|
ಶ್ರೀ. ಯಜ್ಞೇಶ ಸಾವಂತ
ಮುಂಬಯಿ, ಮಾರ್ಚ್ 18 (ಸುದ್ದಿ) – ನಾಗಪುರದಲ್ಲಿ ಮಾರ್ಚ್ 17 ರಂದು ಬೆಳಿಗ್ಗೆ 11 ಗಂಟೆಗೆ ‘ಔರಂಗಜೇಬನ ಗೋರಿಯನ್ನು ತೆರವುಗೊಳಿಸಿ’ ಎಂದು ವಿಶ್ವ ಹಿಂದೂ ಪರಿಷತ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ವೇಳೆ ಹುಲ್ಲಿನ ಬಣವೆಗಳಿಂದ ಮಾಡಿದ ಔರಂಗಜೇಬನ ಸಾಂಕೇತಿಕ ಗೋರಿಯನ್ನು ಸುಡಲಾಯಿತು. ಈ ಪ್ರತಿಭಟನೆಯ ಬಳಿಕ ಪೊಲೀಸರು ಸಂಬಂಧಪಟ್ಟ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರು. ಬೆಳಿಗ್ಗೆ ಸುಡಲಾದ ಗೋರಿಯ ಬಟ್ಟೆಯ ಮೇಲೆ ಧಾರ್ಮಿಕ ಬರಹಗಳಿದ್ದವು ಎಂಬ ವದಂತಿಯನ್ನು ಸಂಜೆ ಹರಡಲಾಯಿತು. ನಂತರ 2 ಸಾವಿರಕ್ಕೂ ಹೆಚ್ಚು ಜನರ ಗುಂಪು ಬೀದಿಗಿಳಿದು ದ್ವಿಚಕ್ರ ವಾಹನಗಳು, ಕಾರು ಮತ್ತು ಮನೆಗಳ ಮೇಲೆ ದಾಳಿ ಮಾಡಿತು. ಪೊಲೀಸರ ಮೇಲೆ ದಾಳಿ ಮಾಡಿ 3 ಪೊಲೀಸ್ ಉಪ ಆಯುಕ್ತರು ಸೇರಿದಂತೆ 33 ಪೊಲೀಸರನ್ನು ಗಾಯಗೊಳಿಸಿದರು. ಈ ದಾಳಿ ಪೂರ್ವನಿಯೋಜಿತವಾಗಿತ್ತು. ಈ ಗಲಭೆಕೋರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಶ್ರೀ. ಏಕನಾಥ ಶಿಂಧೆ ಅವರು ನಾಗಪುರದ ಗಲಭೆಯ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸದನಕ್ಕೆ ಹೇಳಿಕೆ ನೀಡಿದರು.
🚨 #NagpurViolence Was Pre-Planned—Rioters Won’t Be Spared! – Dy CM Eknath Shinde
“People still praising Aurangzeb after Chhava Movie are traitors”
🔴 33 Police Personnel Injured, Including 3 DCPs!
🔥 Riots saw petrol bombs, swords, axes & stone-pelting! Hundreds of… pic.twitter.com/1BcVVtu6cG
— Sanatan Prabhat (@SanatanPrabhat) March 18, 2025
ಉಪಮುಖ್ಯಮಂತ್ರಿ ಶಿಂಧೆ ಅವರು ಮಾತನಾಡಿ, ಅಖ್ತರ್ ರಸ್ತೆಯಲ್ಲಿ ನಮಾಜ್ ಮುಗಿಸಿ 200 ರಿಂದ 250 ಜನರ ಗುಂಪು ‘ಬೆಂಕಿ ಹಚ್ಚಿ’, ‘ನಾಶಮಾಡಿ’ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿತು. ಈ ಹಿಂಸಾತ್ಮಕ ಘೋಷಣೆಗಳಿಂದ ಪೊಲೀಸರು ಅವರನ್ನು ಚದುರಿಸಿದರು. ಈ ವೇಳೆ ಕೆಲವರು ‘ಬಜರಂಗದಳದ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು’ ಎಂದು ಹೇಳಿ ಗಣೇಶಪೇಟೆ ಪೊಲೀಸ್ ಠಾಣೆಗೆ ಬಂದರು. ಅವರ ದೂರನ್ನು ಆಲಿಸಲಾಯಿತು. ಅದೇ ವೇಳೆ ಹಂಸಾಪುರಿ ಪ್ರದೇಶದಲ್ಲಿ 200 ಜನರ ಗುಂಪು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು. ದೊಣ್ಣೆಗಳಿಂದ ಮತ್ತು ಆಯುಧಗಳಿಂದ ಹಲ್ಲೆ ಮಾಡಲು ಆರಂಭಿಸಿದರು. ಭಾಲದಾಪುರದಲ್ಲಿಯೂ ದೊಡ್ಡ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿತು. ಅಲ್ಲಿ ಅಶ್ರುವಾಯು ಶೆಲ್ ಗಳನ್ನು ಸಿಡಿಸಲಾಯಿತು. ಈ ಘಟನೆಯಲ್ಲಿ 33 ಪೊಲೀಸರು ಹಾಗೂ 3 ಪೊಲೀಸ್ ಉಪ ಆಯುಕ್ತರು ಸಹ ಗಾಯಗೊಂಡಿದ್ದಾರೆ. ಈ ಘಟನೆಯ 5 ಪ್ರಕರಣಗಳನ್ನು ದಾಖಲಿಸಲಾಗಿವೆ. ರಾತ್ರಿ 8 ಗಂಟೆಯ ನಂತರ ನಡೆದ ಈ ಗಲಭೆಯಲ್ಲಿ ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಯಿತು ಮತ್ತು ಕತ್ತಿಗಳಿಂದ ದಾಳಿ ನಡೆಸಲಾಯಿತು.
ರಾಜ್ಯದ ಗುಪ್ತಚರ ಇಲಾಖೆ ಮತ್ತು ಗೃಹ ಇಲಾಖೆ ನಿದ್ರಿಸುತ್ತಿದೆಯೇ? – ಅಂಬಾದಾಸ ದಾನವೆ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ
ರಾಜ್ಯದ ಗುಪ್ತಚರ ಇಲಾಖೆ ಮತ್ತು ಗೃಹ ಇಲಾಖೆ ಅಸಮರ್ಥವಾಗಿದ್ದರಿಂದ ಪೊಲೀಸರು ಗಲಭೆಯ ಸ್ಥಳಕ್ಕೆ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ರಾಜ್ಯದ ಗುಪ್ತಚರ ಇಲಾಖೆ ಮತ್ತು ಗೃಹ ಇಲಾಖೆ ನಿದ್ರಿಸುತ್ತಿದೆಯೇ? ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಉದ್ಭವಿಸುತ್ತದೆ. ಕೆಲವು ಆಡಳಿತ ಪಕ್ಷದ ಸಚಿವರು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. (ಇದರಿಂದ ಅಂಬಾದಾಸ ದಾನವೆ ಗಲಭೆಕೋರರನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಅವರ ವಿರುದ್ಧವೂ ಕ್ರಮ ಏಕೆ ಕೈಗೊಳ್ಳಬಾರದು? – ಸಂಪಾದಕರು) ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಂಬರುವ ದಿನಗಳಲ್ಲಿ ಗಲಭೆಗಳನ್ನು ತಡೆಯಬೇಕು. ಈ ವಿಷಯದ ಬಗ್ಗೆ ಚರ್ಚೆ ನಡೆಯಬೇಕೆಂದು ಅಂಬಾದಾಸ ಹೇಳಿದರು.
ನಾಗಪುರದ ಗಲಭೆಯಂತಹ ಪರಿಸ್ಥಿತಿ ಪೂರ್ವನಿಯೋಜಿತ ಸಂಚು! – ಪ್ರವೀಣ ದರೇಕರ್, ಭಾಜಪ ನಾಯಕ, ವಿಧಾನ ಪರಿಷತ್
ಔರಂಗಜೇಬನ ವೈಭವೀಕರಣದ ಮಟ್ಟವು ಬಹಳ ಹೆಚ್ಚಾಗಿದೆ. ನೂರಾರು ದ್ವಿಚಕ್ರ ವಾಹನಗಳನ್ನು ಧ್ವಂಸಗೊಳಿಸಲಾಗಿದೆ, ಭಾಲದಾಪುರದಲ್ಲಿ ಅನೇಕ ದ್ವಿಚಕ್ರ ವಾಹನಗಳನ್ನು ಕೆಡವಿ ಹಾನಿ ಮಾಡಲಾಗಿದೆ. ಮಹಲ್ ಪ್ರದೇಶದಲ್ಲಿ ಅನೇಕ ನಾಲ್ಕು ಚಕ್ರದ ವಾಹನಗಳಿಗೆ ಹಾನಿ ಮಾಡಲಾಗಿದೆ. 2 ನಾಲ್ಕು ಚಕ್ರದ ವಾಹನಗಳಲ್ಲಿ 10-10 ಕೆಜಿ ತೂಕದ ಕಲ್ಲುಗಳನ್ನು ತಂದು ಇಡಲಾಗಿತ್ತು. ಸಮಾಜ ಘಾತುಕರು ಪೊಲೀಸರನ್ನು ಗುರಿಯಾಗಿಸಿದರು. ಚಿಟ್ನಿಸ್ ಪಾರ್ಕ್ ಪ್ರದೇಶದಲ್ಲಿ ಪೊಲೀಸರು ಸಮಾಜ ಘಾತುಕರನ್ನು ಬಂಧಿಸಲು ಪ್ರಾರಂಭಿಸಿದಾಗ ಮೇಲಿನ ಮಹಡಿಯಿಂದ ಕಲ್ಲುಗಳನ್ನು ಎಸೆದರು, ಓರ್ವ ಪೊಲೀಸ್ ಉಪ ಆಯುಕ್ತರ ಮೇಲೆ ಕೊಡಲಿಯಿಂದ ದಾಳಿ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೂ ಚಾಕು ಕತ್ತಿಗಳನ್ನು ಎಸೆಯಲಾಯಿತು. ಪೊಲೀಸ್ ಉಪ ಆಯುಕ್ತ ನಿಕೇತನ್ ಕದಂ ಅವರ ಮೇಲೆ ಗುಂಪೊಂದು ದಾಳಿ ಮಾಡಿತು. ಇದರಿಂದ ಅವರ ಎರಡೂ ಕೈಗಳಿಗೆ ಗಾಯಗಳಾಗಿವೆ. ಪೊಲೀಸರು ಸಮಯಕ್ಕೆ ಸರಿಯಾಗಿ ತಲುಪಿದರು. ಇಲ್ಲದಿದ್ದರೆ ಅನಾಹುತ ಸಂಭವಿಸುತ್ತಿತ್ತು. ವಿವಿಧ ವದಂತಿಗಳನ್ನು ಹರಡಲಾಗಿತ್ತು. ಪೊಲೀಸರ ಮೇಲೆ ಕಟ್ಟಡಗಳ ಮೇಲಿಂದ ಕಲ್ಲುಗಳನ್ನು ಎಸೆದರು. ಇದು ಪೂರ್ವನಿಯೋಜಿತ ಸಂಚಾಗಿತ್ತು. ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡುವ ಪ್ರಯತ್ನ ಇದಾಗಿದೆ. ಇದರ ಹಿಂದಿನ ಸೂತ್ರಧಾರಿ ಯಾರು ಎಂದು ಪತ್ತೆಹಚ್ಚಬೇಕು. ನಿನ್ನೆಯ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ಈ ಪ್ರಕರಣದ ಬಗ್ಗೆ ಹೇಳಿಕೆ ನೀಡಬೇಕು ಎಂದು ಪ್ರವೀಣ ದರೇಕರ್ ಆಗ್ರಹಿಸಿದರು.
ನಾಗಪುರದಲ್ಲಿ ಎಂದೂ ಸಂಭವಿಸದ ಗಲಭೆ! – ಅಭಿಜಿತ ವಂಜಾರಿ, ಶಾಸಕ, ಕಾಂಗ್ರೆಸ್
ನಾಗಪುರದಲ್ಲಿ ಎಂದೂ ಸಂಭವಿಸದ ಗಲಭೆ ಸಂಭವಿಸಿದೆ. ಜನರ ಮೇಲೆ ಕಲ್ಲು ತೂರಾಟ ನಡೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಸ್ಪತ್ರೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಕೋಮು ಗಲಭೆ ನಡೆಸಲು ಸಮಾಜ ಘಾತುಕರು ಷಡ್ಯಂತ್ರ ನಡೆಸಿದರೆ ನಡೆಸಿದರೆ ಎಂಬುದನ್ನು ಪರಿಶೀಲಿಸಬೇಕು ಎಂದು ಶಾಸಕ ಅಭಿಜಿತ ಕಳವಳ ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವುಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಂತೆ ಮಹಾರಾಷ್ಟ್ರದಲ್ಲಿಯೂ ಕೂಡ ಗಲಭೆಕೋರರನ್ನು ಹದ್ದುಬಸ್ತಿನಲ್ಲಿಡಲು ಅವರ ಮನೆಗಳ ಮೇಲೆ ಬುಲ್ಡೋಜರ್ ಬಳಸುವಂತೆ ಜನರು ಒತ್ತಾಯಿಸಿದರೆ ಆಶ್ಚರ್ಯ ಪಡಬಾರದು. |