ಸರಕಾರಿ ಶಿಲಾಲೇಖ ಮತ್ತು ರಾಜಪತ್ರಗಳ ಮೇಲೆ ಹಿಂದೂ ಪಂಚಾಂಗದ ಉಲ್ಲೇಖ ಮಾಡುವೆವು !

ಉತ್ತರಾಖಂಡ: ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಅವರ ಶ್ಲಾಘನೀಯ ನಿರ್ಣಯ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಅವರು ಇತ್ತೀಚಿಗೆ ಸನಾತನ ಧರ್ಮ-ಪರಂಪರೆಗೆ ಸಂಬಂಧಪಟ್ಟ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸಾರವಾಗುವ ಸರಕಾರಿ ಸುತ್ತೋಲೆ, ರಾಜಪತ್ರ, ಉದ್ಘಾಟನ ಫಲಕ, ಶಿಲಾಲೇಖಾ ಮುಂತಾದವುಗಳ ಮೇಲೆ ದಿನಾಂಕ ಮತ್ತು ಇಸ್ವಿಗಳ ಜೊತೆಗೆ ಹಿಂದೂ ಪಂಚಾಂಗದ ಪ್ರಕಾರ (ವಿಕ್ರಮ ಸಂವತ್) ತಿಂಗಳು ಮತ್ತು ತಿಥಿ (ಉದಾ. – ಫಾಲ್ಗುಣ, ಕೃಷ್ಣ ಪಕ್ಷ/ಶುಕ್ಲ ಪಕ್ಷ ) ಇದನ್ನು ಸಹ ಉಲ್ಲೇಖಿಸುವ ಆದೇಶ ನೀಡಿದ್ದಾರೆ.

೧. ಈ ಬಗ್ಗೆ ಸಾಮಾನ್ಯ ಆಡಳಿತ ಇಲಾಖೆಗೆ ತುರ್ತು ಅವಶ್ಯಕ ಆದೇಶಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಮುಖ್ಯ ಸಚಿವರಿಗೆ ಸೂಚಿಸಿದ್ದಾರೆ.

೨. ‘ವಿಕ್ರಮ ಸಂವತ್’ ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಇದರಿಂದ ನಮ್ಮ ಶಾಶ್ವತ ಗುರುತು ಮತ್ತು ಗೌರವಶಾಲಿ ಇತಿಹಾಸ ಪ್ರತಿಬಿಂಬಿತವಾಗುತ್ತದೆ. ಈ ನಿರ್ಣಯದಿಂದ ಸಾಂಸ್ಕೃತಿಕ ಮೌಲ್ಯವನ್ನು ಕಾಪಾಡಲು ಮತ್ತು ನೂತನ ಪೀಳಿಗೆಗೆ ಅದರ ಸಮೃದ್ಧ ಪರಂಪರೆಗೆ ಜೋಡಿಸುವಲ್ಲಿ ಸಹಾಯವಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

೩. ಉತ್ತರಾಖಂಡ ದೇವಭೂಮಿಯಾಗಿದ್ದು ಅದು ನಮ್ಮ ರಾಜ್ಯದ ಶಾಶ್ವತ ಸಾಂಸ್ಕೃತಿಕ ಸ್ವರೂಪವಾಗಿದೆ ಹಾಗೂ ಸರಕಾರದ ನಿರ್ಣಯ ಕೂಡ ಅದರ ಜೊತೆ ಸೇರಿಕೊಂಡಿದೆ ಎಂದು ಕೂಡ ಮುಖ್ಯಮಂತ್ರಿ ಧಾಮಿ ವಿವರಿಸಿದರು.

ಸಂಪಾದಕೀಯ ನಿಲುವು

  • ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳಿಗೆ ಸರಿಹೊಂದುವಂತಹ ನಿರ್ಣಯ ತೆಗೆದುಕೊಳ್ಳುವ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಅವರಿಗೆ ಅಭಿನಂದನೆಗಳು !
  • ಭಾಜಪ ಸರ್ಕಾರವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಇಂತಹ ನಿರ್ಣಯ ತೆಗೆದುಕೊಳ್ಳಬೇಕು !