ಉಚ್ಚ ಲೋಕದಿಂದ ಭೂಮಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದಿನ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ ಚಿ. ಶಾರ್ವೀ ಇವಳು ಅದರಲ್ಲಿ ಒಬ್ಬಳು.
‘ನಿಮ್ಮ ಮಕ್ಕಳಲ್ಲಿ ಈ ರೀತಿಯ ವೈಶಿಷ್ಟ್ಯವಿದ್ದರೆ ‘ಅವರು ಉಚ್ಚ ಲೋಕದಿಂದ ಭೂಮಿಯಲ್ಲಿ ಜನಿಸಿದ್ದಾರೆ’, ಇದನ್ನು ಗಮನದಲ್ಲಿಟ್ಟು ಕೊಂಡು ಅವರು ಮಾಯೆಯಲ್ಲಿ ಸಿಲುಕದಂತೆ ಮಾಡಿ ಅವರಿಗೆ ಸಾಧನೆಗೆ ಪೋಷಕವಾಗಿರುವ ಸಂಸ್ಕಾರವನ್ನು ನೀಡಿರಿ. ಇದರಿಂದ ಅವರ ಜನ್ಮ ಸಾರ್ಥಕವಾಗುವುದು ಹಾಗೂ ನಿಮ್ಮ ಸಾಧನೆಯು ಆಗುವುದು’. – (ಪರಾತ್ಪರ ಗುರು) ಡಾ. ಆಠವಲೆ |
ಚಿ. ಶಾರ್ವೀ ನಾಗಾರ್ಜುನ ಇವಳ ಬಗ್ಗೆ ಅವಳ ಅಜ್ಜಿಯ ಗಮನಕ್ಕೆ ಬಂದಂತಹ ಗುಣವೈಶಿಷ್ಟ್ಯವನ್ನು ಮುಂದೆ ನೀಡುತ್ತಿದ್ದೇವೆ.
೧. ಪ.ಪೂ. ಗುರುದೇವರ ಕೃಪೆಯಿಂದ ಚಿ. ಶಾರ್ವೀಯ ಮುಖದಲ್ಲಿ ಜನ್ಮದಿಂದಲೇ ದೈವೀ ತೇಜಸ್ಸು ಇದೆ ಅವಳು ಆರೋಗ್ಯವಂತ ಮಗುವಾಗಿದ್ದಾಳೆ
೨. ದೇವರ ಹಾಗೂ ಗುರುಗಳ ಬಗ್ಗೆ ಭಾವ
ಅ. ಅವಳ ಜನ್ಮದ ನಂತರ ಕೆಲವು ತಿಂಗಳಿನಲ್ಲಿಯೇ ಅವಳು ‘ಪರಾತ್ಪರ ಗುರು ಡಾ.ಆಠವಲೆಯವರ ಸೂಕ್ಷ್ಮದ ಕಾರ್ಯ ಮತ್ತು ಆಧ್ಯಾತ್ಮಿಕ ಸಂಶೋಧನೆ’ ಈ ಗ್ರಂಥವನ್ನು ಓದುತ್ತಿರುವಂತಹ ಹಾವಭಾವ ತೋರುತ್ತಿದ್ದಳು. ಅವಳು ಆ ಗ್ರಂಥದಲ್ಲಿಯ ಪ.ಪೂ.ಗುರುದೇವರ ಛಾಯಾಚಿತ್ರಕ್ಕೆ ಮುತ್ತನ್ನು ನೀಡುತ್ತಿದ್ದಳು.
ಆ. ಗೋಡೆಯಲ್ಲಿ ಹಾಕಿದ ದೇವರ ಚಿತ್ರಗಳನ್ನು ನೋಡಿ ಅದರೊಂದಿಗೆ ಅವಳ ಭಾಷೆಯಲ್ಲಿ ಮಾತನಾಡುತ್ತಿದ್ದಳು
೩. ಕೃತಜ್ಞತಾಭಾವ
ಶಾರ್ವೀ ಮಾತನಾಡಲು ಕಲಿತಾಗ ಗುರುದೇವರಿಗೆ ‘ನೀರು, ಊಟ ಹಾಗೂ ಆಟದ ವಸ್ತು’ ಮುಂತಾದವುಗಳನ್ನು ನೀಡಿದಕ್ಕೆ ಧನ್ಯವಾದ’ವೆಂದು ಹೇಳುತ್ತಿದ್ದಳು.
ಅ. ಅವಳ ಜನ್ಮದ ನಂತರ ಕೆಲವು ತಿಂಗಳಿನಲ್ಲಿಯೇ ಅವಳು ‘ಪರಾತ್ಪರ ಗುರು ಡಾ. ಆಠವಲೆಯವರ ಸೂಕ್ಷ್ಮದ ಕಾರ್ಯ ಮತ್ತು ಆಧ್ಯಾತ್ಮಿಕ ಸಂಶೋಧನೆ’ ಈ ಗ್ರಂಥವನ್ನು ಓದಿರುವಂತೆ ಮಾಡುತ್ತಿದ್ದಳು ಅವಳು ಆ ಗ್ರಂಥದಲ್ಲಿಯ ಪ.ಪೂ. ಗುರುದೇವರ ಛಾಯಾಚಿತ್ರಕ್ಕೆ ಮುತ್ತನ್ನು ನೀಡುತ್ತಿದ್ದಳು.
ತಿಳುವಳಿಕೆ
ಕು. ಶಾರ್ವೀಯ ತಮ್ಮ ಅಳುತ್ತಿದ್ದರೆ ಅವಳು ಅವನಿಗೆ ‘ಗುರುದೇವರು ಬರುತ್ತಾರೆ ಅಳಬೇಡ’, ಎಂದು ಹೇಳಿ ಅವನು ಅಳು ನಿಲ್ಲಿಸಲು ಪ್ರಯತ್ನಿಸುತ್ತಿದ್ದಳು.
೫. ಪ್ರೇಮಭಾವ
ನಾವು ಊರಿಗೆ ಹೋಗುತ್ತಿರುವಾಗ ನಮ್ಮ ಕೈಯಲ್ಲಿ ಹೆಚ್ಚು ಸಾಮಾನುಗಳಿದ್ದರೆ ಅವಳಿಗೆ ಹೊತ್ತುಕೊಳ್ಳಲು ಸಾಧ್ಯವಿಲ್ಲದಿರುವಾಗಲೂ ‘ನನಗೆ ಕೊಡಿ’ ಎಂದು ಹೇಳಿ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದಳು.
೬. ತಪ್ಪಿನ ಬಗ್ಗೆ ಸ್ಪಂದಿಸುವುದು
ನಾವು ಮನೆಯ ಎಲ್ಲರೂ ತಮ್ಮ ತಪ್ಪುಗಳನ್ನು ಹೇಳುತ್ತಿರುವಾಗ ಅವಳು ಕೂಡಲೆ ಅವಳಿಂದಾದ ತಪ್ಪನ್ನು ಹೇಳುತ್ತಾಳೆ ಅವಳಿಗೆ ಅವಳ ತಪ್ಪಿನ ಬಗ್ಗೆ ಅರಿವಾದಾಗ ಕ್ಷಮೆಯನ್ನು ಕೇಳುತ್ತಾಳೆ.
– ಸೌ. ಸುಮಾ ಮಂಜೇಶ (ಚಿ. ಶಾರ್ವೀಯ ಅಜ್ಜಿ, ಕು. ಶಾರ್ವೀಯ ತಾಯಿಯ ತಾಯಿ, ವಯಸ್ಸು ೬೩ ವರ್ಷ) ಕುಣಿಗಲ್ ಜಿಲ್ಲೆ ತುಮಕೂರು (೨೨.೫.೨೦೨೪)