
ನವೆಂಬರ್ ೨೦೨೫ ರ ಮೊದಲ ವಾರದಲ್ಲಿ ಪೂ. ಕರ್ವೆ ಮಾಮಾ (ಸನಾತನ ಸಂಸ್ಥೆಯ ೨೩ ನೇ ವ್ಯಷ್ಟಿ ಸಂತ ಪೂ. ವಿನಾಯಕ ಕರ್ವೆ, ವಯಸ್ಸು ೮೩ ವರ್ಷ) ೨-೩ ದಿನಗಳ ಕಾಲ ಕಾರವಾರದಲ್ಲಿರುವ ತಮ್ಮ ಮನೆಗೆ ಹೋಗಿದ್ದರು. ಈ ಅವಧಿಯಲ್ಲಿ ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ ಅವರು ಹೊರಗೆ ತಿರುಗಾಡಲು ಹೋಗುತ್ತಿದ್ದರು ಮತ್ತು ಜಿಜ್ಞಾಸುಗಳಿಗೆ ಸನಾತನ ಪಂಚಾಂಗದ ಬಗ್ಗೆ ಮಾಹಿತಿ ನೀಡಿ ಪಂಚಾಂಗಗಳನ್ನು ವಿತರಿಸುತ್ತಿದ್ದರು. ಈ ವೇಳೆ ಮರಾಠಿ ಮತ್ತು ಕನ್ನಡ ಭಾಷೆಯ ೮೦ ಸನಾತನ ಪಂಚಾಂಗಗಳನ್ನು ವಿತರಿಸಿದರು.
ಈ ಕುರಿತು ಮಾತನಾಡಿದ ಅವರು, ‘ನಾವು ತಳಮಳದಿಂದ ಸೇವೆ ಮಾಡಿದರೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಖಂಡಿತ ಸಹಾಯ ಮಾಡುತ್ತಾರೆ ! ಎಂದರು. ಈ ಸೇವೆಯ ಸಂದರ್ಭದಲ್ಲಿ ತಮಗಾದ ಅನುಭೂತಿಯನ್ನು ಹಂಚಿಕೊಳ್ಳುತ್ತಾ, ‘ಒಮ್ಮೆಯಂತೂ ನನ್ನಿಂದ ಒಂದೇ ಸ್ಥಳದಲ್ಲಿ ೫ ಸನಾತನ ಪಂಚಾಂಗಗಳು ವಿತರಣೆಯಾದವು. ಹೀಗೆ ೩-೪ ಕಡೆಗಳಲ್ಲಿ ಆಯಿತು. ನಾನು ಪಂಚಾಂಗ ವಿತರಣೆಯ ಸೇವೆಯನ್ನು ಮಾಡುತ್ತಿರುವಾಗ, ಕೆಲವು ಪರಿಚಿತ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಅರ್ಪಣೆಯನ್ನು ಸಹ ನೀಡಿದರು. ಪರಮ ಪೂಜ್ಯರೇ ಎಲ್ಲವನ್ನೂ ಮಾಡಿಸುವವರಾಗಿದ್ದಾರೆ ಎಂದರು.
– ಶ್ರೀ. ದೀಪಕ ರಾಮಚಂದ್ರ ಛತ್ರೆ, ರಾಯಂಗಿಣಿ, ಬಾಂಧವಡಾ, ಫೋಂಡಾ, ಗೋವಾ (ನವೆಂಬರ್ ೨೦೨೫).
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !