
೧. ಮನುಷ್ಯ ಮತ್ತು ದೇವತೆಗಳ ನಡುವಿನ ಕೊಂಡಿ ಎಂದರೆ ಋಷಿಗಳು !
ಪಿತೃಋಣ, ಸಮಾಜಋಣ, ಋಷಿಋಣ ಮತ್ತು ದೇವಋಣವನ್ನು ತೀರಿಸುವುದು, ಮನುಷ್ಯನ ಧರ್ಮ ವಾಗಿದೆ. ಪಿತೃಗಳು ಮತ್ತು ಸಮಾಜ ದೊಂದಿಗೆ ನಮ್ಮ ಸಂಬಂಧ ಇರುವುದರಿಂದ ನಮ್ಮ ಮೇಲಿರುವ ಅವರ ಋಣದ ಬಗ್ಗೆ ನಮಗೆ ಸ್ವಲ್ಪಮಟ್ಟಿಗೆ ಕಲ್ಪನೆ ಇರುತ್ತದೆ. ದೇವರಭಕ್ತಿಯಿಂದಾಗಿ ದೇವಋಣದ ಕಲ್ಪನೆ ಮಾಡಿಕೊಳ್ಳಬಹುದು; ಆದರೆ ಋಷಿಗಳ ಕಾರ್ಯವು ಬುದ್ಧಿಗೆ ನಿಲುಕದ್ದಾಗಿರುವುದರಿಂದ ಕಲಿಯುಗದಲ್ಲಿ ಋಷಿಋಣದ ಮಹತ್ವವು ಮಾನವನ ಗಮನಕ್ಕೆ ಬರುವುದಿಲ್ಲ. ಧರ್ಮದ ಯಾವ ಯಾವ ಜ್ಞಾನವು ಪೃಥ್ವಿಯಲ್ಲಿ ಲಭ್ಯವಿದೆಯೋ, ಅದರ ಕರ್ತ ಮತ್ತು ಧರ್ತ (ಧಾರಕ) ಋಷಿಗಳಾಗಿದ್ದಾರೆ. ಋಷಿಗಳಿಂದಾಗಿ ಕೇವಲ ಹಬ್ಬ, ವ್ರತ, ಪರಂಪರೆ, ಪಂಚಾಂಗ, ತಿಥಿ, ಪೂಜಾವಿಧಿ, ಯಜ್ಞ-ಯಾಗ, ಹೋಮ-ಹವನ, ಜ್ಯೋತಿಷ್ಯ, ವಾಸ್ತು, ಆಯುರ್ವೇದ ಈ ವಿಷಯಗಳ ಜ್ಞಾನ ಮಾತ್ರ ಮಾನವನಿಗೆ ಸಿಕ್ಕಿತೇ ?
ಇಲ್ಲ ! ನಿಜ ಹೇಳಬೇಕೆಂದರೆ ಮನುಷ್ಯ ಮತ್ತು ದೇವತೆಗಳ ನಡುವಿನ ಕೊಂಡಿ ಎಂದರೆ ಋಷಿಗಳೇ ಆಗಿದ್ದಾರೆ. ಋಷಿಗಳಿಂದಾಗಿ ದೇವತೆ ಎಂದರೆ ಯಾರು ? ಅವರು ಹೇಗೆ ಕಾಣಿಸುತ್ತಾರೆ ?
ಅವತಾರ ಎಂದರೆ ಯಾರು ? ಬ್ರಹ್ಮಾಂಡ ಎಂದರೆ ಏನು ?, ಇಂತಹ ವಿಷಯಗಳು ಮಾನವನಿಗೆ ತಿಳಿದವು.
೨. ಋಷಿಋಣ ತೀರಿಸಲು ಅವರ ಆಜ್ಞಾಪಾಲನೆ ಮಾಡಿ !
ಕಳೆದ ೯ ವರ್ಷಗಳಲ್ಲಿ ಸನಾತನದ ಮೂವರೂ ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು) ಋಷಿಗಳ ಆಜ್ಞಾಪಾಲನೆಯನ್ನು ಹೇಗೆ ಮಾಡಬೇಕು ?, ಎಂಬುದರ ಸರ್ವೋತ್ತಮ ಉದಾಹರಣೆಯನ್ನು ನಮ್ಮೆಲ್ಲರ ಮುಂದೆ ಇಟ್ಟಿದ್ದಾರೆ. ಸನಾತನದ ಮೂವರೂ ಗುರುಗಳ ಆದರ್ಶವನ್ನು ನಮ್ಮ ಮುಂದೆ ಇಟ್ಟುಕೊಂಡು ನಾವು ಋಷಿಗಳ ಆಜ್ಞಾಪಾಲನೆ ಮಾಡೋಣ.
– ಶ್ರೀ. ವಿನಾಯಕ ಶಾನಭಾಗ
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !