾಡಬೇಕು ?, ಎಂಬ ಮಾಹಿತಿ, ಹಾಗೆಯೇ ಇದರ ಧ್ವನಿಮುದ್ರಿತ ನಾಮಜಪವನ್ನು ಸನಾತನ ಸಂಸ್ಥೆಯ ಜಾಲತಾಣದಲ್ಲಿ ಕೊಡಲಾಗಿದೆ. ಜಗತ್ತಿನಾದ್ಯಂತ ಅನೇಕರಿಗೆ ಇದರ ಲಾಭವಾಗಿದೆ. ಈಗ ಓಮಿಕ್ರಾನ್ ಈ ತಳಿಯೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಮಾಡುವ ನಾಮಜಪವನ್ನು ಇಲ್ಲಿ ಕೊಡಲಾಗಿದೆ.
೧. ನಾಮಜಪ
ಓಂ ನಮೋ ಭಗವತೆ ವಾಸುದೇವಾಯ | ಶ್ರೀ ದುರ್ಗಾದೇವೈ ನಮಃ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
ಈ ೫ ನಾಮಜಪಗಳು ಸೇರಿ ಒಂದು ನಾಮಜಪವಾಗಿದೆ ಮತ್ತು ಅದನ್ನು ಇಲ್ಲಿ ಕೊಟ್ಟಿರುವ ಕ್ರಮದಲ್ಲಿ ಜಪಿಸಬೇಕು.
೨. ನಾಮಜಪವನ್ನು ಮಾಡುವ ಕಾಲಾವಧಿ
ಅ. ಯಾವುದಾದರೊಂದು ಪ್ರದೇಶದಲ್ಲಿ ಓಮಿಕ್ರಾನ್ ತಳಿಯ ವಿಷಾಣುಗಳು ಹರಡಿದರೆ ಅಲ್ಲಿನ ಜನರು ಆ ವಿಷಾಣುಗಳಿಗೆ ಬಲಿಯಾಗಬಹುದು. ಅಂತಹ ಸಮಯದಲ್ಲಿ ಆ ವಿಷಾಣುಗಳ ಸೋಂಕು ತಮಗಾಗದಂತೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿಬಂಧಕದಂತೆ ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಜಪಿಸಬೇಕು.
ಆ. ಆ ವಿಷಾಣುಗಳ ಸೋಂಕಾದರೆ ಅವುಗಳ ಉಚ್ಚಾಟನೆಯಾಗಲು ಈ ನಾಮಜಪವನ್ನು ಸೋಂಕು ತಗಲಿರುವ ತೀವ್ರತೆಗನುಸಾರ ಮುಂದಿನ ಕಾಲಾವಧಿಗಾಗಿ ಪ್ರತಿದಿನ ಮಾಡಬೇಕು.
| ವಿಷಾಣುಗಳ ಸೋಂಕು ಆಗಿರುವ ತೀವ್ರತೆ | ನಾಮಜಪವನ್ನು ಮಾಡುವ ಕಾಲಾವಧಿ (ಗಂಟೆಗಳು) |
| ೧. ಮಂದ | ೧ ರಿಂದ ೨ |
| ೨. ಮಧ್ಯಮ | ೩ ರಿಂದ ೪ |
| ೩. ತೀವ್ರ | ೫ ರಿಂದ ೬ |
೩. ಧ್ವನಿಮುದ್ರಿತ ನಾಮಜಪ
ನಾಮಜಪವನ್ನು ಕೇಳಿ ಅದನ್ನು ಜಪಿಸಲು ಸನಾತನ ಚೈತನ್ಯವಾಣಿ ಆ್ಯಪ್ ಇಂದೇ ಡೌನ್‌ಲೋಡ್ ಮಾಡಿ! (ಇಲ್ಲಿ ಕ್ಲಿಕ್ ಮಾಡಿ)
ಅಥವಾ ಇಲ್ಲಿಯೂ ಕೇಳಬಹುದು –
೪. ಕೊರೋನಾ ಮೂಲ ವಿಷಾಣು ಮತ್ತು ಓಮಿಕ್ರಾನ್ ತಳಿ ಇವುಗಳಲ್ಲಿ ಅರಿವಾದ ವ್ಯತ್ಯಾಸ
ಕೊರೋನಾ ವಿಷಾಣುಗಳಿಗಿಂತ ಓಮಿಕ್ರಾನ್ ತಳು ಕಡಿಮೆ ಅಪಾಯಕಾರಿಯಾಗಿವೆ ಎಂದು ಆಧುನಿಕ ವೈದ್ಯರು (ಡಾಕ್ಟರಗಳು) ಹೇಳುತ್ತಿದ್ದಾರೆ.
| ಕೊರೋನಾ ಮೂಲ ವಿಷಾಣುಗಳು | ಓಮಿಕ್ರಾನ್ ತಳಿ | |
| ೧. ಸೂಕ್ಷ್ಮ | ಹೆಚ್ಚು ಸೂಕ್ಷ್ಮ | ಕಡಿಮೆ ಸೂಕ್ಷ್ಮ (ಟಿಪ್ಪಣಿ) |
| ೨. ಸೋಂಕಾದರೆ ಕಾಣಿಸುವ ಲಕ್ಷಣಗಳು | ಜ್ವರ, ಶೀತ ಅಥವಾ ಕೆಮ್ಮು ಬರುವುದು | ಜೀರ್ಣಾಂಗವ್ಯೂಹ ಹಾಳಾಗುವುದು |
| ೩. ಲಕ್ಷಣಗಳು ತಕ್ಷಣ ಗಮನಕ್ಕೆ ಬರುವುದು/ಬರದಿರುವುದು | ಲಕ್ಷಣಗಳು ತಕ್ಷಣ ಗಮನಕ್ಕೆ ಬರದಿರುವುದು | ಲಕ್ಷಣಗಳು ತಕ್ಷಣ ಗಮನಕ್ಕೆ ಬರುವುದು |
ಟಿಪ್ಪಣಿ – ಆಪತ್ಕಾಲದ ತೀವ್ರತೆಯಲ್ಲಿ ಹೆಚ್ಚಳವಾಗುತ್ತಿರುವಾಗ ಕೆಟ್ಟ ಶಕ್ತಿಗಳೊಂದಿಗೆ ಮಾಡುವ ಯುದ್ಧವು ಸೂಕ್ಷ್ಮ ಯುದ್ಧದಿಂದ ಸ್ಥೂಲ ಯುದ್ಧದ ಕಡೆಗೆ (ಮೂರನೇ ಮಹಾಯುದ್ಧದ ಕಡೆಗೆ) ಹೇಗೆ ಕ್ರಮಿಸುತ್ತೇದೆಯೋ, ಹಾಗೆಯೇ ಶಾರೀರಿಕ ರೋಗಗಳನ್ನು ಉದ್ಭವಿಸುವ ವಿಷಾಣುರೂಪಿ ಕೆಟ್ಟ ಶಕ್ತಿಗಳೂ ಸೂಕ್ಷ್ಮದಿಂದ ಸ್ಥೂಲದ ಕಡೆಗೆ ಹೋಗುತ್ತಿವೆ. ಅದಕ್ಕನುಸಾರ ಕೊರೋನಾದ ಮೂಲ ವಿಷಾಣುಗಳ ನಂತರ ಬಂದಿರುವ ಓಮಿಕ್ರಾನ್ ತಳಿಯು ಕಡಿಮೆ ಸೂಕ್ಷ್ಮವಾಗಿವೆ.
೫. ಪ್ರಾರ್ಥನೆ
‘ಇಲ್ಲಿ ಕೊಟ್ಟಿರುವ ನಾಮಜಪದಿಂದ ಗುರುಕೃಪೆಯಿಂದ ಜಗತ್ತಿನಾದ್ಯಂತ ಎಲ್ಲರಿಗೂ ಲಾಭವಾಗಿ ಓಮಿಕ್ರಾನ್ ತಳಿಯ ಜಗತ್ತಿನಾದ್ಯಂತದ ಪ್ರಭಾವವು ಹತೋಟಿಗೆ ಬರಬೇಕು ಮತ್ತು ಅದರ ಹರಡುವಿಕೆ ನಿಲ್ಲಬೇಕು, ಹಾಗೆಯೇ ಈ ನಾಮಜಪವನ್ನು ಮಾಡುವ ನಿಮಿತ್ತದಿಂದ ಅನೇಕರಿಗೆ ಈ ಆಪತ್ಕಾಲದಲ್ಲಿ ಸಾಧನೆ ಮಾಡುವ ಗಾಂಭೀರ್ಯವು ಗಮನಕ್ಕೆ ಬಂದು ಅವರು ಸಾಧನೆಯನ್ನು ಆರಂಭಿಸಬೇಕು, ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ !’
– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೨.೨೦೨೧)
ಸಾಧಕರಿಗೆ ಸೂಚನೆ !
೧. ಯಾವ ಪರಿಸರದಲ್ಲಿ ‘ಓಮಿಕ್ರಾನ್’ ತಗಲಿರುವವರು ಸಿಕ್ಕಿದರೆ, ಅಲ್ಲಿ ‘ಓಮಿಕ್ರಾನ್’ಗೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿಬಂಧಾತ್ಮಕ ನಾಮಜಪವನ್ನು ಮಾಡಬೇಕಾಗುವುದರಿಂದ ಸದ್ಯ ‘ಕೊರೋನಾ’ದ ಮೇಲೆ ಪ್ರತಿಬಂಧಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ನೀಡುವ ನಾಮಜಪ (ಶ್ರಿದುರ್ಗಾ- ಶ್ರೀದತ್ತ- ಶಿವ ಇವುಗಳನ್ನು ಒಟ್ಟಿಗೆ ಮಾಡುವ ನಾಮಜಪ) ಮಾಡುವುದನ್ನು ಸಾಧಕರು ನಿಲ್ಲಿಸಬಹುದು. ಯಾವ ಪರಿಸರದಲ್ಲಿ ಇದುವರೆಗೆ ‘ಓಮಿಕ್ರಾನ್’ದ ಸೋಂಕು ತಗಲಿಲ್ಲವೋ, ಅಲ್ಲಿ ಸದ್ಯ ಯಾವ ರೀತಿ ‘ಕೊರೊನಾ’ದ ಮೇಲೆ ಪ್ರತಿಬಂಧಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ನೀಡುವ ನಾಮಜಪವನ್ನು ಮಾಡುತ್ತೇವೆಯೋ, ಅದೇ ರೀತಿ ಮುಂದುವರೆಸಬೇಕು.
೨. ‘ಓಮಿಕ್ರಾನ್’ ಅಥವಾ ‘ಕೊರೋನಾ’ ಇವುಗಳ ಮೇಲೆ ಪ್ರತಿಬಂಧಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಕೊಡುವ ನಾಮಜಪವನ್ನು ಮಾಡಿದ ನಂತರ ಉಳಿದ ಸಮಯದಲ್ಲಿ ಸಾಧಕರು ಸದ್ಯ ಯಾವ ರೀತಿ ಪ್ರಾಣಶಕ್ತಿವಹನದ ಪದ್ಧತಿಗನುಸಾರ ಕಂಡುಹಿಡಿದು ನಾಮಜಪವನ್ನು ಮಾಡುತ್ತಾರೆಯೋ, ಅದೇರೀತಿ ಮಾಡಬೇಕು.
೩. ಈ ಮೊದಲು ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪಗಳ ಬಗೆಗಿನ ಸೂಚನೆಯನ್ನು ಎಲ್ಲೆಡೆಯಲ್ಲಿನ ಸಾಧಕರಿಗೆ ಸ್ಪಷ್ಟಪಡಿಸಲಾಗಿದೆ. ಅದರಂತೆ ಆ ನಾಮಜಪವನ್ನೂ ಮುಂದುವರೆಸಬೇಕು.
– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೨.೨೦೨೧)
ಈ ನಾಮಜಪವು ‘ಸನಾತನ ಚೈತನ್ಯವಾಣಿ’ಯಲ್ಲಿಯೂ ಲಭ್ಯವಿದೆ. ‘ಸನಾತನದ ಚೈತನ್ಯವಾಣಿ’ಯಲ್ಲಿ ಡೌನಲೋಡ್ ಮಾಡಲು https://www.sanatan.org/Chaitanyavani ಈ ಲಿಂಕಿನಲ್ಲಿ ನೋಡಿರಿ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !