Dihuli Murder Case : ಉತ್ತರಪ್ರದೇಶದ ದಿಹುಲಿ ಹತ್ಯಾಕಾಂಡ ಪ್ರಕರಣದಲ್ಲಿ 43 ವರ್ಷಗಳ ನಂತರ ತೀರ್ಪು: 3 ಆರೋಪಿಗಳಿಗೆ ಗಲ್ಲು ಶಿಕ್ಷೆ

ಮೈನಪುರಿ ಸೆಷನ್ಸ್ ನ್ಯಾಯಾಲಯದ ತೀರ್ಪು

ಫಿರೋಜಾಬಾದ (ಉತ್ತರ ಪ್ರದೇಶ) – ಜಿಲ್ಲೆಯ ದಿಹುಲಿ ಗ್ರಾಮದಲ್ಲಿ ನವೆಂಬರ್ 18, 1981 ರಂದು ನಡೆದ 24 ದಲಿತ ಹಿಂದೂಗಳ ಸಾಮೂಹಿಕ ಹತ್ಯೆಗೆ ಮಾರ್ಚ್ 18 ರಂದು, ಮೈನ್ಪುರ ವಿಶೇಷ ಜಿಲ್ಲಾ ನ್ಯಾಯಾಲಯವು ಮೂವರು ಆರೋಪಿಗಳಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದೆ. ಇದರೊಂದಿಗೆ ಇಬ್ಬರು ಅಪರಾಧಿಗಳಿಗೆ ತಲಾ 2 ಲಕ್ಷ ರೂಪಾಯಿ ದಂಡ ಮತ್ತು ಒಬ್ಬ ಅಪರಾಧಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಿಹುಲಿ ಹತ್ಯಾಕಾಂಡ ಪ್ರಕರಣದ ತೀರ್ಪು ನೀಡುವಾಗ, ಜಿಲ್ಲಾ ನ್ಯಾಯಾಧೀಶೆ ಇಂದಿರಾ ಸಿಂಗ್ ಅವರ ನ್ಯಾಯಾಲಯವು 24 ಜನರ ಸಾಮೂಹಿಕ ಹತ್ಯೆಯನ್ನು ಒಂದು ದೊಡ್ಡ ನರಮೇಧ ಎಂದು ವ್ಯಾಖ್ಯಾನಿಸಿದೆ. ಇದೊಂದು ಘೋರ ಅಪರಾಧವಾಗಿದೆ. ಇದಕ್ಕೆ ಮರಣದಂಡನೆಗಿಂತ ಕಡಿಮೆ ಶಿಕ್ಷೆ ಇರಬಾರದು ಎಂದು ಅವರು ಹೇಳಿದರು. ನ್ಯಾಯಾಲಯವು ತನ್ನ ಆದೇಶದಲ್ಲಿ ಮರಣ ದಂಡನೆಯ ಶಿಕ್ಷೆಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಮತ್ತು ಉಚ್ಚನ್ಯಾಯಾಲಯದಿಂದ ಮರಣ ದಂಡನೆಯಶಿಕ್ಷೆಯನ್ನು ಖಚಿತ ಪಡಿಸಿದ ನಂತರವೇ ಶಿಕ್ಷೆಯನ್ನು ಜಾರಿಗೊಳಿಸಲಾಗುವುದು, ಎಂದು ಸ್ಪಷ್ಟವಾಗಿ ತಿಳಿಸಿದೆ.

1. ಗಲ್ಲು ಶಿಕ್ಷೆಗೊಳಗಾದ ರಾಮಪಾಲ, ರಾಮಸೇವಕ ಮತ್ತು ಕ್ಯಾಪ್ಟನ ಸಿಂಗ ತಮ್ಮ ಕಾನೂನುರೀತ್ಯಾ ಹಕ್ಕುಗಳನ್ನು ಚಲಾಯಿಸಬಹುದು ಮತ್ತು 30 ದಿನಗಳ ಒಳಗೆ ಉಚ್ಚ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಬಹುದು.

2. ಫಿರೋಜಾಬಾದ್ ಜಿಲ್ಲೆಯ ದಿಹುಲಿ ಗ್ರಾಮದಲ್ಲಿ 24 ದಲಿತರನ್ನು ಕೊಲ್ಲಲಾಗಿತ್ತು. ಈ ಘಟನೆ ನವೆಂಬರ್ 18, 1981 ರಂದು ಸಂಜೆ 6 ಗಂಟೆಗೆ ಸಂಭವಿಸಿತ್ತು. ಈ ಪ್ರಕರಣದ ಸಾಕ್ಷಿಯನ್ನು ವಿರೋಧಿಸಲು ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ದಿಹುಲಿ ಗ್ರಾಮವನ್ನು ಪ್ರವೇಶಿಸಿ, ಮಹಿಳೆಯರು, ಪುರುಷರು ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿತು. ಇದರಲ್ಲಿ 24 ಜನರು ಸಾವನ್ನಪ್ಪಿದ್ದರು.

3. ಈ ಪ್ರಕರಣವು ಮೈನಪುರಿ ಸೆಷನ್ಸ್ ನ್ಯಾಯಾಲಯದಿಂದ ಅಲಹಾಬಾದ ಉಚ್ಚನ್ಯಾಯಾಲಯದ ವರೆಗೆ ನಡೆಯಿತು. ಇದಾದ ನಂತರ, ಮತ್ತೆ ಅಕ್ಟೋಬರ್ 19, 2024 ರಂದು ವಿಚಾರಣೆಗಾಗಿ ಪ್ರಕರಣವನ್ನು ಮೈನಪುರಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಜಿಲ್ಲಾ ನ್ಯಾಯಾಧೀಶರ ಆದೇಶದಂತೆ ವಿಶೇಷ ದರೋಡೆ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು.

ಸಂಪಾದಕೀಯ ನಿಲುವು

ತಡವಾಗಿ ಸಿಗುವ ನ್ಯಾಯವು ಅನ್ಯಾಯವೇ ಆಗಿದೆ! ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪು ನೀಡಲು 2 ತಲೆಮಾರುಗಳನ್ನು ತೆಗೆದುಕೊಂಡಿತು. ಈಗ, ಆ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋದರೆ, ಅಲ್ಲಿ ಇನ್ನೆಷ್ಟು ತಲೆಮಾರುಗಳ ಬಳಿಕ ನ್ಯಾಯಸಿಗಬಹುದು ಎನ್ನುವ ಪ್ರಶ್ನೆ ಸಾಮಾನ್ಯ ಜನರಿಗೆ ಮೂಡಿದೆ.