ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಋಷಿಮುನಿಗಳು ಗಡ್ಡ ಬಿಟ್ಟಿರುವುದನ್ನು ನೋಡಿ ಇಂದಿನ ಯುವಕರೂ ಗಡ್ಡ ಬೆಳೆಸುವುದು

‘ಪ್ರಸ್ತುತ ದಿನಗಳಲ್ಲಿ ಅನೇಕ ಯುವಕರು ಗಡ್ಡ ಬೆಳೆಸುತ್ತಿರುವುದು ಕಂಡುಬರುತ್ತಿದೆ. ನಿಜ ಹೇಳಬೇಕೆಂದರೆ ಯುವಕರು ಗಡ್ಡ ಬೆಳೆಸಬಾರದು. ಒಬ್ಬ ಯುವಕ ನನ್ನನ್ನು ಕೇಳಿದನು, “ಗಡ್ಡವನ್ನು ಏಕೆ ಬೆಳೆಸಬಾರದು ? ಹಿಂದೆ ಋಷಿಮುನಿಗಳೂ ಗಡ್ಡ ಬೆಳೆಸಿಕೊಂಡಿದ್ದರಲ್ಲವೇ ! ನಾನು ಅವನಿಗೆ ಹೇಳಿದೆ, “ನೀವು ಋಷಿಮುನಿಗಳು ಗಡ್ಡ ಬೆಳೆಸಿದ್ದನ್ನು ನೋಡುತ್ತೀರಿ; ಆದರೆ ಅವರು ಮಾಡಿದ ಸಾಧನೆಯನ್ನು ನೀವು ಮಾಡುತ್ತೀರಾ ? ಅವರಂತೆ ಕೇವಲ ಗಡ್ಡವನ್ನು ಬೆಳೆಸುತ್ತೀರಿ; ಆದರೆ ಯಾವುದೇ ಸಾಧನೆಯನ್ನು ಮಾಡುವುದಿಲ್ಲ. ಸಾಧನೆ ಮಾಡುವುದರಿಂದ, ಗಡ್ಡದಿಂದ ಮನುಷ್ಯನ ಮೇಲೆ ಉಂಟಾಗುವ ರಜ-ತಮ ಗುಣಗಳ ಪ್ರಭಾವವು ನಾಶವಾಗುತ್ತದೆ. ಸಾಧನೆಯಿಂದ ಪಂಚಮಹಾಭೂತಗಳ ಮೇಲೆಯೂ ಅಧಿಕಾರ ಸಿಗುತ್ತದೆ.

೨. ಸಮಾಜದ ಯುವತಿಯರು ‘ದುರ್ಗಾದೇವಿಯು ಕೂದಲನ್ನು ಬಿಚ್ಚಿರುತ್ತಾಳೆ ಎಂದು ಹೇಳಿ ತಮ್ಮ ಕೂದಲನ್ನೂ ಬಿಚ್ಚಿಡುವುದು

‘ಸಮಾಜದಲ್ಲಿ ಅನೇಕ ಯುವತಿಯರು ಕೂದಲನ್ನು ಬಿಚ್ಚಿಕೊಂಡು ತಿರುಗಾಡುವುದು ಕಂಡುಬರುತ್ತದೆ. ನಾವು ಅವರಿಗೆ ‘ಕೂದಲನ್ನು ಬಿಚ್ಚಿಡ ಬೇಡಿ ಎಂದು ಹೇಳಿದರೆ, ಅವರು ತಕ್ಷಣವೇ ‘ದುರ್ಗಾದೇವಿಯೂ ಕೂದಲನ್ನು ಬಿಚ್ಚಿಟ್ಟಿರುತ್ತಾಳಲ್ಲವೇ ? ಎಂದು ಕೇಳುತ್ತಾರೆ. ದುರ್ಗಾದೇವಿಯು ಕೂದಲನ್ನು ಯಾವಾಗ ಬಿಚ್ಚಿಡುತ್ತಾಳೆ ಎಂದರೆ, ರಣರಂಗದಲ್ಲಿ ಯುದ್ಧ ನಡೆಯುತ್ತಿರುವಾಗ ! ಆಗ ದುರ್ಗಾದೇವಿಯಲ್ಲಿನ ತಮೋಗುಣವು ಕಾರ್ಯನಿರತವಾಗುತ್ತದೆ. ಆಗ ಅವಳು ‘ರಣಚಂಡಿಯಾಗಿ ತನ್ನ ಕೂದಲನ್ನು ಬಿಚ್ಚಿಡುತ್ತಾಳೆ ! ಇದು ರಣಚಂಡಿಯ ಮಾರಕ ತತ್ತ್ವದ ರೂಪವಾಗಿರುತ್ತದೆ.

ಸಾಧಕರಿಗೆ ಇಂತಹ ಎಲ್ಲಾ ಉತ್ತರಗಳು ತಿಳಿದಿರಬೇಕು, ಇದರಿಂದ ನಾವು ಸೂಕ್ತ ಸ್ಥಳದಲ್ಲಿ ಈ ಬಗ್ಗೆ ಧರ್ಮಶಿಕ್ಷಣವನ್ನು ನೀಡಿ, ‘ಹಿಂದೂ ಧರ್ಮ ಮತ್ತು ಯೋಗ್ಯ ಮಾರ್ಗದಲ್ಲಿ ಮಾಡುವ ಸಾಧನೆಯ ಮೇಲಿನ ಅವರ ಶ್ರದ್ಧೆಯನ್ನು ಗಟ್ಟಿಗೊಳಿಸಬಹುದು !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಕಾಂಚಿಪುರಂ, ತಮಿಳುನಾಡು. (೨೧.೯.೨೦೨೫)