
ಒಮ್ಮೆ ನಾನು ಪ.ಪೂ. ಡಾಕ್ಟರರಿಗೆ ಹೀಗೆಂದೆ, ನಿಮ್ಮ ಮೂಲ ಸ್ವರೂಪವನ್ನು (ನಿಮ್ಮ ದೈವೀ ಅವತಾರವನ್ನು) ಗುರುತಿಸಲು ನಮಗೆ ಸಾಧ್ಯವಿಲ್ಲ. ಅದು ನಮಗೆ ಬಹಳ ಕಷ್ಟರಕವಾಗಿದೆ. ಅದಕ್ಕೆ ಪ.ಪೂ ಡಾಕ್ಟರರು ಮಂದಹಾಸ ಬೀರುತ್ತಾ ಮಧುರವಾಗಿ ನಕ್ಕರು. ನನಗೆ ಅನಿಸುತ್ತಿತ್ತು, ‘ಪರಾತ್ಪರ ಗುರು ಡಾ. ಆಠವಲೆ ಅವರು ಅವತಾರಿ ಪುರುಷರಾಗಿದ್ದಾರೆ.
ಪರಾತ್ಪರ ಗುರು ಪಾಂಡೆ ಮಹಾರಾಜರು ಮತ್ತು ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಅವರಂತಹ ಉನ್ನತ ಮಟ್ಟದ ಸಂತರು ನಿಜವಾದ ಅರ್ಥದಲ್ಲಿ ಪ.ಪೂ. ಡಾಕ್ಟರರ ಮೂಲ ದೈವೀ ಸ್ವರೂಪವನ್ನು ಗುರುತಿಸಿದ್ದರು. ಪರಾತ್ಪರ ಗುರು ಪಾಂಡೆ ಮಹಾರಾಜರು ಮತ್ತು ಪ.ಪೂ. ಡಾಕ್ಟರರ ನಡುವೆ ದೂರವಾಣಿಯ ಮೂಲಕ ಸಂಭಾಷಣೆ ನಡೆಯುತ್ತಿತ್ತು. ಆಗ ಅವರಲ್ಲಾದ ಸಂವಾದವನ್ನು ಮುಂದೆ ನೀಡಲಾಗಿದೆ.
ಪರಾತ್ಪರ ಗುರು ಪಾಂಡೆ ಮಹಾರಾಜರು ತಮ್ಮ ೯೦ ನೇ ವಯಸ್ಸಿನಲ್ಲೂ ಬೆಳಗ್ಗೆಯಿಂದ ರಾತ್ರಿಯ ವರೆಗೆ ಬಹಳ ಉತ್ಸಾಹದಿಂದ ಇರುತ್ತಿದ್ದರು. ಒಮ್ಮೆ ಪ.ಪೂ. ಡಾಕ್ಟರರು ಪರಾತ್ಪರ ಗುರು ಪಾಂಡೆ ಮಹಾರಾಜರಿಗೆ ನುಡಿದರು, ಮಹಾರಾಜರೇ, ನೀವು ಈ ವಯಸ್ಸಿನಲ್ಲಿಯೂ ದಿನವಿಡೀ ಕಾರ್ಯನಿರತರಾಗಿದ್ದರೂ ಎಷ್ಟು ಉತ್ಸಾಹದಿಂದ ಇರುತ್ತೀರಿ ! ನಾನು ಮಾತ್ರ ಆಯಾಸದಿಂದ ಮಲಗಿರುತ್ತೇನೆ.
ಇದಕ್ಕೆ ಪರಾತ್ಪರ ಗುರು ಪಾಂಡೆ ಮಹಾರಾಜರು ಹೀಗೆಂದರು, ಭಗವಂತನು ನಿದ್ರೆ ಮಾಡುವುದು ಆವಶ್ಯಕವಾಗಿದೆ. ಶೇಷಶಾಯಿ ವಿಷ್ಣು ಕೂಡ ಕ್ಷೀರಸಾಗರದಲ್ಲಿ ಮಲಗಿರುತ್ತಾನೆ. ಭಗವಂತನ ನಿದ್ರಾವಸ್ಥೆಯ ಊರ್ಜೆಯ ಬಲದ ಮೇಲೆ ಈ ಜಗತ್ತು ಕಾರ್ಯನಿರತ ಆಗಿರುತ್ತದೆ. ಭಗವಂತನು ಸದಾ ಜಾಗೃತಾವಸ್ಥೆಯಲ್ಲಿ ಇದ್ದರೆ ಅವನ ಚೈತನ್ಯ ಮತ್ತು ಶಕ್ತಿಯನ್ನು ಈ ಜಗತ್ತಿಗೆ ಸಹಿಸಲು ಸಾಧ್ಯವಾಗುವುದಿಲ್ಲ, ತಡೆದುಕೊಳ್ಳಲು ಆಗುವುದಿಲ್ಲ. ಈ ಮೂಲಕ ‘ಪರಾತ್ಪರ ಗುರು ಪಾಂಡೆ ಮಹಾರಾಜರು ಪ.ಪೂ. ಡಾಕ್ಟರರನ್ನು ಸುಂದರವಾಗಿ ವರ್ಣಿಸಿದ್ದಾರೆ !
– ಶ್ರೀ. ಅತುಲ ಪವಾರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೫)
‘ಪರಾತ್ಪರ ಗುರು ಡಾ. ಆಠವಲೆ ಅವರು ಸಾಕ್ಷಾತ್ ವೇದಪುರುಷರಾಗಿದ್ದಾರೆ, ಎಂದು ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳುವುದು !![]() ಪರಾತ್ಪರ ಗುರು ಪಾಂಡೆ ಮಹಾರಾಜರಿಗೆ ಭಗವದ್ಗೀತೆ ಮತ್ತು ವೇದಗಳಲ್ಲಿನ ಅನೇಕ ಶ್ಲೋಕಗಳು ಬಾಯಿಪಾಠವಾಗಿದ್ದವು. ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಸಂವಾದ ನಡೆಯುವಾಗ ಪರಾತ್ಪರ ಗುರು ಪಾಂಡೆ ಮಹಾರಾಜರು ಗೀತೆಯಲ್ಲಿನ ಅಧ್ಯಾಯವನ್ನು ಪ.ಪೂ. ಡಾಕ್ಟರರಿಗೆ ಹೇಳುತ್ತಿದ್ದರು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ಪರಾತ್ಪರ ಗುರು ಪಾಂಡೆ ಮಹಾರಾಜರಿಗೆ ಹೇಳಿದರು, ಮಹಾರಾಜರೇ, ನೀವು ಭಗವದ್ಗೀತೆ ಮತ್ತು ವೇದಗಳ ಅಭ್ಯಾಸವನ್ನು ಎಷ್ಟು ಮಾಡಿದ್ದೀರಿ ! ನಿಮಗೆ ಎಷ್ಟು ಬರುತ್ತದೆ ! ನಾನಂತೂ ಎಂದಿಗೂ ಈ ರೀತಿಯ ಅಭ್ಯಾಸ ಮಾಡಿಲ್ಲ ಮತ್ತು ನನಗೆ ಇದರೊಳಗಿನದ್ದು ಏನೂ ಬರುವುದಿಲ್ಲ. ಅದಕ್ಕೆ ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳಿದರು, ನಿಮಗೆ ವೇದಗಳನ್ನು ಅಭ್ಯಸಿಸುವ ಅವಶ್ಯಕತೆ ಇಲ್ಲ. ನೀವು ಸಾಕ್ಷಾತ ವೇದಪುರುಷರಾಗಿದ್ದೀರಿ. ನೀವು ಆಡಿದ ಮಾತುಗಳಿಂದ ವೇದಗಳು ಸಿದ್ಧವಾಗುತ್ತವೆ. – ಶ್ರೀ. ಅತುಲ ಪವಾರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೫) |

ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !