ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ ! ರಾಮರಾಜ್ಯದಲ್ಲಿನ ಪ್ರಜೆಗಳು ಧರ್ಮಾ ಚರಣಿಗಳಾಗಿದ್ದರು. ಆದುದರಿಂದಲೇ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವು (ಹಿಂದೂ ರಾಷ್ಟ್ರ) ಅನುಭವಿಸಲು ದೊರಕಿತು. ಮೊದಲಿನಂತೆಯೇ ಆದರ್ಶ ‘ರಾಮರಾಜ್ಯ’ ಈಗಲೂ ಅವತರಿಸಬಹುದು ! ಇದಕ್ಕಾಗಿ – ಹಿಂದೂಗಳೇ, ನೀವು ಧರ್ಮಾಚರಣಿ ಮತ್ತು ಈಶ್ವರನ ಭಕ್ತರಾಗಿ, ಹಾಗೆಯೇ ಭಾವೀ ಪೀಳಿಗೆಯನ್ನು ಧರ್ಮಾಚರಣಿ, ಸಾಧಕರನ್ನಾಗಿಸಿ !