ಸೇವೆಯ ಮಹತ್ವವನ್ನು ತಿಳಿಸುವ ಪರಾತ್ಪರ ಗುರು ಡಾ. ಆಠವಲೆ ಅವರ ೨೫ ವರ್ಷಗಳ ಹಿಂದಿನ ಮಾತುಗಳು

೧೯೯೯ ನೇ ಇಸ್ವಿಯಲ್ಲಿ ಗೋವಾದ ಪಣಜಿಯ ದೋನಾಪಾವಲಾ ಎಂಬಲ್ಲಿ ಸನಾತನದ ಸೇವಾಕೇಂದ್ರದಲ್ಲಿ ನಡೆದ ಒಂದು ಪ್ರಸಂಗವು ಸಾಧನೆಯಲ್ಲಿನ ಸೇವೆಯ ಅಮೂಲ್ಯ ಮಹತ್ವವನ್ನು ಎತ್ತಿ ತೋರಿಸುತ್ತದೆ. (ಶೇ. ೬೩ ಆಧ್ಯಾತ್ಮಿಕ ಮಟ್ಟದ ಸಾಧಕ ದಂಪತಿಗಳಾದ ದಿ. ಪ್ರಭಾಕರ ವೇರೇಕರ ಮತ್ತು ದಿ. (ಡಾ.) ಸೌ. ಮಂಗಲಾ ವೇರೇಕರ ಅವರ ದೋನಾಪಾವಲಾ, ಪಣಜಿ, ಗೋವಾದ ನಿವಾಸದಲ್ಲಿ ಕೆಲವು ಕಾಲ ಸನಾತನ ಸಂಸ್ಥೆಯ ಕಾರ್ಯವು ನಡೆಯುತ್ತಿತ್ತು.)

೧೯೯೯ ರಲ್ಲಿ ಒಮ್ಮೆ ದೋನಾಪಾವಲಾ ಇಲ್ಲಿನ ಸೇವಾಕೇಂದ್ರದಲ್ಲಿ ಕೆಲವು ಸಾಧಕರು ಸೇವೆ ಮಾಡುವ ಹಾಗೆಯೇ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಆ ಸ್ಥಳಕ್ಕೆ ಪರಾತ್ಪರ ಗುರು ಡಾಕ್ಟರರು ಬಂದರು. ಅವರು ಸಾಧಕರಿಗೆ ಅತ್ಯಂತ ಅಮೂಲ್ಯವಾದ ವಾಕ್ಯವನ್ನು ಹೇಳಿದರು, ಇಂದು ನೀವು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ. ಆ ಸಮಯದಲ್ಲಿ ಕೆಲವು ಜನರಿಗೆ ಗುರುದೇವರ ಈ ಮಾತುಗಳು ನಂಬಲಾಗದವು ಎಂದು ಅನಿಸಿರಬಹುದು; ಆದರೆ ಈಗ ನಾವು ಹಿಂದೆ ತಿರುಗಿ ನೋಡಿದಾಗ, ೨೫ ವರ್ಷಗಳ ಹಿಂದೆ ಗುರುದೇವರು ಸಾಧಕರ ಸಂಖ್ಯೆ ಹೆಚ್ಚಾಗಲಿದೆ ಎಂದು ನುಡಿದಿದ್ದ ಭವಿಷ್ಯವು ಇಂದು ಶೇಕಡಾ ೧೦೦ ರಷ್ಟು ಸತ್ಯವಾಗಿದೆ, ಎಂಬುದು ನೆನಪಿಗೆ ಬರುತ್ತದೆ. ಇಂದು ಸನಾತನದ ಮಾಧ್ಯಮದಿಂದ ಸಾವಿರಾರು ಸಾಧಕರು ಸಾಧನೆಯಲ್ಲಿ ತೊಡಗಿದ್ದಾರೆ.
ಗುರುದೇವರ ಮೇಲಿನ ವಾಕ್ಯವು ಆಧ್ಯಾತ್ಮಿಕ ಪ್ರಗತಿಗಾಗಿ ಸೇವೆ ಎಷ್ಟು ಅಮೂಲ್ಯವಾಗಿದೆ, ಎಂದು ಅರಿವು ಮೂಡಿಸುವಂತದ್ದಾಗಿದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ದಾರ್ಶನಿಕರಾಗಿದ್ದರಿಂದ ಅವರು ಸಹಜವಾಗಿ ಉದ್ಗರಿಸಿದ ಮಾತುಗಳು ಸಹ ಭವಿಷ್ಯವಾಣಿಯೇ ಆಗುತ್ತವೆ. ಇದರಿಂದ ಕಾಲಕ್ಕನುಗುಣವಾಗಿ ಗುರುಗಳು ಮಾಡಿದ ಮಾರ್ಗದರ್ಶನದಂತೆ ಆಜ್ಞಾಪಾಲನೆ ಮಾಡುವುದು ಎಷ್ಟು ಮಹತ್ವದ್ದಾಗಿದೆ, ಎಂಬುದು ತಿಳಿಯುತ್ತದೆ. ಸಾಧಕರ ಸಂಖ್ಯೆ ಹೆಚ್ಚಾದಂತೆ ಅನೇಕ ರೀತಿಯ ಸೇವೆಗಳನ್ನು ಮಾಡುವ ಅವಕಾಶ ಸಿಗುವುದು ದುರ್ಲಭವಾಗುತ್ತದೆ. ಆದ್ದರಿಂದ ಸಿಕ್ಕಿದ ಪ್ರತಿಯೊಂದು ಸೇವೆಯನ್ನು ಸಾಧಕರು ತಳಮಳದಿಂದ ಮತ್ತು ಭಾವಪೂರ್ಣ ಹಾಗೂ ಪರಿಪೂರ್ಣ ರೀತಿಯಲ್ಲಿ ಮಾಡಬೇಕು.
ಸಾಧಕರೇ, ಪರಿಪೂರ್ಣ ಸೇವೆ ಮಾಡುವುದು ಶ್ರೀ ಗುರುಗಳ ಮನಸ್ಸನ್ನು ಗೆಲ್ಲುವ ಗುರುಕೀಲಿಕೈಯಾಗಿರುವುದರಿಂದ ಪ್ರತಿಯೊಂದು ಸೇವೆಯನ್ನು ನಿಮ್ಮ ಉನ್ನತಿಯ ಸಾಧನವನ್ನಾಗಿ ಮಾಡಿಕೊಳ್ಳಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೨೧.೬.೨೦೨೬)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !