ಶ್ರೀಮದ್ಭಗವದ್ಗೀತೆಯ ಬಗ್ಗೆ ಮಂಗಳೂರಿನ ಪೂ. (ಶ್ರೀಮತಿ) ರಾಧಾ ಪ್ರಭು (ವಯಸ್ಸು ೮೮ ವರ್ಷಗಳು) ಇವರಿಗೆ ಹೊಳೆದ ಮಾರ್ಗದರ್ಶಕ ಅಂಶಗಳು ಮತ್ತು ಅವುಗಳ ವಿವರಣೆ !

ಫಾಲ್ಗುಣ ಕೃಷ್ಣ ತೃತೀಯಾ (ಮಾರ್ಚ್ ೧೭ ರಂದು) ದಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು ಇವರ ೮೮ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಪೂ. (ಶ್ರೀಮತಿ) ರಾಧಾ ಪ್ರಭು ಇವರ ೮೮ ನೇ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !

‘ಹೇ ಗುರುದೇವಾ, ‘ಚಿಕ್ಕಂದಿನಿಂದಲೇ ಸಂಸ್ಕೃತ ಕಲಿಯಬೇಕು, ಶ್ರೀಮದ್ಭಗವದ್ಗೀತೆಯನ್ನು ಕಂಠಪಾಠ ಮಾಡಬೇಕು’, ಎಂಬ ಇಚ್ಛೆ ನನ್ನದಾಗಿತ್ತು; ಆದರೆ ನನಗೆ ಅಂತಹ ಸಂಸ್ಕಾರಮಾಧ್ಯಮಗಳು ಸಿಗಲಿಲ್ಲ. ನೀವು ನನ್ನ ಮೇಲೆ ಕೃಪೆಯ ಸುರಿಮಳೆಯನ್ನು ಸುರಿಸಿ ನನಗೆ ಎಲ್ಲವನ್ನೂ ನೀಡಿದಿರಿ. ಈಗ ನಾನು ಪ್ರತಿದಿನ ಶ್ರೀಮದ್ಭಗವದ್ಗೀತೆಯನ್ನು ಓದುತ್ತಿದ್ದೇನೆ. ನಿಮ್ಮ ಕೃಪೆಯಿಂದಲೇ ನನಗೆ ಅದನ್ನು ಓದಲು ಸಾಧ್ಯವಾಗುತ್ತಿದೆ. ನಿಮ್ಮ ಚರಣಗಳಲ್ಲಿ ಕೃತಜ್ಞತೆಗಳನ್ನು ಅರ್ಪಿಸಲು ನಾನು ಕಡಿಮೆ ಬೀಳುತ್ತೇನೆ. ಸದ್ಯ ನಾನು ಗೀತೆಯ ಎರಡನೇ ಅಧ್ಯಾಯ (ಸಾಂಖ್ಯಯೋಗ)ವನ್ನು ಓದಿ ಅದರ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ‘ಸಾಧಕರಿಗೆ ಶ್ರೀಮದ್ಭಗವದ್ಗೀತೆಯ ವಚನಗಳ ಲಾಭವಾಗಬೇಕೆಂದು’, ಅವುಗಳಲ್ಲಿನ ೪ ವಚನಗಳ (೪ ಶ್ಲೋಕಗಳ) ಅರ್ಥವನ್ನು ಮುಂದೆ ಕೊಟ್ಟಿದ್ದೇನೆ.

೧.  ಶ್ರೀಮದ್ಭಗವದ್ಗೀತೆಯಲ್ಲಿನ ಕೆಲವು ಮಾರ್ಗದರ್ಶಕ ವಚನಗಳು !

ಅ.  ಧ್ಯಾಯತೋ ವಿಷಯಾನ್ಪುಂಸಃ ಸಙ್ಗಸ್ತೇಷೂಪಜಾಯತೇ |

ಸಙõಗ್Áತ್ಸಞõಜ್Áಯತೇ ಕಾಮಃ ಕಾಮಾತ್ಕ್ರೋಧೋಽಭಿಜಾಯತೇ ||

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೬೨

ಅರ್ಥ : ವಿಷಯಗಳ (ಭೋಗ್ಯ ವಸ್ತುಗಳ) ಚಿಂತನವನ್ನು ಮಾಡುವ ಪುರುಷನಿಗೆ ಆ ವಿಷಯದಲ್ಲಿ ಆಸಕ್ತಿ ಉತ್ಪನ್ನವಾಗುತ್ತದೆ. ಆಸಕ್ತಿಯಿಂದ ಆ ಭೋಗ್ಯ ವಸ್ತುಗಳನ್ನು ಪಡೆಯುವ ಬಯಕೆ ಉಂಟಾಗುತ್ತದೆ. ಬಯಕೆ ಈಡೇರದಿದ್ದರೆ, ಅವನಿಗೆ ಕೋಪ ಬರುತ್ತದೆ.

ಆ. ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ |

ಸ್ಮೃತಿಭ್ರಂಶಾದ್‌ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ ||

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೬೩

ಅರ್ಥ : ಕೋಪದಿಂದ ತೀವ್ರ ಮೂರ್ಖತನವು ಬರುತ್ತದೆ, ಅಂದರೆ ತಿಳಿಗೇಡಿತನವು ಉತ್ಪನ್ನವಾಗುತ್ತದೆ. ಮೂರ್ಖತನದಿಂದ ಸ್ಮರಣಶಕ್ತಿಯು ಭ್ರಷ್ಟವಾಗುತ್ತದೆ. ಸ್ಮರಣಶಕ್ತಿಯು ಭ್ರಷ್ಟವಾದರೆ, ಬುದ್ಧಿಯ ಅಂದರೆ ಜ್ಞಾನಶಕ್ತಿಯ ನಾಶವಾಗುತ್ತದೆ ಮತ್ತು ಬುದ್ಧಿಯು ನಾಶವಾಗುವುದರಿಂದ ಮನುಷ್ಯನ ಅವನತಿಯಾಗುತ್ತದೆ.

ಇ. ರಾಗದ್ವೇಷವಿಯುಕ್ತೈಸ್ತು ವಿಷಯಾನಿನ್ದ್ರಿಯೈಶ್ಚರನ್‌ |

ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ||

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೬೪

ಅರ್ಥ : ಅಂತಃಕರಣ(ವಿವೇಕ)ವನ್ನು ನಿಯಂತ್ರಣದಲ್ಲಿಟ್ಟುಕೊಂಡ ಸಾಧಕನು ತನ್ನ ನಿಯಂತ್ರಣದಲ್ಲಿಟ್ಟುಕೊಂಡ ಕೋಪ-ದ್ವೇಷಮುಕ್ತ ಇಂದ್ರಿಯಗಳಿಂದ ಭೋಗ ವಸ್ತುಗಳನ್ನು ಭೋಗಿಸುತ್ತಿದ್ದರೂ ಅಂತಃಕರಣದಲ್ಲಿ ಪ್ರಸನ್ನತೆಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ

ವಿವರಣೆ : ಅಂತಃಕರಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವನು ಕೋಪ ಮತ್ತು ದ್ವೇಷ ಇವುಗಳಿಂದ ಮುಕ್ತನಾಗಿ ತನ್ನ ನಿಯಂತ್ರಣದಲ್ಲಿರುವ ಇಂದ್ರಿಯಗಳ ಮಾಧ್ಯಮದಿಂದ ಭೋಗವಸ್ತುಗಳನ್ನು ಅನುಭವಿಸುತ್ತಾ ಮರಣಸಮಯದಲ್ಲಿ ಪ್ರಸನ್ನತೆಯನ್ನು ಅನುಭವಿಸುತ್ತಾನೆ.

ಈ. ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ |

ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ ||

– ಶ್ರೀಮದ್ಭಗವದ್ಗೀತೆ, ಸಾಂಖ್ಯಯೋಗ, ಅಧ್ಯಾಯ ೨, ಶ್ಲೋಕ ೬೫

ಅರ್ಥ : ಅಂತಃಕರಣವು ಪ್ರಸನ್ನವಾಗಿರುವುದರಿಂದ ಅವನ ಎಲ್ಲ ದುಃಖಗಳು ಇಲ್ಲದಂತಾಗುತ್ತವೆ ಮತ್ತು ಆ ಚಿತ್ತವು ಪ್ರಸನ್ನಗೊಂಡ ಕರ್ಮಯೋಗಿಯ ಬುದ್ಧಿಯು ತಕ್ಷಣ ಎಲ್ಲ ವಿಷಯಗಳಿಂದ ನಿವೃತ್ತಿ ಹೊಂದಿ ಒಬ್ಬ ಪರಮಾತ್ಮನಲ್ಲಿಯೇ ಉತ್ತಮ ರೀತಿಯಲ್ಲಿ ಸ್ಥಿರವಾಗುತ್ತದೆ.

೨. ‘ಮನುಷ್ಯನಲ್ಲಿ ‘ಕೋಪ’ ಎಂಬ ಹೆಸರಿನ ಮಹಾದೋಷವು ಹೇಗೆ ಉತ್ಪನ್ನವಾಗುತ್ತದೆ ? ‘ಕೋಪ ಹೆಸರಿನ ಈ ವಿಷದಿಂದ ಇತರ ದೋಷಗಳು ಹೇಗೆ ಉತ್ಪನ್ನವಾಗುತ್ತವೆ ? ಅವುಗಳನ್ನು ಹೇಗೆ ಕಂಡು ಹಿಡಿಯಬೇಕು ಮತ್ತು ಅವುಗಳನ್ನು ಬೇರುಸಹಿತ ಹೇಗೆ ಕಿತ್ತೊಗೆಯ ಬೇಕು ?’, ಎಂಬುದು ಈ ೪ ವಚನಗಳಿಂದ ಗಮನಕ್ಕೆ ಬರುತ್ತದೆ.

೩. ರಾಮನಾಥಿ ಆಶ್ರಮದ ಬಾಲಸಂಸ್ಕಾರವರ್ಗದಲ್ಲಿ ಬಾಲಸಾಧಕರಿಗೆ ಈ ವಿಷಯಗಳನ್ನು ಕಲಿಸಲಾಗುತ್ತದೆ. ಬಾಲಸಾಧಕರಿಗೆ ಬಾಲ್ಯದಿಂದಲೇ ಇಂತಹ ಸಂಸ್ಕಾರಗಳು ದೊರಕುವುದರಿಂದ ಅವರ ನಿರ್ಮಲ ಹೃದಯದಲ್ಲಿ ಪರಮಾತ್ಮನು ಸ್ಥಿರನಾಗುತ್ತಾನೆ. ಇದೇ ಮೋಕ್ಷ (ಆನಂದವಾಗಿದೆ.’

– (ಪೂ.) ಶ್ರೀಮತಿ ರಾಧಾ ಪ್ರಭು (ವಯಸ್ಸು ೮೮ ವರ್ಷಗಳು), ಮಂಗಳೂರು. (೧೭.೬.೨೦೨೨)

ಪೂ. (ಶ್ರೀಮತಿ) ರಾಧಾ ಪ್ರಭು ಇವರಿಗೆ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಬಾಲಸಾಧಕರ ಬಗ್ಗೆ ಅರಿವಾದ ವೈಶಿಷ್ಟ್ಯಗಳು

೧. ‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಗುರುಕುಲ ಪದ್ಧತಿಗನುಸಾರ ಬಾಲಸಂಸ್ಕಾರವರ್ಗವನ್ನು ತೆಗೆದುಕೊಳ್ಳುತ್ತಾರೆ. ಆಶ್ರಮದ ಬಾಲಸಾಧಕರ ನುಡಿಗಳನ್ನು ಕೇಳಿ ನಮಗೆ ಆನಂದವಾಗುತ್ತದೆ.

೨. ಈ ಬಾಲಸಾಧಕರು ಇತರ ಮಕ್ಕಳಿಗಿಂತ ಭಿನ್ನವಾಗಿದ್ದಾರೆ. ಈ ಬಾಲಸಾಧಕರ ಸಹಜ ನುಡಿಗಳಲ್ಲಿಯೂ ಆಧ್ಯಾತ್ಮಿಕ ಶಬ್ದಗಳಿರುತ್ತವೆ, ಉದಾ. ತ್ಯಾಗ, ಅಪೇಕ್ಷೆ, ಅನುಸಂಧಾನ, ಭಾವಜಾಗೃತಿ, ಅಂತರ್ಮುಖತೆ, ನಕಾರಾತ್ಮಕ ವಿಚಾರ, ದೃಷ್ಟಿಕೋನ, ಕರ್ಮಫಲ, ಶ್ರದ್ಧೆ, ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆ ಇತ್ಯಾದಿ.

೩. ಈ ಬಾಲಸಾಧಕರು ತಮ್ಮ ನಿರೀಕ್ಷಣೆಯನ್ನು ಮಾಡಿಕೊಳ್ಳು ತ್ತಾರೆ. ಅವರು ತಮ್ಮಿಂದ ಸಾಧನೆಯಲ್ಲಾದ ತಪ್ಪುಗಳನ್ನು ಆಶ್ರಮದ ಫಲಕದಲ್ಲಿ ಬರೆಯುತ್ತಾರೆ. ಅವರು ತಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಸ್ವಯಂಸೂಚನೆಯನ್ನು ತೆಗೆದುಕೊಳ್ಳುತ್ತಾರೆ.

೪. ರಾಮನಾಥಿ ಆಶ್ರಮದಲ್ಲಿ ಬಹಳ ಚೈತನ್ಯವಿದೆ. ಆದುದರಿಂದ ಈ ಬಾಲಸಾಧಕರ ಸಾಧನೆ ಸಹಜವಾಗಿ ಆಗುತ್ತದೆ.

೫. ಅವರು ಸಂತರ ಮಾಗದರ್ಶನದ ಅಧ್ಯಯನ ಮಾಡಿದರೆ ಮತ್ತು ಮುಂದೆ ಸಂಸ್ಕೃತ ಭಾಷೆಯನ್ನು ಕಲಿತರೆ ಅವರಿಗೆ ಶ್ರೀಮದ್ಭಗವದ್ಗೀತೆಯನ್ನು ಕಂಠಪಾಠ ಮಾಡುವುದು ಸುಲಭ ವಾಗುತ್ತದೆ.

೬. ರಾಮನಾಥಿ ಆಶ್ರಮದ ವಾತಾವರಣದಲ್ಲಿ ಬೆಳೆದ ಸಾತ್ತ್ವಿಕ ಮಕ್ಕಳು ಮುಂಬರುವ ಹಿಂದೂ ರಾಷ್ಟ್ರದಲ್ಲಿ (ರಾಮರಾಜ್ಯದಲ್ಲಿ) ಉತ್ತಮ ಪ್ರಜೆಯೆಂದು ಬದುಕುವರು. ಈ ಮಕ್ಕಳೇ ಹಿಂದೂ ರಾಷ್ಟ್ರದ ಸಂಪತ್ತಾಗುತ್ತಾರೆ.’

– (ಪೂ.) ಶ್ರೀಮತಿ ರಾಧಾ ಪ್ರಭು (ವಯಸ್ಸು ೮೮ ವರ್ಷಗಳು), ಮಂಗಳೂರು (೧೭.೬.೨೦೨೨)