ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಈಶ್ವರೀ ಮಾರ್ಗದರ್ಶನವನ್ನು ಗ್ರಹಣ ಮಾಡಿ ಈಶ್ವರೀ ರಾಜ್ಯವನ್ನು ಮುನ್ನಡೆಸುವ ದೈವಿ ಬಾಲಕರು

ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/55266.html

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು’. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಪರಾತ್ಪರ ಗುರು ಡಾ. ಆಠವಲೆಯವರ ಉತ್ತಮ ಶಿಷ್ಯಳಾಗಬೇಕೆಂದು ಹಾತೊರೆಯುವ ರಾಮನಾಥಿ ಆಶ್ರಮದ ಶೇ. ೬೧ ಆಧ್ಯಾತ್ಮಿಕ ಮಟ್ಟದ ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) !

ಕು. ಅಪಾಲಾ ಔಂಧಕರ

೧.೧೧.೨೦೨೧ ರಂದು ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) ಇವಳ ಆಧ್ಯಾತ್ಮಿಕ ಮಟ್ಟ ಶೇ. ೬೧ ರಷ್ಟು ಆಗಿದೆಯೆಂದು ಘೋಷಿಸಲಾಯಿತು. ಆ ನಿಮಿತ್ತ ಅವಳ ತಾಯಿ ಸೌ. ದೀಪಾ ಔಂಧಕರ ಇವರ ಗಮನಕ್ಕೆ ಬಂದ ಅವಳ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.

ಸೌ. ದೀಪಾ ಔಂಧಕರ

೧. ಜನ್ಮದಿಂದಲೇ ಅಪಾಲಾ ಆಧಾರವೆನಿಸುವುದು

‘ನನ್ನ ಮತ್ತು ಅಪಾಲಾಳ ನಡುವೆ ಕೇವಲ ತಾಯಿ ಮತ್ತು ಮಗಳ ಸಂಬಂಧವಿರದೇ ಆಧ್ಯಾತ್ಮಿಕ ಸಂಬಂಧವಿದೆ’, ಎಂದು ನನಗೆ ಅನಿಸುತ್ತದೆ. ಜನ್ಮದಿಂದಲೇ ಅವಳು ನನಗೆ ಯಾವಾಗಲೂ ಆಧಾರವೆನಿಸುತ್ತಾಳೆ. ಆಶ್ರಮದಲ್ಲಿ ಅಪಾಲಾ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದನ್ನು ನೋಡಿ ನನಗೆ ಆನಂದವಾಗುತ್ತದೆ ಮತ್ತು ‘ಅವಳನ್ನು ೧೪ ವರ್ಷಗಳಿಂದ ಜೋಪಾನ ಮಾಡಲು ಗುರುದೇವರು ನನ್ನನ್ನು ಆಯ್ದುಕೊಂಡರು’, ಎಂದು ಬಹಳ ಕೃತಜ್ಞತೆಯೆನಿಸುತ್ತದೆ.

೨. ‘ಎಲ್ಲವೂ ದೇವರ ನಿಯೋಜನೆಯಂತೆಯೇ ನಡೆಯುತ್ತದೆ’, ಎಂದು ಅರಿವಾಗುವುದು

ಅಪಾಲಾ ೧೧ ವರ್ಷದವಳಾಗಿರುವಾಗಿನಿಂದ ಮನೆಯಲ್ಲಿ ಅವಳ ಕೋಣೆಯಲ್ಲಿ ಒಬ್ಬಳೇ ಮಲಗುತ್ತಿದ್ದಳು. ‘ಅವಳು ಚಿಕ್ಕವಳಿದ್ದಾಳೆ. ಅವಳು ನನ್ನೊಂದಿಗೆ ಮಲಗಬೇಕು’ ಎಂದು ನನಗೆ ಅನಿಸುತ್ತಿತ್ತು; ಆದರೆ ಅವಳ ಈ ರೂಢಿಯಿಂದ ಅವಳು ಆಶ್ರಮದಲ್ಲಿರಲು ಹೋದಾಗ ಅವಳಿಗೆ ತೊಂದರೆಯಾಗಲಿಲ್ಲ. ನಾನು ಇಲ್ಲದಿರುವಾಗಲೂ ಅವಳಿಗೆ ಆಶ್ರಮದಲ್ಲಿರಲು ಸಾಧ್ಯವಾಯಿತು. ಆದುದರಿಂದ ‘ಪ್ರತಿಯೊಂದು ವಿಷಯ ದೇವರ ನಿಯೋಜನೆಯಂತೆಯೇ ನಡೆಯುತ್ತದೆ’, ಎಂದು ನನಗೆ ಅನಿಸಿತು.

೩. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಇರುವ ಅಪಾರ ಭಾವ

೩ ಅ. ಚಿಕ್ಕ ವಯಸ್ಸಿನಲ್ಲಿಯೇ ಆಶ್ರಮ ಜೀವನವನ್ನು ಸ್ವೀಕರಿಸುವುದು : ಅಪಾಲಾಳಿಗೆ ಮನೆಯಲ್ಲಿ ಎಲ್ಲ ಸುಖ ಸೌಲಭ್ಯಗಳಿವೆ. ‘ಅವಳು ಹೇಳಿದ್ದನ್ನು ಮತ್ತು ಅವಳಿಗೆ ಇಷ್ಟವಾಗಿರುವುದನ್ನು ನಾವು ಅವಳಿಗೆ ತಕ್ಷಣವೇ ಕೊಡುತ್ತಿದ್ದೆವು’, ಆದರೂ ಅವಳ ಕೇವಲ ಗುರುಗಳ ಬಗೆಗಿರುವ ಶ್ರದ್ಧೆ ಮತ್ತು ಭಾವದಿಂದಾಗಿ ಅವಳು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆಶ್ರಮ ಜೀವನವನ್ನು ಸ್ವೀಕರಿಸಿದಳು.

೩  ಆ. ಅಪಾಲಾಳಲ್ಲಿ ಬಹಳ ಭಾವ ಮತ್ತು ತಳಮಳವಿದೆ. ‘ಪ್ರತಿಯೊಂದು ಕ್ಷಣವೂ ಪರಾತ್ಪರ ಗುರು ಡಾಕ್ಟರರು ನನ್ನೊಂದಿಗಿದ್ದಾರೆ’, ಎಂಬ  ದೃಢ ಶ್ರದ್ಧೆ ಅವಳಲ್ಲಿದೆ. ‘ಅವಳ ಈ ಶ್ರದ್ಧೆಯಿಂದಲೇ ನನಗೆ ಅನೇಕ ಪ್ರಸಂಗಗಳಲ್ಲಿ ಶಕ್ತಿ ಸಿಗುತ್ತದೆ’, ಎಂದು ನನಗೆ ಅನಿಸುತ್ತದೆ.

೩ ಇ. ಅಪಾಲಾ ಯಾವಾಗಲೂ, “ಗುರುದೇವರು ಹೇಳುವುದಕ್ಕಿಂತ ಮೊದಲೇ ಅವರ ಮನಸ್ಸನ್ನು ಅರಿತುಕೊಂಡು ಅವರಿಗೆ ಅಪೇಕ್ಷಿತವಿರುವಂತೆ ಕೃತಿಯನ್ನು ಮಾಡುವವನೇ ಉತ್ತಮ ಶಿಷ್ಯನು ! ನನಗೆ ಗುರುದೇವರ ಇಂತಹ ಉತ್ತಮ ಶಿಷ್ಯಳಾಗಬೇಕಾಗಿದೆ”, ಎಂದು ಹೇಳುತ್ತಾಳೆ

‘ಹೇ ಗುರುದೇವಾ, ‘ಅಪಾಲಾ ಇಂದು ಏನಾಗಿದ್ದಾಳೆಯೋ, ಅದು ಕೇವಲ ನಿಮ್ಮ ಕೃಪೆಯೇ ಆಗಿದೆ. ನಿಮಗೆ ಅಪೇಕ್ಷಿತವಿರುವಂತೆ ನಡೆದುಕೊಳ್ಳುವಲ್ಲಿ, ನಾನು ಬಹಳ ಕಡಿಮೆ ಬೀಳುತ್ತಿದ್ದೇನೆ. ನಾವು ನಿಮಗೆ ಅಪೇಕ್ಷಿತವಿರುವಂತಹ ಆದರ್ಶ ತಾಯಿ-ತಂದೆ ಆಗಲು ಸಾಧ್ಯವಾಗಲಿ’, ಇದೇ ನಿಮ್ಮ ಚರಣಗಳಲ್ಲಿ ಶರಣಾಗತ ಭಾವದಿಂದ ಪ್ರಾರ್ಥನೆ ಮಾಡುತ್ತೇನೆ.’

– ಸೌ. ದೀಪಾ ಔಂಧಕರ (ಕು. ಅಪಾಲಾಳ ತಾಯಿ), ರತ್ನಾಗಿರಿ (೫.೧೧.೨೦೨೧)

ಸಾಹಿತ್ಯದ ಪ್ರಬುದ್ಧತೆಯೊಂದಿಗೆ ಪದ್ಯಲೇಖನದ ವಿಶೇಷ ಕೌಶಲ್ಯವಿರುವ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ದೈವಿ ಬಾಲಸಾಧಕರು !

ಪೂ. ತನುಜಾ ಠಾಕೂರ್

೧. ದೈವಿ ಬಾಲಕರು ಸ್ವಯಂಸ್ಫೂರ್ತಿಯಿಂದ ಕವಿತೆಯನ್ನು ರಚಿಸಿ, ಅದರ ಮೂಲಕ ಗುರು ಮತ್ತು ಈಶ್ವರನ ಬಗೆಗಿರುವ  ತಮ್ಮ ಭಾವವನ್ನು ವ್ಯಕ್ತಪಡಿಸುವುದು

‘ದೈವಿ ಬಾಲಕರು ತಮ್ಮ ಸ್ವಂತ ವಿಚಾರಗಳನ್ನು ಅತ್ಯಂತ ಸಹಜವಾಗಿ ಮಂಡಿಸುತ್ತಾರೆ ಮತ್ತು ಅವರು ಸತ್ಸಂಗಕ್ಕೆ ಬರುವ ಮೊದಲೇ ಚಿಂತನೆಯನ್ನು ಮಾಡಿ ಬರುತ್ತಾರೆ. ಅವರು ಹೆಚ್ಚಾಗಿ ತಮ್ಮ ಸ್ವಂತ ಅಂಶಗಳನ್ನು ಬರೆದು ತರುತ್ತಾರೆ. ಅವರು ಸತ್ಸಂಗದಲ್ಲಿ ಕಲಿಯಲು ಸಿಕ್ಕಿದ ವಿಷಯಗಳ ಲೇಖನವನ್ನು ಕೂಡ ಅತ್ಯಂತ ಸ್ಪಷ್ಟವಾಗಿ ಬರೆಯುತ್ತಾರೆ. ಎಲ್ಲಕ್ಕಿಂತ ಆಶ್ಚರ್ಯದ ವಿಷಯವೆಂದರೆ, ‘ದೈವಿ ಬಾಲಕರು ಸ್ವಯಂಸ್ಫೂರ್ತಿಯಿಂದ ಕವಿತೆಗಳನ್ನು ರಚಿಸುತ್ತಾರೆ ಮತ್ತು ಆ ಕವಿತೆಗಳು ಅವರ ಆಳ ಚಿಂತನೆ ಪ್ರಕ್ರಿಯೆ, ಹಾಗೆಯೇ ಅವರ ಗುರು, ಈಶ್ವರ ಮತ್ತು ಆಶ್ರಮದ ಪ್ರತಿಯೊಂದು ವಸ್ತುವಿನ ಬಗ್ಗೆ ಅಪ್ರತಿಮ ಭಾವವನ್ನು ವ್ಯಕ್ತಪಡಿಸುತ್ತವೆ. ಅವರ ಕವಿತೆಗಳಲ್ಲಿ ಕೆಲವೊಮ್ಮೆ ಗೋಪಿಭಾವವೂ ಪ್ರತಿಫಲಿಸುತ್ತದೆ ಮತ್ತು ಕೆಲವೊಮ್ಮೆ ಅವರು ಸಹಜವಾಗಿ ಜ್ಞಾನಮಾರ್ಗದ ತತ್ತ್ವವನ್ನು ಪದ್ಯರೂಪದಲ್ಲಿ ವ್ಯಕ್ತಪಡಿಸುತ್ತಾರೆ.’

೨. ದೈವಿ ಬಾಲಕರು ಕವಿತೆಯನ್ನು ಓದಿ ಹೇಳುತ್ತಿರುವಾಗ ಇಡೀ ವಾತಾವರಣವು ಚೈತನ್ಯಮಯವಾಗುವುದರೊಂದಿಗೆ ಭಾವಮಯವಾಗುತ್ತದೆ

ದೈವಿಬಾಲಕರು ತಾವೇ ಸ್ವತಃ ರಚಿಸಿದ ಕವಿತೆಯನ್ನು ಓದಿ ಹೇಳುವಾಗ, ಇಡೀ ವಾತಾವರಣ ಚೈತನ್ಯಮಯವಾಗುವುದರೊಂದಿಗೆ ಭಾವಮಯವಾಗುತ್ತದೆ. ಅವರ ಮಧುರವಾಣಿಯಲ್ಲಿ ಕವಿತೆಯನ್ನು ಕೇಳುವ ಆನಂದ ವಿಲಕ್ಷಣವಾಗಿರುತ್ತದೆ. ಅದನ್ನು ಶಬ್ದಗಳಲ್ಲಿ ವ್ಯಕ್ತ ಪಡಿಸಲು ಸಾಧ್ಯವಿಲ್ಲ. ಕೆಲವು ದೈವಿ ಬಾಲಕರು, ಸತ್ಸಂಗದಲ್ಲಿ ಕುಳಿತಿರುವಾಗಲೇ ಕವಿತೆಯನ್ನು ರಚಿಸುತ್ತಾರೆ. ಇದರಿಂದ ಗಮನಕ್ಕೆ ಬರುವುದೇನೆಂದರೆ ‘ಸಾಹಿತ್ಯಿಕ ಪ್ರಬುದ್ಧತೆಯೊಂದಿಗೆ ಅವರಲ್ಲಿ ವಿಚಾರಗಳನ್ನು ಪದ್ಯಗಳ ಮೂಲಕ ವ್ಯಕ್ತಪಡಿಸುವ ಕೌಶಲ್ಯ ಕೂಡ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಕೇವಲ ಈಶ್ವರನ ಅನುಸಂಧಾನದಲ್ಲಿ ಇರುವುದರಿಂದಲೇ ಅವರಿಗೆ ಇದು ಸಾಧ್ಯವಾಗುತ್ತಿದೆ.’

– ಪೂ. ತನುಜಾ ಠಾಕೂರ (೧.೧೧.೨೦೨೧)

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು